#ಕಿನ್ನರಿ_ಸ್ವತಃ_ತಯಾರಿಸಿ_ಕೊಡುಗೆಯಾಗಿ_ಕೊಟ್ಟ_ಕಲಾವಿದ_ನಾಗರಾಜತೊಂಬ್ರಿ #ಅದ್ಬುತ_ಸ್ಟರ_ಕಲೆ_ಒಲಿದಿರುವ_ಕಲಾವಿದ. #ಕಳೆದು_ಹೋಗಿದ್ದ_ಕೆಳದಿ_ರಾಜ_ವೆಂಕಟಪ್ಪನಾಯಕ_ಮತ್ತು_ರಾಣಿ_ಚಂಪಕಾರ_ದುರಂತ_ಪ್ರೇಮದ #ಕಳೆದು_ಹೋದ_ಲಾವಣಿಗೆ_ಪುನರ್_ರೂಪ_ಕೊಟ್ಟವರು ಚಂಪಕ ಸರಸ್ಸು ಸ್ಮಾರಕ ನಿಮಿ೯ಸಲು ಕಾರಣವಾದ ಕೆಳದಿ ರಾಜ ವೆಂಕಟಪ್ಪ ನಾಯಕರು ಆಕಷ೯ಕ ರಂಗೋಲಿಯ ಮೂಲಕ ಚಂಪಕಾಳ ಮೇಲೆ ಪ್ರೇಮಾ೦ಕುರವಾಗಿ ನಂತರ ಅವರ ವಿವಾಹವಾಗಿ ಪಟ್ಟದ ರಾಣಿ ಭದ್ರಮ್ಮರ ನೆಮ್ಮದಿಗೆ ಭಂಗವಾಗಿ ಅವರು ಜೀವ ತ್ಯಾಗ ಮಾಡಿದಾಗ ಪ್ರಜೆಗಳಲ್ಲಿ ಉಂಟಾದ ಅಸಹನೆಯಿಂದ ರಾಜ ವೆಂಕಟಪ್ಪ ನಾಯಕರ ಮೇಲೆ ದೊಡ್ಡ ಅಪಾದನೆ ಉಂಟಾದಾಗ ಚಂಪಕ ಹಾಲಿನೊಡನೆ ವಜ್ರದ ಪುಡಿ ಬೆರೆಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಚಂಪಕಳ ಸ್ಮರಣಾರ್ಥ ಆನಂದಪುರಂನಲ್ಲಿ ಚಂಪಕ ಸರಸ್ಸು ನಿರ್ಮಿಸಿ ಈ ಪ್ರದೇಶಕ್ಕೆ ಚಂಪಕಳ ನೆನಪಿಗಾಗಿ ಆನಂದಪುರ ಎಂದು ನಾಮಕರಣ ರಾಜ ವೆಂಕಟಪ್ಪ ನಾಯಕರು ಮಾಡುತ್ತಾರೆ ಮತ್ತು ಅವರೇ ಈಗಿನ ಸಾಗರ ಪಟ್ಟಣ ಕಟ್ಟಿ ಅದಕ್ಕೆ ಸದಾಶಿವ ಸಾಗರ ಎಂದು ನಾಮಕರಣ ಮಾಡುತ್ತಾರೆ. ಇದರ ಸಂಪೂರ್ಣ ಕಥೆಯ ಲಾವಣಿ 400 ವರ್ಷದಲ್ಲಿ ಕಳೆದು ಹೋಗಿದೆ, ಮೈಸೂರು ರಾಜರ ದಸರಾ ದರ್ಭಾರಿನಲ್ಲಿ ಕೋಲಾಟ ಪ್ರದರ್ಶನ ನೀಡಿದ್ದ ದಲಿತ ಕಲಾವಿದ ನಮ್ಮ ಊರಿನ ಸಮೀಪದ ಬಸವನ ಕೊಪ್ಪದ ಹೊಳೆ ಬಸಣ್ಣ ಈ ಲಾವಣಿ ಹಾಡುತ್ತಿದ್ದ ಕೊನೆಯ ಕಲಾವಿದರು, ಇವರು...