Skip to main content

Posts

Showing posts from 2016

ದೇವನೂರು ಮಹಾದೇವರ ಪೋನ್ ಬ0ದಾಗ.........

ಇವತ್ತು ಬೆಳಿಗ್ಗೆ ದೇವನೂರು ಮಹದೇವರಿಂದ ಪೋನ್ ಬಂದಿತ್ತು, ಮೈಸೂರಿನ ಗೆಳೆಯ ಕರುಣಾಕರ್ ಈ ಬಗ್ಗೆ ಮೊದಲೇ ತಿಳಿಸಿದ್ದರು.ಹಲೋ ನಾನು ದೇವನೂರು ಮಹಾದೇವ ಅಂದ ತಕ್ಷಣ ನಮಸ್ಕಾರ ಸಾರ್ ಒಂದು ನಿಮಿಷ ಅಂತ ಹೇಳಿ ರೆಕಾಡ೯ರ್ ಆನ್ ಮಾಡಿದೆ ನಂತರ ನಡೆದ ನಮ್ಮ ಸಂಬಾಷಣೆ........ ನೀವು ಬರೆದ ಕುಸುಮಬಾಲೆ ನನಗೆ ಓದಿ ಅಥ೯ ಮಾಡಿಕೊಳ್ಳಲಾಗಲೇ ಇಲ್ಲ ಅಂದೆ, ಅದು ಒಂದು ಕಥೆ ಬೇರೆ ಯಾರಿಂದಲಾದರು ಓದಿಸಿ ಕೇಳಿ ಅಂದರು, ನಿಮ್ಮ ಮೈಸೂರು ಗ್ರಾಮ್ಯ ಕನ್ನಡ ಮಲೆನಾಡಿನ ಕನ್ನಡಿಗರಿಗೆ ಅಥ೯ವಾಗೋದು ಕಷ್ಟ ಅಂದೆ. ನೀವು ದಸರಾ ಎದ್ಘಾಟನೆ ನಿರಾಕರಿಸಿದೀರಿ, ಪ್ರಶಸ್ತಿ ನಿರಾಕರಿಸಿದೀರಿ ಅಂದಾಗ ಹಾಗೇನಿಲ್ಲ ಸಂದಭ೯ ಹಾಗಿತ್ತು ನಿರಾಕರಿಸಿದೆ, ಈ ಸಾರಿಯ ಕುವೆಂಪು ಪ್ರಶಸ್ತಿ ಸ್ವೀಕರಿಸಲು ಒಪ್ಪಿದ್ದೇನೆ ಅಂದರು.ಸನ್ಮಾನಗಳ ಬಗ್ಗೆ ನಿಮ್ಮ ಅಭಿಪ್ರಾಯ ಅಂದದ್ದಕ್ಕೆ ನಾನು ಯಾವುದೆ ಸನ್ಮಾನ ಸಮಾರಂಭಕ್ಕೆ ಹೋಗುವುದಿಲ್ಲ ಹಾಗಂತ ಅದೇ ಅಭ್ಯಾಸವು ಸರಿ ಅಲ್ಲ ಅಂದರು........................... ಮೈಸೂರಿಗೆ ಬನ್ನಿ ಅಂತ ಆಮಂತ್ರಿಸಿದರು.ಅವರೊಂದಿಗಿನ ಪೋನ್ ಸ೦ಬಾಷಣೆ ತುಂಬಾ ಸಂತೋಷ ನೀಡಿದೆ, ಮುಖತಃ ಅವರನ್ನ ಬೇಟಿ ಮಾಡಲು ಉತ್ಸುಕನಾಗಿದ್ದೇನೆ.(4 ನವೆಂಬರ್ 20l 6)     ನಿನ್ನೆ ನಮ್ಮ ಜಿಲ್ಲೆಯ ಕುವೆಂಪು ಮನೆ ಕುಪ್ಪಳ್ಳಿಯಲ್ಲಿ ಸಾಹಿತಿ ಸಾಮಾಜಿಕ ಹೋರಾಟಗಾರ ದೇವನೂರು ಮಹಾದೇವರಿಗೆ ಕುವೆಂಪು ರಾಷ್ಟ್ರ ಪ್ರಶಸ್ತಿ ನೀಡಲಾಯಿತು.   ನವೆ೦ಬರ 4ರಂದು ನಾನು ಅದರೊಂದಿಗೆ...

ಮಹಾನ್ ಮಾನವತಾವಾದಿ ಯೋಮಕೇಶ್ವರಗೌಡರು.

ಇವರು ಯೋಮಕೇಶ್ವರಪ್ಪ ಗೌಡರು ಹಾಲಿ ವಾಸ ಹಿರೆಯರಕ ಎಂಬ ಗೌತಮಪುರ ಗ್ರಾಮ ಪಂಚಾಯತ ಗೆ ಸೇರಿದ ಹಳ್ಳಿಯಲ್ಲಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರO ಹೋಬಳಿ.       ಇವರನ್ನ ಯಾಕೆ ಸ್ಮರಿಸ...

ಕಡಿದಾಳು ಶಾಮಣ್ಣರ ಪರಿಚಯ ಒಡನಾಟ.

     ಕಡಿದಾಳು ಶಾಮಣ್ಣರ ಹೆಸರು ಲಂಕೇಶ್ ಪತ್ರಿಕೆಗಳಲ್ಲಿ ನೋಡಿದ್ದು ಬಿಟ್ಟರೆ ಅವರ ಪರಿಚಯ ಇರಲಿಲ್ಲ. ಶಿವಮೊಗ್ಗದ ನೆಹರೂ ರಸ್ತೆಯ ಎರಡನೆ ತಿರುವಿನ ಪ್ರಕೃತಿ ಮುದ್ರಣಾಲಯದಲ್ಲಿ ಅನೇಕ ಬಾರಿ ಇವರನ್ನ ನ...

ಚಂಪಕ ಸರಸು (ಕೆಳದಿ ರಾಣಿ ಚಂಪಕಳ ಸ್ಮರಣಿಯ ಸ್ಥಳ)

  ಚಂಪಕ ರಾಣಿ ಕೆಳದಿ ರಾಜ ವೆಂಕಟಪ್ಪ ನಾಯಕರ ರಾಣಿ, ಅವಳು ಬಿಡಿಸುತ್ತಿದ್ದ ರಂಗೋಲಿ ನೋಡಿ ಅದರಿಂದ ಆಕಷಿ೯ತರಾಗಿ ಅವಳನ್ನ ಮೋಹಿಸಿ ಮದುವೆ ಆಗುತ್ತಾರೆ, ಆದರೆ ಸುಂದರಿ ಚಂಪಕ ಬೇರೆ ಜಾತಿಯವಳೆಂಬ ಕಾರಣದಿಂದ ಅವಳನ್ನ ಪಟ್ಟದ ರಾಣಿ ಪರಿವಾರ ವಿರೋದಿಸುತ್ತಾರೆ, ಮುಂದೆ ಇದೇ ಪಟ್ಟದ ರಾಣಿ ಭದ್ರಮಾಜಿ ಅನಾರೋಗ್ಯಕ್ಕೆ ಕಾರಣ ವಾಯಿತು ಮು೦ದೆ ಅವರ ಮರಣಕ್ಕೂ ಕಾರಣವಾಯಿತು.    ಇದರಿಂದ ಇಡೀ ರಾಜ್ಯದ ಪ್ರಜೆಗಳು ಚಂಪಕಳನ್ನ ನಿಂದಿಸುತ್ತಾರೆ, ಚೆ೦ಪಕ ಮಾಯಾವಿ ಅವಳು ಅನ್ಯ ಆಹಾರ ಸೇವಿಸುತ್ತಾಳೆ, ರಾಜಾ ವೆಂಕಟಪ್ಪ ನಾಯಕರನ್ನ ತಲೆ ಕೆಡಿಸಿದ್ದಾಳೆ ಅಂತೆಲ್ಲ ಆರೋಪ ಮಾಡುತ್ತಾರೆ ಇದರಿOದ ನೊಂದ ಚಂಪಕ ರಾಣಿ ಆನಂದಪುರದ ಕೋಟೆಯಲ್ಲಿ ಹಾಲಿನೊಂದಿಗೆ ವಜ್ರದ ಪುಡಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.     ಸುಂದರವಾಗಿ ಚಿತ್ರಿಸುತ್ತಿದ್ದ ರಂಗೋಲಿಯಿಂದ ಆಕಷಿ೯ತರಾಗಿ ಅವಳಾರು ಅಂತ ತಿಳಿದಾಗ ಚಂಪಕಾ ಎಂಬ ಸುಂದರ ತರುಣಿ ಅಂತ ಗೊತ್ತಾದ ನಂತರ ಅವಳಲ್ಲಿ ಅನುರಕ್ತನಾದ ರಾಜ ವೆಂಕಟಪ್ಪ ನಾಯಕ ಚOಪಕಳನ್ನ ಶಾಸ್ತ್ರ ಬದ್ದವಾಗಿಯೆ ಮದುವೆ ಆಗಿ ಆನಂದಪುರದ ಕೋಟೆಯಲ್ಲಿನ ಅರಮನೆಯಲ್ಲಿ ಇಡುತ್ತಾರೆ, ಆದರೆ ಕೆಳದಿ ಇತಿಹಾಸದಲ್ಲಿ ಕೆಳ ಜಾತಿ ಎಂಬ ಕಾರಣದಿಂದ ಚಂಪಕಾಳ ಇತಿಹಾಸ ತಿರುಚಲಾಗಿದೆ.      ಚಂಪಕ ಪ್ರಜೆಗಳು ತಪ್ಪು ಬಾವಿಸಿ ಆರೋಪ ಮಾಡಿದ್ದರಿಂದ ಜೀವ ತ್ಯಾಗ ಮಾಡಿದ್ದು ರಾಜ ವೆಂಕಟಪ್ಪ...

ತಮಿಳು ಖ್ಯಾತ ನಟ ರಾಧಾರವಿಯೊ೦ದಿಗೆ

    ಬೆಳಿಗ್ಗೆ ಬೆಳಿಗ್ಗೆನೆ ಕನ್ನಡದ ಖ್ಯಾತ ಹಾಸ್ಯ ನಟರಾದ ದೊಡ್ಡಣ್ಣನವರ ಕರೆ " ಏನ್ರಿ ನಿನ್ನೆಯಿಂದ ಒಬ್ಬ ದೊಡ್ಡ ಮನುಷ್ಯರಿಗೆ ನಿಮ್ಮ ನಂಬರ್ ಕೊಟ್ಟಿದ್ದೆ ಅವರೆಷ್ಟು ಸಾರಿ ರಿಂಗ್ ಮಾಡಿದರೂ ನೀವು ಪಿ...

ದಂಡಾವತಿ ಆಣೆಕಟ್ಟಿನ ದಂಡನಾಯಕ ವಾಮದೇವ ಗೌಡರು ಸೊರಬ .

ಇವತ್ತು ದಿಡೀರ್ ಅಂತ ಸೊರಬದ ವಾಮದೇವ ಗೌಡರು ಬಂದರು ಅವರು ಸೊರಬದ ದಂಡಾವತಿ ಆಣೆಕಟ್ಟು ವಿರೋದಿ ಹೋರಾಟ ಸಮಿತಿ ಅಧ್ಯಕ್ಷರು ಹಾಲಿ ಹಿರೇಮಠರ ರಾಜ್ಯ ಬ್ರಷ್ಟಾಚಾರಿ ವಿರೋದಿ ಆಂದೋಲನದ ಉಪಾಧ್ಯಕ್ಷರು,  ...

ನೈಜ ಜನಪರ ಹೋರಾಟಗಾರ ಟಿ.ಆರ್.ಕೃಷ್ಣ ರಿಪ್ಪನ್ ಪೇಟೆ

ಟಿ.ಆರ್.ಕೃಷ್ಣಪ್ಪ ಶಿವಮೊಗ್ಗ ಜಿಲ್ಲೆಯ ರಿಪನ್ ಪೇಟೆ ನಿವಾಸಿ, ಕ್ರೀಡಾಪಟು, ಜನಪರ ಹೊರಾಟಗಾರರು. ಸಾಮಾನ್ಯ ಜನರ ಸಮಸ್ಯೆ ಬಗೆಹರಿಸಲು ಸದಾ ಶ್ರಮಿಸುತ್ತಾರೆ, ಸಂಬಂದ ಪಟ್ಟಅಧಿಕಾರಿಗಳಿಗೆ ಒಳ್ಳೆಯ ರೀತಿಯ...

ಯಹ್ಯಾ ಸಾಹೇಬರೆಂಬ ಸಜ್ಜನ ಶ್ರೀಮ೦ತರು.

1970 ರಲ್ಲಿ ಅವರಿಗೆ 50 ವಷ೯ ಇರಬಹುದು ನಮಗೆಲ್ಲ 5 ವಷ೯ ಅವರ ದಿನಸಿ ಅಂಗಡಿ ಇಡೀ ಊರಿಗೆ ದೊಡ್ಡದು, ಆ ಕಾಲದಲ್ಲಿ ಹುಬ್ಬಳ್ಳಿಯಿಂದ ಲಾರಿಗಳಲ್ಲಿ ದಿನಸಿ ತರಿಸುತ್ತಿದ್ದರು, ಪೊಟ್ಟಣ ಕಟ್ಟಲು ಹತ್ತಾರು ಸಹಾಯಕರು. ದ...

BHARAPANTH,JUNDI YATRA OF NATHA PANTH.ಬಾರಾ ಪಂಥ್, ಜೋOಡಿ ಹೀಗೆ ಕರೆಯುವ 12 ವಷ೯ಕೊಮ್ಮೆ ನಾಸಿಕ್ ನಿಂದ ಮಂಗಳೂರಿಗೆ ಬರುವ ನಾಥಪಂಥದ ಪಾದಯಾತ್ರೆ.

ನಾವೆಲ್ಲ ಆನಂದಪುರಂನಿಂದ ಪ್ರತಿದಿನ ರೈಲಿನಲ್ಲಿ ಪ್ರೌಡ ಶಿಕ್ಷಣಕ್ಕೆ ಸಾಗರಕ್ಕೆ ಹೋಗುತ್ತಿದ್ದೆವು, 1980ನೇ ಇಸವಿ ಇರಬೇಕು ಆ ದಿನ ಸಾಗರಕ್ಕೆ ಬೃಹತ್ ಖಾವಿದಾರಿಗಳ ಮೆರವಣಿಗೆ ಬಂತು, ಅದರಲ್ಲಿ ಗಡ್ಡದಾರಿಗಳು, ಬೆತ್ತಲೆ, ಅರೆಬೆತ್ತಲೆಯವರು ಇದ್ದರು.      ಅವರಾರು ಎಲ್ಲಿಗೆ ಹೋಗುತ್ತಾರೆ, ಎಲ್ಲಿಂದ ಬಂದರು ಅಂತ ಯಾರಿಗೆ ಕೇಳಿದರೂ ಉತ್ತರ ಸಿಗಲಿಲ್ಲ, ವಿದ್ಯಾಥಿ೯ಗಳಾದ ನಮಗೆ ಕುತೂಹಲ ಮತ್ತು ನಾವು ಊರಿಗೆ ಹಿಂದಿರಿಗಿ ಹೋಗುವ ರೈಲು ಬರಲು ಸಾಕಷ್ಟು ವೇಳೆ ಇದ್ದಿದ್ದರಿಂದ ಆ ಮೆರವಣಿಗೆ ಹಿಂದೆಯೇ ನಾವೆಲ್ಲ ಹೋದವು, ಕೆಲವರು "ಓಹೋ ಇವೆರೆಲ್ಲ ಅಗೋರಿಗಳು, ನರಮಾಂಸ ಭಕ್ಷಕರು "ಅಂದಾಗ ಭಯಪಟ್ಟೆವಾದರೂ ನೋಡೇ ಬಿಡೋಣ ಎಲ್ಲಿ ತನಕ ಹೋಗುತ್ತಾರೆ ಅಂತ ನಮ್ಮ ನಡಿಗೆ ಮುಂದುವರಿಸಿದೆವು, ಅಂತಿಮವಾಗಿ ಸಾಗರದ ಗಣಪತಿ ದೇವಸ್ಥಾನ ತಲುಪಿತು.     ದೇವಸ್ಥಾನದ ಹೊರಭಾಗದ ದೊಡ್ಡ ಪೀಠದಲ್ಲಿ ಈ ಯಾತ್ರೆಯ ಮುಖ್ಯಸ್ಥರು ಕುಳಿತರು ಅಷ್ಟರಲ್ಲಿ ಅಲ್ಲಲ್ಲಿ ವಿಶ್ರಮಿಸಿದ ಅವರ ಸಂಗಾತಿಗಳೆಲ್ಲ ಗಾಂಜಾ ಸೇವನೆಯಲ್ಲಿ ತೊಡಗಿದಾಗ ಅಲ್ಲಿನ ವಾತಾವರಣ ಭಯದ ಆಲಯವಾಯಿತು, ಇವರನ್ನ ನೋಡಲು ಸೇರಿದ ಜನಸ೦ದಣಿ ಅವರವರ ಮಕ್ಕಳನ್ನ "ಸಾಕು ಮನೆಗೆ ಹೊರಡಿ ಅವರೆಲ್ಲ ಮೋಡಿ ಮಾಡಿ ಮಕ್ಕಳನ್ನ ಒಯತಾರೆ " ಅಂತ ಹೆದರಿಸಿ ಕರೆದೊಯ್ಯಲು ಶುರು ಮಾಡಿದಾಗ ನಾವು ಹೆದರಿಕೆ ಮತ್ತು ನಮ್ಮ ರೈಲಿನ ಸಮಯ ಆಗಿದ್ದರಿಂದ ಅಲ್ಲಿಂದ ಕಾಲು ಕಿತ್ತೆವು.   ...