ಭಾಗ -1.ಪಿ.ಪುಟ್ಟಯ್ಯ ಪ್ರಕೃತಿ ಮುದ್ರಣಾಲಯದ ಪುಟ್ಟಯ್ಯ ಎಂದೇ ಪ್ರಸಿದ್ಧರಾಗಿರುವ ಹಿರಿಯ ಸಮಾಜವಾದಿ ಮಾಜಿ ಲೋಕದಳದ ರಾಜ್ಯ ಅಧ್ಯಕ್ಷರಾಗಿದ್ದ ಪೆರ್ಡೂರು ಪುಟ್ಟಯ್ಯ ಮಲ್ನಾಡಳ್ಳಿಯ ರಾಘವೇಂದ್ರ ಸ್ವಾಮಿಗಳ ಆಪ್ತರಾಗಿದ್ದವರು, ಕಿರಿಯ ಸ್ವಾಮಿಗಳಾಗಲು ಅವರ ಆಹ್ವಾನ ನಯವಾಗಿ ನಿರಾಕರಿಸಿದವರು.
#ಪಿ_ಪುಟ್ಟಯ್ಯ #ಒಂದು_ಕಾಲದಲ್ಲಿ_ಇವರ_ಪ್ರಕೃತಿ_ಮುದ್ರಣಾಲಯ_ಅನುಭವ_ಮಂಟಪದಂತೆ_ಆಗಿತ್ತು. #ಶಿವಮೊಗ್ಗ_ಜಿಲ್ಲೆಯ_ಹಿರಿಯ_ಸಮಾಜವಾದಿಗಳು. #ಮಣಿಪಾಲ್_ಸಮೀಪದ_ಪೆರ್ಡೂರಿಂದ_ಸಾಗರಕ್ಕೆ_1946ರಲ್ಲಿ_ಬಂದವರು #ಮಲ್ನಾಡಳ್ಳಿ_ಮುಂದಿನ_ಸ್ವಾಮಿಗಳು_ಎಂದೆ_ಜನರ_ಬಾವನೆಯಲ್ಲಿದ್ದವರು. #ಸಾಗರ_ಪಟ್ಟಣ_1946ರಿಂದ_1960ರ_ತನಕ_ಹೇಗಿತ್ತು. #ಭಾಗ_1 ಪಿ. ಪುಟ್ಟಯ್ಯನವರು ಅಂದರೆ ಪೆರ್ಡೂರು ಪುಟ್ಟಯ್ಯ ಇವರು ಶಾಂತವೇರಿ ಗೋಪಾಲಗೌಡರಿಂದ ಇವತ್ತಿನ ಕಿಮ್ಮನೆ - ಸ್ವಾಮಿ ರಾವ್ ತನಕ ರಾಜಕಾರಣಿಗಳಿಗೆ ಮತ್ತು ಶಿವಮೊಗ್ಗ ಜಿಲ್ಲಾ ಇತಿಹಾಸಕ್ತರಾದ ಪತ್ರಕರ್ತರು ಮತ್ತು ಸಾಹಿತಿಗಳಿಗೆ ಚಿರಪರಿಚಿತರು. ಪ್ರದಾನಿಗಳಾಗಿದ್ದ ಚೌದುರಿ ಚರಣ್ ಸಿಂಗ್ ರ ಲೋಕದಳ ಪಕ್ಷದ ಕರ್ನಾಟಕ ರಾಜ್ಯದ ರಾಜ್ಯಾದ್ಯಕ್ಷರು ಆಗಿದ್ದರು. ಈಗಿನ ತಲೆಮಾರಿನವರಿಗೆ ಇವರ ಪರಿಚಯ ಕಡಿಮೆ ಯಾಕೆಂದರೆ ಪುಟ್ಟಯ್ಯನವರು ನಿವೃತ್ತ ಮತ್ತು ಒಂದು ರೀತಿಯ ವಾನಪ್ರಸ್ಥ ಆಶ್ರಮದಲ್ಲಿದ್ದಾರೆ. ಈಗ ಇವರಿಗೆ 84 ವರ್ಷದ ವಯೋಮಾನ. ಒಂದು ಕಾಲದಲ್ಲಿ ಶಿವಮೊಗ್ಗದ ನೆಹರೂ ರಸ್ತೆಯ ಎರಡನೇ ತಿರುವಿನ ಪ್ರಕೃತಿ ಮುದ್ರಣಾಲಯ ಎಂದರೆ ಜಿಲ್ಲೆಯ ಹೋರಾಟಗಾರರು, ವಿಚಾರವಂತರು, ಸಾಹಿತಿಗಳು, ಶಾಸಕರು ಮತ್ತು ಸಂಸದರು ಸೇರುತ್ತಿ...