ಭಾಗ - 28, ಬ್ರಿಟೀಷರ ಮೋಜು ಮಸ್ತಿ ಮತ್ತು ವಿಶ್ರಾಂತಿಗೆ ನಿರ್ಮಿಸಿದ್ದ ಒಂದು ಕಾಲದ ಐಶಾರಾಮಿ ಬಂಗಲೆ.ಮೂರು ಶತಮಾನಕ್ಕೂ ನಂಟಿರುವ ಹಾಲಿ ಯಡೇಹಳ್ಳಿಯ ಹೊಸನಗರ ರಸ್ತೆಯ ಆನಂದಪುರಂನ ಈಗಿನ ಪ್ರವಾಸಿ ಮಂದಿರ, ಆನಂದಪುರಂ ತಾಲ್ಲೂಕ್ ಕೇಂದ್ರ ಆಗಿದ್ದಾಗ ತಾಲ್ಲೂಕ್ ಕಚೇರಿ, ಸಾಗರ ತಾಲ್ಲೂಕಿನ ಮೊದಲ ನ್ಯಾಯಾಲಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ ಕೂಡ ಆಗಿತ್ತು.
#ಭಾಗ_28 #ಬ್ರಿಟೀಷರ_ಆಡಳಿತದ_ಪಳಿಯುಳಿಕೆಯಂತೆ_ಉಳಿದಿರುವ_ಆನಂದಪುರಂನ_ಪ್ರವಾಸಿ_ಮಂದಿರ. #ಸುಮಾರು_ಮೂರು_ಶತಮಾನಕ್ಕೂ_ನಂಟು_ಇದೆ. #ಆನಂದಪುರಂ_ತಾಲ್ಲೂಕ್_ಆಗಿದ್ದಾಗ_ಇದು_ತಾಲ್ಲೂಕ್_ಕಚೇರಿ. #ಸಾಗರ_ತಾಲ್ಲೂಕಿನ_ಮೊದಲ_ನ್ಯಾಯಾಲಯ_ಕಚೇರಿ_ಇದಾಗಿತ್ತು. #ಆನಂದಪುರಂ_ಸ್ಟೇಟ್_ಬ್ಯಾಂಕ್_ಆಫ್_ಮೈಸೂರು_ಮೊದಲ_ಬ್ರಾಂಚ್_ಇದೇ_ಕಟ್ಟಡ_ಆಗಿತ್ತು. #ಇಲ್ಲಿ_ತಂಗಿದ್ದ_ಮಹನೀಯರು_ಅನೇಕರು. ಬ್ರಿಟಿಷರು ಯಡೇಹಳ್ಳಿಯ ದಟ್ಟ ಅರಣ್ಯದ ಮಧ್ಯೆ ಎತ್ತರದ ಪ್ರದೇಶದಲ್ಲಿ ಪೂರ್ವಾಭಿಮುಖವಾಗಿ ಕಟ್ಟಿದ ಈ ಸುಸಜ್ಜಿತವಾದ ಬಂಗ್ಲೆ ಆ ಕಾಲದಲ್ಲಿ A ಗ್ರೇಡಿನದ್ದಂತೆ. ಪೂರ್ವದ ಎಡಗಡೆ ತಾವರೆಕೆರೆ ಬಲ ಬಾಗದಲ್ಲಿ ಶಿವಮೊಗ್ಗ ಕೊಲ್ಲೂರು ಹೆದ್ದಾರಿ ಇದೆ, ಕಾಡುಪ್ರಾಣಿಗಳು ನೀರು ಕುಡಿಯಲು ಬಂದಾಗ ಬ್ರಿಟೀಷ್ ದೊರೆಗಳು ಶಿಕಾರಿ ಮಾಡಲು ಅನುಕೂಲ ಇತ್ತು. ಸುಮಾರು 5 ಎಕರೆ ಪ್ರದೇಶದ ಮಧ್ಯದಲ್ಲಿ ಅತ್ಯುತ್ತಮ ಎರೆಡು ಬೆಡ್ ರೂಂನ (ಅಟ್ಯಾಚ್ ಟಾಯಲೆಟ್ ಇರುವ) ಸೂರ್ಯೋದಯ ಮತ್ತು ಸೂಯಾ೯ಸ್ಥಗಳ ವೀಕ್ಷಣೆಗೆ ವರಾಂಡಗಳಿರುವ, ಸುಸಜ್ಜಿತ ಅಡುಗೆ ಮನೆ ಮತ್ತು ಹಾವು ಇತ್ಯಾಧಿ ಸರಿಸೃಪಗಳಿಂದ ರಕ್ಷಣೆಗಾಗಿ ಸುಮಾರು 4 ಅಡಿ ಎತ್ತರದ ಅಡಿಪಾಯದ ವಿಷಾಲವಾದ ಮೆಟ್ಟಿಲುಗಳ ಈ ಸುಸಜ್ಜಿತ ಕಟ್ಟಡದ ಉತ್ತರಕ್ಕೆ ತೆರೆದ ಬಾವಿ ಅದರ ಸಮೀಪ ಬಂಗ್ಲೆ ಕಾವಲುಗಾರನ ಮನೆ ನಿರ್ಮಿಸಿದ್ದಾರೆ. ಇಲ್ಲಿ ತಂಗಿ ವಿಹರಿಸಲು ಬ್ರಿಟಿಷರಿಗೆ ಇದು ಸೊಗಸಾದ ಸುಸಜ್ಜಿತವ...