ಊಟ ಮಾಡಿ ಕಳಿಸಲು ಶ್ರೀದರ ಸ್ವಾಮಿಗಳು ಚೀಟಿ ಕೊಡುತ್ತಾರೆ ಆದರೆ ಅಲ್ಲಿ ಊಟ ಮುಗಿದು ಖಾಲಿ ಪಾತ್ರೆ ತೊಳೆದಿಟ್ಟಿರುತ್ತಾರೆ ಆದರೆ ಆ ಪಾತ್ರೆಯಲ್ಲಿ ಅಣ್ಣಪ್ಪ ಆಚಾರರ ಊಟ ಇರುತ್ತದೆ!!
#ಯಡಜಿಗಳೆಮನೆ_ಅಣ್ಣಪ್ಪ_ಆಚಾರ್_ಎಂಬ_ಸಜ್ಜನರು. #ವರದಳ್ಳಿ_ಶ್ರೀಧರ_ಸ್ಟಾಮಿಗಳ_ಅನುಯಾಯಿ. #ತಪಸ್ಸಾಚರಿಸುತ್ತಿದ್ದಾಗ_ಚಾವಣಿ_ದುರಸ್ತಿಗೆ_ಇವರನ್ನು_ಕರೆಸಿಕೊಂಡಿದ್ದರು. #ತೊಳೆದು_ತಂದಿಟ್ಟ_ಮದ್ಯಾಹ್ನದ_ಖಾಲಿ_ಅಡುಗೆ_ಪಾತ್ರೆಯಲ್ಲಿತ್ತು_ಅಣ್ಣಪ್ಪಆಚಾರರ_ಊಟ 2007 ರಲ್ಲಿ ನನ್ನ ತಂದೆ ಎಸ್.ಕೃಷ್ಣಪ್ಪ ಮತ್ತು ನನ್ನ ತಾಯಿ ಸರಸಮ್ಮ (ಸರಸ್ವತಿ) ಇವರ ಸ್ಮರಣಾರ್ಥ ನಿಮಿ೯ಸುತ್ತಿದ್ದ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ನ ಮುಖ್ಯದ್ವಾರದ ಹಲಸಿನ ಮರದ ಬಾಗಿಲು ಮತ್ತು ಶೌಚಾಲಯ - ಸ್ನಾನ ಗೃಹಕ್ಕೆ ಮಾತ್ರ ಮರ ಬಳಕೆ ಮಾಡಿದ್ದೆ. ಈ ಮರದ ಕೆಲಸ ಯಡಜಿಗಳೆ ಮನೆಯ ನರಸಿಂಹ ವಹಿಸಿಕೊಂಡಿದ್ದರು ಅವರ ಜೊತೆ ಕೆಲಸಕ್ಕೆ ಬಂದವರೆ ವಯೋವೃದ್ದರಾದ ಅಣ್ಣಪ್ಪ ಆಚಾರರು. ನರಸಿಂಹ ಅವರು ಈ ಹಿರಿಯರನ್ನು ತುಂಬಾ ಗೌರವದಿಂದ ನೋಡಿಕೊಳ್ಳುತ್ತಿದ್ದರು ತಮ್ಮ ಗುರು ಅಂತಲೇ ಕರೆಯುತ್ತಿದ್ದರು. ಅಣ್ಣಪ್ಪ ಆಚಾರರು ಮಾಡಿದ ಹೆಂಚಿನ ಮಾಡು ನೋಡಿದ ಸ್ಥಳಿಯ ಆಚಾರರೆಲ್ಲ ತಮ್ಮ ಶಹಬಾಷ್ ವ್ಯಕ್ತಪಡಿಸಿದ್ದರು ಯಾಕೆಂದರೆ ಆ ಕೆಲಸದ ಪರ್ಪೆಕ್ಷನ್ ಹಾಗಿದೆ. ಆಗ ನಿತ್ಯ ಒಡನಾಟದಲ್ಲಿ ಅಣ್ಣಪ್ಪಾಚಾರ್ ಅನೇಕ ಅವರ ಜೀವನದ ಅನುಭವ ಹೇಳುತ್ತಿದ್ದರು ನನಗೆ ಅದೆಲ್ಲ ಕೇಳುವ ಆಸಕ್ತಿ. ಆಗ ವರದಳ್ಳಿಯ ಶ್ರೀದರ ಸ್ವಾಮಿಗಳ ಆಶ್ರಮ ಈಗಿನಂತೆ ಭವ್ಯ ಆಗಿರಲಿಲ್ಲ ಆದರೆ ಶ್ರೀಧರ ಸ್ವಾಮಿಗಳು ಜೀವಂತ ವಾಗಿದ್ದರಿಂದ ಅಲ್ಲಿನ ಪರಿಸರವೇ ಬೇರೆ ರೀ...