#ನಿನ್ನೆಗೆ_ನನ್ನ_ಜೀವಮಾನದ_61_ವರ್ಷ_ಪೂರ್ಣವಾಯಿತು. #ನಾನು_ಹುಟ್ಟಿದ್ದು_9_ಫೆಬ್ರುವರಿ_1965ರಂದು #ತಡವಾಗಿ_ನೆನಪಾಯಿತು_ಹುಟ್ಟಿದ_ಹಬ್ಬದ_ಆಚರಣೆ_ನಾನು_ಆಚರಿಸಿಕೊಳ್ಳುವುದಿಲ್ಲ. #ಕಾಲ_ಯಾರಿಗೂ_ಕಾಯುವುದಿಲ್ಲ #ಪ್ರಕೃತಿ_ಎಲ್ಲ_ಜೀವಿ_ಸಸ್ಯಗಳನ್ನು_ನಾಶಮಾಡಲು_ಹೊಸದನ್ನು_ಸೃಷ್ಟಿಸಲು_ನಿರತವಾಗಿರುತ್ತದೆ. #ಇವತ್ತಿನಿಂದ_62ನೇ_ವಯಸ್ಸು_ಪೂರ್ಣ_ಮಾಡುವ_ಕಡೆಗೆ_ನಡಿಗೆ. #Birthday #wishes #Arunprasad #Hombujaresidency #yadehalli #Anandapuram #longwalk ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳವುದಿಲ್ಲ, ಉಡುಗೊರೆ ಸ್ವೀಕರಿಸುವುದಿಲ್ಲ ಆದ್ದರಿಂದ ಪ್ರತಿ ವರ್ಷ ನಾನು ಹುಟ್ಟಿದ ದಿನವಾದ #ಫೆಬ್ರುವರಿ_9 ಈ ಅರಿವು ಇಲ್ಲದೆ ಕಳೆದು ಹೋಗಿ ಬಿಡುತ್ತದೆ. ಹಾಗೆಯೇ ನನ್ನ 61ನೇ ವರ್ಷ ಪೂರೈಸಿದ ದಿನ ಮರೆತು ಹೋಗಿತ್ತು ಅದು ನೆನಪಾಗಿದ್ದು ತಡವಾಗಿ. ಆನಂದಪುರಂ ಬಿಜೆಪಿ ಶಕ್ತಿಕೇಂದ್ರದ #ನಾಡವಳ್ಳಿ_ನಾಗರಾಜ್ ಶುಭಾಷಯ ವಾಟ್ಸಪ್ ಮಾಡಿದ ಮೇಲೆ ನೆನಪಾಯಿತು. 61 ವರ್ಷ ಕಳೆದಾಯಿತು ಇನ್ನೇನಿದ್ದರು 62ನೇ ವಯಸ್ಸಿನ ಉಳಿದ 364 ದಿನಗಳ ಪೂರೈಸುವುದು. 50 ವರ್ಷ ತಲುಪುವ ತನಕ ಆಯಸ್ಸಿನ ವಾಸ್ತವ ಅರ್ಥವೇ ಆಗುವುದಿಲ್ಲ ಅದು 60 ಕ್ಕೆ ತಲುಪಿತು ಎಂದಾಗಲೇ ಎಚ್ಟರಿಕೆ ಆಗುತ್ತದೆ, ಭೂಮಿ ಮೇಲೆ ಇರುವ ದಿನಗಳು ಕಡಿಮೆ ಎಂದು ಆಗಲೇ ಅರಿವಾಗುವುದು. ...