#ಕೊಡಚಾದ್ರಿಯ_ಶಿವರಾತ್ರಿಯ_ಮೂರು_ಕೊಳಗದ_ದೀಪಾರಾದನೆ #ಕಬ್ಬನಾಡು_ಹನ್ನಾರ_ಸೌಳುನಾಡು_ಸೀಮೆಯಿಂದ_ತರುವ_ದೀಪದ_ಎಣ್ಣೆ #ಬುಡಕಟ್ಟು_ಕುಣುಬಿ_ಜನರು_ಎಣ್ಣೆ_ಸoಗ್ರಹಿಸಿ_ತಂದು_ಬೆಳಗುವ_ಪದ್ದತಿ #ಈ_ಆಚರಣೆಗೆ_ಇದೆ_ಸಾವಿರಾರು_ವರ್ಷದ_ಇತಿಹಾಸ. ಪ್ರತಿ ವರ್ಷ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಪರ್ವತದ ತುತ್ತ ತುದಿಯಲ್ಲಿ ನಡೆಯುವ ವಿಶಿಷ್ಟವಾದ ಕೊಳಗದ ದೀಪಾರಾದನೆ. ಪ್ರತಿ ವರ್ಷ ಶಿವರಾತ್ರಿಯಂದು ಕೊಡಚಾದ್ರಿ ಪರ್ವತದ ತುತ್ತ ತುದಿಯ ಸರ್ವಜ್ಞ ಮಂಟಪದ ಸ್ಥಳದಲ್ಲಿ ಮೂರು ಸೀಮೆಯ ಭಕ್ತರ ಮನೆಗಳಿಂದ ಸಂಗ್ರಹಿಸಿ ತಂದ ದೀಪದ ಎಣ್ಣೆಯನ್ನ ಆಯಾ ಸೀಮೆಗೆ ಮೀಸಲಿಡುವ ಕೊಳಗಕ್ಕೆ ಸುರಿದು ಬತ್ತಿಯನ್ನ ಹಚ್ಚಿ ದೀಪ ಬೆಳಗುವ ಪುರಾತನ ಪದ್ಧತಿ ಈಗಲೂ ಮುಂದುವರಿದಿದೆ. ಇದೇನು ಪದ್ದತಿ? ಇದಕ್ಕೆ ಕಾರಣ ಏನು? ಎಂಬ ಮಾಹಿತಿ ಇಲ್ಲಿದೆ. #kodachadri #sarvajnamantapa #jogi #kunubi #mulamukambika #sowparnika #shivaratri ಪ್ರತಿ ವರ್ಷ ಶಿವರಾತ್ರಿಯ ದಿನ ಕೊಡಚಾದ್ರಿ ಪರ್ವತದ ಮೇಲಿರುವ ಮೂಲ ಮೂಕಾಂಬಿಕಾ ದೇವಿಯ ಉತ್ಸವ -ಜಾತ್ರೆ ಅದ್ದೂರಿಯಾಗಿ ಭಕ್ತಿಪೂರ್ವಕವಾಗಿ ನೆರವೇರುತ್ತದೆ. ಇದಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ, ಈ ಮೂಲ ಮೂಕಾಂಬಿಕಾ ದೇವಿಯ ಪೂಜೆ ಮಾಡಿಕೊಂಡು ಬರುವ ಬಳೆಗಾರ ಜೋಗಿ ಕುಟುಂಬದವರಾದ ನಿಟ್ಟೂರುವಾಸಿ ನಾಗೇಶ ಜೋಗಿ ಪ್ರಧಾನ ಅರ್ಚಕರಾಗಿದ್ದಾರೆ, ಇವರ ಸ...