Blog number 903. ನಾನು ಮತ್ತು ನನ್ನ ಬ್ಲಾಗ್ ಎಂಬ ಡೈರಿ, ಇದು ಸಾಮಾಜಿಕ ಜಾಲ ತಾಣದ ಬರಹಗಾರರಿಗೆ ಅವರ ಲೇಖನಗಳು ಸಂರಕ್ಷಿಸಲು ಅತ್ಯುತ್ತಮವಾದ ಬ್ಲಾಗ್ ಗಳು.
#ನಾನೇಕೆ_ಬ್ಲಾಗ್_ಪ್ರಾರಂಬಿಸಿದೆ? #ಡೈರಿ_ರೂಪದಲ್ಲಿ_ನಮ್ಮ_ಬರವಣಿಗೆ_ಒಂದೇ_ಕಡೆ_ದಾಖಲಾಗುತ್ತದೆ. #ಬೇಕಾದಾಗ_ತೆಗೆದು_ಬಳಸಲು_ಸುಲಭ #ಸಾಮಾಜಿಕ_ಜಾಲತಾಣದಲ್ಲಿ_ಸಕ್ರಿಯರಾಗಿರುವವರು_ಇದನ್ನು_ಬಳಸಿಕೊಳ್ಳಬೇಕು. #ಐದು_ವರ್ಷದಲ್ಲಿ_ನನ್ನ_ಬ್ಲಾಗಲ್ಲಿ_ದಾಖಲಾಗಿರುವ_ಚಿತ್ರಸಹಿತ_ಲೇಖನಗಳ_ಸಂಖ್ಯೆ_900. 1 ನೇ ತಾರೀಖು ಜನವರಿ 2017 ರಂದು ನನ್ನ ಬ್ಲಾಗ್ Arunprasad Hombuja residency ಪ್ರಾರಂಭವಾಯಿತು, ಈ ಬ್ಲಾಗ್ ಪ್ರಾರಂಭಿಸಿ ಕೊಟ್ಟವರು ಐಟಿ ತಂತ್ರಜ್ಞರಾದ ಗೆಳೆಯ ಕೋಣಂದೂರಿನ ಮೂಲದ #ನವೀನ್. ಇದಕ್ಕೂ ಮೊದಲಿನಿಂದ 2010ರಿಂದ ನಾನು ಲ್ಯಾಪ್ ಟಾಪ್ ಬಳಸಿ ಪೇಸ್ ಬುಕ್ ಲ್ಲಿ ಬರೆದ ಲೇಖನಗಳು ಒಂದು ಕಡೆ ಸಂರಕ್ಷಿಸಲು ಆಗಲಿಲ್ಲ ಆದ್ದರಿಂದ ಜೀವನದ ಅಮೂಲ್ಯ ಸಮಯ ವ್ಯಯ ಮಾಡಿ ಬರೆದ ಲೇಖನ (ಉಪಯುಕ್ತವೋ? ಅಥವ ಅನುಪಯುಕ್ತವೋ? ಗೊತ್ತಿಲ್ಲ) ಒಂದು ಡೈರಿ ರೂಪದಲ್ಲಿ ಚಿತ್ರ ಸಹಿತ ಸಂರಕ್ಷಿಸಲು ಇದು ಉಪಯುಕ್ತವಾಗಿದೆ. 2017 ರಿಂದ ಇವತ್ತಿನವರೆಗೆ ನಾನು ಬರೆದ ಲೇಖನಗಳು ಈ ಲೇಖನ ಸೇರಿ 903 ಅಂದರೆ ಸರಾಸರಿ ವಾರ್ಷಿಕ 200 ಲೇಖನಗಳು ಅಂದರೆ ವರ್ಷದ 365 ದಿನದಲ್ಲಿ 200 ದಿನ ಲೇಖನ ಬರೆದವೆಂದರು ಕನಿಷ್ಟ ಒ0ದು ಗ0ಟೆ ಅಂದರೂ ಜೀವಿತಾವದಿಯ ಅಂದಾಜು ಸಾವಿರ ಗಂಟೆ ಇದಕ್ಕೆ ಕಳೆದು ಹೋದವು ಆದರೆ ಬರೆದ ಲೇಖನವೂ ದಾಖಲಾಗದೇ ಕಳೆದುಕೊಂಡರೆ ವ್ಯರ್ಥವಲ್ಲವೆ? ಹಾಗಾಗಿ ಬ್ಲಾಗ್ ನನಗೆ ಉಪಯುಕ್ತವಾಗಿದೆ. ಇದರಲ್ಲೂ ಒಂದು ಪ್ರಯೋಗ ಮ...