Skip to main content

Posts

Showing posts from April, 2021

ವಿದ್ಯಾಮಂತ್ರಿ ಪ್ರಾಥಮಿಕ ವಿದ್ಯೆ ಕಲಿತ ಆನಂದಪುರಂನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

.       #ಭಾಗ_5. #ವಿದ್ಯಾಮಂತ್ರಿಗೆ_ವಿದ್ಯೆ_ಕಲಿಸಿದ_ಶಾಲೆ #ರಾಜ್ಯದ_ಶಿಕ್ಷಣಮಂತ್ರಿ_ಆಗಿದ್ದ_ಬದರಿನಾರಾಯಣ_ಆಯ್ಯಂಗಾರರು_ಓದಿದ್ದ #ಸಕಾ೯ರಿ_ಕಿರಿಯಪ್ರಾಥಮಿಕ_ಶಾಲೆಗೆ_ಈಗ_122_ವರ್ಷ.   #ಆನಂದಪುರದ_ಜಾಮಿಯ_ಮಸೀದಿ_ಎದುರಿನ_ಶಾಲೆ   ಆನಂದಪುರಂನ ಬದರಿನಾರಾಯಣ ಅಯ್ಯಂಗಾರರು ಶಾಸಕರಾಗಿ, ಮಂತ್ರಿಯಾಗಿ, ಸಂಸದರಾಗಿ ರಾಜ್ಯದ ರಾಜಕಾರಣದಲ್ಲಿ ತಮ್ಮ ಚಾಪು ಮೂಡಿಸಿದವರು ಇವರಿಂದ ಇವರ ಹುಟ್ಟೂರು ಆನಂದಪುರಂ ಕೂಡ ಪ್ರಸಿದ್ದಿ ಪಡೆಯಲು ಕಾರಣರಾದರು.   ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಆನಂದಪುರದ ಹಾಲಿ ಜಾಮಿಯ ಮಸೀದಿಯ ಎದುರಿನ ಸಕಾ೯ರಿ ಕಿರಿಯ ಪ್ರಾಥಮಿಕ  ಶಾಲೆಯಲ್ಲಿ ಮಾಡಿದ್ದು ಇತಿಹಾಸ.   ಇದು ಬ್ರಿಟೀಶ್ ಆಡಳಿತ ಕಾಲದಲ್ಲಿ ಯಡೇಹಳ್ಳಿ ಪ್ರವಾಸಿ ಮಂದಿರ ನಿರ್ಮಾಣದ ಸರಿ ಸುಮಾರು ಒಂದೇ ಕಾಲದಲ್ಲಿ ನಿರ್ಮಾಣ ಆಗಿರ ಬಹುದು.    ಈ ಶಾಲೆಗೆ 1999 ರಲ್ಲಿ ನೂರು ವರ್ಷ ಆಗಿತ್ತು ಆಗ ಈ ಶಾಲೆಯ ಶತಮಾನೋತ್ಸವ ಆಚರಿಸಬೇಕು, ವಿಶೇಷ ಅಂದರೆ ಈ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ ನಮ್ಮ ಊರಿನ ಬದರಿನಾರಾಯಣ ಅಯ್ಯಂಗಾರರು ಈ ರಾಜ್ಯದ ವಿದ್ಯಾ ಮಂತ್ರಿ ಆಗಿದ್ದು ಎಂದು ನಾನು ಆಗ ಜಿಲ್ಲಾ ಪಂಚಾಯತ್  ಸದಸ್ಯನಾಗಿದ್ದಾಗ ಪ್ರಯತ್ನ ಮಾಡಿದಾಗ ಅದನ್ನು ಉದ್ದೇಶಪೂರ್ವಕವಾಗಿ ನಡೆಯದಂತೆ ತಡೆಯುವ ಪ್ರಯತ್ನದಿಂದ ನಾನು ಈ ಮಹತ್ತರ ಕಾಯ೯ಕ್ರಮ ನಡೆಸಲು ಸಾಧ್ಯವಾಗಲಿಲ್ಲ. ...

ನಾವು ಜನ ಸಾಮಾನ್ಯರು ನಮ್ಮ ಕುಟುಂಬದ ಸುರಕ್ಷೆ ನಮ್ಮದೇ ಜವಾಬ್ದಾರಿ, ಕೊರಾನ ಎರಡನೆ ಅಲೆ ಎದುರಿಸಲು ಇಲ್ಲಿದೆ ಆರೋಗ್ಯ ಕವಚದ ಉಪಾಯ

#ನಾವು_ಜನಸಾಮಾನ್ಯರು_ನಮ್ಮ_ಕೈ_ನಮ್ಮ_ತಲೆಮೇಲೆ #ನಮಗೆ_ನಾವೇ_ರೋಗಮುಕ್ತ_ಉಪಾಯಗಳು_ಪಾಲಿಸೋಣ #ಸಕಾ೯ರ_ರಾಜಕೀಯ_ಪಕ್ಷ_ಎಲ್ಲಾ_ಚಿಂತಿಸಬೇಡಿ.   ಕಳೆದ ವರ್ಷ ಕೊರಾನಾ ಮೊದಲ ಅಲೆ ಇಷ್ಟು ಕತರ್ ನಾಕ್ ಆಗಿರಲಿಲ್ಲ ಆದರೆ ಸರ್ಕಾರ ಮತ್ತು ಜನತೆ ಹೆಚ್ಚು ಜಾಗೃತಿ ವಹಿಸಿದೆವು ಆಗ ಸ್ಯಾನಿಟೈಸರ್, ಮಾಸ್ಕಗಳು ತುಂಬಾ ಕೊರತೆ ಇತ್ತು. ಆದರೂ ನಾವೆಲ್ಲ ಗೆದ್ದೆವು.   ಈ ವರ್ಷದ ಕೊರಾನಾ ಎರಡನೆ ಅಲೆ ಅತ್ಯಂತ ಅಪಾಯಕಾರಿ ಈಗಾಗಲೇ ರೋಗ ಪೀಡಿತರಿಗೆ ದೇಶದಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಜಾಗ ಖಾಲಿ ಇಲ್ಲ. ಆದರೆ ವ್ಯಾಕ್ಸಿನ್ ಬಂದಿದೆ, ಮಾಸ್ಕ ಮತ್ತು ಸ್ಯಾನಿಟೈಸರ್ ಗೆ ಕೊರತೆ ಇಲ್ಲ.   ಜೀವ ಕಳೆದುಕೊಂಡವರ ಅಂತ್ಯಕ್ರೀಯೆ ಮಾಡಲೂ ಸ್ಮಶಾನದಲ್ಲಿ ಸರತಿ ಸಾಲುಗಳಿದೆ ಎರಡರಿಂದ ಮೂರು ದಿನ ಅಂತ್ಯಸಂಸ್ಕಾರಕ್ಕೆ ಕಾಯಬೇಕಾಗಿದೆ.   ಹಣ, ಅಧಿಕಾರ ಮತ್ತು ಪ್ರಭಾವ ಇದ್ದರೂ ಬದುಕಲು ಸಾಧ್ಯವಿಲ್ಲ ಅಂತ ಸಾವು ನೋವಿನ ಸುದ್ದಿ ಕೇಳುತ್ತಲೇ ಇದೆ.     ಈ ಸಂದಭ೯ದಲ್ಲಿ ನಾವು ಈ ಸಕಾ೯ರಗಳನ್ನು ಅವುಗಳ ನಡೆಸುವ ಪಕ್ಷಗಳನ್ನು ಅವುಗಳ ಕ್ರೀಯಾಶೀಲತೆ ಅಥವ ಕರ್ತವ್ಯ ಲೋಪ ವಿಮರ್ಶೆ ಮಾಡುತ್ತಲೋ, ವ್ಯಾಕ್ಸಿನ್ ಬಗ್ಗೆ ಯೋಚಿಸುತ್ತಾ ಕುಳಿತು ಕೊಳ್ಳದೆ ನಮ್ಮ ಕುಟುಂಬದ ಆರೋಗ್ಯ ಕವಚ ನಿರ್ಮಿಸಿಕೊಂಡು ಬದುಕುವ ಬಗ್ಗೆ ಹೆಚ್ಚು ಯೋಚಿಸಬೇಕು.   #ನಮ್ಮ_ಕುಟುಂಬದ_ಆರೋಗ್ಯ_ಕವಚ   1. ತಕ್ಷಣದಿಂದ ನಿಮ್ಮ ನಿಮ್ಮ ಮನೆಯ ಗೇಟಿಗೆ ...

ಭಾಗ-4, ಆನಂದಪುರಂ ನ ನಿಮಾ೯ತೃ ಜಮೀನ್ದಾರ್ ರಾಮಕೃಷ್ಣ ಅಯ್ಯ೦ಗಾರರ ಕುಟುಂಬದ ವಿವರ

#ಭಾಗ_4 #ಆನಂದಪುರದ_ಅಯ್ಯಂಗಾರ್_ಕುಟುಂಬದ_ವಿವರ    ಲಕ್ಷೀಪತಿ ಅಯ್ಯಂಗಾರರು ಪಶು ಸಂಗೋಪನೆ ಮಾಡಿಕೊಂಡು ಜೀವನ ಮಾಡುತ್ತಾರೆ ಅವರ ಪುತ್ರ ರಾಮಕೃಷ್ಣ ಅಯ್ಯಂಂಗಾರ್ ಇವರ ಪತ್ನಿ ಕನಕಮ್ಮಾಳ್ ಇವರಿಗೆ ನಾಲ್ಕು ಪುತ್ರರು ದೊಡ್ಡವರು ಜಗನ್ನಾಥ ಅಯ್ಯಂಗಾರ್, ಎರಡನೆ ವೆಂಕಟಚಲಾಯ್ಯಂಗಾರ್, ಮೂರನೆಯ ಬದರಿನಾರಾಯಣ ಅಯ್ಯಂಗಾರ್ ಮತ್ತು ನಾಲ್ಕನೆಯ ಅನಂತರಾಮ ಅಯ್ಯಂಗಾರ್.  ಮೊದಲ ಪತ್ನಿ ಮೃತರಾದಾಗ ಇನ್ನೊಂದು ವಿವಾಹ ಆಗುತ್ತಾರೆ ಆ ಪತ್ನಿಯಿ೦ದ ಎರೆಡು ಗಂಡು ಮತ್ತು ಒಂದು ಪುತ್ರಿ ಹುಟ್ಟುತ್ತಾರೆ ಅವರ ಹೆಸರು ಶ್ರೀನಿವಾಸ ಅಯ್ಯಂಗಾರ್, ರಾಧಾಕೃಷ್ಣ ಆಯ್ಯಂಗಾರ್, ಮತ್ತು ವನಜಾಕ್ಷಿ.      ಮೊದಲ ಪುತ್ರ ಜಗನ್ನಾಥ ಅಯ್ಯ೦ಗಾರರು ಮೃತರಾಗುತ್ತಾರೆ. ಎರಡನೆ ಮಗ ವೆಂಕಟಾಚಲಯ್ಯಂಗಾರರಿಗೆ ರಾಮ ಪ್ರಸಾದ್, ರಂಗನಾಥ, ಶ್ಯಾಮಪ್ರಸಾದ್, ಜಯಪ್ರಕಾಶ್, ತಿರುನಾರಾಯಣ್, ಜಯರಾಮ ಎಂಬ ಆರು ಗಂಡು ಮಕ್ಕಳು ಮತ್ತು ಪುಷ್ಪಾ, ಕನಕ ಎಂಬ ಎರೆಡು ಹೆಣ್ಣು ಮಕ್ಕಳು.     ವೆಂಕಟಾಚಲಯ್ಯಂಗಾರರ ಮಕ್ಕಳು ಮಾತ್ರ ಆನಂದಪುರದ ರಂಗನಾಥ ಸ್ವಾಮಿ ಜಾತ್ರೋತ್ಸವಕ್ಕೆ ಬಂದು ತಮ್ಮ ಭಕ್ತಿ ಸಮಪಿ೯ಸುತ್ತಾರೆ ಮತ್ತು ಇದಕ್ಕಾಗಿ ಕೆಲ ಲಕ್ಷ ರೂಪಾಯಿ ವ್ಯಯಿಸುತ್ತಾರೆ.     ವೆಂಕಟಚಲಯ್ಯಂಗಾರರ ಮಕ್ಕಳು ಮೊಮ್ಮಕ್ಕಳು ಕುಟುಂಬ ಸಮೇತ ಪ್ರತಿ ತಿಂಗಳು ಆನಂದಪುರಂಗೆ ಬರುತ್ತಾರೆ ಮತ್ತು ವಾರಗಟ್ಟಲೆ ಇಲ್...

ಭಾಗ - 3 , ರಾಮಕೃಷ್ಣ ಅಯ್ಯಂಗಾರರು ತಮ್ಮ ಧರ್ಮಪತ್ನಿ ಶ್ರೀಮತಿ ಕನಕಮ್ಮಾಳ್ ಸ್ಮರಣೆಗಾಗಿ ನಿಮಿ೯ಸಿದ ಆನಂದಪುರಂ ಆಸ್ಪತ್ರೆ, ಸಮಾಜದಲ್ಲಿ ಅಯ್ಯಂಗಾರರ ಕುಟುಂಬದ ಹೆಸರು ಚಿರಸ್ಥಾಯಿಗೊಳಿಸಿದ ದೊಡ್ಡ ಸಮಾಜ ಸೇವೆ.

                            #ಬಾಗ_3                    #ಕನಕಮ್ಮಾಳ್_ಆಸ್ಪತ್ರೆ #ಅಯ್ಯಂಗಾರ್_ಕುಟುಂಬ_ಆನಂದಪುರಂ_ನಲ್ಲಿ_ಸ್ಥಾಪಿಸಿದ_ಆಸ್ಟತ್ರೆ. #ಈ_ಆಸ್ಪತ್ರೆ_ನಿಮಾ೯ಣದ_ಹಿಂದಿದೆ_ಒಂದು_ಮುಖ್ಯ_ಕಾರಣ        ರಾಮಕೃಷ್ಣ ಅಯ್ಯಂಗಾರರ ದಮ೯ ಪತ್ನಿ ಶೀಮತಿ ಕನಕಮ್ಮಾಳ್ ಅನಾರೋಗ್ಯದಿಂದ ಮರಣಿಸುತ್ತಾರೆ ಇದರಿಂದ ರಾಮಕೃಷ್ಣ ಅಯ್ಯಂಗಾರರು ತುಂಬಾ ದುಃಖಿತರಾಗುತ್ತಾರೆ, ಪತ್ನಿ ಕನಕಮ್ಮಾಳ್  ಅವರ ಆಭರಣ ಮಾರಾಟ ಮಾಡುತ್ತಾರೆ.      ಆ ಹಣದಲ್ಲಿ ಈಗಿನ ಹೊಸನಗರ ತಾಲ್ಲೂಕಿನ ಹರತಾಳು ಸಮೀಪದ ಹುಣಸವಳ್ಳಿಯಲ್ಲಿ ದೊಡ್ಡ ಆಸ್ತಿ ಜಮೀನು ತೋಟ ಖರೀದಿಸುತ್ತಾರೆ.      ಆದರೆ ಇದು ರಾಮಕೃಷ್ಣ ಅಯ್ಯಂಗಾರರಿಗೆ ಸಮಾದಾನ ತರುವುದಿಲ್ಲ, ಮುದ್ದಿನ ಮಡದಿಯ ಹೆಸರು ಚಿರಸ್ಥಾಯಿ ಆಗುವಂತೆ ಮಾಡಬೇಕೆಂಬ ಅದಮ್ಯ ಆಸೆ ಅವರಲ್ಲಿ ಚಿಗುರೊಡೆದಿರುತ್ತದೆ.    ಹುಣಸಳ್ಳಿಯಲ್ಲಿ ಖರೀದಿಸಿದ್ದ ಆಸ್ತಿಯನ್ನು (ಜಮೀನು, ತೋಟ ಮನೆ) ಸ್ವಾಮಿ ಗೌಡರಿಗೆ ಅಂದರೆ ಈಗಿನ ಹುಣಸಳ್ಳಿ ಚಂದ್ರಶೇಖರ ಗೌಡರ ತಂದೆಗೆ ಮಾರುತ್ತಾರೆ, ಈಗಿನ ಆನಂದ ಪುರದಿಂದ ಬಟ್ಟೆಮಲ್ಲಪ್ಪ ರಸ್ತೆಯಲ್ಲಿ ಎಡ ಭಾಗದ ಹುಣಸಳ್ಳಿ ಶಾಲೆ ಅಕ್ಕ ಪಕ್ಕದ ಈ ಜಮೀನು ನೋಡ ಬಹುದು....

ಮಂಗಳೂರಿನ ನಾಲ್ಕು ದಶಕಗಳ ಕಾಲ ಪ್ರಸಿದ್ದವಾಗಿದ್ದ ಅತ್ರಿ ಬುಕ್ ಸೆಂಟರ್ ( ಎ.ಬಿ.ಸಿ.) ಮಾಲಿಕ ದಂಪತಿಗಳಿಂದ ಚಂಪಕ ಸರಸ್ಸು ದರ್ಶನ

#ಕ್ರಿಯಾಶೀಲ_ಸಾಧಕರು_ಆತ್ರಿ_ಬುಕ್_ಸೆಂಟರ್_ಎನ್_ಅಶೋಕವದ೯ನ್ #ನಮ್ಮ_ಊರಿನ_ಚಂಪಕ_ಸರಸ್ಸು_ಬೇಟಿ  ಮಂಗಳೂರಿನ ABC ಅಂದ್ರೆ ಅತ್ರಿ ಬುಕ್ ಸೆಂಟರ್ ಮಾಲಿಕರಾದ ಎನ್.ಅಶೋಕವದ೯ನರು 2012ರಲ್ಲಿಯೇ ತಮ್ಮ ಬುಕ್ ಸೆಂಟರ್ ನ್ನು ಕನ್ನಡ ಪುಸ್ತಕ ಓದುವ ಕೊಳ್ಳುವ ಹವ್ಯಾಸ ಜನರಲ್ಲಿ ಕಡಿಮೆ ಆದ್ದರಿಂದ ಮುಚ್ಚಿದ್ದಾರೆ.   ಇವರ ಹವ್ಯಾಸ ಪ್ರವಾಸ - ಡ್ರೈವಿಂಗ್ - ಓದು -ಪೋಟೋಗ್ರಪಿ ಜೊತೆಗೆ ಖಾಸಾಗಿ ವನ್ಯ ಸಂರಕ್ಷಣೆ ಕೂಡ, ಇದಕ್ಕಾಗಿ ಬಿಸಲೆ ಸಮೀಪ ಇವರ ಖಾಸಾಗಿ ಜಮೀನಿನ ವನ್ಯ ಸಂರಕ್ಷಣೆಗಾಗಿ ಇವರ ಅಶೋಕ ವನ ಮಾಡಿದ್ದಾರೆ.   ಇವರ ಬ್ಲಾಗ್ ಗಳು ಆಕಷ೯ಕ ಬರವಣಿಗೆ ಮತ್ತು ಚಿತ್ರಗಳಿಂದ ಎಲ್ಲರಿಗೂ ಆಕಷಿ೯ಸುತ್ತದೆ ಅದರಲ್ಲಿ ಇವರ ಅಶೋಕವನದಲ್ಲಿ ನಿರ್ಮಿಸಿದ #ಕಪ್ಪೆಗೂಡಿನ ಬಗ್ಗೆ ಬರೆದಿರುವ ಲೇಖನ ನನಗೆ ತುಂಬಾ ಇಷ್ಟ, ಇವರ ಪುತ್ರ ಚಲನ ಚಿತ್ರ ನಿದೇ೯ಶಕ ವೃತ್ತಿ ಮಾಡುತ್ತಿದ್ದಾರೆ.   ಅನೇಕ ಪುಸ್ತಕ ಕೂಡ ಬರೆದು ಪ್ರಕಟಿಸಿದ್ದಾರೆ, ಮೊನ್ನೆ ಹೆಗ್ಗೋಡಿನ ನಿನಾಸಂಗೆ ಬೈಕ್ ನಲ್ಲಿ #ಅಶೋಕವರ್ಧನ್ ದಂಪತಿ ಬಂದಾಗ ಗೆಳೆಯ #ಶೈಲೇಂದ್ರಬಂದಗದ್ದೆ ಚಂಪಕ ಸರಸ್ಸುವಿನ ಬಗ್ಗೆ ಹೇಳಿದ್ದರಿಂದ ದಂಪತಿಗಳು ನಮ್ಮ ಊರಿನ ನಾನೂರು ವರ್ಷದ ಸ್ಮಾರಕ ಚಂಪಕ ಸರಸ್ಸು ಸಂದರ್ಶಿಸಿ ಅವರ FB ಯಲ್ಲಿ ಬರೆದ ಲೇಖನ ಇಲ್ಲಿ ಶೇರ್ ಮಾಡಿದ್ದೇನೆ ಮತ್ತು ಅವರಿಗೆ ನನ್ನ ಕಾದಂಬರಿ " ಬೆಸ್ತರ ರಾಣಿ ಚಂಪಕಾ " ಅಂಚೆಯಲ್ಲಿ ಗೌರವ ಪ್ರತಿಯಾಗಿ ಕಳಿಸಿದ್ದೇನೆ ಮತ್ತು ಸ್ಮ...

ಭಾಗ - 2 , ಆನಂದಪುರಂ ಪುರಾಭಿವೃದ್ದಿಗೆ ತನು-ಮನ-ಧನ ನೀಡಿದ ಅಯ್ಯಂಗಾರ್ ಕುಟುಂಬದ ನೆನಪು, ರಾಮಕೃಷ್ಣ ಅಯ್ಯಂಗಾರ್ ತಮ್ಮ ಪುತ್ರ ಜಗನ್ನಾಥ ಅಯ್ಯ೦ಗಾರ್ ಸ್ಮರಣಾಥ೯ ನಿಮಿ೯ಸಿದ್ದ ಪಶು ವೈದ್ಯ ಶಾಲೆ

#ಭಾಗ_2. #ಆನಂದಪುರದಲ್ಲಿ_ಅಯ್ಯಂಗಾರ್_ಕುಟುಂಬದ_ದಾನದಿಂದ_ನಿರ್ಮಿಸಿದ್ದ_ಜಗನಾಥ_ಪಶುವೈದ್ಯ_ಶಾಲೆ_ಆನಂದಪುರಂ #ಈಗಿನ_ಬೋಡ್೯ನಲ್ಲಿ_ದಾನಿಗಳ_ಹೆಸರು_ಬಿಟ್ಟಿರುವುದು_ವಿಷಾದನೀಯ      ಬೋಜರಾಜ್ ಅಯ್ಯಂಗಾರರ ಅಜ್ಜ ಕಂಟ್ರಾಕ್ಟರಾಗಿದ್ದ ಶ್ರೀನಿವಾಸ ಅಯ್ಯಂಗಾರರು ರಾಮಕೃಷ್ಣ ಅಯ್ಯಂಗಾರರ ಅಣ್ಣರನ್ನು ಹಾಸನ ಜಿಲ್ಲೆಯ ಗೊರೂರಿನಿಂದ ಆನಂದಪುರಕ್ಕೆ ಕರೆ ತರುತ್ತಾರೆ ಆಗ ಬ್ರಿಟೀಶ್ ಆಡಳಿತ, ಆನಂದಪುರಂ ತಾಲ್ಲೂಕ್ ಕೇಂದ್ರವಾಗಿರುತ್ತದೆ ಅಲ್ಲಿ ತಾಲ್ಲೂಕ್ ಕಛೇರಿಯಲ್ಲಿ ಕೆಲಸಕ್ಕೆ ಸೇರುತ್ತಾರೆ ನಂತರ ತಮ್ಮ ಸಹೋದರ ಲಕ್ಷ್ಮೀಪತಿ ಅಯ್ಯಂಗಾರರನ್ನು ಇಲ್ಲಿಗೆ ಕರೆ ತರುತ್ತಾರೆ.    ಲಕ್ಷೀಪತಿ ಅಯ್ಯಂಗಾರರು ಪಶು ಸಂಗೋಪನೆ ಮಾಡಿಕೊಂಡು ಜೀವನ ಮಾಡುತ್ತಾರೆ ಅವರ ಪುತ್ರ ರಾಮಕೃಷ್ಣ ಅಯ್ಯಂಂಗಾರ್ ಇವರ ಪತ್ನಿ ಕನಕಮ್ಮಾಳ್ ಇವರಿಗೆ ನಾಲ್ಕು ಪುತ್ರರು ದೊಡ್ಡವರು ಜಗನ್ನಾಥ ಅಯ್ಯಂಗಾರ್, ಎರಡನೆ ವೆಂಕಟಚಲಾಯ್ಯಂಗಾರ್, ಮೂರನೆಯ ಬದರಿನಾರಾಯಣ ಅಯ್ಯಂಗಾರ್ ಮತ್ತು ನಾಲ್ಕನೆಯ ಅನಂತರಾಮ ಅಯ್ಯಂಗಾರ್.    ರಾಮಕೃಷ್ಣ ಅಯ್ಯಂಗಾರ್ ಪತ್ನಿ ಕನಕಮ್ಮಾಳರು ಮೃತರಾದಾಗ ಇನ್ನೊಂದು ವಿವಾಹ ಆಗುತ್ತಾರೆ ಆ ಪತ್ನಿಯಿ೦ದ ಎರೆಡು ಗಂಡು ಮತ್ತು ಒಂದು ಪುತ್ರಿ ಹುಟ್ಟುತ್ತಾರೆ ಅವರ ಹೆಸರು ಶ್ರೀನಿವಾಸ ಅಯ್ಯಂಗಾರ್, ರಾಧಾಕೃಷ್ಣ ಆಯ್ಯಂಗಾರ್, ಮತ್ತು ವನಜಾಕ್ಷಿ.   ರಾಮಕೃಷ್ಣ ಅಯ್ಯಂಗಾರ್ ಮೊದಲ ಪುತ್ರ ಅಕಾಲಿಕವಾಗಿ ಮೃತರಾದ್ದರಿಂದ ...

ಭಾಗ - 1.ಆನಂದಪುರಂನ ಪುರಾಭಿವೃದ್ದಿಗೆ ತನು-ಮನ-ಧನ ಸಹಾಯ ಮಾಡಿದ್ದ ಅಯ್ಯ೦ಗಾರ್ ಕುಟುಂಬದ ನೆನಪು

#ಶಾಸಕರು_ಸಂಸದರು_ವಿದಾನಪರಿಷತ್_ಸದಸ್ಯರು_ಮತ್ತು_ವಿದ್ಯಾ_ಮಂತ್ರಿಗಳಾಗಿದ್ದ_ಆನಂದಪುರಂನ  #ಎ_ಆರ್_ಬದರಿನಾರಾಯಣ್_ಅಯ್ಯಂಗಾರ್_ಒಂದು_ನೆನಪು #19_ಮತ್ತು_20ನೇ_ಶತಮಾನದ_ಆನಂದಪುರದ_ಪ್ರತಿಷ್ಠಿತ_ಕುಟುಂಬದ_ಕಥೆ_21_ನೇ_ಶತಮಾನಕ್ಕೆ_ಮರೆತು_ಹೋಗಿದೆ.                             ಭಾಗ - 1 #ಶಿವಮೊಗ್ಗ_ಜಿಲ್ಲೆಯ_ಆನಂದಪುರದ_ಅಯ್ಯಂಗಾರ್_ಕುಟುಂಬದ_ನೆನಪುಗಳು.       ಆನಂದಪುರಂನ ಆಸ್ಪತ್ರೆ, ಪಶು ವೈದ್ಯ ಶಾಲೆ, ಶಾಲಾ ಕಾಲೇಜು, ಬ್ಯಾಂಕ್ ನಿಮಾ೯ತರು.      ಶಾಸಕ, ಸಂಸದ ಮತ್ತು ವಿದ್ಯಾ ಮಂತ್ರಿ ಆದ ಇವರ ಕುಟುಂಬದ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್.     1952ರ ಪ್ರಥಮ ಚುನಾವಣಾ ರಾಜಕೀಯದಲ್ಲಿ ಸಾಗರ - ಹೊಸನಗರ- ತೀಥ೯ಹಳ್ಳಿ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಸ್ಪದಿ೯ಸಿದ್ದ ಆನಂದಪುರಂನ ಭೂ ಮಾಲಿಕರು ಕೊಡುಗೈ ದಾನಿಗಳಾಗಿದ್ದ ರಾಮ ಕೃಷ್ಣ ಅಯ್ಯಂಗಾರ ಪುತ್ರ, ವಕೀಲರು, ಸ್ಟಾತಂಂತ್ರ ಹೋರಾಟಗಾರರಾಗಿದ್ದ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್ ಸಮಾಜವಾದಿ ಪಾರ್ಟಿಯ ಕಾಗೋಡು ಚಳವಳಿಯ ನಾಯಕ ಶಾಂತವೇರಿ ಗೋಪಾಲಗೌಡರ ಎದರು ಸೋಲುತ್ತಾರೆ.      ಸ್ವಾತಂತ್ರ ನಂತರದ ಮೊದಲ ಚುನಾವಣೆ ಸೋಲಿನ ಪಲಿತಾಂಶದಿಂದ ನೊಂದ ರಾಮಕೃಷ್ಣ ಅಯ್ಯಂಗಾರರು ಹೃದಯಾಘಾತದಿಂದ ಮೃತರಾಗ...

ಮಲೆನಾಡಿನ ಉರುಗ ತಜ್ಞ ಬರಿಗೈಯಲ್ಲಿಯೇ ಹಾವು ಹಿಡಿಯುವ ಪರಿಸರ ಪ್ರೇಮಿ ಮನ್ಮಥ ಕುಮಾರ್ ನೆನಪುಗಳೊಂದಿಗೆ ಶ್ರದ್ದಾ೦ಜಲಿಗಳು

                 ಶ್ರದ್ದಾ೦ಜಲಿಗಳು ಮಲೆನಾಡಿನ ಉರಗ ತಜ್ಞ ಮನ್ಮಥಕುಮಾರ್ ಇನ್ನು ನೆನಪು ಮಾತ್ರ   ಮನ್ಮಥ್ ಕುಮಾರ್ ಎಂದರೆ 1980 ರಿಂದ 90 ರ ದಶಕದಲ್ಲಿ ಒಂದು ಥರ ಹೀರೋ ಸಾಗರದಲ್ಲಿ, ಅವರು ಬೈಕ್ ಲ್ಲಿ ಹಾದು ಹೋದರೆ ವಿದ್ಯಾಥಿ೯ಗುಂಪುಗಳಲ್ಲಿ ಅವರೆ ನೋಡು ಮನ್ಮಥ ಕುಮಾರ್ ಅಂತ ಉದ್ಘೋಷ, ಹೆಸರಿಗೆ ತಕ್ಕ ಸ್ಪುರದ್ರೂಪಿ ಮನ್ಮಥ ಕುಮಾರ್ ಅಂತರ್ಮುಖಿ ಮತ್ತು ಅಥ೯ ಮಾಡಿಕೊಳ್ಳಲಾಗದ ವ್ಯಕ್ತಿತ್ವದವರು.   ಹವ್ಯಕ ಬ್ರಾಹ್ಮಣರಲ್ಲಿ ಅಪರೂಪದ ಉರಗ ಪ್ರೇಮಿ, ಈಗ ಎಲ್ಲೆಲ್ಲೂ ವಿಷ ಸರ್ಪಗಳನ್ನು ಹಿಡಿಯುವವರಿದ್ದಾರೆ ಸುಮಾರು 30-40 ವಷ೯ದ ಹಿಂದೆಯೇ ಮನೆ ಪ್ರವೇಶಿಸುತ್ತಿದ್ದ ಬೃಹತ್ ಕಾಳಿಂಗ ಸಪ೯ಗಳನ್ನು ಲೀಲಾಜಾಲವಾಗಿ ಹಿಡಿದು ಕಾಡಿಗೆ ಬಿಡುತ್ತಿದ್ದ ಮನ್ಮಥ ಕುಮಾರ್ ಅಂದರೆ ವಿಸ್ಮಯ ವ್ಯಕ್ತಿತ್ವ.   ಆಗೆಲ್ಲ ಸೋಷಿಯಲ್ ಮೀಡಿಯ, ಟೀವಿ ಚಾನಲ್ ಇಲ್ಲದ್ದರಿಂದ ಇವರು ರಾಜ್ಯದಾದ್ಯಂತ ಈಗಿನ ಸ್ನೇಕ್ ಕ್ಯಾಚರ್ ರೀತಿ ಪ್ರಚಾರ ಪಡೆಯಲಿಲ್ಲ ಮತ್ತು ಮನ್ಮಥ ಕುಮಾರ್ ಕೂಡ ಪ್ರಚಾರದಿಂದಲೂ ಬಲು ದೂರವೇ ಇರುತ್ತಿದ್ದರು.   ಸಾಗರ ತಾಲ್ಲೂಕಿನ ಮುಂಡಿಗೆಸರ ವಾಸಿ ಆದ ಇವರು ಹಿಡಿದ ಕಾಳಿಂಗ ಸರ್ಪವೇ ಹತ್ತಿರ ಹತ್ತಿರ 500 ಇನ್ನು ನಾಗರ ಹಾವುಗಳ೦ತೂ ಕೆಲವು ಸಾವಿರ, ಇವರ ವಿಶೇಷ ಅಂದರೆ ವೈಲ್ಡ್ ಲೈಫ್ ಇಲಾಖೆ ಪರವಾನಿಗೆ ಹೊಂದಿರುವ ವಿರಳ ಸ್ನೇಕ್ ಕ್ಯಾಚರ್ ಲ್ಲಿ ಇವರು ಒಬ್ಬರು. ...

ಕಳೆದ ವರ್ಷ ಜನರಲ್ಲಿ ಜೀವ ಭಯ ಇತ್ತು ಅವತ್ತು ಕಾಯಿಲೆ ಪೀಡಿತರ ಸಂಖ್ಯೆ ಸಾವಿನ ಸಂಖ್ಯೆ ಕಡಿಮೆ ಇತ್ತು, ಈ ವರ್ಷ ಕಾಯಿಲೆ ಪೀಡಿತರು ಕೆಲವು ಲಕ್ಷ ಸಂಖ್ಯೆ, ಸಾವಿನ ಸಂಖ್ಯೆ ನಾಲ್ಕು ಪಟ್ಟು ಆಗಿದೆ ಆದರೆ ಜನರಲ್ಲಿ ಸಾವಿನ ಭಯ ಮಾತ್ರ ಇಲ್ಲ.

#ಇದು_ಕಳೆದ_ವರ್ಷ_ಇದೇ_ದಿನ_ಬರೆದ_ಪೋಸ್ಟ್  #ಅವತ್ತು_ಸಾವಿನ_ಭಯ_ಇತ್ತು.  ಕಳೆದ ವರ್ಷ ಇವತ್ತಿನ ದಿನ ಇಡೀ ದೇಶದಲ್ಲಿ ಕೊರಾನಾ ಹರಡಿದ್ದು 24 942, ಸಾವು 780 ಅವತ್ತು ಕನಾ೯ಟಕ ರಾಜ್ಯದಲ್ಲಿ 489 ಜನರಿಗೆ ಪಾಸಿಟೀವ್ ಮತ್ತು 18 ಜನ ಮೃತರಾಗಿದ್ದರು ಅವತ್ತು ಇಡೀ ದೇಶದಲ್ಲಿ ಲಾಕ್ ಡೌನ್ ಆಗಿತ್ತು, ರೋಗ ನಿರೋದಕ ಚುಚ್ಚುಮದ್ದು ಬಂದಿರಲಿಲ್ಲ.      #ಇವತ್ತು_ಸಾವಿನ_ಭಯ_ಇಲ್ಲ    ಈ ವಷ೯ ಇವತ್ತಿನ ಸಂಖ್ಯೆ ದೇಶದಾದ್ಯಂತ ಕಾಯಿಲೆ ಪೀಡಿತರು 3,46,786 ಸಾವು 2,694. ಕನಾ೯ಟಕದಲ್ಲಿ 29,438 ಮತ್ತು ಸಾವು 208. ಈಗ ದೇಶದಲ್ಲಿ ಚುಚ್ಚುಮದ್ದು ಲಭ್ಯ, ಲಾಕ್ ಡೌನ್ ಇಲ್ಲ.    #ಸ್ವಯ೦_ರೋಗ_ಬರದಂತೆ_ಜನಸಂಪರ್ಕದಿಂದ_ದೂರವಿದ್ದು #ಮಾಸ್ಕ್_ಸ್ಯಾನಿಟ್ಟೆಸರ್_ಬಳಸುವ_ಕಡ್ಡಾಯ_ಅಭ್ಯಾಸ_ಮುಂದಿನ_ಮೂರು_ತಿಂಗಳು_ಪಾಲಿಸಲೇ_ಬೇಕು #ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_23 #ದಿನಾ0ಕ_26_ಏಪ್ರಿಲ್_2020 *ಮಾಚ್೯ 24 ರಿಂದ ಮೇ 3 ರವರೆಗಿನ 2 ಹoತದ ಲಾಕ್ ಡೌನ್ ನಲ್ಲಿ ಇವತ್ತಿಗೆ 32 ದಿನಗಳಾಯಿತು ಇನ್ನೂ 8 ದಿನ ಬಾಕಿ ಇದೆ.    ಸಾಧ್ಯವೇ ಇಲ್ಲ ಅಂತ ಬಾವಿಸಿದ್ದು ಅದಾಗಿ ನಡೆದೇ ಹೋಯಿತು, ಸಿನಿಮಾ ಇಲ್ಲದೆ ಸಾಧ್ಯವೆ? ಮಾಲ್ ಇಲ್ಲದೆ ಸಾಧ್ಯವೆ? ಶಾಲೆ ಇಲ್ಲದೆ ಸಾಧ್ಯವೇ? ಹೋಟೆಲ್ ಅಂಗಡಿ ಇಲ್ಲದೆ ಸಾಧ್ಯವೆ? ಬಸ್, ರೈಲು, ವಿಮಾನ ಇಲ್ಲದೆ ಸಾಧ್ಯವೇ? ಅಂತೆಲ್ಲ ಪ್ರಶ್ನೆಗಳಿಗೆ ಉ...

ಶಾಸಕರು, ಸಂಸದರು, ವಿದಾನಪರಿಷತ್ ಸದಸ್ಯರು ಮತ್ತು ವಿದ್ಯಾ ಮಂತ್ರಿಗಳಾಗಿದ್ದ ಆನಂದಪುರಂ ನ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್ ಒಂದು ನೆನಪು, 19 ಮತ್ತು 20ನೇ ಶತಮಾನದ ಆನಂದಪುರದ ಪ್ರತಿಷ್ಠಿತ ಕುಟುಂಬದ ಕಥೆ 21 ನೇ ಶತಮಾನಕ್ಕೆ ಮರೆತು ಹೋಗಿದೆ.

 ಶಿವಮೊಗ್ಗ ಜಿಲ್ಲೆಯ ಆನಂದಪುರದ ಅಯ್ಯಂಗಾರ್ ಕುಟುಂಬದ ನೆನಪುಗಳು.ಆಸ್ಪತ್ರೆ, ಪಶು ವೈದ್ಯ ಶಾಲೆ, ಶಾಲಾ ಕಾಲೇಜು, ಬ್ಯಾಂಕ್ ನಿಮಾ೯ತರು. ಶಾಸಕ, ಸಂಸದ ಮತ್ತು ವಿದ್ಯಾ ಮಂತ್ರಿ ಆದ ಇವರ ಕುಟುಂಬದ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್.  1952ರ ಪ್ರಥಮ ಚುನಾವಣಾ ರಾಜಕೀಯದಲ್ಲಿ ಸಾಗರ - ಹೊಸನಗರ- ತೀಥ೯ಹಳ್ಳಿ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಸ್ಪದಿ೯ಸಿದ್ದ ಆನಂದಪುರಂನ ಭೂ ಮಾಲಿಕರು ಕೊಡುಗೈ ದಾನಿಗಳಾಗಿದ್ದ ರಾಮ ಕೃಷ್ಣ ಅಯ್ಯಂಗಾರ ಪುತ್ರ, ವಕೀಲರು, ಸ್ಟಾತಂಂತ್ರ ಹೋರಾಟಗಾರರಾಗಿದ್ದ ಎ.ಆರ್. ಬದರಿನಾರಾಯಣ್ ಅಯ್ಯಂಗಾರ್ ಸಮಾಜವಾದಿ ಪಾರ್ಟಿ ಅಭ್ಯಥಿ೯ ಕಾಗೋಡು ಚಳವಳಿಯ ನಾಯಕ ಶಾಂತವೇರಿ ಗೋಪಾಲಗೌಡರ ಎದರು ಸೋಲುತ್ತಾರೆ.   ಸ್ವಾತಂತ್ರ ನಂತರದ ಮೊದಲ ಚುನಾವಣೆ ಸೋಲಿನ ಪಲಿತಾಂಶದಿಂದ ನೊಂದ ರಾಮಕೃಷ್ಣ ಅಯ್ಯಂಗಾರ್ ಹೃದಯಾಘಾತದಿಂದ ಮೃತರಾಗಿದ್ದು ಆ ಕುಟುಂಬಕ್ಕೆ ದೊಡ್ಡ ಆಘಾತ ಆಯಿತು.     ಆನಂದಪುರದಲ್ಲಿ ಆಸ್ಪತ್ರೆ, ಪಶು ಆಸ್ಪತ್ರೆ, ಶಾಲಾ ಕಾಲೇಜು, ಬ್ಯಾಂಕ್ ಹೀಗೆ ಸಾಲು ಸಾಲು ಜನರ ಅಭ್ಯುದಯಕ್ಕಾಗಿ ಶ್ರಮಿಸಿದ ಸಾವಿರಾರು ಎಕರೆ ಜಮೀನ್ದಾರರಾಗಿದ್ದ ಅಯ್ಯಂಗಾರ್ ಕುಟುಂಬದವರು ಈಗ ಯಾರು ಆನಂದಪುರದಲ್ಲಿ ಇಲ್ಲ. ರೈಸ್ ಮಿಲ್, ತೋಟ, ಜಮೀನು ಮತ್ತು ಆನಂದಪುರದ ಇಕ್ಕೆಲದ ಮನೆ ನಿವೇಶನ ಎಲ್ಲಾ ಮಾರಿ ಈಗಿನ ತಲೆಮಾರಿನವರು ಬೆಂಗಳೂರು ಮತ್ತು ವಿದೇಶಗಳಲ್ಲಿ ಶ್ರೀಮಂ...

ಬಹುದಿನದ ರಾಟ್ ವೀಲರ್ ಸಾಕುವ ಆಸೆ ಇವತ್ತು ಈಡೇರಿತು

#ಬಹು_ವರ್ಷದ_ಆಸೆ_ನೆರವೇರಿದೆ #ರಾಟ್_ವೀಲರ್_32_ದಿನದ_ಮರಿ_ಖರೀದಿಸಿ_ಆಯಿತು. #ಬೆಂಗಳೂರಿಂದ_ಮುಂದಿನ_ವಾರ_ಬರಲಿದೆ.    ನನಗೆ ರಾಟ್ ವೀಲರ್ ಸಾಕಬೇಕಂತ ಮನಸ್ಸಿದ್ದರು ಅದನ್ನು ಸಾಕಲೇ ಬೇಕಂತ ತೀಮಾ೯ನಕ್ಕೆ ತಂದವರು ಗೆಳೆಯ ಜೇಕಬ್ (ಜಗನ್) ಇವರ ಸ್ವಂತದ್ದಾದ ಕೆನಲ್ ಪಾಮ್೯ ಊಟಿಯಲ್ಲಿದೆ, ವಿದೇಶದಲ್ಲಿ ಪೆಟ್ರೋಲಿಯಂ ಸಂಸ್ಥೆಯಲ್ಲಿ ಇಂಜಿನಿಯರ್, ಮುಂಬೈ, ಬೆಂಗಳೂರು, ರಾಣಿಪೇಟೆ ಮತ್ತು ಊಟಿಯಲ್ಲಿ ಆಸ್ತಿ ಹೊಂದಿದ್ದಾರೆ.   ನಾಲ್ಕು ವರ್ಷದ ಹಿಂದೆ ನನಗೆ ಇವರ ಊಟಿಯ ಕೆನಲ್ ಪಾಮ೯ನಿಂದ  ಒಂದು ರಾಟ್ ವೀಲರ್ ಗಿಫ್ಟ್ ಆಗಿ ನೀಡಿದರೂ ನನಗೆ ಅದನ್ನು ಸಾಕುವ ಸಂಪೂರ್ಣ ವ್ಯವಸ್ಥೆ ಆಗದೆ ಸ್ವೀಕರಿಸಲಿಲ್ಲ.   ನಂತರ ಜಗನ್ ಬಂದವರು ಅದಕ್ಕೆ ಎಲ್ಲಾ ಮಾರ್ಗದರ್ಶನ ನೀಡಿದ ನಂತರ ವ್ಯವಸ್ಥೆ ಮಾಡಿದೆ ಆದರೆ ಕೊರಾನಾ ಮೊದಲ ಅಲೆಯಿಂದ ರಾಟ್ ವೀಲರ್ ಬರಲಿಲ್ಲ.    ಇವತ್ತು ಮಗಳು ಅಳಿಯ ರಾಟ್ ವೀಲರ್ ಮಾರಾಟಕ್ಕೆ ಇರುವ ಬಗ್ಗೆ ಮತ್ತು ಅದನ್ನು ಇಲ್ಲಿಗೆ ತಲುಪಿಸುವ ಭರವಸೆ ನೀಡಿದ್ದರಿಂದ ಖರೀದಿ ಮಾಡಿದೆ.   ಜಾನ್ಸಿ ಅವಳ ಮಗಳು ಕಾಳು ಜೊತೆ ಈಗ ಬರುವ ರಾಟ್ ವೀಲರ್ ಗೆ ನಾಮಕರಣ ಆಗಬೇಕು, ನಿತ್ಯ ತರಬೇತಿ ಕೂಡ ಈಗ 32 ದಿನಕ್ಕೆ 7kg ಇದಾನೆ ಮುಂದೆ 70 ರಿಂದ 80 kg ಆಗುತ್ತಾನೆ, ಇವನ ಅಜ್ಜಿ ಜಮ೯ನ್ ದೇಶದವಳು ಇತ್ಯಾದಿ ಇವನ ಬತ್೯ ಸರ್ಟಿಪಿಕೇಟ್ ನೀಡುವ ಬೆಂಗಳೂರಿನ ಕೆನಲ್ ಬ್ರೀಡರ್ ಹೇಳುತ್ತಿದ್ದರ...

ದೇಶಿಯ, ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಪ್ರತಿಬಾವಂತ ಆಕೆ೯ಟಿಕ್ಟ್ ಇಂಜಿನಿಯರ್ ಗೆಳೆಯ ವಸಂತ್ ಕುಮಾರ್ ಕೊರಾನ ಎರಡನೆ ಅಲೆ ಅಹುತಿ ಪಡೆಯಿತು.

ಶ್ರದ್ದಾ೦ಜಲಿಗಳು. ಗೆಳೆಯ ಖ್ಯಾತ ಆಕ೯ಟೆಕ್ಟ್ ಇಂಜಿನಿಯರ್, ಬೆಂಗಳೂರು ಸೆಂಟ್ರಲ್ ಜೈಲ್, ಕೊಲ್ಲೂರು ಮುಕಾಂಬಿಕ ದೇವಾಲಯಗಳಲ್ಲಿನ ವಿನ್ಯಾಸದ ಕೆಲಸ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಮನೆ ಹೀಗೆ ಸಾಲು ಸಾಲು ಹೈಟೆಕ್ ಮನೆಗಳನ್ನ ನಿಮಿ೯ಸುತ್ತಿದ್ದ ಬೆಂಗಳೂರು ಮಹಾಲಕ್ಷ್ಮಿ ಲೇ ಔಟ್ ನಲ್ಲಿ ಸ್ವಂತ ಕಟ್ಟಡದ ಕಛೇರಿ ಹೊಂದಿದ್ದ ವಸಂತ ಕುಮಾರ್ ನಿನ್ನೆ ಕೊರಾನಾ ಎರಡನೆ ಅಲೆಗೆ ಚಿಕ್ಕ ವಯಸ್ಸಲ್ಲಿ ಬಲಿಯಾಗಿದ್ದಾರೆ.   ಪ್ರತಿ ತಿಂಗಳ ಹುಣ್ಣಿಮೆಯಲ್ಲಿ ಕೊಲ್ಲೂರಿನ ಮುಕಾಂಬಿಕ ದೇವಾಲಯದಲ್ಲಿ ಉತ್ಸವ ಪೂಜೆಯಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು, ನಾನು ಒಂದೆರೆಡು ಬಾರಿ ಅವರೊಡನೆ ಹೋಗಿದ್ದೆ.   ಕಾಫಿ ಪ್ರಿಯರು ಒಮ್ಮೆಗೆ 500 ML ಕಾಫಿ ಬೇಕೇ ಬೇಕು ಇವರಿಗೆ, ಇವರ ಒಡನಾಟದಲ್ಲಿ ಅನೇಕ ಬಾರಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಮಧ್ಯಾಹ್ನದ ಊಟ ಮಾಡಿದ್ದು ಈಗ ನೆನಪು ಮಾತ್ರ.   ಇವರ ಆತ್ಮಕ್ಕೆ ಸದ್ಗತಿ, ಸ್ವರ್ಗ ಪ್ರಾಪ್ತಿ ದೊರೆಯಲೆಂದು ದೇವರಲ್ಲಿ ಪ್ರಾಥಿ೯ಸುತ್ತೇನೆ #ಕೊರಾನಾ_ಎರಡನೆಅಲೆ_ಬಗ್ಗೆ_ಹೆಚ್ಚು_ಜಾಗೃತಿವಹಿಸಬೇಕು

ಮಾಜಿ ಶಾಸಕರಾದ ಸ್ವಾಮಿ ರಾವ್ ರಿಗೆ ಅವರಿಂದ ಲಾಭ ಪಡೆದ ಬಿಜೆಪಿ ಸಕಾ೯ರ ಸೂಕ್ತ ಸ್ಥಾನಮಾನ ಕಲ್ಪಿಸಲು ವಿಳಂಬ ಮಾಡುತ್ತಿರುವುದು ಸರಿಯಲ್ಲ

ಶಿವಮೊಗ್ಗ ಜಿಲ್ಲೆಯ ಹೊಸನಗರ ಕ್ಷೇತ್ರದ ಮಾಜಿ ಶಾಸಕರಾದ ಸ್ವಾಮಿರಾಯರಿಗೆ ಹುಟ್ಟು ಹಬ್ಬದ ಶುಭಾಷಯಗಳು      ಜಿಲ್ಲೆಯ ದೀವರು/ ಈಡಿಗ/ಪೂಜಾರರ ಕಾಂಗ್ರೇಸ್ ಮತಬ್ಯಾಂಕ್ ಒಡೆದು ಸೊರಬ, ಸಾಗರ ಮತ್ತು ತೀಥ೯ಹಳ್ಳಿ ವಿದಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡೂರಪ್ಪರ ಪುತ್ರ ಬಿ.ವೈ.ರಾಘವೇಂದ್ರ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಪುತ್ರ ಮದು ಬಂಗಾರಪ್ಪರ ವಿರುದ್ದ ಗೆಲ್ಲುವಲ್ಲಿ ಸ್ವಾಮಿ ರಾಯರ ಕೊಡುಗೆ ದೊಡ್ಡದು.   ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಇವರ ಈ ವಯೋಮಾನದಲ್ಲಿ ಇವರಿಂದ ಪಕ್ಷಕ್ಕೆ ಆಗಿರುವ ಅನುಕೂಲ ನೆನಪಿಸಿಕೊಳ್ಳುವಂತೆ ಇವರಿಗೆ ರಾಜ್ಯ ಮಟ್ಟದ ಬೋಡ್೯ ಚೇಮ೯ನ್ ಆಗಿ ಅಥವ ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡುತ್ತಾರೆಂದು ಬಾವಿಸಿದ್ದು ಹುಸಿ ಆಗಿದೆ.

ನಮ್ಮ ಊರಲ್ಲಿ ಹಾಸ್ಯ ನಟ ಬಾಲಕೃಷ್ಣ ರಂಗಮಂದಿರ ಕಟ್ಟಿದ್ದು

#ಕಲಾವಿದರಿಗೊಂದುನಮನ ಟಿ.ಎನ್.ಬಾಲಕೃಷ್ಣ (ಬಾಲಣ್ಣ) - ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂಥ ನಟರಲ್ಲೊಬ್ಬರು. ಇವರು ಕನ್ನಡದ ಜನತೆಯನ್ನು ಹಲವು ದಶಕಗಳ ಕಾಲ ತಮ್ಮ ತೀಕ್ಷ್ಣ ಹಾಗು ನೈಜ ಅಭಿನಯದಿಂದ ರಂಜಿಸಿದ್ದಾರೆ. ಕನ್ನಡ ಚಿತ್ರರಂಗದ ವಲಯದಲ್ಲಿ, ಹಾಗು ಚಿತ್ರಪ್ರೇಮಿಗಳಲ್ಲಿ ಬಾಲಣ್ಣ ಎಂದೇ ಪರಿಚಿತರಾಗಿದ್ದ ಇವರಿಗೆ ಹುಟ್ಟಿನಿಂದಲೇ ಕಿವಿಯು ಸರಿಯಾಗಿ ಕೇಳಿಸುತ್ತಿರಲಿಲ್ಲ. ಬಾಲಕೃಷ್ಣರ ಜನನ ನವೆಂಬರ್ ೨,೧೯೧೬''''''ರಂದು ಹಾಸನ ಜಲ್ಲೆಯ ಅರಸೀಕೆರೆಯಲ್ಲಿ ಆಯಿತು.ಇವರ ತಂದೆ ತಾಯಿಯರು ದಿನಗೂಲಿಯಲ್ಲಿ ಜೀವಿಸುತಿದ್ದರು. ಈ ಶ್ರಮಜೀವಿಗಳಿಗೆ ಒಬ್ಬನೇ ಮಗ ಬಾಲಕೃಷ್ಣ.ಇದ್ದಕ್ಕಿದ್ದಂತೆ ತಂದೆಯು ಕಾಯಿಲೆ ತೀವ್ರ ಸ್ವರೂಪ ಪಡೆದಾಗ ತಾಯಿ ಕಂಡ ಕಂಡಲ್ಲಿ ಬಿಕ್ಷೆ ಬೇಡಿ ಹಣ ಹೊಂದಿಸಲು ಶ್ರಮ ಪಟ್ಟಳು,ಅದೂ ಸಾಲದಾದಾಗ ಬೇರೆ ದಾರಿ ಕಾಣದೆ ಅರಸೀಕೆರೆಯ ಮಂಡಿ ವ್ಯಾಪಾರಿಯ ಉಪ ಪತ್ನಿಗೆ ಮಗು ಬಾಲಕೃಷ್ಣನನ್ನು ಎಂಟು ರೂಪಾಯಿಗೆ ಮಾರಿದಳು.ಆ ಸಾಕು ತಾಯಿ ಬಾಲಕನನ್ನು ಅರಸೀಕೆರೆಯ ಶಾಲೆಗೆ ಸೇರಿಸಿದಳು. ಆದರೆ ಎಂಟನೆ ವಯಸ್ಸಿಗೆ ಬಾಲಣ್ಣನ ಶ್ರವಣಶಕ್ತಿ ಸಂಪೂರ್ಣ ಮಾಯವಾಯಿತು.ಕಲಿಕೆ ಕಷ್ಟವಾಯಿತು.ಲೋಯರ್ ಸೆಕಂಡರಿ ದಾಟುವುದೇ ಕಷ್ಟವಾದಾಗ ಕಲೆಯ ಕಡೆಗೆ ಆಸಕ್ತಿ ಹೊರಳಿತು.ಸ್ನೇಹಿತರ ಜೊತೆಗೂಡಿ ನಾಟಕವಾಡುವ ಹವ್ಯಾಸ ಬಲವಾಯಿತು.ಒಮ್ಮೆ ಸಾಕು ತಂದೆಯ ಜೇಬಿನಿಂದ ದುಡ್ಡು ಕದ್ದು ಸಿಕ್ಕಿ ಬಿದ್ದಾಗ ಸಾಕು ತಾಯಿ ಮನೆಯಿಂದಲೇ ದ...

ಶಿವಮೊಗ್ಗ ಜಿಲ್ಲೆಯ ಪವಾಡ ಪುರುಷ ಅವದೂತ ಹನುಮಂತಪ್ಪರವರು

#ಹೊಳಲೂರು_ಮೈಲಾರಪ್ಪನವರು_ಅಂದರೆ_ಸಜ್ಜನ_ರಾಜಕಾರಣಿ #ಅಷ್ಟೇ_ಅಲ್ಲ_ಅವರ_ತಂದೆ_ಅವದೂತ_ಹನುಮಂತಪ್ಪರೆಂದು_ಬಹುಜನರಿಗೆ_ಗೊತ್ತಿಲ್ಲ. #ಚಲನ_ಚಿತ್ರ_ನಟ_ದೊಡ್ಡಣ್ಣರ_ಪರಮಗುರು .   ಮೈಲಾರಪ್ಪನವರು ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದವರು ಆಗ ಮುಖ್ಯಮಂತ್ರಿ ಆಗಿದ್ದ ಜೆ.ಹೆಚ್.ಪಟೇಲರ ಅತ್ಮೀಯ ಬಳಗದವರು, ಜಮೀನ್ದಾರರು, ಯಾರನ್ನೂ ನೋವಿಸದ ಮಾನವೀಯ ಗುಣ ಹೊಂದಿದವರು ಅವರ ಆಡಳಿತದಲ್ಲಿ ನಾನು ಸಾಗರ ತಾಲ್ಲೂಕಿನ ಅನ೦ದಪುರದಿಂದ ಜಿಲ್ಲಾ ಪಂಚಾಯತ್ ಸದಸ್ಯ.   ಬಹಳ ಜನಕ್ಕೆ ಗೊತ್ತಿಲ್ಲ ಹೊಳಲೂರಿನ ಅವದೂತರಾದ ಪವಾಡ ಪುರುಷರಾದ ಹನುಮಂತಪ್ಪ ಇವರ ತಂದೆ ಅಂತ.   ಸಂಸಾರದಿಂದ ವಿಮುಕ್ತರಾಗಿ ಸನ್ಯಾಸ ಸ್ವೀಕರಿಸಿ ಊರಿನ ಗುಡ್ಡದಲ್ಲಿ ನೆಲೆಸಿದ ಅವದೂತ ಹನುಮಂತಪ್ಪರಿಗೆ ಇಡೀ ರಾಜ್ಯದಲ್ಲಿ ಶಿಷ್ಯರಿದ್ದಾರೆ.   ಚಲನ ಚಿತ್ರ ನಟ ದೊಡ್ಡಣ್ಣ ಕೂಡ ಇವರ ಪಟ್ಟದ ಶಿಷ್ಯ, ದೊಡ್ಡಣ್ಣ ನಮ್ಮಲ್ಲಿ ಬಂದಾಗೆಲ್ಲ  ಅವರ ಬಾಯಲ್ಲಿ ಅವದೂತ ಹನುಮಂತಪ್ಪರ ಬಗ್ಗೆ ಒಂದಲ್ಲ ಒ೦ದು ನೆನಪು ಮಾತಾಡುತ್ತಾರೆ, ದೊಡ್ಡಣ್ಣ ಪ್ರತಿ ಹುಣ್ಣಿಮೆಗೆ ತಪ್ಪದೆ ಅವದೂತರ ಗದ್ದುಗೆ (ಶಿವಮೊಗ್ಗದಿಂದ 15 ಕಿ.ಮಿ.ದೂರದ ಹೊಳಲೂರಿಗೆ) ಗೆ ಹೋಗುತ್ತಾರೆ ಅವತ್ತು ಅಲ್ಲಿ ನಡೆಯುವ ಪೂಜೆ, ಭಜನ ಮತ್ತು ಸಾಮೂಹಿಕ ಬೋಜನದಲ್ಲಿ ಭಾಗವಹಿಸುತ್ತಾರೆ.      ಆಗ ದೊಡ್ಡಣ್ಣರಿಗೆ ಭದ್ರಾವತಿಯಲ್ಲಿ ಸಣ್ಣ ಕೆಲಸ,  ...