Skip to main content

Posts

Showing posts from 2019

#ಹೊಸ ವಷ೯ದ ಆಚರಣೆಯ ಸಂಭ್ರಮದಲ್ಲಿ ಒಂದು ವಷ೯ದ ಆಯಸ್ಸು ಕಳೆದುಕೊಂಡದ್ದು ಮರೆಯ ಬಾರದು #

  ಪ್ರತಿ ಡಿಸೆಂಬರ್ 31ರ ರಾತ್ರಿ ನಾನು ಒಬ್ಬನೆ ಕುಳಿತು ಯೋಚಿಸುತ್ತೇನೆ , ನನ್ನ ಆಯಸ್ಸಿನಲ್ಲಿ ಒಂದು ವಷ೯ ಕಳೆದು ಹೋಯಿತಲ್ಲ ಎಂಬ ರೋದನೆ ಮತ್ತು ಒಂದು ಕ್ಯಾಲೆಂಡರ್ ವಷ೯ದಲ್ಲಿ ಸಾದನೆಯ ಗುರಿಯಲ್ಲಿ ಸಾದಿಸಿದ ಸಾದನೆ ವಿಮಷೆ೯ ಮಾಡುತ್ತೇನೆ.   55ನೇ ವಷ೯ದಲ್ಲಿ ನನ್ನ Health Card ಕೂಡ ಆದರೆ ಪಾಟಿ೯ ಸಂಭ್ರಮದಿಂದ ದೂರ, ಆಚರಿಸುವವರಿಗೆ ದಾರಿ ಬಿಟ್ಟು ಬದಿಗೆ ಸರಿದು ಬಿಡುತ್ತೇನೆ.  2020ರಲ್ಲಿ ನನ್ನ ಕನಸಾಗಿರುವ ಚಂಪಕರಾಣಿ ಕಾದಂಬರಿ, ಒಂದು ಸಣ್ಣ ಕಥಾ ಸಂಗ್ರಹ ಹೊರತರುವ ಗುರಿ ಇದೆ, ಪಿತೃಗಳ ತಪ೯ಣ ಗಯಾ, ಕಾಶಿಯಲ್ಲಿ ನೆರವೇರಿಸುವ ಆಶೆ ಇದೆ, ನಮ್ಮ ಊರ ವರಸಿದ್ಧಿವಿನಾಯಕ ರಥ ಉತ್ಸವ ಆ ದಿನದಲ್ಲಿ ನಮ್ಮ ಮನೆಯಿಂದ ನೆರವೇರಿಸುವ ಹೋಳಿಗೆ ತುಪ್ಪದ ಅನ್ನ ಸಂತಪ೯ಣೆ ಯಶಸ್ವಿಯಾಗಿ ನೆರವೇರಿಸುವುದು, ದೇವಾಲಯದ ಅಷ್ಟಬಂದನ ಮತ್ತು ಸಿದ್ಧಿವಿನಾಯಕನಿಗೆ ಬೆಳ್ಳಿ ಕವಚ ಅಪಿ೯ಸುವ ಹರಕೆ ಪೂರೈಸುವ ಕನಸಿದೆ.   ಇಲ್ಲಿ ಬರೆಯಲಾಗದ ಕೆಲ ಗುರಿಗಳನ್ನ ಸಕ್ರಿಯ ಮಾಡಬೇಕಾದ ಹoಬಲವೂ ಇದೆ.  2020 ಈ ಎಲ್ಲಾ ಕನಸು ನನಸು ಮಾಡಲಿ ಎಂದು ಪ್ರಾಥಿ೯ಸುತ್ತೇನೆ.

#ಅಭಿಶೇಖ್ ಸ್ಟೀಟ್ ಹೌಸ್ ಶಿವಮೊಗ್ಗದ ಪ್ರತಿಷ್ಟಿತ ಸಿಹಿ ತಿಂಡಿ ಮಾರಾಟದ ಕೇಂದ್ರ#

#ಅಭಿಶೇಕ್ ಸ್ವೀಟ್ ಹೌಸ್ ಶಿವಮೊಗ್ಗ ಕೇಂದ್ರದ ಟಾಪ್ ಸ್ವೀಟ್ ಹೌಸ್#   ಇವತ್ತಿಗೂ ಶಿವಮೊಗ್ಗಕ್ಕೆ ಹೋದರೆ ವೆಂಕಟೇಶ್ವರ ಸ್ವೀಟ್ ಸ್ಟಾಲ್ ನಿಂದ ಸ್ಪೇಷಲ್ ಮೈಸೂರು ಪಾಕ್ ಮತ್ತು ಅಭಿಶೇಕ್ ಸ್ವೀಟ್ ಹೌಸ್ ನಿಂದ ಚ೦ಪಾಕಲಿ ತರಲೇಬೇಕು.   1980ರ ದಶಕದಲ್ಲಿ ಸಾಗರದ ಮಾರಿಕಾಂಬಾ ದೇವಾಲಯದ ಎದರು ಕಾಮತ್ ಸ್ವೀಟ್ & ಕಾಂಡಿಮೆಂಟ್ಸ್ ವಿದ್ಯಾಥಿ೯ ವಲಯದಲ್ಲಿ ಪ್ರಖ್ಯಾತ ಮೀಟಿಂಗ್ ಜಾಯಿOಟ್ ಆಗಿತ್ತು ಅಲ್ಲಿ ಬ್ರೆಡ್ ಸ್ಯಾ೦ಡ್ ವಿಚ್ ಮತ್ತು ಚಂಪಾಕಲಿ ಹೆಚ್ಚು ಖಚಾ೯ಗುತ್ತಿತ್ತು, ಬೆಳಿಗ್ಗೆ ಮತ್ತು ಸಂಜೆ 2 ಸಾರಿ ಪ್ರೆಷ್ ಚಂಪಾಕಲಿ ಶಿವಮೊಗ್ಗದಿಂದ ಬಸ್ ಲ್ಲಿ ಬರುತ್ತಿತ್ತು ಅದನ್ನ ಶಿವಮೊಗ್ಗದಲ್ಲಿ ತಯಾರಿಸಿ ಕಳಿಸುತ್ತಿದ್ದವರು - ಶಿವಮೊಗ್ಗದ ಅಭಿಷೇಕ್ ಸ್ವೀಟ್ ಹೌಸ್ ನ ಮಾಲಿಕರಾದ ಗಣೇಶ್ ಕೊಟ್ಯಾನ್!   ಇವತ್ತಿಗೂ ಶುಚಿ-ರುಚಿಗೆ ಹೆಸರು ಮಾಡಿರುವ ಈ ಸಂಸ್ಥೆ ಕೆಲವು ದಶಕಗಳಿಂದ ಶಿವಮೊಗ್ಗ ಬಸ್ ನಿಲ್ದಾಣದ ಸಮೀಪದಲ್ಲಿ ತನ್ನ ಗುಣಮಟ್ಟ ಕಾಪಾಡಿಕೊಂಡು ಬಂದಿದೆ.   ಇದರ ಮಾಲಿಕರಾದ ಕೊಟ್ಯಾನ್ ಸಹೋದರರ ಶಿಸ್ತು, ಸಂಯಮ ಮತ್ತು ಪರಿಶ್ರಮ ಈ ಬ್ರಾಂಡ್ ಮನೆಮಾತಾಗಲು ಕಾರಣವಾಗಿದೆ, ಸದಾ ಹಸನ್ಮುಖರಾಗಿ ಖರೀದಿಸಲು ಬಂದವರಿಗೆ ವಿವಿದ ಸಿಹಿ ತಿಂಡಿಯ ಪರಿಚಯಿಸುವ ಗಣೇಶ್ ಕೊಟ್ಯಾನ್ ಇವತ್ತಿಗೂ ಶಿವಮೊಗ್ಗಕ್ಕೆ ಹೊಸ ಸಿಹಿ ತಿಂಡಿಗಳನ್ನ ಅದರಲ್ಲೂ ಬೆಂಗಾಲಿ ಸಿಹಿ ತಿನಿಸು ತಂದ ಪ್ರಖ್ಯಾತರು.   ಶಿವಮೊಗ್ಗ ಪಟ್ಟ...

#ಅಶೋಕ್ ಮಾವಿನಗುಂಡಿ ಜೋಗ ಜಲಪಾತದ ಪಕ್ಕದ ನಿವಾಸಿ#

#ಪಶ್ಚಿಮ ಘಟ್ಟದ ಬಗ್ಗೆ ಮತ್ತು ಜೋಗ ಜಲಪಾತದ ಬಗ್ಗೆ ಹೆಚ್ಚು ಅದಿಕೃತವಾಗಿ ಮಾತಾಡುವ ಜಲಪಾತದ ಬಗಲಿನಲ್ಲಿನ ಮಾವಿನ ಗುಂಡಿಯಲ್ಲಿರುವ ಅಶೋಕ್ ಮಾವಿನ ಗುಂಡಿ ಇವತ್ತು ಸಂಜೆ ಬಂದಿದ್ದರು.#   ಇವರು ಸ್ಥಳಿಯವಾಗಿ ಬೆಳೆಯುವ ಅನಾನಸ್ ನಿಂದ ಐನಕೈ ಎಂಬ ಸಂಸ್ಥೆಯ ಮೂಲಕ ಅನಾನಸ್ ಜ್ಯೂಸ್, ಜಾ೦ ತಯಾರಿಸಿ ಮಾವಿನಗುಂಡಿ ವೃತ್ತದಲ್ಲಿ ಸುಮಾರು 35 ವಷ೯ ಮಾರಾಟ ಮಾಡಿ ಈಗ ನಿವೃತ್ತರಾಗಿದ್ದಾರೆ.   ಇವರು ಪೇಸ್ ಬುಕ್ ನಲ್ಲಿ ಬರೆಯುವ ಅದ್ಬುತ ಲೇಖನಗಳಿ೦ದ ನಾನು ಇವರ ಅಭಿಮಾನಿ, ಇವತ್ತು ಉಡುಪಿಯ ಲಾಡ್ಜ್ ಮಾಲಿಕರಾದ ಮತ್ತು ಮಣಿಪಾಲ್ ನ HP ಗ್ಯಾಸ್ (ಸುದೀ೦ದ್ರ ಏಜೆನ್ಸಿ) ಮಾಲಿಕರಾದ  ಕೆ.ಬಾಲಕೃಷ್ಣ ಶೆನಯ್ ಜೊತೆ ಬಂದಿದ್ದರು.   ಅವರು ಈ ಹಿಂದೆ FBಯಲ್ಲಿ ಬರೆದು ಪಶ್ಚಿಮ ಘಟ್ಟದ ಬಗ್ಗೆ ಕಸ್ತೂರಿ ರಂಗನ್ ವರದಿ ಬಗ್ಗೆ ಬರೆದ ಲೇಖನ ಒಂದನ್ನು ಇಲ್ಲಿ ರೀ ಪೋಸ್ಟ್ ಮಾಡಿದ್ದೇನೆ.               ಒಂದು Observation cum ಅಭಿಪ್ರಾಯ ಮಾತ್ರ. ಸದುದ್ದೇಶದ ಈ ಕಾನೂನು ಬರುವ ಪೂರ್ವ ದಲ್ಲಿ ಪಶ್ಚಿಮ ಘಟ್ಟದಲ್ಲಿ ಶರಾವತಿ, ಕಾಳಿ ನದಿಗಳಿಗೆ ದೊಡ್ಡ ದೊಡ್ಡ ಆಣೆಕಟ್ಟುಗಳು, ಕೊಳ್ಳದಲ್ಲೆಲ್ಲ ದೊಡ್ಡ ದೊಡ್ಡ ವಿದ್ಯುದಾಗಾರಗಳನ್ನು ನಿರ್ಮಿಸಲಾಯಿತು. ಅವುಗಳೆಲ್ಲ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲ್ಪಡಬಹುದಾದ ಪ್ರದೇಶಗಳೇ. ಈಗಿನಂತೆ ಮನುಕುಲ, ಭೂಮಂಡಲ ರಕ್ಷಕ ಪರಿಸರ ಪ್ರೇ...

#ಜೆ.ಹೆಚ್ ಪಟೇಲರ ಕುಡಿಯೋರ ಮಯಾ೯ದೆ ಕುಡುಕರಿಂದ ಹೋಗ್ತಾ ಇದೆ ಎಂಬ ತಕ೯ ನಿಜ ಕೂಡ#

        ಶಿವಮೊಗ್ಗದಲ್ಲಿ ಮಿತ್ರರೊವ೯ರ ಹೋಟೆಲ್ ಉದ್ಫಾಟನೆ ಇತ್ತು ಅಲ್ಲಿ ಜೆ.ಹೆಚ್.ಪಟೇಲರ ಒಡನಾಡಿ ಸಂಯುಕ್ತ ಜನತಾದಳದ ಲೋಕಪಾಲ ಜೈನರ ಭಾಷಣ ಅವತ್ತಿನ ಸಭೆಯ ಹೈಲೆಟ್ ಆಗಿತ್ತು.  ಸಭೆಯಲ್ಲಿ ಅನೇಕ ಗೌರವಾನ್ವಿತ ದಂಪತಿಗಳು ಉಪಸ್ಥಿತರಿದ್ದರು.  ಅವರು ತಮ್ಮ ಬಾಷಣದ ಪ್ರಾರಂಭದಲ್ಲಿ ಕುಡಿಯೋರೆ ಬೇರೆ ಕುಡುಕರೇ ಬೇರೆ ಆದರೆ ನೀವು ಹೆಣ್ಣು ಮಕ್ಕಳು ಕುಡಿಯೋರನ್ನೆಲ್ಲ ಕುಡುಕರ ಸಾಲಿಗೆ ಸೇರಿಸಿ ಬಿಡುತ್ತೀರಿ ಇದನ್ನ ಪಟೇಲರು ಒಂದು ಘಟನೆಯಲ್ಲಿ ಹೇಳಿದ್ದು ನೆನಪಾಯಿತು ಕೇಳಿ ಅಂತ ಶುರುಮಾಡಿದರು.  ಆಗ ಶಾಸಕರ ಭವನದಿಂದ ಮೆಜೆಸ್ಟಿಕ್ ತನಕ ಜನ ಸಂಚಾರ ವಿರಳ ಸಂಜೆ 8 ಆಗುತ್ತಿದ್ದಂತೆ ಪಟೇಲರು ಕೋಡೇಸ್ xxx ರಂ ತರಲು ಹುಡುಗರಾದ ನಮ್ಮ ಹತ್ತಿರ ಹಣ ಕೊಟ್ಟು ಕಳಿಸಿದ್ದರು ನಾವು ತೆಗೆದುಕೊಂಡು ಬರುವಾಗ ಶಾಸಕರ ಭವನದ ಎದರು ಇಬ್ಬರು ಹೊಟ್ಟೆ ತುಂಬಾ ಕುಡಿದು ಕೊಂಡು ಜಗಳವಾಡುತ್ತಿದ್ದರಂತೆ ಅದನ್ನ ಇವರೆಲ್ಲ ನೋಡುತ್ತಾ ನಿಂತವರಿಗೆ ಸಮಯ ಹೋದದ್ದೇ ಗೊತ್ತಾಗಿಲ್ಲವಂತೆ, ಆಗ ಮೊಬೈಲ್ ಇಲ್ಲ ಪಟೇಲರಿಗೆ ಕುಡಿಯುವ ಸಮಯ ಮೀರಿದ್ದರಿಂದ ಚಟಪಟಿಕೆ ಕೋಪ ಬಂದಿತ್ತು, ಅಂತೂ ಇವರು ಅವರ ರಂ ಜೊತೆ ಅವರ ಕೋಣೆಗೆ ತಲುಪಿದಾಗ ಪಟೇಲರು ಯಾಕಯ್ಯ ಲೇಟ್ ಮಾಡಿದ ರಿ? ಅಂದಾಗ ಇವರು ಕೆಳಗೆ ಇಬ್ಬರು ಪುಲ್ ಟೈಟ್ ಆಗಿ ಜಗಳ ಹೊಡೆದಾಟ ಆಗ್ತಾ ಇತ್ತು ಹಾಗಾಗಿ ಲೇಟ್ ಆಯಿತು ಅಂದರಂತೆ ಆಗ ಸ್ವಲ್ಪ ಹೊತ್ತು ಸುಮ್ಮನಾದ ಪಟೇಲರು ತಮ್ಮ ಗಂಟಲ...

ಫ್ಲಾಸೆ ಬೋ?...ನೋಸೆಬೋ

ಏನಿದು ಪ್ಲಾಸೆಬೋ?!........... ಏನಿದು ನೋಸೆಬೋ?!    ____ ನಾನು ತಾಳಗುಪ್ಪದಲ್ಲಿ ಪಶುವೈದ್ಯನಾಗಿದ್ದಾಗ ಒಬ್ಬರ ಮನೆಯಲ್ಲಿದ್ದೆ. ಅವರ ಮನೆಯಲ್ಲಿ ಹಿರಿಯ ವಯೋವೃದ್ಧರಾದ ಅಜ್ಜಿ ಒಬ್ಬರಿದ್ದರು. ಅವರಿಗೆ ಆಗಾಗ ಕೆಮ್ಮು ಬರುತ್ತಿತ್ತು. ಆಗ ಸಾಗರದಲ್ಲಿ ಐತಾಳರೆಂಬ ವೈದ್ಯರೊಬ್ಬರಿದ್ದರು. ಅವರು ಚಿಕಿತ್ಸೆ ನೀಡಿದರೆ ಮಾತ್ರ ಅಜ್ಜಿಯ ಕೆಮ್ಮು ಗುಣವಾಗುತ್ತಿತ್ತು. ಅವರು ಒಂದು ಬಾಟಲಿಯ ಲೇಬಲ್ಲು ತೆಗೆದು ಅದಕ್ಕೆ ಜಿûಗ್ ಜಾಗ್ ತರಹದ ಸ್ಟಿಕರ್ ಅಂಟಿಸಿ ಅದರಲ್ಲಿ ಔಷಧ ತುಂಬಿಸಿ, ದಿನಕ್ಕೆ ಮೂರು ಅಥವಾ ನಾಲ್ಕು ಕಟ್ಟಿನ ಮಟ್ಟದ ಔಷಧ ಸೇವಿಸಲು ಹೇಳುತ್ತಿದ್ದರು. ಆ ಔಷಧಿ ಕುಡಿದರೆ ಮಾತ್ರ ಅಜ್ಜಿಯ ಕೆಮ್ಮು ಗುಣವಾಗುತ್ತಿತ್ತು. ಕೆಲವೊಮ್ಮೆ ಸಾಗರಕ್ಕೆ ಹೋದಾಗ ಅವರಿಗಾಗಿ ಕಾದು ಔಷಧಿ ತರುತ್ತಿದ್ದೆ. ಅವರ ಅಂಗಡಿಯಲ್ಲಿ ಬಹಳ ರಶ್ ಇರುವುದರಿಂದ ಬೇರೆ ಒಳ್ಳೆಯ ಔಷಧಿ ತಂದ್ರೂ ಅವರಿಗೆ ಕಡಿಮೆ ಆಗಲೇ ಇಲ್ಲ. ನಂತರ ಒಂದು ಬಾಟ್ಳಿ ಖಾಲಿ ಮಾಡಿ ಅದಕ್ಕೆ ಕೆಮ್ಮಿನ ಔಷಧಿ ತುಂಬಿಸಿ ಅದಕ್ಕೆ ಪಟ್ಟಿ ಪಟ್ಟಿ ಲೇಬಲ್ ಅಂಟಿಸಿ ಕೊಟ್ಟಾಗಲೇ ಅವರಿಗೆ ಕೆಮ್ಮು ಕಡಿಮೆ ಆಗಿದ್ದು !!. ನನ್ನ ಸ್ನೆÃಹಿತನೊಬ್ಬ ಬಹಳ ದಿನಗಳ ನಂತರ ನಮ್ಮ ಮನೆಗೆ ಬಂದಿದ್ದ. ಅವನಿಗೆ ಬೆಂಗಳೂರಿನಿಂದ ಬಸ್ಸಿನಲ್ಲಿ ಬಂದಿದ್ದಕ್ಕೆ ಮೈ ಕೈ ನೋವು ಪ್ರಾರಂಭವಾಗಿತ್ತು. “ನೈಸ್” ಮಾತ್ರೆ ಇದ್ಯೆನೋ.. ಒಂದು ಕೊಡು ಅಂದ. ಇಲ್ಲಪ್ಪಾ. ಅದಕ್ಕಿಂತ ಜಾಸ್ತಿ ನೋವು ನಿವಾರಕವಾದ ಮತ್ತೊಂದು ಮಾತ್ರೆ ಕೊಟ್...

#ಗೋಪಿ ಬೇಲೂರು ಪೇಸ್ ಬುಕ್ ಗೆಳೆಯ ಕೊನೆಗೂ ಬೇಟಿ ಆಗಲೇ ಇಲ್ಲ #

#ಪೇಸ್ಬುಕ್ ಗೆಳೆಯ ಬರಹಗಾರ ಚಿ೦ತಕ ಶ್ರಮ ಜೀವಿ ಗೋಪಿ ಬೆಲೂರು ಆತ್ಮಕ್ಕೆ ಸದ್ಗತಿ ಸ್ವಗ೯ಪ್ರಾಪ್ತಿಗಾಗಿ ಪ್ರಾಥ೯ನೆ#   40ವಷ೯ದಲ್ಲಿ ಇಹಲೋಕ ಯಾತ್ರೆ ಮುಗಿಸಿದ ಗೋಪಿ ನಮ್ಮ ಊರು ಆನಂದಪುರದಲ್ಲಿ ಜೆ.ಪಿ.ನಾರಾಯಣಸ್ವಾಮಿಯವರ ಸರಾಯಿ ಕ೦ಪನಿಯಲ್ಲಿ ಕೆಲಸ ಮಾಡಿದ ಬಗ್ಗೆ ಹೇಳಿದ್ದರು ಅವರಿಗೆ ನಮ್ಮ ಊರು ಚಿರಪರಿಚಿತ ಜೀವನಕ್ಕಾಗಿ ಬಸ್ ಕಂಡಕ್ಟರ್ ಆಗಿದ್ದು ಈಗ ಬೇಲೂರಿನಲ್ಲಿ ಹಣ್ಣಿನ ಅಂಗಡಿ ನಡೆಸುವುದಾಗಿ ತಿಳಿಸಿದ್ದರು, ಈ ಕಡೆ ಬಂದಾಗ ಬರಬೇಕೆಂದು ಆಮOತ್ರಣ ನೀಡಿದ್ದೆ ಕಳೆದ ವಷ೯ ಸಿಗಂದೂರಿಗೆ ಹೋದವರು ಕಾಲಾವಕಾಶ ಆಗದೆ ಬೇಟಿ ಆಗಲಿಲ್ಲ ಅಂತೂ ಕೊನೆಗೂ ಪರಸ್ಪರ ಬೇಟಿ ಸಾಧ್ಯವಾಗಲೇ ಇಲ್ಲ.   ಇವರೊಳಗೆ ಒಬ್ಬ ಕವಿ ಇದ್ದ, ಪುಸ್ತಕ ಖರೀದಿಸಿ ಓದಿ ವಿಮಷೇ೯ ಮಾಡುತ್ತಿದ್ದರು, ಪ್ರತಿ ನಿತ್ಯ ನಾನು ಅವರ Post ಓದುತ್ತಿದ್ದೆ, 2015ರಿಂದಲೂ.   ಕಳೆದ ಎರೆಡು ಮೂರು ತಿಂಗಳಿOದ ಹತಾಷರಾದOತೆ ಬರೆಯುತ್ತಿದ್ದರು ನವೆಂಬರ್ 30ರ ನಂತರ FB ಯಲ್ಲಿ ವಿರಳರಾದರು ಇವತ್ತು ಇವರು ಇಹಲೋಕ ತ್ಯಜಿಸಿದ್ದು ಕೇಳಿ ದುಃಖವಾಯಿತು ಕಣ್ಣು ನೀರಾಯಿತು.  ಇಬ್ಬರು ಚಿಕ್ಕ ಹೆಣ್ಣು ಮಕ್ಕಳ ಸ್ವ೦ತ ಮನೆಯಲ್ಲಿ ಸುಖ ಸಂಸಾರ ನಡೆಸಿದ್ದರು ಅವರಿಗೆಲ್ಲ ಈ ದುಃಖ, ಅಗಲಿಕೆ ಎದುರಿಸುವ ಶಕ್ತಿ ದೇವರು ನೀಡಲಿ ಎಂದು ನಾವೆಲ್ಲ FB ಗೆಳೆಯರು ಪ್ರಾಥಿ೯ಸೋಣ.

#Skylab ಎಂಬ ಬೂತದ ಭಯ 1979 ರಲ್ಲಿ#

#ದಕ್ಷಿಣ ಬಾರತೀಯರು ಅತಿ ಹೆಚ್ಚು ಭಯಪಟ್ಟಿದ್ದು ನಾಸಾದ Skylab ಬೀಳುತ್ತೆ ಎಂದು#  ಅಮೆರಿಕಾದ ಮೊದಲ ಸೌರ ನಿಲ್ದಾಣವಾದ ಇದರಿಂದ ಅಮೆರಿಕಾ ಅಂತರಿಕ್ಷಾ ಸಂಶೋದನೆ ನಡೆಸಿತ್ತು, ಇದರ ಒಟ್ಟು ತೂಕವೇ 700 ಟನ್ ಗಳಾಗಿತ್ತೆಂದರೆ ಇದರ ಅಗಾದತೆ ಅರಿವಾದೀತು.    ಇದು ತನ್ನ ಕಕ್ಷೆಯಿಂದ ಜಾರಲು ಪ್ರಾರಂಬಿಸಿದಾಗ ವಿಜ್ಞಾನಿಗಳಿಗೆ ಆತಂಕ ಪ್ರಾರಂಭ ಆಯಿತು ಕ್ರಮೇಣ ಇದು ಭೂಮಿಯ ಗುರುತ್ವಾಕಷ೯ಣೆಗೆ ತಲುಪಿ ಭೂಮಿ ಸಮೀಪಿಸಿ ಭೂಮಿಯ ವಾಯುಮಂಡಲ ಪ್ರವೇಶಿಸಿದರೆ ದೊಡ್ಡ ಅಗ್ನಿ ದುರಂತ ಆಗಲಿದೆ ಮತ್ತು ಇದು ಬೀಳುವ ಪ್ರದೇಶ ಜನವಸತಿ ಆದರೆ ಸಾವು ನೋವು, ಅರಣ್ಯ ಪ್ರದೇಶವಾದರೆ ಅರಣ್ಯ ನಾಶ ಎಂಬ ಸುದ್ದಿ ವಿಶ್ವದಾದ್ಯಂತ ದೊಡ್ಡ ಆತಂಕಕ್ಕೆ ಕಾರಣವಾಯಿತು.   ಅಮೆರಿಕಾ ಸಕಾ೯ರ ಈ ಬಗ್ಗೆ ಉದಾಸೀನ ಪಡುತ್ತಿದೆ, ಈ ಪ್ರಯೋಗ ಶಾಲೆಯ ಹೆಚ್ಚಿನ ಭಾಗ ದಕ್ಷಿಣ ಭಾರತದ ಮುOಬೈ, ಕನಾ೯ಟಕ ಕೇರಳದ ಮೇಲೆ ಬೀಳುತ್ತದೆ, ಕ್ಷಣಗಣನೆ ಪ್ರಾರಂಭ ಆಗಿದೆ ಅಂತೆಲ್ಲ ಸುದ್ದಿಗಳು ನಮ್ಮ ಊರಲ್ಲಿ ಆತಂಕಕ್ಕೆ ಕಾರಣ ಆಗಿತ್ತು.   ಸುಮಾರು 3-4 ತಿಂಗಳು ಇದು ಈ ಭಾಗದ ಜನ ಜೀವನಕ್ಕೆ ತುಂಬಾ ಆತಂಕ ತಂದಿತ್ತು, ಅಮೆರಿಕಾದ ನಾಸ ಸುದ್ದಿಗಳು ಈಗಿನಷ್ಟು ಪಾರದಶ೯ಕ ಆಗಿರಲಿಲ್ಲ ಭಾರತ ಮತ್ತು ರಷ್ಯಾದ ಸ್ನೇಹದಲ್ಲಿ ಭಾರತಕ್ಕೆ ಅಮೆರಿಕಾ ಸಹಕರಿಸುತ್ತಿರಲಿಲ್ಲ.   ಮಲೆನಾಡಿನ ಹಳ್ಳಿಗಳಲ್ಲಿ ಈ ಬಗ್ಗೆ ಯಾವುದೇ ಸರಿಯಾದ ಮಾಹಿತಿ ಇರಲಿಲ್ಲ ಗಾಳಿ ಸುದ್ದಿಗಳಿ೦ದ ಪ್ರಳಯವೇ ಈ ರೀತಿ...

#1980ರ ಖಗ್ರಾಸ ಸೂಯ೯ ಗ್ರಹಣ ನಾ ಹ್ಯಾ೦ಗ ಮರೆಯಲಿ#

#1980ರ ಪೆಬ್ರವರಿ 16ರಲ್ಲಿ ನಡೆದ ಪೂಣ೯ ಸೂಯ೯ ಗ್ರಹಣ ನಾನು ಜೀವಮಾನ ಮರೆಯುವುದಿಲ್ಲ ಕಾರಣ ಬರಿಗಣ್ಣಲ್ಲಿ ಸೂಯ೯ ಗ್ರಹಣ ನೋಡಿ ನನ್ನ ಬಲಗಣ್ಣ ಅಕ್ಷಿಪಟಲ ಹರಿದು ಹೋಗಿತ್ತು#   ಮೊದಲ ಚಿತ್ರ ಪತ್ರಕತ೯ ತಲವಾಟದ ರಾಘವೇ೦ದ್ರ ಶಮ೯ರು ತೆಗೆದ ಆತ್ಯುತ್ತಮ ಚಿತ್ರ, ಇನ್ನೊಂದು ಗ್ರಹಣ ಕಾಲದಲ್ಲಿ ಆನಂದಪುರದ ಬಸ್ ನಿಲ್ದಾಣದ ಎಲ್ಲಾ ಅಂಗಡಿ ಮಳಿಗೆ ಬಂದ್ ಆಗಿರುವುದು    ಸೂಯ೯ ಗ್ರಹಣದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಯ ಹೆಚ್ಚಾಗುತ್ತಿದೆ, ಟಿವಿ, ಮೊಬೈಲ್ಗಳ ಈ ಮುಂದುವರಿದ ಆದುನಿಕ ಭಾರತದಲ್ಲಿ ವಿಜ್ಞಾನದ ಹೆಚ್ಚಿನ ತಿಳುವಳಿಕೆ ಉ೦ಟಾಗುತ್ತದೆ ಮತ್ತು ಮೂಡನಂಬಿಕೆಗಳು ನಶಿಸುತ್ತದೆ ಎಂಬ ಭರವಸೆ ಸುಳ್ಳಾಗಿದೆ.    ಟಿವಿಗಳ ಚಾನಲ್ ಗಳ ಜೋತಿಷಿಗಳು ಹುಟ್ಟು ಹಾಕುವ ವಿವಿದ ಆಚರಣೆಯ ಹೆಸರಲ್ಲಿ ಬೀತಿ ಜನ ಸಾಮಾನ್ಯರ ಜೀವನ ಕ್ರಮದಲ್ಲಿ ಅನೇಕ ಮೌಡ್ಯಕ್ಕೆ ಕಾರಣವಾಗಿದೆ.    1980ರ ಪೆಬ್ರುವರಿ 16ರOದು ನಡೆದ ಖಗ್ರಾಸ ಸೂಯ೯ಗ್ರಹಣದ ದಿನ ನೆನಪಿಗೆ ಬಂತು ಅವತ್ತು ಶನಿವಾರ ಆದರೂ ಶಾಲಾ ಕಾಲೇಜುಗಳಿಗೆ ರಜಾ ನೀಡಿದ್ದರು, ದಕ್ಷಿಣ ಭಾರತದಲ್ಲಿ ಸಂಪೂಣ೯ ಗ್ರಹಣ ಗೋಚರ ಆಗುವುದರಿಂದ ದೇಶ ವಿದೇಶದ ಖಗೋಳ ವಿಜ್ಞಾನಿಗಳು ಬಂದಿದ್ದರು ಅವತ್ತಿನ ನಿತ್ಯ ಪತ್ರಿಕೆ ಮತ್ತು ರೇಡಿಯೋಗಳಲ್ಲಿ ಸೂಯ೯ ಗ್ರಹಣದ ಬಗ್ಗೆ ವೈಜ್ಞಾನಿಕ ಸಲಹೆ ಸಂವಾದಗಳು ಸುದ್ದಿ ಆಗುತ್ತಿತ್ತು.   ಬರಿಗಣ್ಣಲ...

#ಆನಂದಪುರದಲ್ಲಿ 200lರಲ್ಲಿ ಕಡಿದಾಳು ಶಾಮಣ್ಣ ಉದ್ಘಾಟಿಸಿದ ನಾ.ಡಿಸೋಜ ರಂಗ ಮOದಿರ #

#2001ರಲ್ಲಿ ಆನಂದಪುರಂ ಕನ್ನಡ ಸಂಘದ ಆವರಣದಲ್ಲಿ ನಾ.ಡಿಸೋಜ ಬಯಲು ರಂಗ ಮಂದಿರ ಉದ್ಘಾಟನೆ ಕಡಿದಾಳು ಶಾಮಣ್ಣರಿಂದ #   1995 ರಿಂದ 2001ರವರೆಗೆ ಆನಂದಪುರಂ ಹೋಬಳಿಯಲ್ಲಿ ರಚನಾತ್ಮಕ ಕಾಯ೯ ನೆರವೇರಿಸುವ ಹುಮ್ಮಸ್ಸು ಮತ್ತು ವಯಸ್ಸು ನನ್ನದಾಗಿತ್ತು ಆಗ ನನ್ನ ವಯಸ್ಸು 30.   ಮುರುಘಾಮಠ ಸ.ಪ್ರಾ.ಶಾಲೆ ಆವರಣದಲ್ಲಿ ಕೆ.ವಿ.ಸುಬ್ಬಣ್ಣ ರಂಗಮಂದಿರ, ಆನಂದಪುರಂ ಕಾಲೇಜ್ ಆವರಣದಲ್ಲಿ ಹಾಸ್ಯ ನಟ ಬಾಲಕೃಷ್ಣ ರಂಗಮಂದಿರ, ಯಡೇಹಳ್ಳಿ ಶಾಲಾ ಆವರಣದಲ್ಲಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ರಂಗ ಮಂದಿರ ಪ್ರಾರಂಬಿಸಿದ ನಂತರ ಸಾಗರದ ನೆಚ್ಚಿನ ಸಾಹಿತಿ ನಾ.ಡಿಸೋಜ ಬಯಲು ರಂಗಮಂದಿರ ಆನಂದಪುರಂ ನ ಕನ್ನಡ ಸಂಘದ ಆವರಣದಲ್ಲಿ ನಿಮಿ೯ಸಿ ಕಡಿದಾಳು ಶಾಮಣ್ಣರಿಂದ ಉದ್ಘಾಟಿಸಿದ್ದು ಈ ಸಮಾರಂಭದಲ್ಲಿ ನಾ.ಡಿಸೋಜರು ಖುದ್ದಾಗಿ ಭಾಗವಹಿಸಿದ್ದರು.  ಆ ದಿನ ಶಿವಮೊಗ್ಗದ ಜಾಷದಿ ಸಸ್ಯಗಳ ತಜ್ಞ ವೆಂಕಟಗಿರಿಯರನ್ನ ಸನ್ಮಾನಿಸಿದ್ದು ಕೂಡ.   ಎಲ್ಲರೂ ನನ್ನ ಮನೆಯಲ್ಲಿ ಚಹಾ ಕುಡಿದು ಕಾಯ೯ಕ್ರಮಕ್ಕೆ ಹೋಗಿದ್ದೆವು.   ಕಡಿದಾಳು ಶಾಮಣ್ಣ ನಾ.ಡಿಸೋಜ ರಂಗಮ೦ದಿರ ಉದ್ಘಾಟಿಸಿ ದೇವಾಲಯಕ್ಕೆ ಮುಂಚೆ ಟಾಯಿಲೆಟ್ ನಿಮಾ೯ಣ ಆಗಬೇಕೆಂದು 2001ರಲ್ಲೇ ಸ್ವಚ್ಚ ಭಾರತ ಪ್ರತಿಪಾದಿಸಿದರೆ ನಾ.ಡಿ.ನನ್ನ ಹೆಸರಲ್ಲಿ ರಂಗ ಮಂದಿರ ನನ್ನ ಜೀವನದ ಅವಿಸ್ಮರಣಿಯ ದಿನ ಎಂದರು, ನಂತರ ಅವರು ಅತ್ಯಂತ ಮೇಲ್ಮಟ್ಟದ ಸ್ಥಾನ ಪಡೆದಿದ್ದಾರೆ.  ಅವತ್ತು ಆನಂದಪುರದ ಕನ್...

# ಈ ವಷ೯ದ ಅತ್ಯುತ್ತಮ ಚಲನಚಿತ್ರ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆ ಕಾಸರ ಗೋಡು #

#ಸರ್ಕಾರಿಹಿರಿಯಪ್ರಾಥಮಿಕಶಾಲೆಕಾಸರಗೋಡು #  ಮೊನ್ನೆ ಹುಬ್ಬಳ್ಳಿ, ಶಿಶುನಾಳದಿ೦ದ ವಾಪಾಸು ಹೊರಡುವಾಗ  ರಾತ್ರಿ 8 ಆಗಿತ್ತು, ಊರು ಸೇರಲು 4 ಗಂಟೆ ಅವಧಿ ಬೇಕು, ನಾವು ಪ್ರಯಾಣಕ್ಕೆ ಒಯ್ದಿದ್ದು ರಿಪ್ಪನ್ ಪೇಟೆಯ ಗೆಳೆಯರಾದ ಶಿವಕುಮಾರರ ಹೊಸ ಮಿನಿ ಬಸ್, ಪ್ರಯಾಣದ ಕಾಲಾಹರಣಕ್ಕಾಗಿ ಈ ಸಿನಿಮಾ ಹಾಕಿದ್ದರು.   ಹಾಸ್ಯ ಮತ್ತು ಮನೋರಂಜನೆಯ ಜೊತೆ ಕಾಸರಗೋಡು ಕನ್ನಡಿಗರ ಸಮಸ್ಯೆಗಳನ್ನ ಈ ಸಿನಿಮಾ ನವಿರಾಗಿ ತೋರಿಸಿದೆ.  ಇವತ್ತು ಕಾಸರಗೋಡಿನ ಕನ್ನಡ ಹೋರಾಟಗಾರ ಕಾಸರಗೋಡು ಶಿವರಾಂ ಪೋನ್ ಮಾಡಿದಾಗ ಇದೆಲ್ಲ ನೆನಪಾಯಿತು, ಈ ಸಿನೆಮಾ ನೋಡಿದ ಬಗ್ಗೆ ಹೇಳಿದೆ, ಈ ಸಿನಿಮಾದಲ್ಲಿ ದಡ್ಡ ಸತೀಶನ ಪಾತ್ರ ಮಾಡಿದವ ಇವರ ಸಂಬಂಧಿ ಅಂತೆ ಪ್ರಥಮ ಪಿಯು ವಿದ್ಯಾಥಿ೯ ಈಗ ಅಂದರು.   ಅವರಿಗೆ ಯಾವುದೋ ಮಾಹಿತಿಗಾಗಿ ಪೋನ್ ಮಾಡಿದ್ದರು, ಹಲವು ಬಾರಿ ನಾನು ಕಾಸರಗೋಡಿಗೆ ಹೋಗಿದ್ದೆ. ಅಲ್ಲಿನ ಕನ್ನಡಿಗರು ತಮ್ಮ ಬಾಷೆಗಾಗಿ ಈಗಲೂ ಹೋರಾಟ ಜೀವ೦ತ ಇಟ್ಟಿದ್ದಾರೆ.  ಹಾಲಿ ಕಾಸರಗೋಡಿನಲ್ಲಿ 183 ಕನ್ನಡ ಶಾಲೆಗಳು ಜೀವ೦ತವಾಗಿದೆ ಎಂದರೆ ಅವರ ಬಾಷಾಭಿಮಾನ ಅಥ೯ವಾಗುತ್ತದೆ, ಅಲ್ಲಿ ಈಗಲೂ ಮನೆ ಮನೆಗಳಲ್ಲಿ ಖಾಸಾಗಿ ಗ್ರಂಥಾಲಯಗಳಿದೆ.   ಉದಯವಾಣಿ ಪತ್ರಿಕೆ ಇವರಿಗೆಲ್ಲ ಸಂಬಂದ ಸೇತುವಾಗಿದೆ, ಈ ಪತ್ರಿಕೆಯ ಕಾಸರಗೋಡು ಜಿಲ್ಲಾ ಬ್ಯೂರೋ ಚೀಪ್ ಶ್ರೀ ಪ್ರದೀಪ್ ಬೇಕಲ್ ಇಲ್ಲಿನ ಕನ್ನಡ ಹೋರಾಟಗಾರರಿಗೆ ಬೆನ್ನೆಲುಬಾಗಿದ್ದಾರೆ.   ಕ...

#ಹಾರನಳ್ಳಿ ಕಳ್ಳ ಬುಡನ್ ಎಂಬ ಕುಖ್ಯಾತ ದರೋಡೆಕೋರ ಈ ಭಾಗದಲ್ಲಿ ಒಂದು ದಶಕ ಜನಸಾಮಾನ್ಯರು ಬೀತಿಯಿ೦ದ ಜೀವನ ಮಾಡುವಂತೆ ಮಾಡಿದ್ದ#

#ವೀರಪ್ಪನ್ ಕನಾ೯ಟಕ ತಮಿಳುನಾಡಿಗೆ ತಲೆನೋವಾದಂತೆ 70ರ ದಶಕದಲ್ಲಿ ಶಿಕಾರಿಪುರ, ಕುಂಸಿ ಅಯನೂರು ಬಾಗದಲ್ಲಿ ಬುಡೆನ್ ಸಾಬ್ ಜನರಿಗೆ ಪೋಲಿಸರಿಗೆ ದೊಡ್ಡ ಸಮಸ್ಯೆ ಆಗಿದ್ದ#   ಹಾರನಳ್ಳಿಯ ಬುಡನ್ ಸಾಬ್ ಕುಂಸಿ ಅಯನೂರು ಮತ್ತು ಶಿಕಾರಿಪುರದ ಜನ ಸಾಮಾನ್ಯರನ್ನ ಸುಮಾರು 10 ವಷ೯ ಕಾಲ ಬೀತಿಯಿ೦ದ ಇರುವಂತೆ ಮಾಡಿದ್ದ, ಆತ ಕಳ್ಳತನ ಮಾಡುತ್ತೇನೆ ಅಂದ ಮನೆ ಕಳ್ಳತನ ಮಾಡಿನೇ ಸಿದ್ದ ಎಂಬ ಪ್ರತೀತಿ.    ಹಗಲಿನಲ್ಲಿ ಬುಡನ್ ಸಾಬ್ ಈ ಕಾಡಿನಲ್ಲಿ ಕ೦ಡಿದ್ದ ಎಂದರೆ ವಾರಗಟ್ಟಲೆ ಆ ಕಾಡಿಗೆ ಕಟ್ಟಿಗೆ ತರಲು ಹೋಗುವ ದೈಯ೯ ಯಾರೂ ಮಾಡುತ್ತಿರಲಿಲ್ಲ.    ಕಟ್ಟುಮಸ್ತು ದೇಹದ ಬುಡನ್ ಸಾಬ್ ಕಳ್ಳ ಬುಡನ್ ಅಂತಲೇ ಕುಖ್ಯಾತಿ ಪಡೆದಿದ್ದ ಏನೇ ಮಾಡಿದರು ಪೋಲಿಸರಿಗೆ ಅವನನ್ನ ಬಂದಿಸಲಾಗದಿದ್ದದ್ದು ಮತ್ತು ಅವನ ತಡೆ ರಹಿತ ಕಳ್ಳತನ ದರೋಡೆಗಳಿOದ ಶಿಕಾರಿಪುರ, ಕುಂಸಿ ಮತ್ತು ಅಯನೂರಿನ ಸುತ್ತ ಮುತ್ತ ನೂರಾರು ಹಳ್ಳಿಗಳು ಭಯದಿಂದ ಜೀವನ ಸಾಗಿಸುತ್ತಿದ್ದ೦ತು ಸತ್ಯ.    ನಂತರ ಪೋಲಿಸರು ಈತನನ್ನ ಬಂದಿಸಿ ಜೈಲಿಗೆ ಕಳಿಸಿದ ನಂತರ ಇದು ನಿಂತಿತು, ಬುಡನ್ ಸಾಬ್ ನಂತರ ಮನ ಪರಿವತ೯ನೆಗೊಂಡು ರೈತರ ಜಮೀನಿನಲ್ಲಿ ನಾಟಿ ಕೊಯ್ಲು ಗುತ್ತಿಗೆ ಕೆಲಸ ಮಾಡುತ್ತಿದ್ದರು, ಅವರ ನಂತರ ಇವರ ಕುಖ್ಯಾತಿಗೆ ನೊಂದಿದ ಕುಟುಂಬ ಬೇರೆ ಕಡೆ ವಲಸೆ ಹೋದರು ಅಂತ ಸುದ್ದಿ ಇತ್ತು.   ಮೊನ್ನೆ ಹಾರನಳ್ಳಿಯ ಗೆಳೆಯರು ಬಂದಿದ್ದರು ಅವರ ಹತ್ತಿರ ಬುಡನ್...

#ಈಗಿನ 100%ಸಾವಯವ ಮಣ್ಣಿನ ಸೋಪು 50 ವಷ೯ದ ಹಿಂದೆ ಬಳಕೆಯಲ್ಲಿತ್ತು, ಹೊನ್ನಾಳಿಯ ತೀಥ೯ರಾಮೇಶ್ವರ ಗುಡ್ಡ ಇದರ ಗಣಿ#

#100% ಸಾವಯವ ಮಣ್ಣಿನ ಸೋಪು,197Oರ ನಂತರ ಹುಟ್ಟಿದವರಿಗೆ ಗೊತ್ತೇ ಇಲ್ಲದ ಸೋಪಿನ ಪ್ರಪಂಚ#   ಆಗೆಲ್ಲ ಹತ್ತಾರು ಕತ್ತೆ ಮೇಲೆ ಮೂಟೆಗಳನ್ನ ತುಂಬಿಕೊಂಡು "ಸವಳು ಬೇಕಾ ಸವಳು" ಅಂತ ಸೋಪಿನ ಮಣ್ಣು ಮಾರಾಟಕ್ಕೆ ಬರುತ್ತಿದ್ದರೆಂದರೆ 50 ವಷ೯ದಲ್ಲಿ ಎಂತಹ ಬದಲಾವಣೆ ನೋಡಿ ಈಗ ಸೋಪು ಶಾಂಪುವಿನ ಕಾಲ.   ಒಂದು ಸೇರು ಭತ್ತ ಅಥವ ರಾಗಿಗೆ 3 ಸೇರು ಸವಳು ನೀಡುತ್ತಿದ್ದರಂತೆ ಅದನ್ನ ಸೋರುವ ಮಣ್ಣಿನ ಮಡಕೆಗಳಲ್ಲಿ (ಉಪಯೋಗಕ್ಕೆ ಬರದ ಮಡಕೆ) ಶೇಖರಿಸಿ ಇಡುತ್ತಿದ್ದರು, ಇದನ್ನ ಸ್ನಾನಕ್ಕೆ ಬಟ್ಟೆ ತೊಳೆಯಲು ಉಪಯೋಗಿಸುತ್ತಿದ್ದರು ಇದರಲ್ಲಿ ನೊರೆ ಬರುತ್ತಿತ್ತು ಮತ್ತು ಮಣ್ಣಿನಲ್ಲಿನ ಸೂಕ್ಷ್ಮ ಮರಳು ಮನುಷ್ಯನ ಚಮ೯ದ ಮೇಲ್ಪದರದ ಕೊಳೆ ಬ್ರಷ್ನಂತೆ ತೆಗೆಯುತ್ತಿತ್ತು.   ಹೊನ್ನಾಳಿ ನ್ಯಾಮತಿ ಮದ್ಯದ ಬೆಳಗುತ್ತಿಯ ತೀಥ೯ರಾಮೇಶ್ವರ ದೇವರ ಗುಡ್ಡ ಈ ಸವಳು (ಸೋಪಿನ ಮಣ್ಣಿನ) ಗಣಿ ಆಗಿತ್ತು.   ನಂತರ ಕಸ್ತೂರಿ, 50I ಬಾರ್ ಸೋಪು, ನಂದಿ, ವಿನಾಯಕ ಹೀಗೆ ಮುಂದುವರಿದು ವಾಷಿOಗ್ ಮೆಷಿನ್ ಜಗತ್ತು  ಸೇರಿ ಸಪ್೯ ಅಕ್ಸೆಲ್ ವಾಷಿ೦ಗ್ ಪೌಡರ್ ವರೆಗೆ ಬಂದಿದ್ದೇವೆ, ವಾಷಿಂಗ್ ಪೌಡರ್ ನಿಮಾ೯ ಸೇರಿ.  ಅದೇ ರೀತಿ ಸ್ನಾನದ ಸೋಪುಗಳು ಲೈಪ್ ಬಾಯ್ ನಿಂದ ಮೈಸೂರು ಸ್ಯಾ೦ಡೆಲ್ ವರೆಗೆ ಬದಲಾಗಿದ್ದೇವೆ, ಹಮಾಮ್, ಲಕ್ಸ್ ಇವೆಲ್ಲವೂ ಇದೆ.   ಈಗ 100% ಸಾವಯವ ಸೋಪು ಅಂತ ಜ್ವಾಲಮುಖಿ ಮಣ್ಣಿನ ಸೋಪು, ಡೆಡ್ ಸೀ ಮಡ್ ಸೋಪು ಅ೦ತೆಲ್ಲ ಶ...

#ಕೆಮಿಕಲ್ ಕುಂಕುಮ ಹಾನಿಕಾರಕ ಈ ಬಗ್ಗೆ ಜನ ಜಾಗೃತಿ ಆಗಲಿ#

#ಕೆಮಿಕಲ್ ಕುಂಕುಮಕ್ಕೆ ಬಹಿಷ್ಕಾರ ಹಾಕಿ#   ನಾವೆಲ್ಲ ಪ್ಲಾಸ್ಟಿಕ್ ಮುಕ್ತ ಕನಾ೯ಟಕ ರಾಜ್ಯದ ಬಗ್ಗೆ ಗಮನ ಹೆಚ್ಚು ಹರಿಸುತ್ತಿದ್ದೇವೆ ಆದರೆ ರಾಜ್ಯದ ಬಹುತೇಕ ದೇವಾಲಯಗಳಲ್ಲಿ ಮತ್ತು ಪೂಜಾ ಸಮಾರಂಭಗಳಲ್ಲಿ ನಾವು ಬಳಸುವ ಕುಂಕುಮ ಮಾತ್ರ ಶುದ್ದ ರಾಸಾಯನಿಕ ಬಣ್ಣದ ಮಿಶ್ರಣದ ಕೆಂಪು ಪುಡಿ.   ಒಮ್ಮೆ ಹಣೆಗೆ ಹಚ್ಚಿದರೆ ಅದನ್ನು ತೊಳೆದು ತೆಗೆಯುವುದು ತುಂಬಾ ಕಷ್ಟ ಅಷ್ಟೇಕೆ ಕುಂಕುಮಾಚ೯ನೆ ಮಾಡುವ ಅಚ೯ಕರ ಕೈಗೆ ಅಂಟಿರುವ ಕುಂಕುಮದ ಕೆಂಪು ಬಣ್ಣ ಹೋಗುವುದೇ ಇಲ್ಲ ಆದರೂ ನಾವೆಲ್ಲ ಈ ಹಾನಿಕಾರಕ ರಾಸಾಯನಿಕ ಕುಂಕುಮಕ್ಕೆ ದಾಸರಾಗಿದ್ದೇವೆ.   ಶುದ್ದ ಕುಂಕುಮ ಆರಿಶಿಣದ ಪುಡಿ ಮತ್ತು ಸುಣ್ಣದ ಹದ ಮಿಶ್ರಣದಲ್ಲಿ ತಯಾರು ಮಾಡುತ್ತಾರೆ ಇದಕ್ಕೆ ಶುದ್ಧ ದೇಶಿ ಹಸುವಿನ ತುಪ್ಪದ ಮಿಶ್ರಣವೂ ಕೆಲವೆಡೆ ಇದೆ ಇದು ಪರಿಶುದ್ಧ ಕುಂಕುಮ ಇದು ದೇಹದ ಒಳಗೆ ಹೋದರೂ, ಕಣ್ಣಿಗೆ ಬಿದ್ದರೂ ಹಾನಿಕಾರ ಅಲ್ಲ ಮತ್ತು ತಂಪು ಆದರೆ ಇದಕ್ಕೆ ಬೆಲೆ ಹೆಚ್ಚು ಹಾಗಾಗಿ ಸಾವಯವ ಕುಂಕುಮದ ಜಾಗದಲ್ಲಿ ರಾಸಾಯನಿಕ ಕುಂಕುಮ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ ಅದೇ ರಾರಾಜಿಸುತ್ತಿದೆ.   ನಮ್ಮ ವರಸಿದ್ಧಿ ವಿನಾಯಕ ಸ್ವಾಮಿ ಜಾತ್ರೆಗೆ ಪ್ರತಿ ವಷ೯ ಉಡುಪಿ ಅಥವ ಕೊಲ್ಲೂರಿನಿಂದ ಶುದ್ಧ ಕುಂಕುಮ ಮತ್ತು ಭಸ್ಮ ತರುತ್ತೇನೆ.   ಕಳೆದ ತಿಂಗಳು ನಡೆದ ನನ್ನ ಮಗಳ ಮದುವೆಗಾಗಿ ದೂರದ ಈರೋಡಿನ ಶಿವ ದೇವಾಲಾಯದ ಪ್ರಧಾನ ಅಚ೯ಕರಾದ ಡಾII ಸೆಂದಿಲನಾಥನ್ ಶುದ್ಧವಾದ ಮದು...

#ಹೊನ್ನಾವರ ಮೀನು ಬಂದರಿನ Star Fish Cutter ನಾಗಪ್ಪ#

#ಹೊನ್ನಾವರದ ಬOದರಿನಲ್ಲಿ ನಾಗಪ್ಪ ಎಂಬ ಮೀನು ಕತ್ತರಿಸುವ ಸೂಪರ್ ಎಕ್ಸ್ಪಟ್೯#  ಹೊನ್ನಾವರದಲ್ಲಿ ಬ೦ದರಿನಲ್ಲಿ ಮೀನು ಖರೀದಿಸಿದವರು ಹುಡುಕುವುದು ಈ ನಾಗಪ್ಪನ್ನ, ಶರಾವತಿ ನದಿ ಅರಬ್ಬಿ ಸಮುದ್ರ ಸೇರುವ ಈ ಪ್ರದೇಶದಲ್ಲಿ ನಿತ್ಯ ಯಾಂತ್ರಿಕ ದೊಣಿ ಮತ್ತು ನಾಡ ದೊಣಿಗಳಲ್ಲಿ ಬರುವ ಮೀನು ಖರೀದಿಸಲು ಬೆಳಿಗಿನಿ೦ದ ರಾತ್ರಿ ತನಕ ಇಲ್ಲಿ ಜನ ಜಾತ್ರೆ 100 ರೂಪಾಯಿಗೆ ಒಂದು ಕೆಜಿ ಮೀನಿನಿಂದ 1000 ರೂಪಾಯಿಯ ದುಭಾರಿ ಮೀನು ಇಲ್ಲಿ ಲಭ್ಯ.   ಮೀನು ಖರೀದಿಸಿದವರ ಮೀನು ತುಂಡರಿಸಿ ಸ್ವಚ್ಚ ಮಾಡಿ ಕೊಡಲು ಅಲ್ಲಿ ಅನೇಕರು ಸ್ತ್ರಿ ಪುರುಷರಿರುತ್ತಾರೆ ಅದಕ್ಕೆ ಹಣ ನಿಗದಿ ಮಾಡಿ ಕೊಡಬೇಕು ಅವರು ಮನೆ ಒಡತಿ ಅಥವ ಮಾಲಿಕನ ಮಜಿ೯ಗೆ ತಕ್ಕ೦ತೆ (ಅವರಿಗೆ ಬೇಕಾದ ಗಾತ್ರ ಮತ್ತು ಆಕೃತಿಗೆ) ತುಂಡು ಮಾಡಿ ನೀಡುತ್ತಾರೆ.    ಒಂದೊ೦ದು ಮೀನಿಗೆ ಒಂದೊಂದು ಬಗೆಯಲ್ಲಿ ತಯಾರಿಸಿ ಕೊಡಬೇಕು, ಪಾ೦ಪ್ಲೆಟ್ ಮೀನು ಇಡಿಯಾಗಿರಬೇಕು ಅದರ ಬಾಲ ರೆಕ್ಕೆ ಕತ್ತರಿಸಿ ತೆಗೆದು ಅದರ ಹೊಟ್ಟೆ ಬಾಗ ಸ್ವಚ್ಚ ಮಾಡಿ ತೆಗೆಯಬೇಕು.    ಸೀಗಡಿಯ ಹೊರ ಕವಚ ತೆಗೆದು ಕೊಡಬೇಕು,ನಂಗು ಎನ್ನುವ ಮೀನಿನ ಮೈ ಚಮ೯ ಸುಲಿಯ ಬೇಕು ಹೀಗೆ ಮೀನಿನ ಲೋಕದ ಮೀನು ಪ್ರಿಯರ ಸಂಪ್ರದಾಯವಿದೆ.   ಅ೦ಜಲ್ ಮೀನು ಎಷ್ಟು ತೆಳ್ಳದಾಗಿ slice ಮಾಡುತ್ತೀರೋ ಅಷ್ಟು ರುಚಿ ಹಾಗಾಗಿ ಅದನ್ನ ಅತ್ಯಂತ ತೆಳುವಾಗಿ slice ಮಾಡುವ ಮತ್ತು ಕ್ಷಿಪ್ರವಾಗಿ ನಗು ನಗುತ್ತಾ ಮೀನು ಪ್ರಿ...

#ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ಗೆ 100 ನೇ ಹುಟ್ಟು ಹಬ್ಬ! #

#ಬೆಂಗಳೂರುಪ್ರೆಸ್ ಕ್ಯಾಲೆ೦ಡರ್ ಗೆ  ಶತಮಾನೋತ್ಸವ#  ಮೊನ್ನೆ ಬೆಂಗಳೂರಿನ ಅವೆನ್ಯೂ ರೋಡಿಗೆ 2020ರ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ಮತ್ತು ಒ೦ಟಿಕೊಪ್ಪಲು ಕ್ಯಾಲೆ೦ಡರ್, ಪಂಚಾಂಗ ತರಲು ಹೋಗಿದ್ದೆ.   35 ರೂಪಾಯಿಯ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ತುಂಬಾ ಉಪಯುಕ್ತ ದಿನಚರಿ ಇರುವಂತಾದ್ದು ಅದರಲ್ಲಿ ಸಕಾ೯ರಿ ರಜಾ, ದಾಮಿ೯ಕ ಹಬ್ಬ ಹರಿದಿನಗಳ ಮಾಹಿತಿ ಇರುತ್ತದೆ ಅಷ್ಟೆ ಅಲ್ಲ ಅದರ ಸುಂದರ ಮುದ್ರಣ ಗೋಡೆಗೆ ಒಂದು ಶೋಬೆ ಆದರೆ ಕಣ್ಣ ದೃಷ್ಟಿಗೂ ಸ್ಪಷ್ಟ ಹಾಗಾಗಿ ಹೆಚ್ಚಿನ ಜನ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ಗೆ ಮೊದಲ ಆದ್ಯತೆ ನೀಡುತ್ತಾರೆ.   ಈ ವಷ೯ದ ಕ್ಯಾಲೆಂಡರ್ ಈ ಸಂಸ್ಥೆಯ 100ನೇ ಕ್ಯಾಲೆಂಡರ್ ! 1921ರಲ್ಲಿ ಮೊದಲ ಇಂಗ್ಲೀಷ್  ಕ್ಯಾಲೆಂಡರ್ ಹೊರತಂದಿದ್ದು ಮೈಸೂರು ಸಂಸ್ಥಾನ, 1916 ಆಗಸ್ಟ 5ಕ್ಕೆ ಬೆಂಗಳೂರು ಪ್ರೆಸ್ ಕಾಯಾ೯ರಂಭ ಮಾಡಿದ್ದು, 1936ರಿಂದ ಕನ್ನಡ ಕ್ಯಾಲೆಂಡರ್ ಮುದ್ರಿಸುತ್ತಿದೆ, 1988 ರಿಂದ ಟೇಬಲ್ ಕ್ಯಾಲೆಂಡರ್ ಮುದ್ರಿಸುತ್ತಿದೆ.   ನಮ್ಮ ಹೆಮ್ಮೆಯ ಬೆಂಗಳೂರು ಪ್ರೆಸ್ ನ ಶತಮಾನೋತ್ಸವದ 2020ರ ಕ್ಯಾಲೆಂಡರ್ ಗೆ ಅಭಿನಂದನೆ ಸ್ವಾಗತ ಕೋರುತ್ತ 2019ರ ಕ್ಯಾಲೆಂಡರ್ ಹಿಂಬಾಗ ಅಳವಡಿಸಿದ್ದೇನೆ.  ನೀವು ಮರೆಯದೆ 2020ರ ಬೆಂಗಳೂರು ಪ್ರೆಸ್ ನ ಶತಮಾನೋತ್ಸವದ ಕ್ಯಾಲೆಂಡರ್ ಮರೆಯದೇ ಖರೀದಿಸಿ ಪ್ರೋತ್ಸಾಹಿಸಿ. 2019 ಡಿಸೆಂಬರ್ 18ಕ್ಕೆ ಈ ಲೇಖನ ಪ್ರಕಟಿಸಿದ್ದೆ ...

ಸಂಯುಕ್ತ ಕನಾ೯ಟಕದ ಆತ್ಮಚರಿತ್ರೆಯಲ್ಲಿ ಸಾಗರ ತಾಲ್ಲೂಕ್ ಭಾಗ 2

#ಸಂಯುಕ್ತ ಕನಾ೯ಟಕದ ಶಾಮ ರಾಯರ ಆತ್ಮಚರಿತ್ರೆ ಸಂಜಯ ಉವಾಚದಲ್ಲಿ ಸಾಗರ ತಾಲ್ಲುಕ್#  2. ಜಿಲ್ಲೆಯ ಹವ್ಯಕರ ಬಗ್ಗೆ        ಶಾಮ ರಾಯರು ಸಂಯುಕ್ತ ಕನಾ೯ಟಕದ ಸಂಪಾದಕರಾಗಿ ಜನಾನುರಾಗಿ ಆದವರು ಅದಕ್ಕೂ ಮೊದಲು ಅವರ ದಾವಣಗೆರೆಯಿOದ ಪ್ರಕಟ ಆಗುತ್ತಿದ್ದ ಸಂಜಯ ಎನ್ನುವ ಅವರ ವಾರಪತ್ರಿಕೆ ಶಿವಮೊಗ್ಗ ಜಿಲ್ಲೆಯಲ್ಲಿ ತುಂಬಾ ಪ್ರಖ್ಯಾತವಾಗಿತ್ತು   ಹವ್ಯಕ ಬ್ರಾಹ್ಮಣರ ಬಗ್ಗೆ ಅವರು ಅವರ ಜೀವನ ಚರಿತ್ರೆ ಅಪೂಣ೯ ಆತ್ಮಕಥೆ ಸಂಜಯ ಉವಾಚದಲ್ಲಿ ಈ ರೀತಿ ಬರೆದಿದ್ದಾರೆ    *ಹವ್ಯಕ ಜನ ಇಡೀ ಬ್ರಾಹ್ಮಣ ಸಮಾಜದಲ್ಲೇ ಬುದ್ಧಿವಂತರೆಂದು ಹೇಳಬಹುದು.*

#ವಿದ್ಯಾವ೦ತರು ವಿಚಾರವಂತರಾದರೆ ಮಾತ್ರ ಸಮಾಜಕ್ಕೆ ಲಾಭ #

#ಕನಾ೯ಟಕರಾಜ್ಯ ಮಟ್ಟದ ಮೂರನೆ ಆದಿವಾಸಿಗಳ ಸಮ್ಮೇಳನ ಹೊಸನಗರದಲ್ಲಿ#   ಮೊನ್ನೆ ನನ್ನ ಕ್ಲಾಸ್ ಮೇಟ್ ಪುರಪ್ಪೆಮನೆ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಮತ್ತು ಬಟ್ಟೆಮಲ್ಲಪ್ಪದಲ್ಲಿ ಸಾಹಸದಿಂದ ವ್ಯಾಸ ವಿದ್ಯಾಲಯ ಶಾಲೆ ನಡೆಸುತ್ತಿರುವ ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ ಸತ್ಯನಾರಾಯಣ್ ಬ್ಯಾಣದ್ ಕನಾ೯ಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕರಾದ ಬೆಂಗಳೂರಿನ SY ಗುರುಶಾ೦ತ್ ಜೊತೆ ಬಂದು ಕರಪತ್ರ ನೀಡಿದರು.  ಈ ಸಮ್ಮೇಳನದ ಗೌರವಾಧ್ಯಕ್ಷರು ಚರಕ ಪ್ರಸನ್ನ,ಅಧ್ಯಕ್ಷರು ಕುಣುಬಿ ಸಮಾಜದ ಸಾಗರದ ವಕೀಲರಾದ ಕೊಂಗನಾಸಳ್ಳಿ ಮಂಜಪ್ಪ, ಇವರು ನನ್ನ ಶಿಷ್ಯ ಇವರ ನೇತೃತ್ವದಲ್ಲಿ 1995 ರಲ್ಲಿ ಆನಂದಪುರದಲ್ಲಿ ಮತ್ತು 1996ರಲ್ಲಿ ಭಟ್ಕಳ ಸಮೀಪದ ಕೊಗಾರಿನ ದೇವಗಾರು ಎಂಬ ಹಳ್ಳಿಯಲ್ಲಿ ಜಾನು ಎನ್ನುವವರ ಜಾಗದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಕುಣುಬಿ ಜನಾ೦ಗದ ಎರೆಡು ಸಮಾವೇಶ ಮಾಡಿದ್ದು, ನಾನು ಭಾಗವಹಿಸಿದ್ದು ನೆನಪಾಯಿತು.   ಪಕ್ಕದ ಗೋವಾ ರಾಜ್ಯದಲ್ಲಿ ಇವರ ಜಾತಿ ST ನಮ್ಮ ರಾಜ್ಯದಲ್ಲಿ BCM - B, ಮೀಸಲಾತಿಗಾಗಿ ಅವರ ಹೋರಾಟ ನಡೆದೇ ಇದೆ.  ಶಿವಮೊಗ್ಗ ಜಿಲ್ಲೆಯ ಕುಣುಬಿ, ಹಸಲರು, ಗೌಳಿ, ಸಿಳ್ಳೆಕ್ಯಾತರರನ್ನ ಆದಿವಾಸಿ ಸಮಾವೇಶದಲ್ಲಿ ಸೇರಿಸಿಕೊಂಡಿರುವುದು ಸ್ವಾಗತಾಹ೯ ಇವರಿಗೆ ಬೆಂಬಲಿಸಿ ಇವರ ಸಮ್ಮೇಳನ ಯಶಸ್ವಿಗೆ ಪ್ರಕಾಶ್ ಮತ್ತು ಮಂಜುನಾಥ ಸತ್ಯನಾರಾಯಣ್ ಬ್ಯಾಣದ್ ಬೆಂಬಲಿಸುತ್ತಿರುವು...

# ಕಸ್ತೂರಿರಂಗನ್ ವರದಿ ಪ್ರದೇಶದ ರಿಯಲ್ ಎಸ್ಟೇಟ್ ಪಾತಾಳಕ್ಕೆ#

#ಮಲೆನಾಡಿನಲ್ಲಿ ರಿಯಲ್ ಎಸ್ಟೇಟ್ ಪಾತಾಳಕ್ಕೆ ಇಳಿಯಲಿದೆ, ಜಮೀನು ಖರೀದಿಸುವವರು ಬರಲಿಕ್ಕಿಲ್ಲ, ಕಸ್ತೂರಿ ರಂಗನ್ ವರದಿ ಪ್ರದೇಶದ ವ್ಯಾಪ್ತಿಯ ಜನರ ಜೀವನ ಮಟ್ಟ ಕುಸಿಯಲಿದೆ ಆದರೆ ಇದರಿ೦ದ ಪರಿಸರ ಉಳಿದು ಬೇರೆ ಪ್ರದೇಶದ ಜನ ಜೀವನಕ್ಕೆ ಅನುಕೂಲ ಆಗಲಿದೆ ಕ್ರಮೇಣ ಈ ಭಾಗದ ಜನ ಈ ಪ್ರದೇಶ ತೆರವು ಗೊಳಿಸಿ ಬೇರೆಲ್ಲೊ ಬದುಕು ಕಾಣಬೇಕಾಗುವುದು ಸತ್ಯ, ಯಾರೆಷ್ಟೆ ಸಮಥ೯ನೆ ನೀಡಲಿ ಭೂಮಿ ಉಳಿಸುವ ಈ ಅತ್ಯುತ್ತಮ ಕ್ರಮದಿಂದ ಈ ಭಾಗದ ಜನ ನೆಲೆ ಕಳೆದು ಕೊಳ್ಳಲೇಬೇಕು, ಕೆಲವರು ತ್ಯಾಗಕ್ಕೆ ತಯಾರಿರಬಹುದು, ರಾಜ್ಯದ ಬೆಳಕಿಗಾಗಿ ಶರಾವತಿ ಆಣೆಕಟ್ಟಿನಿಂದ ನಿರಾಶ್ರಿತರಾದ ಮಲೆನಾಡಿಗರಿ೦ದ ರಾಜ್ಯಕ್ಕೆ ಬೆಳಕಾಗಿದ್ದು ಸತ್ಯ ಆದರೆ ನಿರಾಶ್ರಿತರ ನಾಲ್ಕು ತಲೆಮಾರು ಅನುಭವಿಸುತ್ತಿರುವ ನಷ್ಟ ವೇದನೆ ಕಣ್ಣ ಎದುರು ಇದೆ, ಪರಿಸರ ಉಳಿಸಲು ಎಲ್ಲವನ್ನು ಕಳೆದುಕೊಳ್ಳುವವರಿಗೆ ಪರಿಹಾರ ಏನು? ಈ ಬಗ್ಗೆ ಎಲ್ಲೂ ಚಕಾರವಿಲ್ಲ, ಕಸ್ತೂರಿ ರಂಗನ್ ವರದಿ ವಿರೋದಿಸುವ ಕಾಲ ಮಿತಿ ಮೀರಿದೆ ಅದು ಅಲ್ಪ ಸ್ವಲ್ಪ ಮಾಪಾ೯ಡಿನೋಂದಿಗೆ ಜಾರಿ ಅಂತು ಆಗೇ ಆಗುತ್ತದೆ ಈ ಪ್ರದೇಶದ ವಾಸಿಗಳಾದ ನಮ್ಮ ಭವಿಷ್ಯದ ಭದ್ರತೆ ಚಚೆ೯ ಆಗಲೇಬೇಕು. #

#ಇಸ್ರೇಲ್ ಉಗಾಂಡದ ಎಂಟೆಬೆ ವಿಮಾನ ನಿಲ್ದಾಣದ ಯಶಸ್ವಿ ಕಾಯಾ೯ಚಾರಣೆಯ ಪುಸ್ತಕ ಸಂತೋಷಕುಮಾರ್ ಮೆಹಂದಳೆಯಿ೦ದ#

#ತೇಜಸ್ವಿ ರವಿ ಬೆಳೆಗೆರೆ ನಂತರ ಇಂತ ಪುಸ್ತಕ ಸಂತೋಷಕುಮಾರ ಮೆಹೆಂದಳೆಯಿ೦ದ#  5 ಪುಸ್ತಕ ಅವರ ಸಹಿಯೋOದಿಗೆ ಕಳಿಸಲು ವಿನಂತಿಸಿದ್ದೆ ಬಂದು ಅನೇಕ ದಿನ ಆದರೂ ಓದಲಾಗಿರಲಿಲ್ಲ ತುಂಬಾ ವಿರಾಮದಲ್ಲಿ ಓದಬೇಕೆಂದು ಹಾಗೆ ಇಟ್ಟಿದ್ದೆ ಕಾರಣ ಇದು ಉಗಾಂಡದಲ್ಲಿ ಸವಾ೯ದಿಕಾರಿ ಇದಿ ಆಮೀನರ ಏಮಾರಿಸಿ ಭಯೋತ್ಪಾದಕರಿಂದ ಇಸ್ರೇಲ್ ತನ್ನ ದೇಶದ ಪ್ರಜೆಗಳ ಕಾಪಾಡಿದ ಘಟನೆಯ ವಿವರ ಇರುವ ಪುಸ್ತಕ.   ಪುಟ 138 ರಿಂದ ಪ್ರಾರಂಭ ಆಗುವ ರೋಚಕತೆ ಪುಸ್ತಕ ಮುಗಿಯುವವರೆಗೆ ನಿಮ್ಮನ್ನ ಬಿಡುವುದಿಲ್ಲ.   ತೇಜಸ್ವಿಯವರ ಮಿಲೇನಿಯಮ್ ಸರಣಿ ಪುಸ್ತಕದ ನಂತರ ರವಿ ಬೆಳೆಗೆರೆ ಇಂತಹ ಸತ್ಯ ಘಟನೆಯನ್ನ ರೋಚಕವಾಗಿ ಬರೆದು ಓದುಗರಿಗೆ ತಲುಪಿಸುತ್ತಿದ್ದರು ಈಗ ಇದೇ ಹಾದಿಯಲ್ಲಿ ಕನ್ನಡ ಓದುಗರಿಗೆ ಸ೦ತೋಷಕುಮಾರ್ ಮೆಹಂದಳೆ ನಡೆಯುತ್ತಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಗರಿಮೆ.   ಇನ್ನು ಇಂತಹ ಪುಸ್ತಕ ಹೆಚ್ಚು ಹೆಚ್ಚು ಬರಲಿ ಎಂದು ಅವರಿಗೆ ಶುಭ ಹಾರೈಸುತ್ತೇನೆ.   ನೀವು ಓದಿ.

#ಕಸ್ತೂರಿರಂಗನ್ ವರದಿ ವ್ಯಾಪ್ತಿಯ ಗ್ರಾಮದವರಿಗೇ ಈ ವರದಿಯ ಬಗ್ಗೆ ಮಾಹಿತಿ ಇಲ್ಲ#

#ಕಸ್ತೂರಿರಂಗನ್ ವರದಿ ಜಾರಿ ಆಗಬೇಕೆ? ಬೇಡವೆ? #  ಚಚೆ೯ ಎಲ್ಲಾ ಕಡೆ ನಡೆಯುತ್ತಿದೆ ಮುಖ್ಯಮಂತ್ರಿ ಯಡೂರಪ್ಪನವರು ಈ ವರದಿ ಜಾರಿ ಬೇಡ ಅನ್ನುತ್ತಿದ್ದಾರೆ, ಪರಿಸರವಾದಿಗಳು ಜಾರಿ ಆಗದಿದ್ದರೆ ಪರಿಸರ ಉಳಿಯುವುದಿಲ್ಲ ಎನ್ನುತ್ತಿದ್ದಾರೆ, ದೂರದ ಬಯಲು ಪ್ರದೇಶದವರೂ ಜಾರಿ ಆಗಲಿ ಅಂತಿದ್ದಾರೆ ಆದರೆ ಕಸ್ತೂರಿ ರಂಗನ್ ವರದಿಯಲ್ಲಿ ಶಿವಮೊಗ್ಗ ಜಿಲ್ಲೆಯ ಅತಿ ಹೆಚ್ಚು ಗ್ರಾಮಗಳು ಸಾಗರ ಹೊಸನಗರ ತೀಥ೯ಹಳ್ಳಿ ತಾಲ್ಲೂಕ್ ಗಳಲ್ಲಿ ಸೇರಿದೆ ಆದರೆ ಈ ಭಾಗದವರಿಗೆ ಅದರ ಅರಿವು ಇಲ್ಲ, ಪರಿಣಾಮದ ಬಗ್ಗೆ ಗೊತ್ತೆ ಇಲ್ಲ ಇದೊ೦ದು ವಿಷಾದನೀಯ ವಿಚಾರ.   ಜನಸಾಮಾನ್ಯರಿರಲಿ ಈ ಬಾಗದ ಜನಪ್ರತಿನಿದಿಗಳಲ್ಲಿ ಕೂಡ ಕಸ್ತೂರಿ ರಂಗನ್ ವರದಿ ಮಾಹಿತಿ ಕೊರತೆ ಇದೆ.   ಕಸ್ತೂರಿ ರಂಗನ್ ವರದಿ ಜಾರಿ ಆಗಬೇಕು ಎನ್ನುವ ಪರಿಸರವಾದಿಗಳಲ್ಲಿ ಇರುವಷ್ಟು ಸ್ಪಷ್ಟತೆ ಕಸ್ತೂರಿ ರಂಗನ್ ಜಾರಿ ಆಗುವುದು ಬೇಡ ಎನ್ನುವವರಲ್ಲಿ ಇಲ್ಲ.   ಪರಿಸರ ಉಳಿಯಬೇಕು ಆದರೆ ಈ ಮಲೆನಾಡ ಪರಿಸರದ ಜನ ಸಾಮಾನ್ಯರ, ಕೃಷಿಕರ ಮೇಲೆ ಈ ವರದಿಯ ತಕ್ಷಣ ಪರಿಣಾಮ ಏನು ಮತ್ತು ದೀಘಾ೯ ವದಿ ಕಾಲದಲ್ಲಿ ಆಗುವ ಅನುಕೂಲ ಅಥವ ಅನಾನುಕೂಲದ ಬಗ್ಗೆ ಯಾರಿಗೂ ಯಾವುದೇ ಮಾಹಿತಿ ಇದ್ದ೦ತಿಲ್ಲ.   ಈ ಬಗ್ಗೆ ಕೊಪ್ಪದ ವಿದ್ಯಾವಂತ ಮಲೆನಾಡ ಯುವ ಕೃಷಿಕರ ಬಳಗ ಮOಡಾಳೆ ಗ್ರೂಪ್ ಕಸ್ತೂರಿ ರಂಗನ್ ವರದಿಯ ಜನ ಜಾಗೃತಿ ಕೆಲಸ ಪ್ರಾರಂಬಿಸಿದೆ ಪರಿಸರ ಉಳಿಯಲಿ ಇದರ ಜೊತೆ ಸ್ಥಳಿಯ ಕೃಷಿ ಕೂಡ ಉಳಿಯಬ...

#ತಹಸೀಲ್ದಾರ್, ರಾಜ್ಯದ ಉಪಮುಖ್ಯಮ೦ತ್ರಿ ಆಪ್ತ ಕಾಯ೯ದಶಿ೯ ಆಗಿದ್ದ ಸಾಗರದ ಮOಜುನಾಥ ಶಮಾ೯#

#ಇವತ್ತಿನ ಅತಿಥಿಗಳು ಈಶ್ವರಪ್ಪನವರು ಉಪ ಮುಖ್ಯಮಂತ್ರಿ ಆಗಿದ್ದಾಗ ಅವರ ಆಪ್ತ ಕಾಯ೯ದಶಿ೯ಗಳಾಗಿದ್ದ ಮಂಜುನಾಥ ಶಮಾ೯ ಮತ್ತು ಭದ್ರಾವತಿ ಆಕಾಶವಾಣಿಯಲ್ಲಿ ನಿವೃತ್ತರಾಗಿರುವ ಡಾ.ಸುದೀ೦ದ್ರ.#     ಮಂಜುನಾಥ ಶಮಾ೯ರು ಸಾಗರದ ಸಮೀಪದ ಕುಗ್ವೆಯವರು  ಸಾಗರದ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ಓದಿದವರು, ತಹಸೀಲ್ದಾರ್ ಆಗಿ  ಶಿವಮೊಗ್ಗದಲ್ಲಿ ಲಕ್ಷ್ಮಿನಾರಾಯಣ ಜಿಲ್ಲಾಧಿಕಾರಿಗಳಾಗಿದ್ದಾಗ ಅವರೊಂದಿಗೆ ಕೇ೦ದ್ರ ಸ್ಥಾನದಲ್ಲಿ ಕೆಲಸ ನಿವ೯ಹಿಸಿದ್ದರು, ಇವರ ಅಣ್ಣ ಶ್ರೀಧರ ಪ್ರಸಾದರು ಕೃಷಿಕರು ಸಾಗರದ ಕುಗ್ವೆಯಲ್ಲಿ ಇದ್ದರು ಅವರು ತೀ ನಾ ಶ್ರೀನಿವಾಸ ಮತ್ತು ನಮ್ಮೆಲ್ಲರ ಜನಪರ ಹೋರಾಟಕ್ಕೆ ಸದಾ ಬೆಂಬಲಿಸುತ್ತಿದ್ದರು (ಇತ್ತೀಚಿಗೆ ನಿಧನರಾದರು).     ನಂತರ ಶಮಾ೯ರವರು ಈಶ್ವರಪ್ಪರ ಜೊತೆ ಇದ್ದವರು ಅವರು ಉಪ ಮುಖ್ಯಮಂತ್ರಿ ಆಗಿದ್ದಾಗಲೂ ಸೇವೆ ಸಲ್ಲಿಸಿದವರು ಮತ್ತು ಯಾವುದೇ ಕಳOಕ ಇಲ್ಲದೆ ಒಳ್ಳೆಯ ಹೆಸರು ಪಡೆದು ಈಗ ನಿವೃತ್ತರಾಗಿ ಕುಟು೦ಬದೊಂದಿಗೆ ಸ೦ತೃಪ್ತ ಜೀವನ ನಡೆಸುತ್ತಿದ್ದಾರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ.    ಡಾ.ಸುದೀOದ್ರ ಭದ್ರಾವತಿ ಆಕಾಶವಾಣಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಅದೇ ಸಮಯದಲ್ಲಿ ರೇಡಿಯೋ ನಾಟಕಗಳ ಬಗ್ಗೆ    ಸಂಶೋದನೆ ಮಾಡಿ ಡಾಕ್ಟರೇಟ್ ಪಡೆದವರು ನಿವೃತ್ತರಾದರೂ ಡಿಜಿಟಲ್ ಮೀಡಿಯಾದಲ್ಲಿ ಸದಾ ಬಾಗಿಯಾಗಿದ್ದಾರೆ ಒಂದು ವಿಶೇಷ ಅಂದರೆ ಸಾಗರದಲ್...

#ಸ್ವದೇಶಿ ಸಂಗೀತ ಸಾದನ ಕಿನ್ನರಿ ಜೊತೆ ಕಿಂದರ ಜೋಗಿಗಳು#

#ಕುವೆ೦ಪು ಬರೆದ ಬೊಮ್ಮನ ಹಳ್ಳಿ ಕಿಂದರ ಜೋಗಿ ಇವರೇನ#  *ನನ್ನ ಇವತ್ತಿನ ಅತಿಥಿ*   ಆನಂದಪುರOನಲ್ಲಿ ನೆಲೆಸಿರುವ ಉತ್ತರ ಕನಾ೯ಟಕದ ಜೋಗಿಗಳು ತಮ್ಮನ್ನ ಕಿನ್ನರ ಜೋಗಿ ಎಂದು ಕರೆದು ಕೊಳ್ಳುತ್ತಾರೆ ಅವರನ್ನ ಕಿಂದರ ಜೋಗಿ ಅಂತಾನು ಕರೆಯುತ್ತಾರೆ.   ಇವರ ಸಂಗೀತ ಸಾದನ ಕಿನ್ನರಿ, ಇದನ್ನ ಇವರೇ ಸ್ವತಃ ತಯಾರಿಸುತ್ತಾರೆ, ಸ್ಥಳಿಯ ವಾಗಿ ಸಿಗುವ ಒಣ ಸೋರೆಕಾಯಿ ಬುರುಡೆ, ಬಿದಿರು ಕೋಲು ಮತ್ತು ಕಿನ್ನರಿ ತಂತಿಯಿಂದ ತಯಾರಿಸುತ್ತಾರೆ, ತಯಾರಿ ಸುಲಭ ಮತ್ತು ಉಚಿತ ಆದರೆ ಅದನ್ನ ಅವರ ಲಯದಲ್ಲಿ ನುಡಿಸಲು ತರಬೇತಿ ಬೇಕು.  ಇವತ್ತು ನನ್ನ ಕಚೇರಿಗೆ ಬಂದಿದ್ದ ಕಿನ್ನರ ಜೋಗಿ, ಜನಪದ ಹಾಡುಗಾರ ತೊಂಬ್ರಿ ನಾಗರಾಜರು ಜೊತೆಯಲ್ಲಿ ತಂದಿದ್ದ ಕಿನ್ನರಿ ಬಗ್ಗೆ ವಿವರಿಸಿದರು ಕೆಲ ಜೋಗಿ ಪದ, ವಿವಿದ ಪ್ರಕಾರದ ಹಾಡುಗಳನ್ನ ಅವರ ಸಂಗೀತ ಸಾದನ ಕಿನ್ನರಿಯೊಂದಿಗೆ ಹಾಡಿ ರಂಜಿಸಿದರು.    ಆನ೦ದಪುರದ ಚಂಪಕ ಸರಸ್ಸು ಬಗ್ಗೆ ನಾನು ಸಂಗ್ರಹಿಸಿ ಬರೆದ ಕೆಳದಿ ಅರಸ ರಾಜ ವೆಂಕಟಪ್ಪ ನಾಯಕ ಮತ್ತು ರಾಣಿ ಚಂಪಕಾರ ದುರಂತ ಪ್ರೇಮಕಥೆಯನ್ನೂ ಹಾಡಿದರು.   ನನಗಾಗಿ ಕಿನ್ನರಿ ಒಂದನ್ನ ತಯಾರಿಸಿ ತಂದು ಕೊಡುವ ಅಶ್ವಾಸನೆ ಕೂಡ ನೀಡಿದರು.   ಸ್ವದೇಶಿ ಸಂಗೀತ ಸಾದನ ಎಷ್ಟು ಸರಳ ಮತ್ತು ಸುಂದರ ನೋಡಿ

#ಮರೆತೇ ಹೋಗಿದ್ದ ಮಲೆನಾಡಿನ ನೀರುಕಡುಬು #

#ಮರೆತೇ ಹೋಗಿದ್ದ ನಮ್ಮ ಅಮ್ಮ ಮಾಡುತ್ತಿದ್ದ ನೀರುಕಡುಬು ಇವತ್ತಿನ ಉಪಹಾರ.#  1965 ರಿಂದ 1974ರ ತನಕ ಈ ನೀರುಕಡಬು ವಾರಕ್ಕೆ ಒಮ್ಮೆಯಾದರೂ ನಮ್ಮ ಅಮ್ಮ ತಯಾರಿಸುತ್ತಿದ್ದಳು, 1975 ರಲ್ಲಿ ಅಮ್ಮನ ಅಕಾಲಿಕ ನಿಗ೯ಮನ ಮನೇಲಿ ಅಡುಗೆ ಇತ್ಯಾದಿ ಗೃಹ ಕೃತ್ಯ ನಮ್ಮದಾಯಿತು ಆದರೆ ಅಮ್ಮನ ಅನೇಕ ರುಚಿಕಟ್ಟಾದ ಅಡುಗೆ ರೆಸಿಪಿ ಮರೆತೇ ಹೋಯಿತು.   ಅಕ್ಕಿ ಬೀಸು ಕಲ್ಲಿನಲ್ಲಿ ಬೀಸಿ ರವೆ ಮಾಡಿ ಅದನ್ನ ಬಿಸಿ ನೀರಿನಲ್ಲಿ ರುಚಿಗೆ ಉಪ್ಪು ಸೇರಿಸಿ ಆದ೯ ಬೇಯಿಸಿ ವಡೆ ಆಕಾರ ಮಾಡಿ ಕುದಿಯುವ ನೀರಿನಲ್ಲಿ ಬೇಯಿಸಬೇಕು ತುಂಬಾ ಸರಳ ಆದರೆ ಹದ ತಪ್ಪಿದರೆ ನೀರು ಕಡಬು ಗಂಜಿ ಆಗಿ ಕರಗಿ ಆಡುಗೆ ಹದ ತಪ್ಪಿ ಹಾಳಾಗುತ್ತದೆ.   ಅನೇಕರಲ್ಲಿ ನೀರು ಕಡಬು ಮಾಡೋದು ಹೇಗೆ? ಅಂತ ಕೇಳುತ್ತಿದ್ದೆ ಆದರೆ ಅವರಿಗೆ ಮಲೆನಾಡಿನ ಉ೦ಡೆ ಕಡಬು ಗೊತ್ತಿತ್ತೇ ವಿನಃ ನನಗೆ ಮಾತ್ರ ಗೊತ್ತಿದ್ದ ನೀರು ಕಡುಬು ಅವರಿಗೆ ಗೊತ್ತಾಗುತ್ತಿರಲಿಲ್ಲ.    ನೀರು ಕಡಬು ಮಲೆನಾಡಿನ ತಿಂಡಿ ಆದರೂ ಜನಮಾನಸದಲ್ಲಿ ಮರೆತೇ ಹೋಗಿತ್ತು, ಮಲೆನಾಡಿನ ವೈವಿಧ್ಯಮಯ ಭತ್ತದ ಅಕ್ಕಿಯಲ್ಲಿ ಒಂದೊಂದು ಸಾರಿ ಒಂದೊಂದು ಗಮ ರುಚಿ, ಗಟ್ಟಿ ಕಾಯಿ ಚಟ್ನಿ ಜೊತೆಗೆ ಬಾಳೆ ಎಲೆಯಲ್ಲಿ ನೀರುಕಡುಬು ಸೇವನೆ ಒಮ್ಮೆ ಸವಿದರೆ ನೀವು ಬಿಡುವುದಿಲ್ಲ.   ದೂರದ ಭಟ್ಕಳದ ನವಾಯಿತರ ಹೆಣ್ಣುಮಗಳು ಮಲೆನಾಡಿನ ನೀರುಕಡುಬಿನ ರೀತಿಯ ಕಡಬು ತಯಾರಿಸುವ ಮಾದರಿ ಸೋಷಿಯಲ್ ಮೀಡಿಯಾದಲ್ಲಿ ನೋಡಿ ಮತ್ತು ...

#ಹಲವಾರಿ ಮಠದ ನೂತನ ಸ್ವಾಮೀಜಿ ಶ್ರೀ ಜಗದೀಶ್ ಜೀ #

# ನಮ್ಮ ಇವತ್ತಿನ ಅತಿಥಿಗಳು ಗೋರಕಪುರದ ಬಾರ ಪಂತ್ ಗೆ (ನಾಥ ಪoತದ) ಸೇರಿದ ಉಡುಪಿ ಜಿಲ್ಲೆಯ ಹಲವಾರಿ ಮಠದ ಶ್ರೀ ಜಗದೀಶ್ ಸ್ವಾಮಿಜಿ#   2017ರಲ್ಲಿ ನಾಸಿಕ್ ನಿ೦ದ ನಡೆದು ಬಂದ 630 ಸನ್ಯಾಸಿಗಳ ಬಾರ ಪಂತ್ ಯಾತ್ರೆ ಉಡುಪಿ ಜಿಲ್ಲೆಯ ಸಿದ್ದಾಪುರ ಸಮೀಪದ ಕಮಲಶಿಲೆ ಹತ್ತಿರದ 5000ಕ್ಕೂ ಹೆಚ್ಚು ವಷ೯ದ ಇತಿಹಾಸ ಪ್ರಸಿದ್ದ ಹಲವಾರಿ ಮಠಕ್ಕೆ ಶ್ರೀ ಜಗದೀಶ್ ಸ್ವಾಮಿಜಿಯವರನ್ನ ಮಠದ ಅಧಿಪತಿ ಆಗಿ ನಿಯಮಿಸಿದ್ದಾರೆ.   ಈ ಮಠದಲ್ಲಿ 34 ವಷ೯ ದೀಘ೯ ಅವದಿಗೆ ಸ್ವಾಮಿಗಳಾಗಿದ್ದ ಶ್ರೀ ಸೋಮನಾಥ ಪೀರ್ ಸ್ವಾಮಿಜಿ ಬಾರ ಪಂತ್ ಬರುವ 2 ವಷ೯ ಮೊದಲೇ ಇಹಲೋಕ ತ್ಯಜಿಸಿದ್ದರು.   ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಆದಿತ್ಯನಾಥರು ಗೋರಕ್ ಪುರದ ಸಂತರು ಇವರಿಗೆ ಮುಖ್ಯಸ್ಥರು.    ಹಿಂದಿನ ಸೋಮನಾಥ ಪೀರ್ ಸ್ವಾಮಿಗಳು ನನ್ನ ಗುರುಗಳು ಇವತ್ತು ಅವರ ಕೃಪಕಟಾಕ್ಷ ನನ್ನ ಮೇಲಿದೆ ಅಂತಹ ಅನೇಕ ಆಗೋಚರ ಅನುಭವ ನನ್ನ ಮೇಲೆ ಆಗುತ್ತಿರುತ್ತದೆ.   ಆದಿಚುಂಚನ ಗಿರಿ ಸ್ವಾಮಿಜಿಗಳ ಆಮಂತ್ರಣದ ಮೇರೆಗೆ ಆದಿಚುಂಚನಗಿರಿಯ ಕಾಲ ಬೈರವೇಶ್ವರ ಸನ್ನಿದಿಗೆ ಹೋಗುವ ಮಾಗ೯ದಲ್ಲಿ ನಮ್ಮ ನೂತನ ಲಾಡ್ಜ್ ಕಚೇರಿಗೆ ಆಗಮಿಸಿದ್ದರು.        ಸೋಮನಾಥ ಪೀರ್ ಸ್ವಾಮಿಗಳು ಇದ್ದಾಗ ಕುಂದಾಪುರದಿಂದ ಬರುವಾಗ  ಒಂದು ರಾತ್ರಿ ನಾನು ಹಲವಾರಿ ಮಠಕ್ಕೆ ಹೋದಾಗ ಇದೇ ಜಗದೀಶ್ ಸ್ವಾಮಿಜಿ (ಆಗ ಪೀಟಾದೀಶರಾಗಿರಲಿಲ್ಲ) ಅಲ್ಲಿಗೆ ಬಂ...

#ಪತ್ರಿಕೋದ್ಯಮದ ದಿಗ್ಗಜ ಶಾಮರಾವ್ ರ ಸಾಗರ ತಾಲ್ಲೂಕಿನ ನಂಟು #

#ಸಂಯುಕ್ತ ಕನಾ೯ಟಕದ ಶಾಮರಾವ್ ರ ಆತ್ಮಚರಿತ್ರೆ ಸಂಜಯ ಉವಾಚದಲ್ಲಿ ಸಾಗರ ತಾಲ್ಲೂಕ್ #  1. ಕೆಳದಿ ಮಠದ ಹೋರಾಟದಲ್ಲಿ. ಶಾಮರಾಯರು.  ಸಂಯುಕ್ತ ಕನಾ೯ಟಕದ ಸಂಪಾದಕರಾದ ಶಾಮರಾಯರೆಂದರೆ ಪತ್ರಿಕೋದ್ಯಮದ ಬೀಷ್ಮರಿದ್ದ೦ತೆ ಅವರು ಪ್ರಾರಂಭದಲ್ಲಿ  ಸಂಜಯ ಎಂಬ ವಾರ ಪತ್ರಿಕೆ ನಡೆಸುತ್ತಿದ್ದರು ಆ ವಾರ ಪತ್ರಿಕೆಗೆ ಸಾಗರ ತಾಲ್ಲೂಕಿನಲ್ಲಿ ಹೆಚ್ಚು ಚಂದಾದರರಿದ್ದರು, ಈ ಪತ್ರಿಕೆ ಸಾಗರ ತಾಲ್ಲೂಕಿನ ಅಡಕೆ ಬೆಳೆಗಾರರು, ಕೆಳದಿ ಮಠ, ಕಾಗೋಡು ಹೋರಾಟದ ಬಗ್ಗೆ ಹೆಚ್ಚು ವರದಿ ಮಾಡಿದ ಖ್ಯಾತಿ ಇದೆ.   ಶಾಮರಾಯರ ಆತ್ಮಚರಿತ್ರೆ ಅವರ ಶಿಷ್ಯ ಖ್ಯಾತ ಪತ್ರಕತ೯ ವಿಶ್ವೇಶ್ವರ ಭಟ್ಟರು ಬರೆದು ಪ್ರಕಟಿಸಿದ್ದಾರೆ ಅದರ ಹೆಸರು "ಸಂಜಯ ಉವಾಚ ''ಆದರಲ್ಲಿ ಸಾಗರ ತಾಲ್ಲೂಕಿನ ಕೆಲ ನೆನಪು ಘಟನೆ ದಾಖಲಿಸಿದ್ದಾರೆ ಅದನ್ನ ಕೆಲ ಬಾಗಗಳಾಗಿ ಇಲ್ಲಿ ಬರೆದಿದ್ದೇನೆ.  ಕೆಳದಿ ರಾಜ ಮಠದ ವ್ಯಾಜ್ಯಗಳು ಸ್ವಾತಂತ್ರ ಪೂವ೯ದಿOದಲೂ ಇದೆ, ಮೊನ್ನೆ ದಸರಾದಲ್ಲಿ ಆ ಮಠದ ಪಚ್ಚೆ ಲಿಂಗ ಲಾಕರ್ ನಿಂದ ತಂದು ಪ್ರದಶ೯ನಕ್ಕೆ ಇಡಲಾಗಿತ್ತು.   ಇದು ಕೆಲ ವ್ಯಾಜ್ಯದಿಂದ ಭಕ್ತರ ದಶ೯ನಕ್ಕೆ ಲಭ್ಯವಿದ್ದಿಲ್ಲ ಹಾಲಿ ಮಠದ ಸ್ವಾಮಿಗಳು ಸಾಗರದ ಶಾಸಕರಾದ ಹಾಲಪ್ಪರಿಗೆ ಮನವಿ ಮಾಡಿದಾಗ ಅವರು ರಾಜ್ಯದ ಮುಖ್ಯಮಂತ್ರಿ ಯಡೂರಪ್ಪರಿಗೆ ವಿನಂತಿಸಿ ಭಕ್ತರ ದಶ೯ನಕ್ಕೆ ಅಪೂವ೯ವಾದ ಕೆಳದಿ ಅರಸರು ನೀಡಿದ ಪಚ್ಚೆ ಲಿಂಗ ಈ ವಷ೯ ಪ್ರದಶ೯ನಕ್ಕೆ ಇಡಲಾಗಿತ್ತು.   ಈ ಮಠದ ...

#ಸಾಗರದ ಆರ್.ಟಿ.ವಿಠಲ್ ಮೂತಿ೯ ರಾಜ್ಯದ ಪ್ರತಿಷ್ಟಿತ ಪತ್ರಕತ೯ರು #

#ಸಾಗರ ತಾಲ್ಲೂಕಿನ ಹೆಸರು ಪತ್ರಿಕೋದ್ಯಮದಲ್ಲಿ ಉತ್ತುಂಗಕ್ಕೆ ಏರಿಸಿದ ಆರ್.ಟಿ. ವಿಠಲ್ ಮೂತಿ೯#    ಆರ್.ಟಿ.ವಿ. ಸಾಗರದವರು ಇವರಣ್ಣ ಸಾಗರದ ಮುನ್ಸಿಪಲ್ ಹೈಸ್ಕೂಲಲ್ಲಿ ನನಗೆ ಕ್ಲಾಸ್ ಮೇಟ್, ಆರ್.ಟಿ.ವಿ.ಜೂನಿಯರ್  ನಮಗೆಲ್ಲರಿಗೂ ಹಾಲಿ ಮOತ್ರಿ ಶ್ರೀನಿವಾಸ ಪೂಜಾರ್ ರ ಈಗಿನ ವಿಶೇಷ ಕತ೯ವ್ಯಧಿಕಾರಿ ಆಗಿರುವ ಕೆ.ದಮ೯ಪ್ಪ ಸಾಹೇಬರು ಆಗ ಗುರುಗಳು, ಆರ್.ಟಿ.ವಿ ರವಿ ಬೆಳೆಗೆರೆ ಜೊತೆ ಸೇರಿ ಹಾಯ್ ಬೆಂಗಳೂರು ವಾರ ಪತ್ರಿಕೆಯಲ್ಲಿ ಬರೆಯಲು ಶುರು ಮಾಡಿದಾಗ ನಮಗೆಲ್ಲ ಅವರು ಸ್ಟಾರ್ ಪತ್ರಕತ೯ರು.    ನಾನು ಹೊಸದಾಗಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ 1995 ರಲ್ಲಿ ಆಯ್ಕೆ ಆದಾಗ ಕಾಗೋಡು ತಿಮ್ಮಪ್ಪರ ಜೊತೆ ಹಳ್ಳಿ ತಿರುಗಾಟದಲ್ಲಿ ಹೋಗುವಾಗ ಹಳ್ಳಿಯ ರೈತರು ಕೃಷಿ ಇಲಾಖೆಯ ಭೂ ಸಂರಕ್ಷಣಾ ಇಲಾಖೆಯ ಬಗ್ಗೆ ದೂರುತ್ತಿದ್ದರು ಆಗ ಕಾಗೋಡು ನನಗೆ ಇದನ್ನೆಲ್ಲ ಪರಿಶೀಲನೆ ಮಾಡಲು ತಿಳಿಸಿದರು, ಹುಮ್ಮಸ್ಸಿನಿಂದ ಪರಿಶೀಲಿಸಿದಾಗ ಸಾಗರ ತಾಲ್ಲೂಕಿನಲ್ಲಿ ಕೋಟ್ಯಾ೦ತರ ರೂಪಾಯಿ ಅಪರಾ ತಪರಾ ಆಗಿದ್ದು ಬಯಲಾಯಿತು.   ತನಿಖೆ ಮಾಡಿದ ನಮ್ಮ ಕೈಕಟ್ಟಿ ಹಾಕುವ ಕೆಲಸ ಪ್ರಾರಂಭ ಆಯಿತು ಆಗ ಸಾಗರದ ಉತ್ಸಾಹಿ ಯುವಕ (ಈಗ ಕೆ.ಪಿ.ಸಿ.ಸಿ. ಸದಸ್ಯ) ತಾಳಗುಪ್ಪದ ಸಲೀo ವೈಕುಂಟ ರಾಜುರವರ ವಾರಪತ್ರಿಕೆಯಲ್ಲಿ ಆಗ ವರದಿಗಾರರಾಗಿದ್ದ ವಿಠಲ ಮೂತಿ೯ಯವರನ್ನ ಕರೆತಂದರು, ಸ್ಥಳ ಪರಿಶೀಲಿಸಿ ನಮ್ಮ ಆರೋಪದ ಸತ್ಯಾಸತ್ಯತೆ ತಿಳಿದ ಆರ್.ಟಿ.ವಿ. ವಾರಪ...