#ದರ್ಬೆ_ಹುಲ್ಲು #ಧಾರ್ಮಿಕ_ಆಚರಣೆಯಲ್ಲಿ_ಬಳಕೆ #ಹಿಂದೂ_ಬೌದ್ದ_ಜೈನ_ಧರ್ಮಿಯರಲ್ಲಿ_ಪವಿತ್ರವೆಂದು_ಪರಿಗಣಿಸಿದ್ದಾರೆ. #ವೇದ_ಕಾಲದಿಂದಲೂ_ಶ್ರೀಕೃಷ್ಣ_ಭಗವದ್ಗೀತೆಯಲ್ಲಿ_ದರ್ಬೆ_ಉಲ್ಲೇಖವಿದೆ. #ದ್ಯಾನಕ್ಕೆ_ಆಸನವಾಗಿ_ಪೂಜಾಕಾರ್ಯಗಳಲ್ಲಿ_ಆಯುರ್ವೇದದಲ್ಲಿಯೂ_ದರ್ಬೆ_ಬಳಕೆ. #Dharbe #Hindu #Buddist #Jainism #Bhagavadgeetha #Religion Yaga #Homa ಪೂಜಾ ಕಾರ್ಯಕ್ರಮಗಳಲ್ಲಿ ಪುರೋಹಿತರು ಬರೆಸುವ ಪೂಜಾ ಸಾಮಾಗ್ರಿ ಪಟ್ಟಿಯಲ್ಲಿ ಹಣ್ಣು-ಕಾಯಿ - ಅರಿಶಿಣ-ಕುಂಕುಮಗಳ ಜೊತೆ ಈ #ದರ್ಬೆ_ಹುಲ್ಲು ಕಡ್ಡಾಯವಾಗಿ ಬರೆದಿರುತ್ತಾರೆ. ದರ್ಬೆಯ ಉಂಗುರವನ್ನು ಸಾಮಾನ್ಯವಾಗಿ ಕುಶದ ಉಂಗುರ ಅಥವಾ ದರ್ಬೆಯ ಉಂಗುರ ಎಂದೇ ಕರೆಯುತ್ತಾರೆ. ಇದು ವಾತಾವರಣದ ದುಷ್ಟ ಶಕ್ತಿಗಳನ್ನು ನಿಯಂತ್ರಿಸುವ ಪವಿತ್ರ ಶಕ್ತಿಯನ್ನು ಹೊಂದಿರುವುದರಿಂದ ಪೂಜೆಗಳು ಮತ್ತು ಯಜ್ಞಗಳಲ್ಲಿ ಬಳಸಲ್ಪಡುತ್ತದೆ. ದರ್ಭೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.... ದರ್ಬೆ ಹುಲ್ಲು, ವೈಜ್ಞಾನಿಕವಾಗಿ ಡೆಸ್ಮೊಸ್ಟ್ಯಾಕಿಯ ಬೈಪಿನೇಟ (Desmostachya bipinnata) ಎಂದು ಕರೆಯಲ್ಪಡುತ್ತದೆ, ಇದು ಭಾರತದಾದ್ಯಂತ ಬೆಳೆಯುವ ಒಂದು ಬಹುವಾರ್ಷಿಕ ಹುಲ್ಲು. ಇದು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಔಷಧೀಯ ಮಹತ್ವವನ್ನು ಹೊಂದಿದೆ. ಹಿಂದೂ, ಬೌದ್ಧ ಮತ್ತು ಜೈನ ಸಂಪ್ರದಾಯಗಳಲ್ಲಿ ಪವಿತ್ರವೆಂದು ...