Blog number 926. ಶಿವಮೊಗ್ಗದ ಮಾಜಿ ವಿದಾನ ಪರಿಷತ್ ಸದಸ್ಯರಾದ ಆರ್.ಪ್ರಸನ್ನ ಕುಮಾರ್ ಮತ್ತು ಇವರ ತಂದೆ ಹಿರಿಯ ಕಾಂಗ್ರೇಸ್ ಮುಖಂಡರಾಗಿದ್ದ ಟಿ.ರಾಮಪ್ಪನವರು ಇಬ್ಬರೂ ಶಿವಮೊಗ್ಗದ ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದ ರಾಜಕಾರಣದ ದಾಖಲೆ.
#ಶಿವಮೊಗ್ಗದ_ಮಾಜಿ_ವಿಧಾನಪರಿಷತ್_ಸದಸ್ಯರಾದ_ಆರ್_ಪ್ರಸನ್ನಕುಮಾರ್ #ತಮ್ಮ_ಪುತ್ರನ_ವಿವಾಹ_ಆಹ್ವಾನಪತ್ರಿಕೆ_ನೀಡಲು_ಬಂದಿದ್ದರು. #ಇವರ_ತಂದೆ_ಟಿ_ರಾಮಪ್ಪನವರು_ಬದರಿನಾರಾಯಣಯ್ಯಂಗಾರರ_ಚುನಾವಣೆಗಳನ್ನು_ಮಾಡಿದವರು #ಶಿವಮೊಗ್ಗ_ಜಿಲ್ಲಾ_ವಿದ್ಯಾರ್ಥಿಕಾಂಗ್ರೇಸ್_ಯುವಕಾಂಗ್ರೇಸ್_ಜಿಲ್ಲಾಕಾಂಗ್ರೇಸ್_ಮುನ್ಸಿಪಲ್_ಕೌನ್ಸಿಲರ್ #ಶಿವಮೊಗ_ಭದ್ರಾವತಿ_ಕಾಪೋ೯ರೇಷನ್_ಕಾಪೋ೯ರೇಟರ್_ವಿದಾನಪರಿಷತ್_ಸದಸ್ಯರೂ_ಆದವರು #ತಂದೆ_ಮಗ_ಇಬ್ಬರೂ_ಶಿವಮೊಗ್ಗ_ಮುನ್ಸಿಪಲ್_ಅಧ್ಯಕ್ಷರಾಗಿದ್ದು_ದಾಖಲೆ ಆರ್. ಪ್ರಸನ್ನಕುಮಾರ್ ಶಿವಮೊಗ್ಗದ ಪ್ರತಿಷ್ಠಿತ ಕುಟುಂಬ ಟಿ.ರಾಮಪ್ಪರವರ ಪುತ್ರ, ಇವರ ಸಹೋದರ ಐಪಿಎಸ್ ಮಾಡಿ ಬೆಂಗಳೂರಲ್ಲಿ ಡಿಐಜಿ ಆಗಿದ್ದಾರೆ. ಕಾಂಗ್ರೇಸ್ ಪಕ್ಷದ ನಿಷ್ಟಾವಂತ ಕುಟುಂಬ ಇವರದ್ದು, ಇವರ ತಂದೆ 1967ಮತ್ತು 1972ರಲ್ಲಿ ಆನಂದಪುರಂನ ಬದರಿನಾರಾಯಣ ಅಯ್ಯಂಗಾರ್ ಅವರನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಆಯ್ಕೆ ಮಾಡುವಲ್ಲಿ ಇವರೆಲ್ಲರ ಸಹಾಯ ಮತ್ತು ಸಹಕಾರ ಇತ್ತು. ಟಿ.ರಾಮಪ್ಪನವರು ಶಿವಮೊಗ್ಗದ ಗೋಪಿ ವೃತ್ತದ ಸಮೀಪದ ಸಹ್ಯಾದ್ರಿ ಪೆಟ್ರೋಲ್ ಬಂಕ್ ಮಾಲಿಕರು, ಟಿಂಬರ್ ಗುತ್ತಿಗೆದಾರರಾಗಿದ್ದರು. ಶಿವಮೊಗ್ಗದ ಮುನ್ಸಿಪಲ್ ಅಧ್ಯಕ್ಷರಾಗಿದ್ದರು, ರಾಜ್ಯದ ಹಿರಿಯ ಕಾಂಗ್ರೇಸ್ ನಾಯಕರಾಗಿದ್ದ ಮಂತ್ರಿಗಳಾಗಿದ್ದ ಬಸಲಿಂಗಪ್ಪರ ಖಾ...