ಭಾಗ - 44, ಆನಂದಪುರಂ ಇತಿಹಾಸ, ಕೆಳದಿ ಅರಸ ವೀರಭದ್ರ ನಾಯಕರಿಂದ 1632 ರಲ್ಲಿ ನಿರ್ಮಾಣಗೊಂಡ ಆನಂದಪುರಂ ಜಾಮೀಯ ಮಸೀದಿ, ಟಿಪ್ಪು ಸುಲ್ತಾನರು ಪ್ರಾರ್ಥನೆ ಮಾಡಿದ ಮಸೀದಿ, ಮೈಸೂರು ಅರಸರು ಭೂದಾನ ನೀಡಿದ ದಾಖಲೆಗಳು ಇರುವ ಆನಂದಪುರಂ ಜಾಮೀಯ ಮಸೀದಿಗೆ 2032 ರಲ್ಲಿ ನಾಲ್ಕುನೂರನೇ ವಾರ್ಷಿಕೋತ್ಸವ.
#ಭಾಗ_44. #ಆನಂದಪುರಂ_ಇತಿಹಾಸ. #ಆನಂದಪುರಂ_ಜಾಮಿಯಾ_ಮಸೀದಿ_2032ಕ್ಕೆ_400_ವರ್ಷ_ಆಗಲಿದೆ. #ಕೆಳದಿ_ಅರಸರು_ನಿರ್ಮಿಸಿ_12_ವರಹ_ಭೂಮಿ_ದಾನವೂ_ನೀಡಿದ್ದರು. #ಟಿಪ್ಪೂಸುಲ್ತಾನರು_ಈ_ಮಸೀದಿಯಲ್ಲಿ_ಪ್ರಾರ್ಥನೆ_ಮಾಡಿದ್ದರು. #ಕೆಳದಿ_ಅರಸರ_ದಾರ್ಮಿಕ_ಸೌಹಾದ೯ತೆಗೆ_ಪ್ರತೀಕ_ಆನಂದಪುರಂ_ಮಸೀದಿ. #ಮೈಸೂರು_ರಾಜರು_1872ರಲ್ಲಿ_ಮಸೀದಿಗೆ_ಬೇಟಿನೀಡಿದ_ಸಂದರ್ಭದಲ್ಲಿ_2ಎಕರೆ7ಗುಂಟೆ_ತರಿಜಮೀನು_ದಾನನೀಡಿದ್ದರು. ಆನಂದಪುರಂ ಇತಿಹಾಸ ಸುತ್ತ ಮುತ್ತಲಿನ ಬೇರಾವುದೇ ಊರಿಗಿಂತ ಹೆಚ್ಚು ಇತಿಹಾಸದ ಪುಟದಲ್ಲಿ ದಾಖಲಾಗಿದೆ, ಹೆಚ್ಚಿನ ಅಧ್ಯಯನ ಮತ್ತು ಸ೦ಶೋದನೆಯಿಂದ ಇನ್ನೂ ಹೆಚ್ಚು ಹೆಚ್ಚು ಮಾಹಿತಿ ದೊರೆಯುವುದು ಖಚಿತ. ಆನಂದಪುರಂ ಜಾಮಿಯಾ ಮಸೀದಿ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಮೊಗ್ಗದಿಂದ ಸಾಗರ ಕಡೆ ಹೋಗುವಾಗ ಎಡ ಭಾಗದಲ್ಲಿ ಬೃಹತ್ ಜೋಡಿ ಮಿನಾರ್ ಗಳಿಂದ ನವೀಕರಣಗೊಂಡು ನಮಾಜು ನಡೆಯುತ್ತಿದೆ ಇದರ ಎದುರಿಗೇ ವಿದ್ಯಾ ಮಂತ್ರಿ ಆಗಿದ್ದ ಸ್ಥಳಿಯ ಕೊಡುಗೈ ದಾನಿ ಜಮೀನ್ದಾರರು, ಆನಂದಪುರಂ ಕನಕಮ್ಮಾಳ್ ಆಸ್ಪತ್ರೆ ನಿರ್ಮಿಸಿದ ದಾನಿ ರಾಮಕೃಷ್ಣ ಅಯ್ಯಂಗಾರ್ ಪುತ್ರ ಬದರಿನಾರಾಯಣ ಅಯ್ಯಂಗಾರ್ ಪ್ರಾಥಮಿಕ ಶಿಕ್ಷಣ ಪಡೆದ ಪ್ರಾಥಮಿಕ ಶಾಲೆ ಇದೆ. ಆನಂದಪುರಂ ಜಾಮಿಯಾ ಮಸೀದಿ ಉಲ್ಲೇಖ ಕೆಳದಿ ಶಾಸನದಲ್ಲಿರುವಂತೆ 1632 ರಲ್ಲಿ ಕೆಳದಿ ರಾಜ ವೀರಭದ್ರನಾಯಕ...