Blog number 951. ಹೊಸನಗರ ತಾಲ್ಲುಕಿನ ಮೂಗುಡ್ತಿಯ ಶ್ಯಾಮರಾವ್ ಮತ್ತು ಆನಂದಪುರಂ ಕೋಮಲ ವಿಲಾಸ್ ರಾಮಕಿಣಿಯವರ ಸಹೋದರಿ ಸುನಂದಾ ದಂಪತಿ ಪುತ್ರ ರಘುನಾಥ ಶೆಣೈ ಆನಂದಪುರಂನಲ್ಲೆ ಪ್ರಾಥಮಿಕ ವಿದ್ಯಾಭ್ಯಾಸ ಕಲಿತು ಬೆಂಗಳೂರಿನ ಬುಲ್ ಟೆಂಪಲ್ ರೋಡಿನ ಸಕ್ಸಸ್ ಆಫ್ ಟೆಂಪಲ್ ಸಂಸ್ಥೆ ಸ್ಥಾಪಿಸಿ ಸಾಯಿದತ್ತ ರಘುನಾಥ ಗುರೂಜಿ ಎಂದು ಪ್ರಸಿದ್ದರಾಗಿ ನಿನ್ನೆ ಇಹಲೋಕ ತ್ಯಜಿಸಿದ್ದಾರೆ.
#ಟೆಂಪಲ್_ಆಫ್_ಸಕ್ಸಸ್_ಸಾಯಿದತ್ತ_ರಘುನಾಥ_ಗುರೂಜಿ_ಇನ್ನು_ನೆನಪು_ಮಾತ್ರ. #ಹೊಸನಗರ_ತಾಲ್ಲೂಕಿನ_ಮೂಗುಡ್ತಿ_ಸ್ಪಂತ_ಊರು #ಪ್ರಾಥಮಿಕ_ಶಿಕ್ಷಣ_ಸಾಗರ_ತಾಲ್ಲೂಕಿನ_ಆನಂದಪುರಂನಲ್ಲಿ #ರಿಪ್ಪನ್ಪೇಟೆಯಲ್ಲಿ_1998ರವರೆಗೆ_ಇವರ_ಶಾಂಭವಿ_ಪೈನಾನ್ಸ್_ಪ್ರಸಿದ್ಧಿ_ಪಡೆದಿತ್ತು #ಇಪ್ಪತ್ಮೂರು_ವರ್ಷದ_ಹಿಂದೆ_ಬೆಂಗಳೂರು_ತಲುಪಿಸಿದ_ನನ್ನ_ನೆನಪು. ನಿನ್ನೆ ಬೆಂಗಳೂರಿನ ಪ್ರಖ್ಯಾತ ಗುರೂಜಿ #ಸಾಯಿದತ್ತ_ರಘುನಾಥ_ಗುರೂಜಿ ನಿನ್ನೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಸೆಪ್ಟೆಂಬರ್ 2 ರಂದು ಮಣಿಪಾಲಿನಲ್ಲಿ ಅವರ ತಾಯಿಯ ಸಮಾದಿಯ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಭಕ್ತ ಸಮುದಾಯ ಘೋಷಿಸಿದೆ. ಆನಂದಪುರಂನಲ್ಲಿ 1960ರಿಂದ 1978ರ ತನಕ ಪ್ರಸಿದ್ದವಾಗಿದ್ದ #ಕೋಮಲ_ವಿಲಾಸ್ ಉಪಹಾರ ಗೃಹದ ಮಾಲಿಕರಾಗಿದ್ದ #ರಾಮಕಿಣಿಯವರ ಸಹೋದರಿ ಸುನಂದ ಮತ್ತು ಹೊಸನಗರ ತಾಲೂಕಿನ ಮೂಗುಡ್ತಿಯ ಶ್ಯಾಮರಾಯ ದಂಪತಿಗಳ ಮೊದಲ ಪುತ್ರ ರಘುನಾಥ ಶೆಣೈ ಇವರ ಇನ್ನೊಬ್ಬ ಪುತ್ರ ರಮಾನಾಥ ಶಾನುಬೋಗ್ ಉದಯವಾಣಿ ಗ್ರೂಪ್ ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಮಣಿಪಾಲಿನಲ್ಲಿ ನೆಲೆಸಿದ್ದಾರೆ. ರಘುನಾಥ ಶೆಣೈ ತಮ್ಮ ಹೆಚ್ಚಿನ ಬಾಲ್ಯ ಮತ್ತು ವಿದ್ಯಾಭ್ಯಾಸ ಆನಂದಪುರಂನ ಅವರ ಸೋದರ ಮಾವ ರಾಮಕಿಣಿ ಅವರ ಮನೆಯಲ್ಲೇ ಉಳಿದು ಆನಂದಪುರಂನ ಸಕಾ೯ರಿ ಶಾ...