Skip to main content

Posts

Showing posts from December, 2025

3557. ಶಿಕಾರಿಪುರ ಗೋಣಿ ಮಾಲತೇಶ್

#ಶಿಕಾರಿಪುರದ_ಗೋಣಿ_ಮಾಲ್ತೇಶ್ #ಕೆ_ಪಿ_ಸಿ_ಸಿ_ಸದಸ್ಯರು #ಯಡ್ಯೂರಪ್ಪ_ಮತ್ತು_ಅವರ_ಪುತ್ರ_ವಿಜೇಂದ್ರರ_ವಿರುದ್ದ_ಕಾಂಗ್ರೇಸ್_ಅಭ್ಯರ್ಥಿ_ಆಗಿದ್ದವರು #ಶಿಕಾರಿಪುರದಲ್ಲಿ_ಯಡೂರಪ್ಪ_ಪ್ರಭಾವವ_ಪ್ರವಾಹದ_ವಿರುದ್ಧ_ಇವರ_ಹೋರಾಟ. #ಹಿಂದುಳಿದ_ವರ್ಗದ_ಜನನಾಯಕರ_ಹೋರಾಟದ_ಸರಣಿ_ಸಂದರ್ಶನದ_ಸರಣಿ. #Shikaripura #Gonimalthesh    #karnatakapradeshcongress  #Yadyurappa #Vijendrayadyurappa #Congress #BJP #siddaramiaha #DKShivakumar #Bangarappa.    ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಶಿಕಾರಿಪುರದ ರಾಜಕಾರಣವೇ ಬೇರೆ ರೀತಿಯದ್ದು.    ಇಲ್ಲಿಯೇ ರಾಜ್ಯದ ಪ್ರಬಲ RSS ಜನಸಂಘಗಳು ಹುಟ್ಟಿದ್ದು ಇದರಿಂದ ಶಿಕಾರಿಪುರಕ್ಕೆ ಕರ್ನಾಟಕ ರಾಜ್ಯದ ನಾಗಪುರ ಎಂಬ ಹೆಸರು ಬಂದಿದೆ.    1983ರಲ್ಲಿ ಮೊದಲ ಬಾರಿಗೆ ಯಡೂರಪ್ಪನವರು ವಿಧಾನ ಸಭೆಗೆ ಆಯ್ಕೆ ಆಗುತ್ತಾರೆ ಅದೇ ಸಂದರ್ಭದಲ್ಲಿ ಯುವಕ ಗೋಣಿ ಮಾಲ್ತೇಶ್ ಪುರಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪ್ರಚಾರದಿಂದ ರಾಜಕಾರಣಕ್ಕೆ ಪ್ರವೇಶ ಮಾಡುತ್ತಾರೆ.   ಆ ವರ್ಷ ಯಡ್ಯೂರಪ್ಪರ ಪತ್ನಿ ಶ್ರೀ ಮತಿ #ಮೈತ್ರಾದೇವಿ ಕಾಂಗ್ರೇಸ್ ನ ನಾಗರತ್ನಮ್ಮ ಎನ್ನುವವರ ಎದುರು ಪುರಸಭಾ ಚುನಾವಣೆಯಲ್ಲಿ ಸೋಲುತ್ತಾರೆ.    ಕಳೆದ 42 ವರ್ಷದಿಂದ ಶಿಕಾರಿಪುರದಲ್ಲಿ ಯಡ್ಯೂರಪ್ಪರಂತ ಬಲಾಡ್ಯ ಚಾಣಾಕ್ಷ ರಾಜಕಾರಣಿ ವಿರುದ್ದ ಇವರು ...

3556. ಕುಮ್ಕಿ ಆನೆಗಳು

#ಕುಮ್ಕಿ_ಆನೆ_ಎಂದರೆ_ಏನು? #ಕುಮ್ಕಿ_ಆನೆಗಳು_ಹೆಣ್ಣಾನೆಗಳೆ_ಹೆಚ್ಚು_ಯಾಕೆ? #ಸೊರಬದಲ್ಲಿ_ಎರೆಡು_ಕಾಡಾನೆಗಳನ್ನ_ಭದ್ರಾ_ಅಭಯಾರಣ್ಯಕ್ಕೆ_ಕಳಿಸಲು #ನಾಲ್ಕು_ಕುಮ್ಕಿ_ಆನೆಗಳು_ಬಂದಿದೆ. #ಎರಡನೆ_ದಿನದ_ಕಾರ್ಯಾಚರಣೆ_ಮುಗಿದಿದೆ. #ಕಾಡಾನೆಗಳು_ಬರಗಿ_ಕಾಡಿನಿಂದ_ಹೊರಬರುತ್ತಿಲ್ಲ #Kumki #Elephant #corridor #soraba #baragi #wildlife #karnatakaforest     ದಿನಾಂಕ 8- ಡಿಸೆಂಬರ್- 2025ರ ಸಂಜೆ ಸೊರಬ ತಾಲೂಕಿಗೆ ಸಕ್ರೆಬಯಲು ಆನೆ ಕ್ಯಾಂಪಿನಿಂದ ನಾಲ್ಕು ಕುಮ್ಕಿ ಆನೆಗಳನ್ನ ಕರೆತರಲಾಗಿತ್ತು.    ನಿನ್ನೆ ಮತ್ತು ಇವತ್ತು ಅಂದರೆ 9-ಡಿಸೆಂಬರ್- 2025 ಮಂಗಳವಾರ ಮತ್ತು 10-ಡಿಸೆಂಬರ್- 2025 ಬುಧವಾರ ಎರೆಡು ದಿನ ಸೊರಬ ತಾಲೂಕಿನ #ಬರಗಿ ಅರಣ್ಯದಲ್ಲಿರು ಎರೆಡು ಕಾಡಾನೆಗಳನ್ನ ಅವುಗಳು ಬಂದ ದಾರಿಯಲ್ಲೇ ವಾಪಾಸು ಭದ್ರಾ ಅಭಯಾರಣ್ಯಕ್ಕೆ ಕಳಿಸಲು ಪ್ರಯತ್ನಿಸುತ್ತಿದೆ..    ಆದರೆ ಈ ಎರೆಡು ಕಾಡಾನೆಗಳು ಬರಗಿ ಕಾಡಿನಿಂದ ಹೊರಬರುತ್ತಿಲ್ಲ ಮತ್ತು ಥರ್ಮಲ್ ಡ್ರೋನ್ ಕ್ಯಾಮೆರಾಗೆ ಮೊದಲ ದಿನ ದಾಖಲಾದ ಈ ಕಾಡಾನೆಗಳು, ಎರಡನೆ ದಿನ ದಾಖಲಾಗಿಲ್ಲ ಎಂಬ ಸುದ್ದಿ ಇದೆ.   ಈ ಸಕ್ರೆ ಬಯಲಿನಿಂದ ಕರೆ ತಂದಿರುವ ತರಬೇತಿ ಪಡೆದ ನಾಲ್ಕು ಸಾಕಾನೆಗಳಿಗೆ ಕುಮ್ಕಿ ಆನೆ ಅಂತ ಏಕೆ ಕರೆಯುತ್ತಾರೆ? ಎಂಬ ಕುತೂಹಲ ಎಲ್ಲರಿಗೂ ಇದೆ.     ಕುಮ್ಕಿ ಆನೆಗಳು ಎಂದರೆ ಕಾಡಾನೆಗಳನ್ನು ಹಿಡಿಯಲು, ನಿ...

3555. ಬದಲಾದ ಕೋಳಿ ಸಾಕಾಣಿಕೆ

#ಒಂದು_ಕಾಲದ_ನಮ್ಮ_ಹಳ್ಳಿಗಳ_ಕೋಳಿ_ಗೂಡಿನ_ಕೋಳಿಗಳು #ಈಗ_ಲಕ್ಷಾಂತರ_ಕೋಟಿ_ವಹಿವಾಟಿನ_ಬೃಹತ್_ಉದ್ಯಮ #ಸಂಪ್ರದಾಯಿಕ_ಗೃಹಬಳಕೆಯ_ಕೋಳಿ_ಸಾಕಾಣಿಕೆ. #ಒಂದು_ಕಾಲದಲ್ಲಿ_ಕುಟುಂಬದ_ಆರ್ಥಿಕ_ಬದ್ರತೆಗೆ_ಉರುಗೋಲಾಗಿತ್ತು. #ಕುಟುಂಬದ_ಆರ್ಥಿಕ_ಸಬಲತೆಗೆ_ಆಹಾರ_ಸ್ವಾವಲಂಬನೆಗೆ_ಕಾರಣವಾಗಿತ್ತು. #ಅದುನಿಕ_ಡೈರಿ_ಪೌಲ್ಟ್ರಿ_ಕೈಗಾರಿಕೆಗಳಾದ್ದರಿಂದ_ಗೃಹ_ಕೋಳಿ_ಸಾಕಾಣಿಕೆ_ನಶಿಸಿದೆ. #ಸಮ_ಪಾಲಿನ_ಕೋಳಿ_ಹಾವಿನ_ವಿಷ_ನಿವಾರಣೆಯ_ಕಪ್ಪು_ಕೋಳಿ #ಮಂತ್ರವಾದಿಗಳು_ಕೇಳುವ_ಕೆಂಪು_ಕೋಳಿ_ಹಳ್ಳಿಯ_ದೈವಕ್ಕೆ_ಹರಕೆಯ_ನಾಟಿ_ಕೋಳಿ. #Foultry #chicken #Magician #snakebite #naatichicken   ಆಗೆಲ್ಲ ಹಳ್ಳಿಯ ದೈವ ಬೂತಗಳು ಪಾರಂ ಕೋಳಿ ಬಲಿ ಒಪ್ಪಿಕೊಂಡಿರದ ಕಾಲ.    ಆಗೆಲ್ಲ ಅಂದರೆ ಬಹಳ ದಿನ ಆಗಿಲ್ಲ, ಕೇವಲ 30 ವರ್ಷದ ಹಿಂದೆ ಈ ಪಾಟಿ ಕೋಳಿ ಮಾಂಸದ ಪೋಲ್ಟ್ರಿ ಉದ್ಯಮ ಬೆಳೆದಿರಲಿಲ್ಲ.    ಹಳ್ಳಿಗಳ ದೈವಗಳು ಬೂತಗಳು ಪಾರಂ ಕೋಳಿ ಬಲಿ ಒಪ್ಪಿಕೊಂಡಿರದ ಆ ಕಾಲದಲ್ಲಿ ಹಳ್ಳಿಯ (ಮೇಲ್ಜಾತಿ ಹೊರತುಪಡಿಸಿ) ಪ್ರತಿ ಮನೆಯಲ್ಲೂ ಕೋಳಿ ಗೂಡು ಇರುತ್ತಿತ್ತು.    ಅದರಲ್ಲಿ ಕನಿಷ್ಟ ಹತ್ತಿಪ್ಪತ್ತು ಕೋಳಿಗಳು ಇರುತ್ತಿದ್ದವು.   ಮನೆಯ ಅತ್ಯಂತ ಕಿರಿಯ ವಯಸ್ಸಿನ ಸದಸ್ಯನಿಗೆ ಬೆಳಿಗ್ಗೆ ಕೋಳಿ ಗೂಡಿನ ಬಾಗಿಲು ತೆಗದು ಕೋಳಿ ಹೊರಬಿಡುವುದು ಅವು ಸೂರ್ಯ ಮುಳುಗುವ ಸಮಯದಲ್ಲಿ ಹೊಟ್ಟೆ ತುಂಬಿಸಿಕೊಂಡು ಗೂಡಿಗೆ ಮರಳು...

3554. ದಕ್ಷಿಣದಿಂದ ಉತ್ತರಕ್ಕೆ ಆನೆ ಸಂಚಾರ

#ಆನೆ_ಕಾರಿಡಾರ್ #ದಕ್ಷಿಣದಿಂದ_ಉತ್ತರಕ್ಕೆ_ಕಾಡಾನೆ_ಸಂಚಾರ_ಏಕೆ? #ಈ_ಕಾಡಾನೆಗಳ_ಉತ್ತರ_ಪ್ರಯಣ_ಬಹಳ_ಮುಖ್ಯ_ಎನ್ನುತ್ತಾರೆ #ಆನೆಗಳ_ತಜ್ಞರಾದ_ಅಶ್ವಿನ್_ಭಟ್ #Elephantcorridor #Bhadrawildlife #Kaliwildlife #westernghats     ಇವರು ಅಶ್ವಿನ್ ಭಟ್ ಹಾಸನದ ನೇಚರ್ ಕನ್ಸರ್ವೇಷನ್ ಪೌಂಡೇಶನ್ ನಲ್ಲಿ ಕಾಡಾನೆಗಳ ಬಗ್ಗೆ ಕೆಲಸ ಮಾಡಿದ್ದಾರೆ.     ಈಗ ಪ್ರಾಜೆಕ್ಟ್ ಅಸಿಸ್ಟೆಂಟ್ ಆಗಿ Environmental Management and Policy Research Institute ಸಂಶೋಧನಾ ಕೆಲಸದಲ್ಲಿದ್ದಾರೆ.   ದಕ್ಷಿಣದಿಂದ ಉತ್ತರಕ್ಕೆ ಕಾಡಾನೆಗಳ ಸಂಚಾರದಲ್ಲಿ ಕಳೆದ ಮೂರು ವರ್ಷದಿಂದ ನಮ್ಮೂರಿನ ಮೂಲಕ ಸಂಚರಿಸುವ ಕಾಡಾನೆ ಬಗ್ಗೆ ನಾನು ಬರೆಯುತ್ತಿರುವ ಪೇಸ್ ಬುಕ್ ಲೇಖನಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.   ಇಂತಹ ಉಪಯುಕ್ತ ಮಾಹಿತಿ ಆನೆ ಕಾರಿಡಾರ್ ಪ್ರವೇಶದಲ್ಲಿ ವಾಸಿಸುವವರಿಗೆ ಮತ್ತು ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉಪಯುಕ್ತ ಮಾಹಿತಿ ಆಗಿದೆ ಒಮ್ಮೆ ಈ ಕೆಳಗಿನ ಲೇಖನ ಓದಿ. #ಅಶ್ವಿನ್_ಭಟ್_ಅವರ_ಪ್ರತಿಕ್ರಿಯೆ.....   ಅವು ಬೇರೆ ಹಿಂಡು ಸೇರಲೆಂದೇ ದೂರದಿಂದ ಕ್ರಮಿಸಿ ಬಂದಿರುವ ಸಾಧ್ಯತೆ ಹೆಚ್ಚಿದೆ.    ಉತ್ತರ ಕನ್ನಡದಲ್ಲಿರುವ ಸಣ್ಣ ಆನೆ ಗುಂಪು ದಕ್ಷಿಣದ ಬೇರೆ ಸಮೂಹಗಳಿಂದ ದಶಕಗಳಿಂದ ಸರಿಯಾದ ಸಂಪರ್ಕವಿಲ್ಲದೆ ಸೊರಗುತ್ತಿದೆ.     ಅವುಗಳ ಸಂಖ್ಯೆ ಹಾಗೂ genetic ...

3553. ದೂಗೂರು ಕಾಡಿನಿಂದ ಹೊರಬರದ ಕಾಡಾನೆಗಳು

#ಸೊರಬ_ತಾಲ್ಲೂಕಿನ_ದೂಗೂರು_ಕಾಡಿನಿಂದ #ಹೊರಬರದ_ಎರೆಡು_ಕಾಡಾನೆಗಳು #ಮೂರು_ದಿನದಿಂದ_ಸಕ್ರೆಬೈಲಿನ_ನಾಲ್ಕು_ಕುಮ್ಕಿ_ಆನೆಗಳು #ಅನೇಕ_ಅನುಭವಿ_ಮಾವುತರು #ನೂರಾರು_ಅರಣ್ಯ_ಇಲಾಖೆ_ಸಿಬ್ಬಂದಿ_ಶ್ರಮಿಸುತ್ತಿದ್ದಾರೆ #wildelephant #elephantcorridor #soraba #duguru #ulavi #barigi #kyasahuru.    ಭದ್ರಾ ಅಭಯಾರಣ್ಯದ ಕಾಡಾನೆಗಳು ಮಲೆನಾಡಿನಲ್ಲಿ ತಮ್ಮ ಆಹಾರ ಮತ್ತು ಸಂತಾನೋತ್ಪತ್ತಿಗಾಗಿ ಹೊಸ ಕಾರಿಡಾರ್ ವಿಸ್ತರಿಸಿಕೊಂಡು ಮೂರು ವರ್ಷ ಆಗಿದೆ.   ಅವುಗಳು ಸೊರಬ ತಾಲ್ಲೂಕಿನ ಮೂಲಕ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಭಾಗದ ಕಾಳಿ ಅಭಯಾರಣ್ಯದ ಆನೆಗಳ ಸಂಪರ್ಕಿಸಲು ಪ್ರಯತ್ನದಲ್ಲಿದೆ.      ಅವುಗಳನ್ನ ಓಡಿಸುವ ಪ್ರಯತ್ನ ಮಾಡದೆ ಅವುಗಳಷ್ಟಕ್ಕೇ ಬಿಟ್ಟಿದ್ದರೆ ಇನ್ನೂ ಕೆಲವು ಕಿಲೋ ಮೀಟರ್ ಮುಂದೆ ಸಾಗಿ ಈ ವರ್ಷವೇ ದಾಂಡೇಲಿ ಅಭಯಾರಣ್ಯ ಸೇರುತ್ತಿತ್ತು ಅಥವ ಅಲ್ಲಿಗೆ ಸೇರಿ ಕೆಲ ದಿನದ ನಂತರ ವಾಪಾಸು ಬರುವ ಸಾಧ್ಯತೆ ಇತ್ತು ಅಥವ ಉಳುವಿ ಕಾಡಿನಿಂದಲೇ ವಾಪಾಸು ಬಂದ ದಾರಿಯಲ್ಲೇ ವಾಪಾಸಾಗಿ ಮುಂದಿನ ವರ್ಷ ಇದೇ ತಿಂಗಳಲ್ಲಿ ಪುನಃ ದಾಂಡೇಲಿ ಅಭಯಾರಣ್ಯಕ್ಕೆ ಹೋಗುವು ಪ್ರಯತ್ನ ಮಾಡುತ್ತಿತ್ತು ಎಂದು ಆನೆಗಳ ತಜ್ಞರು ಮತ್ತು ಅರಣ್ಯ ಇಲಾಖೆಯ ಹೆಸರು ಹೇಳಿಕೊಳ್ಳದ ಕೆಲವು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.    ಇವತ್ತು ಬೆಳಿಗ್ಗೆ  ಥಮ೯ಲ್ ಡ್ರೋನ್ ಕ್ಯಾಮೆರಾದಲ್ಲಿ ದೂಗೂರು ಅರಣ್...

3552. ಖ್ಯಾತ ಇತಿಹಾಸ ಬ್ಲಾಗರ್ ಆನಂದಪುರಂ ಬೇಟಿ

#ನಮ್ಮೂರು_ಆನಂದಪುರಂ_ಬ್ರಿಟೀಷರು_ಕಂಡಂತೆ. #ಸುಬಾಷ್_ಚಂದ್ರ_ಬೋಸ್_ಸೈನ್ಯದ_ಪ್ರಮುಖ_ಐಎನ್‌ಎ_ರಾಮರಾವ್_ಆನಂದಪುರಂಗೆ_ಬಂದಾಗ. #ಈ_ಐತಿಹಾಸಿಕ_ಕಾಯ೯ಕ್ರಮದಲ್ಲಿ_ವಾಚನೆ_ಮಾಡಿದ_ಸೆಕ್ಷನ್_V_ಮೈಸೂರು_ಗೆಜೆಟೆಯರ್. #ಆನಂದಪುರಂನಲ್ಲಿ_ನಡೆದ_ಘೋರ_ಹತ್ಯಾಕಾಂಡಕ್ಕೆ_ಬ್ರಿಟೀಷ್_ಸ್ಯೆನ್ಯಾದಿಕಾರಿ_ಜನರಲ್_ಮ್ಯಾಥ್ಯೂ_ಕಾರಣ. #ಇವರನ್ನು_ಸದೆಬಡಿದು_ಶ್ರೀರಂಗಪಟ್ಟಣದಲ್ಲಿ_ಕಾಲಪಾನಿ_ಶಿಕ್ಷೆ_ನೀಡಿದ್ದು_ಟಿಪ್ಪೂಸುಲ್ತಾನ್ #ನಾನೂರಕ್ಕೂ_ಹೆಚ್ಚು_ಸ್ತ್ರಿಯರು_ಬ್ರಿಟೀಷ್_ಸೈನಿಕರ_ಬಂದೂಕಿನಿಂದ_ತಿವಿಯಲ್ಪಟ್ಟು_ಜೀವತ್ಯಾಗ. #ಟಿಪ್ಪೂ_ಸುಲ್ತಾನರ_ಅನೇಕ_ಸೈನಿಕರು_ಜೀವತ್ಯಾಗವಾಗುತ್ತದೆ_ಅವರೆಲ್ಲರ_ಸಮಾದಿ_ಯಡೇಹಳ್ಳಿ_ಖಬರಸ್ಥಾನದಲ್ಲಿದೆ. #ಮೈಸೂರಿನ_ಕಥೆಗಳು #ಇದು_ಪ್ರಸಕ್ತ_ನಾಡಿನ_ಪ್ರಖ್ಯಾತ_ಚಾನಲ್ #ಇದು_ಮೈಸೂರಿನ_ಇಂಜಿನಿಯರ್_ಧರ್ಮೇಂದ್ರಕುಮಾರ್_ಅರೇನಳ್ಳಿ_ಅವರದ್ದು #ಅವರು_ಆನಂದಪುರಂ_ಬಗ್ಗೆ_ಮಾಡಿದ_ಟಿಪ್ಪು_ಸುಲ್ತಾನ್_ವಿಡಿಯೊ_ವೈರಲ್_ಆಗಿದೆ #Mysorinakathegalu #Dharmendrakumararenalli #Anandapuram #Tippusulthan #INA #Ramarao      ಮೈಸೂರಿನ ಕಥೆಗಳು ಎನ್ನುವ ಪ್ರಖ್ಯಾತ Youtuber ದರ್ಮೇಂದ್ರ ಕುಮಾರ್ ಅರೆಹಳ್ಳಿ ಕಳೆದ ವಾರ  ಸಾಗರ - ಅನಂದಪುರಂ -ರಿಪ್ಪನ್ ಪೇಟೆ - ಸಕ್ರೆಬೈಲ್ -ಶಿವಮೊಗ್ಗ ಒಟ್ಟು 122 ಕಿಮೀ ಸೈಕ್ಲಿಂಗ್ ಮಾಡಿ Vlog ಮಾಡಿದ್ದಾರೆ.    ಅದರಲ್ಲಿ ಅವರ ಆನಂದಪುರಂ ಬೇಟಿಯ ವಿಡ...

3551. ಸೊರಬ ತಾಲೂಕು ಪ್ರವೇಶ ಮಾಡಿದ ಕಾರಿಡಾರ್ ಆನೆ

#ಮಲೆನಾಡಿನ_ಆನೆ_ಕಾರಿಡಾರ್ #ಸೊರಬ_ತಾಲ್ಲೂಕಿನ_ಉಳುವಿ_ಕಾಡಿನಿಂದ #ಸಾಗರ_ತಾಲ್ಲೂಕಿನ_ಅಂಬ್ಲಿಗೋಳ_ರೇಂಜಿಗೆ #ಅರಣ್ಯ_ಇಲಾಖೆ_ಎರಡು_ಕಾಡಾನೆ_ಓಡಿಸಲಾಗಿದೆ #ಒಂದೇ_ರಾತ್ರಿ_40_ಕಿಮಿ_ಓಡಿಸಿದ್ದಾರೆ #ನಾಲ್ಕು_ಕುಮ್ಕಿ_ಆನೆ_ಸಿಬ್ಬಂದಿಗಳು_ಪಟಾಕಿ_ಬಳಿಸಿ_ಓಡಿಸಲಾಗಿದೆ #wildlifeconservation #elephants #corridor #soraba #ulavi #Ambligola    ಆನಂದಪುರಂ ಆನೆ ಕಾರಿಡಾರ್ ಗೆ ಮೂರು ವರ್ಷದಿಂದ ಭದ್ರಾ ಅಭಯಾರಣ್ಯದಿಂದ ಕೆಲವು ತಂಡಗಳಲ್ಲಿ ಕಾಡಾನೆಗಳು ಈ ಪ್ರದೇಶದಲ್ಲಿ ಸಂಚರಿಸುತ್ತಿದೆ.   ಪ್ರತಿ ವರ್ಷ ಹತ್ತಿಪ್ಪತ್ತು ಕಿಲೋ ಮೀಟರ್ ವಿಸ್ತರಿಸುತ್ತಾ ಉತ್ತರದ ಕಡೆ ಸಾಗಿ ವಾಪಾಸಾಗುತ್ತಿದೆ.   ಕಳೆದ ವರ್ಷ ಲಾವಿಗೆರೆಗೆ ತಲುಪಿದ್ದ ಈ ಕಾಡಾನೆ ತಂಡದಲ್ಲಿ ಈ ವರ್ಷದ ಮೊದಲ ತಂಡ ಸೊರಬ ತಾಲೂಕಿನ ಉಳುವಿ ತನಕ ತಲುಪಿತ್ತು.   ಅಲ್ಲಿಂದ ಅರಣ್ಯ ಇಲಾಖೆ ಸತತ ನಾಲ್ಕು ದಿನಗಳಿಂದ ನಾಲ್ಕು ಕುಮ್ಕಿ ಆನೆ, ಮಾವುತರು ಮತ್ತು ಸಿಬ್ಬಂದಿಗಳ ಪ್ರಯತ್ನದಿಂದ ನಿನ್ನೆ ಒಂದೇ ರಾತ್ರಿ 40 ಕಿಲೋ ಮೀಟರ್ ಗಳಷ್ಟು ದೂರ ಓಡಿಸಿದ್ದಾರೆ.    ಸೊರಬ ತಾಲ್ಲೂಕಿನ ರೇಂಜ್ ಫಾರೆಸ್ಟ್ ಗಡಿ ದಾಟಿಸಿ ಸಾಗರ ತಾಲೂಕಿನ ಅಂಬ್ಲಿಗೋಳ ರೇಂಜ್ ಫಾರೆಸ್ಟ್ ತಲುಪಿರುವ ಈ ಕಾಡಾನೆಗಳು ಇಲ್ಲಿಂದ ಎಲ್ಲಿಗೆ ಹೋಗುತ್ತದೆ ಕಾದು ನೋಡ ಬೇಕು.    ಈ ಕಾರಿಡಾರ್ ಗೆ ಬರುವ ಪ್ರಯತ್ನದಲ್ಲಿ ಎರಡನೆ ತಂಡ ಪ್ರಯತ್ನಿಸುತ್ತಿರುವ ಸು...

3550. ಆನೆ ಕಾರಿಡಾರ್ ಬಗ್ಗೆ ಶೃಂಗೇರಿ ಶ್ರೀನಿವಾಸ ಮೂರ್ತಿ ಲೇಖನ

#ಗೆಳೆಯ_ಶೃಂಗೇರಿ_ಶ್ರೀನಿವಾಸಮೂರ್ತಿ_ಈಗಿಲ್ಲ. #ಕೆಲತಿಂಗಳ_ಹಿಂದೆ_ಇಹಲೋಕ_ತ್ಯಜಿಸಿದರು #ಅವರು_ಬರೆದ_ಆನೆಗಳ_ವಿಶೇಷ_ಲೇಖನ_ಓದಿ. #ಎರೆಡು_ವರ್ಷದ_ಹಿಂದೆ_ಅವರು_ಬರೆದ_ಲೇಖನ_ಇದು #ಕಾಡಾನೆ_ಸಂಚಾರದ_ಪ್ರದೇಶದ_ಜನರಿಗೆ_ವಿದ್ಯಾರ್ಥಿಗಳಿಗೆ_ಉಪಯಕ್ತ_ಮಾಹಿತಿ  #ಇದನ್ನು_ಓದಿ_ಹೆಚ್ಚು_ಜನರಿಗೆ_ತಲುಪಿಸಿ.  #elephant #wildlifeconservation #elephantsanctuary #corridor #malenadu #westernghatsofindia #sagar #Anandapuram #ripponpet #shikaripura #Shivamogga #ambligola #byrapura #chanfalkere #gilalgundi  #alavalli #arasalu     ನಮ್ಮ ಆನಂದಪುರಂ ಆನೆಗಳ ಕಾರಿಡಾರ್ ಆಗಿ ಹೊಸದಾಗಿ ದಾಖಲಾದ ಸಂದರ್ಭದಲ್ಲಿ ದಿನಾಂಕ 12 - ಡಿಸೆಂಬರ್ -2023 ರಲ್ಲಿ ಅವರು ಈ ಲೇಖನ ಬರೆದಿದ್ದರು.    #ಶೃಂಗೇರಿ_ಶ್ರೀನಿವಾಸಮೂರ್ತಿ ಶ್ರಮಜೀವಿ,ವಿದ್ಯಾವಂತ, ವಿಚಾರವಾದಿ ಮತ್ತು ಅವರ ಅಪಾರ ಓದು,ಅವರ ಜೀವನ ಶೈಲಿ ನನಗೆ ಅತ್ಯಂತ ಇಷ್ಟವಾಗಿತ್ತು.   ಅವರು ನಮ್ಮ ಊರಿನ ಆನೆಗಳ ಸಂಚಾರದ ಸಮಯದಲ್ಲಿ ಬರೆದ ಈ ಲೇಖನ ನಮಗೆಲ್ಲ ಆನೆ ಬಗ್ಗೆ ತಿಳಿದುಕೊಳ್ಳಲು ಉಪಯುಕ್ತವಾಗಿದೆ.    ಈ ಕೆಳಗಿನ ಶೃಂಗೇರಿ ಶ್ರೀನಿವಾಸ ಮೂರ್ತಿ ಬರೆದ ಲೇಖನ ಓದಿ. #ಆನೆಗಳು #ಕಾರಿಡಾರ್ ಆನೆಗಳನ್ನು ಮಲೆನಾಡು - ಪಶ್ಚಿಮ ಘಟ್ಟಗಳತ್ತ ನಿಧಾನವಾಗಿ ಹಾಗೂ ಶಾಶ್ವತವಾಗಿ ನೂಕಿ, ಅವುಗಳ...

3549. ಕ್ಯಾಸನೂರು ಡಿಸೀಸ್

#ಆನಂದಪುರಂ_ಸುತ್ತ_ಮುತ್ತ_ಮಂಗಗಳ_ಸಾವು #ಮಂಗನ_ಕಾಯಿಲೆ_ಮುನ್ಸೂಚನೆಯಾ?! #ಸಾಗರ_ತಾಲ್ಲೂಕಿನ_ಹೆಚ್ಚು_ಸ್ಥಳದಲ್ಲಿ_ಮಂಗಗಳ_ಸಾವು #ಹೊಸನಗರ_ತಾಲ್ಲೂಕಿನಲ್ಲಿ_ಕೆಲವರಿಗೆ_ಮಂಗನಕಾಯಿಲೆ_ದೃಡ #ಈ_ಪ್ರದೇಶಗಳ_ಜನ_ಮುಂಜಾಗೃತೆ_ವಹಿಸ_ಬೇಕು #kyasanurudesease #Manganakayile #sagarataluk #Hosanagarataluk #Kfd #healthminister #Govtofkarnataka #chiefministerkarnataka #dineshgundurao #DCShivamogga #DHO.    ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹೊಸನಗರ ಜಿಲ್ಲೆಯಲ್ಲಿ ಮಂಗನ ಕಾಯಿಲೆ (Kyasanuru forest deseas) ಅಲಾರಾಂ ಬಾರಿಸುತ್ತಿದೆ.    ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ಮಾವಿನಸರದಲ್ಲಿ ಎರಡು, ಆವಿನಹಳ್ಳಿ ವ್ಯಾಪ್ತಿಯಲ್ಲಿ ಐದು, ಎಡಜಗಳೆಮನೆ, ಆಡೂರು, ಸುಳುಗೋಡು ಗ್ರಾಮದಲ್ಲಿ ತಲಾ ಒಂದೊಂದು ಮಂಗಗಳು ಸಾವನ್ನಪ್ಪಿರುವುದಾಗಿ ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ.   ಈಗಾಗಲೇ ಹೊಸನಗರ ತಾಲೂಕಿನ ಬಿಳ್ಳೋಡಿಯಲ್ಲಿ ಏಳು ಜನರಿಗೆ ಮಂಗನ ಕಾಯಿಲೆ ಪರೀಕ್ಷೆಯಲ್ಲಿ ದೃಡ ಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.   ಕೆಲ ದಿನಗಳ ಹಿಂದೆ ಸಾಗರ ತಾಲೂಕಿನ ತಲವಾಟ ಗ್ರಾಮ ಪಂಚಾಯಿತಿ ಸಮೀಪದ ಮಂಜಿನ ಕಾನು ಗ್ರಾಮದ ಅಂಗನವಾಡಿ ಹಿಂಬಾಗ ಐದು ಮಂಗಗಳ ಕಳೇಬರ ಸಿಕ್ಕಿತ್ತು.   ಈಗಲೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಕಳೆದ ಕೆಲ ತಿಂಗಳಿನಿಂದ ಮಂ...

3548 ಶಿವಮೊಗ್ಗದ ಮಥುರಾ ಗೋಪಿನಾಥ್

#ಇವತ್ತಿನ_ಬೆಳಗಿನ_ನನ್ನ_ಅತಿಥಿಗಳು #ಮಥುರಾ_ಹೋಟೆಲ್_ಮಾಲಿಕರಾದ_ಗೋಪಿನಾಥ್ #ಸಾಹಸಿ_ವಿಜೇಂದ್ರರಾವ್ #ಉದ್ಯಮಿ_ವಿಜಯಕುಮಾರ್ #ಆಡಿಟರ್_ಮನೋಹರ್ #Mathurahotel #shivamogga #Gopinath  #ANVijendra #chamberofcommerce    ನಮ್ಮ ಮಲ್ಲಿಕಾ ವೆಜ್ ತಟ್ಟೆ ಇಡ್ಲಿ, ಗಿಣ್ಣ ಮತ್ತು ಕಾಫಿ ಜೊತೆ ಶಿವಮೊಗ್ಗ ಜಿಲ್ಲಾ ಪ್ರವಾಸೋಧ್ಯಮದ ಸಾಧ್ಯತೆಗಳ ಬಗ್ಗೆ ಸಣ್ಣ ಮಾತು ಕಥೆ ಆಯಿತು.    ಶಿವಮೊಗ್ಗದ ಪ್ರಸಿದ್ಧ ಸರಣಿ ಹೋಟೆಲ್ ಗಳಾದ #ಮಥುರಾ ಗುಂಪಿನ ಮಾಲಿಕರಾದ #ಗೋಪಿನಾಥ್ ನಮ್ಮ ಮಲ್ಲಿಕಾ ವೆಜ್ ಉಪಹಾರದ ಬಗ್ಗೆ ಪ್ರಶಂಸೆ ನೀಡಿದ್ದು ಸಂತೋಷ ತಂದಿತು.

3347. ಆನೆ ಪಾರ್ಕ್

#ಕಾಡಾನೆಗಳ_ಕಾರಿಡಾರ್_ಬಗ್ಗೆ_ಸರ್ಕಾರದ_ಕ್ರಮ_ಏನು?. #ಕಾಡಾನೆಗಳ_ಬಗ್ಗೆ_ಅರಣ್ಯ_ಸಚಿವರ_ಉತ್ತರ #ಕಳೆದ_ವರ್ಷದ_ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ. #ಹಾಸನ_ಜಿಲ್ಲೆಯ_ಬೇಲೂರು_ವಿಧಾನಸಭಾ_ಕ್ಷೇತ್ರದ_ಶಾಸಕರಾದ_H_K_ಸುರೇಶರ_ಪ್ರಶ್ನೆ. #ಹಾಸನ_ಮತ್ತು_ಕೊಡಗು_ಜಿಲ್ಲೆಗಳಲ್ಲಿ_ಕಾಡಾನೆ_ನಿಯಂತ್ರಿಸಲು_ಸರ್ಕಾರ_ತೆಗೆದುಕೊಂಡ_ಕ್ರಮ_ಏನು? #ಅದಕ್ಕೆ_ಅರಣ್ಯ_ಸಚಿವರ_ಉತ್ತರ #ಎರಡು_ಸಾವಿರ_ಹೆಕ್ಟರ್_ನಲ್ಲಿ_ಆನೆಗಳ_ವಿಹಾರಧಾಮ_ನಿರ್ಮಿಸಲಾಗುವುದು. #wildlifeconservation #malenadu #westernghatsofindia #Belagavi #kodagu #Hassan #shivamogga #Anandapuram #kollibachalu    #ಆನೆ_ಪಾರ್ಕ್ ಇರಲಿ ಮಲೆನಾಡಿನಲ್ಲಿ #ಮಂಕಿ_ಪಾರ್ಕ್ ಕಥೆ ಏನಾಯಿತು? ಎನ್ನುವ ಪ್ರಶ್ನೆ ಕೇಳ ಬೇಡಿ ಇದು ಕಾಡಾನೆ ಪಾರ್ಕ್ ವಿಷಯ.    ಆನೆ ಪಾರ್ಕ್ ಸಾಧ್ಯನಾ? ಸಾದುವಾ? ಗೊತ್ತಿಲ್ಲ ಈ ಬಗ್ಗೆ ಅರಣ್ಯ ಸಚಿವರು ವಿಧಾನ ಮಂಡಳದಲ್ಲಿ ನೀಡಿದ ಉತ್ತರಕ್ಕೆ ಒಂದು ವರ್ಷ ಆಯಿತು.   ಈ ಬಗ್ಗೆ ಅವರ ಇಲಾಖೆ ತೆಗೆದುಕೊಂಡ ಕ್ರಮ ಏನು? ಅಂತ ಶಾಸಕರು ಈ ಚಳಿಗಾಲದಲ್ಲಿ ಪ್ರಶ್ನಿಸ ಬಹುದು.  ವಿಧಾನಸಭೆಯಲ್ಲಿ ಬೇಲೂರು ಶಾಸಕರ ಪ್ರಶ್ನೆಗೆ ಸಚಿವ ಈಶ್ವರ ಖಂಡ್ರೆ ಉತ್ತರ ದಿನಾಂಕ 12/12/2024.    ಕೊಡಗು ಮತ್ತು ಹಾಸನದಲ್ಲಿ ಕಾಡಾನೆಗಳ ಕಾಟ ನಿಯಂತ್ರಿಸಲು ಕೊಡಗು ಮತ್ತು ಹಾಸನ ಬಳಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ...

3546. ವಿವಾಹಗಳಿಗೆ ಕನ್ಯೆಗಳ ಕೊರತೆ

#ಒಂದು_ಕಾಲದಲ್ಲಿ_ಕನ್ಯೆಯರಿಗೆ_ಸಾಣಿಗೆಯಲ್ಲಿ_ಸಾಣಿಸಿದಂತೆ_ಡಿಮೊರಲ್_ಮಾಡುತ್ತಿದ್ದರು. #ಆಗ_ಪುರಷರಿಗಿಂತ_ಸ್ತ್ರೀಯರ_ಅನುಪಾತ_ಜಾಸ್ತಿ_ಇತ್ತು. #ಎಲ್ಲಾ_ಜಾತಿಯ_ಮಾಣಿಗಳಿಗೆ_ಅನ್ವಯಿಸುವ_ಈ_ಹಾಡು #ಆ_ಕಾಲದಲ್ಲಿ_ಅನೇಕ_ಹೆಣ್ಣುಗಳ_ಕಂಕಣ_ಬಲ_ಕೂಡಿ_ಬರದಂತೆ_ಮಾಡಿತ್ತು ...  #ಈಗ_ಗಂಡು_ಹೆಣ್ಣಿನ_ಅನುಪಾತದ_ವೃತ್ಯಾಸದಿಂದ_ಕಾಲ_ಬದಲಾಗಿದೆ..  #ಅನೇಕ_ಗಂಡುಗಳಿಗೆ_ಕಂಕಣ_ಬಲ_ಒಲಿಯುತ್ತಲೇ_ಇಲ್ಲ. #ಸುಂದರವಾಗಿ_ರಚಿಸಿ_ಹವಿಗನ್ನಡದಲ್ಲಿ_ಸವಿಯಾಗಿ_ಹಾಡಿದ್ದಾರೆ  #ಇದು_ಒಂದು_ಕ್ಷಣ_ಎಲ್ಲರನ್ನೂ_ನಿಂತು_ಕೇಳುವಂತೆ_ಮತ್ತು_ಕೇಳಿದ_ಮೇಲೆ_ಪದೇ_ಪದೇ_ಕೇಳುವಂತೆ #ಆಪ್ತರಿಗೆ_ಶೇರ್_ಮಾಡುವಂತೆ_ಮಾಡುತ್ತಿದೆ. #ಅಮಿತಾರವಿಕಿರಣ್_ಅವರಿಗೆ_ಶಹಬ್ಬಾಸ್_ಹೇಳಲೇಬೇಕು. #sexratio #lndia #marriage #lifepartner #castesystem #hindureligion #Amitharavikiran   ನಮ್ಮನೆ ಮಾಣಿಗೊಂದು ಕೂಸು....    ಇದು ನಮ್ಮ ದೇಶದ ಪ್ರಸ್ತುತ ಸಮಸ್ಯೆ ಇದಕ್ಕೆ ಪರಿಹಾರ ಮುಂದಿನ ಕೆಲವು ದಶಕಗಳು ಸಾಧ್ಯವೇ ಇಲ್ಲ.    ಈಗ ದೇಶದಲ್ಲಿ ಸ್ತ್ರೀ ಪುರುಷರ ಅನುಪಾತ 1000 ಪುರುಷನಿಗೆ 952 ಸ್ತ್ರೀ ಇದು 2036ರಲ್ಲಿ 1000 ಪುರುಷನಿಗೆ 982 ಆಗಬಹುದು ಎಂಬ ನಿರೀಕ್ಷೆ ಆದರೆ ಆಗದೆಯೇ ಇರಬಹುದು.   ಮೊದಲೆಲ್ಲ ಸ್ತ್ರೀಯರ ಸಂಖ್ಯೆ ಹೆಚ್ಚಾಗಿದ್ದಾಗ ಪುರುಷರಿಗೆ ಆಯ್ಕೆ ಸ್ವಾತಂತ್ರ ಇತ್ತು ಆಗ ವಿವಾಹ ವಯಸ್ಸಿನ ಹೆಣ್ಣು ಮಕ...

3545. ಆರ್. ಎನ್. ಶೆಟ್ಟರು ಮುರ್ಡೇಶ್ವರ

#ಆರ್_ಎನ್_ಶೆಟ್ಟರು_ಮುರ್ಡೇಶ್ವರ #ಮುಡೇ೯ಶ್ವರ_ವಿಶ್ವವಿಖ್ಯಾತಗೊಳಿಸಿದ_ರಾಮ_ನಾಗಪ್ಪ_ಶೆಟ್ಟರು. #ತಮ್ಮ_92ನೇ_ವಯಸ್ಸಿನಲ್ಲಿ_ಇಹಲೋಕ_ತ್ಯಜಿಸಿದ #ಆರ್_ಎನ್_ಶೆಟ್ಟರ_ಐದನೇ_ಪುಣ್ಯತಿಥಿ_ಇವತ್ತು. #murdeshwarbeach #murdeshwartemple #murdeshwar #shivastatue #rnshetty #batkal     ಆರ್.ಎನ್. ಶೆಟ್ಟರೆಂದರೆ  ಅವರ ನಿಮಾ೯ಣ ಸಂಸ್ಥೆಯಿಂದ ಆಗದ ಕೆಲಸವೇ ಇಲ್ಲ ಎ೦ಬ ಪ್ರತೀತಿ ಈಗಲೂ ಇದೆ.     ಇದಕ್ಕೆ ಕಾರಣ ಇವರ ಸಂಸ್ಥೆ ಸವಾಲಾಗಿ ನಿಮಿ೯ಸಿರುವ ಕೊಂಕಣ ರೈಲ್ವೆಯ 18 ಸುರಂಗ ಮಾಗ೯ಗಳು, ಯುಕೆಪಿಯ ನೂರಾರು ಕಿ.ಮೀ. ಉದ್ದದ ನೀರಾವರಿ ಕಾಲುವೆಗಳು, ಬೆಳಗಾಂ ಜಿಲ್ಲೆಯ ಹಿಡಕಲ್ ಆಣೆಕಟ್ಟುಗಳು ಎದ್ದು ಕಾಣುತ್ತದೆ.  ಇವರ ತಂದೆ ಕೃಷಿಕರು, ಪುರಾಣ ಪ್ರಸಿದ್ದ ಭಟ್ಕಳ ತಾಲ್ಲೂಕಿನ ಮುಡೇ೯ಶ್ವರ ದೇವಾಲಯದ ಮುಕ್ತೇಸರರಾಗಿದ್ದರು.    ಗೋಕಣ೯ದಲ್ಲಿ ಆತ್ಮಲಿಂಗ ಐಕ್ಯ ಆದಾಗ ರಾವಣ ಅದನ್ನು ಕೀಳುವ ಪ್ರಯತ್ನದಲ್ಲಿ ಆತ್ಮಲಿಂಗದ ಕೆಲ ತುಣುಕು ಇಲ್ಲಿಗೆ ಬಂದು ಬಿದ್ದಿದೆ ಎಂಬ ಪ್ರತೀತಿ ಮತ್ತು ಸ್ಥಳ ಪುರಾಣ ಇದೆ.   ಈಗಲೂ ಮುಡೇ೯ಶ್ವರದಲ್ಲಿ ದೇವರ ಎದುರು ಗೋಕಣ೯ದ ಆತ್ಮಲಿಂಗದ ಕಲ್ಲುಗಳ ತುಣುಕುಗಳು ಭಕ್ತರು ಅಪೇಕ್ಷೆ ಪಟ್ಟರೆ ಅಚ೯ಕರು ತೋರಿಸುತ್ತಾರೆ ಆ ದೇವಾಲಯದಲ್ಲಿ ಸಂರಕ್ಷಿಸಿಕೊಂಡು ಬರಲಾಗಿದೆ.    ಇಲ್ಲಿ ಜನಿಸಿ ಬಾಲ್ಯ ಕಳೆದ ಶೆಟ್ಟರು ಪ್ರಾಥಮಿಕ ಶಿಕ್ಷಣ ಮಾತ್ರ ...

3544.ದಂಡಾವತಿ ಆಣೆಕಟ್ಟು ವಿರೋದಿ ಹೋರಾಟ ಸಮಿತಿ ಅಧ್ಯಕ್ಷ ವಾಮದೇವ ಗೌಡರು ಸೊರಬ

#ವಾಮದೇವ_ಗೌಡರು #ಮಹಾನ್_ರೈತ_ಹೋರಾಟಗಾರರು #ಸೊರಬದ_ದಂಡಾವತಿ_ಆಣೆಕಟ್ಟು_ವಿರೋಧಿ_ಹೋರಾಟ_ಸಮಿತಿ_ಅಧ್ಯಕ್ಷರು #ಒಂಬತ್ತು_ವರ್ಷದ_ಹಿಂದೆ_ಇದೇ_ದಿನ_ನನ್ನ_ಕಛೇರಿಗೆ_ಬಂದಿದ್ದರು. #Soraba #Vamadevagowda #Dandavathiriver #SRHiremutt #Kagoduhorata #Ganapathiyappa    ಒಂಬತ್ತು ವರ್ಷಗಳ ಹಿಂದೆ 18- ಡಿಸೆಂಬರ್ - 2016 ರಂದು ನಾನು ಬರೆದ ಪೇಸ್ ಬುಕ್ ಲೇಖನ...       ಇವತ್ತು ದಿಡೀರ್ ಅಂತ ಸೊರಬದ #ವಾಮದೇವ_ಗೌಡರು ಬಂದರು ಅವರು ಸೊರಬದ ದಂಡಾವತಿ ಆಣೆಕಟ್ಟು ವಿರೋದಿ ಹೋರಾಟ ಸಮಿತಿ ಅಧ್ಯಕ್ಷರು.    ಹಾಲಿ #S_R_ಹಿರೇಮಠರ ರಾಜ್ಯ ಬ್ರಷ್ಟಾಚಾರಿ ವಿರೋದಿ ಆಂದೋಲನದ ಉಪಾಧ್ಯಕ್ಷರು ಇವರ ಜೊತೆ ರಿಪ್ಪನಪೇಟೆಯ ಏಕಾಂಗಿ ಜನಪರ ಹೋರಾಟಗಾರ #ಟಿ_ಆರ್_ಕೃಷ್ಣಪ್ಪ ಕೂಡ ಬಂದಿದ್ದರು.    ಚಹಾ ಸ್ವೀಕರಿಸುತ್ತಾ "ದಂಡಾವತಿ ಹೋರಾಟದ ಸಂದಭ೯ದಲ್ಲಿ ಅರುಣ್ ಪ್ರಸಾದ್ ನಮ್ಮ ಹೋರಾಟದ ಸ್ಥಳಕ್ಕೆ ಬಂದು ಬೆಂಬಲಿಸಿ ನಿತ್ಯದ ಊಟದ ವೆಚ್ಚಕ್ಕಾಗಿ ದೇಣಿಗೆ ನೀಡಿದ್ದನ್ನ ಮರೆತಿಲ್ಲ ನಮ್ಮ ಖಚು೯ ವೆಚ್ಚದ ಪಟ್ಟಿ ನೋಡಿದಾಗಲೆಲ್ಲ ಅವರು ನೆನಪಾಗುತ್ತಾರೆ" ಅಂದರು.    ನಾನು ಮರೆತು ಬಿಟ್ಟಿದ್ದೆ,ಆ ದಿನ ಸಾಗರದಿಂದ ನಾನು, ಕಾಗೋಡು ಹೋರಾಟದ ನೇತಾರರಾದ ಗಣಪತಿಯಪ್ಪ, ಸಾಹಿತಿ ಕೋಣಂದೂರು ವೆಂಕಪ್ಪ ಗೌಡರು,ಮಾಜಿ ಶಾಸಕರಾದ ಸ್ವಾಮಿ ರಾವ್, ಕಲ್ಲೂರು ಮೇಘರಾಜ್,ತೀನಾ ಶ್ರೀನಿವಾಸ್, ಪತ್ರ...

3543. ಬೇಲಿಗೆ ವಿದ್ಯುತ್ ಸಂಪರ್ಕ ಮಾಡೋ ರೈತರು

#ರೈತರೇಕೆ_ಇಂತಹ_ಕೆಲಸಕ್ಕೆ_ಮುಂದಾಗುತ್ತಾರೆ. #ಪಸಲು_ರಕ್ಷಣೆಗಾಗಿ_ಅಕ್ರಮ_ವಿದ್ಯುತ್_ಬೇಲಿಗೆ_ನೀಡುವುದು_ಸರಿಯಲ್ಲ #ಕೆಲ_ವರ್ಷದ_ಹಿಂದೆ_ಮೂರು_ಕಾಡಾನೆ_ಅಕ್ರಮ_ವಿದ್ಯುತ್_ಬೇಲಿಯಿಂದ_ಮೃತವಾಗಿತ್ತು. #ಅರಣ್ಯ_ಇಲಾಖೆ_ಕಾನೂನು_ಅಪರಾದಿಗಳಿಗೆ_ಶಿಕ್ಷೆ_ಆಗುತ್ತದೆ. #ಹೊಸನಗರ_ತಾಲ್ಲೂಕಿನ_ಕೊಡೂರು_ಸಮೀಪ_ಅಕ್ರಮ_ವಿದ್ಯುತ್_ಬೇಲಿಯಿಂದ_ಕಾಡುಕೋಣ_ಸತ್ತಿದೆ  #Electricfence #illigalpower #wildlife #malnadu #westernghats #hosanagara    ವಿದ್ಯುತ್ ಅಕ್ರಮವಾಗಿ ಪಸಲು ರಕ್ಷಣೆಗಾಗಿ ಬೇಲಿಗೆ ಸಂಪರ್ಕ ನೀಡಿದ್ದರಿಂದ ಕಾಡುಕೋಣವೊಂದು ಇದನ್ನು ಸ್ಪರ್ಶಿಸಿ ಮೃತ ಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಸಮೀಪದಲ್ಲಿ ನಡೆದಿದೆ.    ಕೋಡೂರು ಸಮೀಪದ ಶಾಖವಳ್ಳಿ ಗ್ರಾಮದ ಸರ್ವೆ ನಂ 9 ರಲ್ಲಿ  ಕಾಡುಕೋಣವೊಂದು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ.      ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಸಮೀಪದಲ್ಲಿಯೇ ಅಂತ್ಯಕ್ರಿಯೆ ನಡೆಸಿದ್ದಾರೆ.   ಸ್ಥಳದಲ್ಲಿದ್ದ ವಿದ್ಯುತ್ ಕಂಬದಿಂದ ಬೇಲಿಗೆ ವಿದ್ಯುತ್ ಸಂಪರ್ಕ ಪಡೆದಿದ್ದು ಕಂಡುಬಂದಿದೆ.      ನಮ್ಮ ಮಲೆನಾಡಿನ ರೈತರು ಯಾಕೆ ಇಂತಹ ದುರಾಸೆಗೆ ಮುಂದಾಗುತ್ತಾರೋ ಗೊತ್ತಿಲ್ಲ.    ಕಾಡಂಚಿನ ಕೃಷಿ ಜಮೀನಿನಲ್ಲಿ ಸುಗ್ಗಿ ಕಾಲದಲ...

3542. ಇಂದಿರಾಗಾಂಧಿ ಬಂಧನದ ದಿನ ಸಾಗರ ಬಂದ್

#ಇ೦ದಿರಾಗಾಂಧಿ_ಬಂದಿಸಿದ_ಆ_ದಿನ.  #ಅಕ್ಟೋಬರ್_1977_4ನೇ_ತಾರೀಖು_ಮಂಗಳವಾರ #ಕಾ೦ಗ್ರೇಸ್_ಪಕ್ಷ_ಇಡೀ_ಸಾಗರ_ಪೇಟೆ_ಬಂದ್_ಮಾಡಿಸಿತ್ತು #ಅವತ್ತು_ಜನತಾ_ಪಕ್ಷದಲ್ಲಿ_ಶಾಸಕರಾಗಿದ್ದ_ಕಾಗೋಡುತಿಮ್ಮಪ್ಪನವರ #ನೇತೃತ್ವದಲ್ಲಿ_ಬಂದ್_ವಿರೋದಿಸಿ_ಮೆರವಣಿಗೆ #ಲಾಠಿ_ಚಾಜ್೯_ಕಾಗೋಡರ_ಕೈಯಿಗೆ_ಪೋಲಿಸರ_ಲಾಠಿಯಿಂದ_ಹಲ್ಲೆ_ಎಂಬ_ಸುದ್ದಿ. #ಅವತ್ತು_ನಾನು_ನನ್ನ_ಗೆಳೆಯ_ಪುಪ್ಪಾ_ಸಾಗರದಿಂದ_ಆನಂದಪುರಂಗೆ_25_ಕಿಮಿ_ನಡೆದು_ಬಂದಿದ್ದೆವು. #Indiraghandi #janathaparty #congressparty #sagar #kagoduthimmappa #sagarbandh  48 ವರ್ಷದ ಹಿಂದಿನ ಈ ಘಟನೆ ಎಲ್ಲರಿಗೂ ಮರೆತು ಹೋಗಿದೆ, ಸಾಧ್ಯವಾದರೆ ನೆನಪಾದವರು ಮತ್ತೊಮ್ಮೆ ನೆನಪಿಸಿಕೊಳ್ಳಲಿ ಈಗಿನ ತಲೆಮಾರಿನವರಿಗೆ ಇಂತಹ ಘಟನೆ ನಡೆದಿತ್ತು ಎಂಬುದು ತಿಳಿಯಲಿ ಎಂದು ಈ ಲೇಖನ ಬರೆದಿದ್ದೇನೆ.    ಆನಂದಪುರಂ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ನಾನು 600 ಅ೦ಕಕ್ಕೆ 520 ಅಂಕ ಪಡೆದದ್ದರಿಂದ ನಮ್ಮ ತಂದೆ ನನ್ನನ್ನು 8 ನೇ ತರಗತಿಗೆ ಇಂಗ್ಲೀಷ್ ಮೀಡಿಯಂಗೆ ಸಾಗರದ ಮುನ್ಸಿಪ್ ಹೈಸ್ಕೂಲ್ ಗೆ ಸೇರಿಸಿದ್ದರು.   ಆನಂದಪುರಂನಿಂದ ಪ್ರತಿ ನಿತ್ಯ ರೈಲಿನಲ್ಲಿ ನಮ್ಮ ಪ್ರಯಾಣ ಆಗ ಮೂರು ತಿಂಗಳಿಗೆ ವಿದ್ಯಾರ್ಥಿಗಳಿಗೆ ಹತ್ತೊಂಬತ್ತು ರೂಪಾಯಿಗೆ ರೈಲಿನ  ಪಾಸ್ ನೀಡುತ್ತಿದ್ದರು.    1977 ರ ಅಕ್ಟೋಬರ್ 4 ನೇ ತಾರೀಖು ಮಂಗ...

3541.ಉಂಡೆ ಕಡಬು

#ನಾ_ಹ್ಯಾಂಗ_ಮರೆಯಲಿ_ಉಂಡೆಕಡಬು. #ಮತ್ತೆ_ಮತ್ತೆ_ಉಂಡೇ_ಕಡಬು. #ಪಶ್ಚಿಮಘಟ್ಟದ_ಮಲೆನಾಡು_ಕರಾವಳಿಯಲ್ಲಿ_ಮಾತ್ರ_ಚಿರಪರಿಚಿತ_ಉಂಡೆಕಡುಬು. #ಸಸ್ಯಹಾರ_ಮಾಂಸಹಾರಕ್ಕೂ_ಬಳಕೆ. #malenadu #westernghats #desifoods #foodbloggers #shivamogga #kodagu #chikkamagalore #karavali #undekadabu     ಮಲೆನಾಡಿನ ಮಕ್ಕಳು ಉಂಡೆಕಡುಬು ಎಂದರೆ ಉರಿದು ಬೀಳುವುದು ಏಕೆ?    ಇತ್ತೀಚಿನ #ಮಲ್ನಾಡು_ಕಾರ್ಟೂನ್ ನಲ್ಲಿ "ಅಮ್ಮಾ ... ಇವತ್ತೇನೆ ?"...ಅನ್ನೋ #ಉಂಡೆ_ಕಡಬು ಪ್ರಸಂಗ ಬಾರೀ ವೈರಲ್ಲೂ ಆಗಿತ್ತು.   ಅಕ್ಕಿ ತುರಿ ಉಪ್ಪಿನೊಂದಿಗೆ ಬೇಯಿಸಿ ಉಂಡೆ ಕಟ್ಟಿ ಇಡ್ಲಿ ಪಾತ್ರೆಯಲ್ಲಿಟ್ಟರೆ ಆಯಿತು ಅದಾಗೆ ಬೆಂದು ಉಂಡೆ ಕಡಬು ಆಗುವ ಸುಲಭ ಅಡಿಗೆಗೆ ಗೃಹಿಣಿಯರು ಹೆಚ್ಚು ಅವಲಂಬಿಸಿರುತ್ತಾರೆ.    ಬೇರೆ ಉಪಹಾರ ತಯಾರಿಸುವುದು ಶ್ರಮದಾಯಕ ಅದು ಅವರಿಗೆ ಇಷ್ಟ ಇರುವುದಿಲ್ಲ.   ಮಲೆನಾಡಿನ ಕೃಷಿಕರ ಮನೆಯಲ್ಲಿ ನಿತ್ಯ ಉಪಹಾರ ಅಕ್ಕಿ ಉಂಡೆ ಕಡಬು ಇದಕ್ಕೆ ನಂಜಿಕೊಳ್ಳುವ ವ್ಯಂಜನ ಮಾತ್ರ ಬದಲಾಗುತ್ತದಾರಿಂದ ಈ ಭಾಗದ ಮಕ್ಕಳು ಉಂಡೆ ಕಡಬು ಅಂದರೆ ಉರಿದು ಬೀಳುತ್ತಾರೆ.    ಹಳ್ಳಿಯಿಂದ ಪೇಟೆ ಶಾಲೆಗೆ ಬರುವ ಮಕ್ಕಳ ಟಿಪನ್ ಡಬ್ಬಿಯಲ್ಲಿರುವ  ಉಂಡೆ ಕಡುಬು ಪೇಟೆ ಮಕ್ಕಳಿಂದ ಟ್ರೋಲ್ ಆಗುವುದೂ ಒಂದು ಕಾರಣ.    ಉಂಡೆ ಕಡಬು ಪಶ್ಚಿಮ ಘಟ್ಟದಲ್ಲಿನ ಮಲೆನಾಡಿನ ...

3540. ಬಿಲಾಲಿ ಬಿಲ್ಲಿ

#ಸಾಕು_ಪ್ರಾಣಿಗಳ_ಒಡನಾಟದ_ಸವಿನೆನಪುಗಳು #ಅವು_ದೂರವಾದಾಗ_ಆಗುವ_ನೋವು... #ಇದು_ನಮ್ಮ_ಬೆಕ್ಕು_ಪಾಣಿ_ಬಿಲಾಲಿ_ಬಿಲ್ಲಿಯಾಗಿದ_ಕಥೆ. #ನಮ್ಮ_ಬೆಕ್ಕು_ನಮ್ಮೂರ_ಭಟ್ಟರ_ಬೋಂಡಾ_ಬಾಂಡ್ಲಿಯಲ್ಲಿ_ಬಿದ್ದು_ಬಂದ_ಕಥೆ. #ಅದನ್ನೇ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಎಂಬ_ಹೆಸರಿನ_ಕಥೆಯಾಗಿ_ಬರೆದೆ_ಅದು_ಕೇಳಿದವರಿಗೂ_ಇಷ್ಟವಾಯಿತು. #petcats #bilalibilliabyanjana #smallstory #kannadabooks #shivamogga #sagar #Anandapuram #aravindchokkadi   ಈ ಕಥೆಗೆ ಮುನ್ನುಡಿ ಬರೆದ ಖ್ಯಾತ ಶಿಕ್ಷಣ ತಜ್ಞ - ಲೇಖಕ -ವಿಮರ್ಶಕ ಅರವಿಂದ ಚೊಕ್ಕಾಡಿಯವರು ಕೂಡ ಬಿಲಾಲಿ ಬಿಲ್ಲಿಯನ್ನ ಉಲ್ಲೇಖಿಸಿದರು.  ನಾನು ನನ್ನ ಕಥಾಸಂಕಲನಕ್ಕೆ ಭಟ್ಟರ ಬೋಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ ಎಂಬ ಹೆಸರು ಇಟ್ಟೆ, ಇದು 28 ಸಣ್ಣ ಕಥೆಗಳ #ಕಥಾಸಂಕಲನ ಆಯಿತು.     ಬಿಲಾಲಿ ಬಿಲ್ಲಿ ಇದು ನಮ್ಮ ಬೆಕ್ಕಿನ ಮೂಲ ಹೆಸರಲ್ಲ ಅದರ ನಿಜ ನಾಮ ಮಗ ನಾಮಕರಣ ಮಾಡಿದ ಹೆಸರು ಪಾಣಿ.    ಅದರ ಫೈಟಿಂಗ್ ಚಮತ್ಕಾರಗಳು, ಕಿಲಾಡಿತನಗಳನ್ನು ನೋಡಿ ಗೆಳೆಯರಾದ #ಅಮೀರ್_ಸಾಹೇಬರು #ಬಿಲಾಲಿ_ಬಿಲ್ಲಿ ಎಂದು ಕರೆಯುತ್ತಿದ್ದರು.        ನಾನು ಬರೆದ ಕಥಾಸಂಕಲನದಲ್ಲಿ ಅದಕ್ಕೆ ಬಿಲಾಲಿ ಬಿಲ್ಲಿ ಎಂದೆ ಉಚ್ಚರಿಸಿದ್ದೆ.       ಆ ಕಥೆಯ ಕಾರಣದಿಂದಲೇ ಕಥಾ ಸಂಕಲನಕ್ಕೆ ಬಿಲಾಲಿ ಬಿಲ್ಲಿ ಅಭ್ಯಂಜನ ಎ...

3539. ಬುದ್ಧಿವಂತರೇಕೆ ಬಡವರು ಪುಸ್ತಕ

#ಪತ್ರಕರ್ತ_ಎಂ_ನವೀನ್_ಕುಮಾರ್ #ಶಿಕಾರಿಪುರ_ತಾಲ್ಲೂಕು_ಪತ್ರಕರ್ತರ_ಸಂಘದ_ಅಧ್ಯಕ್ಷರು #ಬಹುಮುಖ_ಪ್ರತಿಭೆ_ಅವರದ್ದು #ಸದ್ಯದಲ್ಲೇ_ಬಿಡುಗಡೆ_ಆಗಲಿದೆ_ಅವರು_ಬರೆದ_ಪುಸ್ತಕ #ಬುದ್ದಿವಂತರು_ಬಡವರಾಗುವುದೇಕೆ? #ಈ_ಪುಸ್ತಕದಲ್ಲಿ_ಇದಕ್ಕೆ_ಪರಿಹಾರವೂ_ಇದೆ. #Shikaripura #journalist #Naveen #digitalcreator #influencer #writer     ಗೆಳೆಯ ಶಿರಾಳಕೊಪ್ಪದ ಎಂ. ನವೀನ್ ಕುಮಾರ್ ಶಿಕಾರಿಪುರ ತಾಲ್ಲೂಕಿನ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದಾರೆ ಅವರಿಗೆ ಅಭಿನಂದನೆಗಳು.    ಇವರು ಬಹುಮುಖ ಪ್ರತಿಭೆಯ ಅಸಾದಾರಣ ಯುವಕರು, ತಾಳಗುಂದದ ಕನ್ನಡದ ಮೊದಲ ಶಾಸನ ಬೆಳಕಿಗೆ ತರಲು ವಿಶೇಷ ಪ್ರಯತ್ನ ಮಾಡಿದವರು.    ಕನ್ನಡಾಭಿಮಾನಿಗಳು, ಸದಾ ಯುವ ಜನಾಂಗಕ್ಕೆ ಸ್ವಯಂ ಉದ್ಯೋಗ ಇತ್ಯಾದಿ ಸ್ಪೂರ್ತಿ ತುಂಬುವ ಕ್ರಿಯಾಶೀಲರು.    ಅತ್ಯುತ್ತಮ ಓದುಗ- ವಾಘ್ಮಿ ಮತ್ತು ಬರಹಗಾರರೂ ಹೌದು.    ಇವರು ಈಗಾಗಲೇ ವಿದ್ಯಾರ್ಥಿಗಳಿಗೆ, ಸ್ವಯಂ ಉದ್ಯೋಗಿಗಳಿಗೆ ಅನೇಕ ಉಪಯುಕ್ತ ಪುಸ್ತಕ -ಕೈಪಿಡಿಗಳನ್ನ ಬರೆದು ಪ್ರಕಟಿಸಿದ್ದಾರೆ.     ಇವರ ಅಸಂಖ್ಯಾತ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟ ಆಗಿದೆ.     ಸದ್ಯದಲ್ಲೇ ಕನ್ನಡ ನಾಡಿನ ಜನರಿಗೆ ಇವರು ಬರೆದ ವಿಶೇಷ ಪುಸ್ತಕ ಕೈ ಸೇರಲಿದೆ ಈ ಪುಸ್ತಕದ ಶಿರ್ಷಿಕೆ #ಬುದ್ದಿವಂತರೇಕೆ_ಬಡವರು?...   ಇದಕ್ಕೆ ಮುನ್ನುಡಿ ಬ...

3538. ಸಜ್ಜನರಿಗೆ ಜೈಲಿಗೆ ಹಾಕಿದ ಪ್ರಕರಣ

#ಸಾತ್ವಿಕರನ್ನ_ಜೈಲಿಗೆ_ಕಳಿಸಿದ_ಈ_ಘಟನೆಗೆ_ಎಂಟು_ವರ್ಷ. #ಸುದ್ದಿಯನ್ನ_ಸುದ್ದಿ_ಮಾಡದ_ಈ_ಸುದ್ದಿ. #ಸಾತ್ವಿಕರನ್ನ_ಜೈಲಿಗೆ_ಕಳಿಸಿದವರು_ಯಾರು?.  #ಇವರಿಬ್ಬರ_ಹೆಸರು_ಗಣಪತಿ_ಭಟ್ಟರು_ಜಿಗಳೆಮನೆ_ಮತ್ತು_ನಿರಂಜನ_ಕುಗ್ವೆ. #satyashoda #mitramandali #havyaka #ramachandramutt #sringerimutt #swarnavallimutt #sagar #sirsi #shivamogga #vishwahavyakasammelana   ಬಲಾಡ್ಯರು ಮಾಡುವ ಅನ್ಯಾಯದ ವಿರುದ್ದ ಧ್ವನಿ ಎತ್ತಿದರೆ ಜೈಲು ಎಂಬ ಈ ಘಟನೆ ನಡೆದು ಈ ಡಿಸೆಂಬರ್ ತಿಂಗಳಿಗೆ ಎಂಟು ವರ್ಷ ಆಯಿತು.    ಆದರೆ ಈ ಹೋರಾಟಗಾರರ ಧ್ವನಿ ಅಡಗಿಸಲು ಸಾಧ್ಯವಾಗಲೇ ಇಲ್ಲ ಆದರೆ ಬಲಾಡ್ಯರ ಅನ್ಯಾಯದ ಪ್ರಕರಣವನ್ನ ತಾಂತ್ರಿಕವಾಗಿ ತಡೆ ಆಜ್ಞೆಗಳ ಮೂಲಕ ಮುಂದೂಡುತ್ತಾ ಬಂದ ಐದು ಪ್ರಕರಣಗಳಿಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಅಂತಿಮ ತೀರ್ಪಿನ ಕ್ಷಣಗಣನೆ ಆರಂಭವಾಗಿದೆ.   ಇವರಿಬ್ಬರು ಸಾತ್ವಿಕರು ಇವರು ಮಾಡಿದ ಅಪರಾದ ಏನೆಂದರೆ...ಇವರ ಜಾತಿ ಸಮುದಾಯಕ್ಕೆ ಸಂಬಂದಪಟ್ಟ ಸ್ವಾಮಿ ಒಬ್ಬರ ಎರೆಡು ಅತ್ಯಾಚಾರ ಪ್ರಕರಣ ಮತ್ತು ಆ ಮಠದಲ್ಲಿ ಆ ಜಾತಿ ಸಮಾಜದ ಹೆಣ್ಣು ಮಕ್ಕಳಿಗೆ ದೇವರ ಹೆಸರಲ್ಲಿ ಭಯ ಬಿತ್ತಿ ಕನ್ಯಾಸಂಸ್ಕಾರ ಎಂಬ ಸ್ವಾಮಿಗಳ ಏಕಾಂತಕ್ಕೆ ಅಪ್ರಾಪ್ತ ಹೆಣ್ಣು ಮಕ್ಕಳನ್ನ ಕಳಿಸುವ ಕಾಯ೯ಕ್ರಮ ವಿರೋದಿಸಿ ಸಾಮಾಜಿಕ ಜಾಲತಾಣದಲ್ಲಿ ಇವರು ತಮ್ಮ ಸಮುದಾಯದ ಜನರಿಗೆ ಜನ ಜಾಗೃತಿ ಅಭಿಯಾನ ಪ್ರಾರಂಭಿಸಿದ್ದ...