ಮಲೆನಾಡಿನ ಅಪ್ಪೆಮಿಡಿಗೆ ಜಿಯೋಗ್ರಾಪಿಕಲ್ ಟ್ಯಾಗ್ ಸಿಕ್ಕಿ ಹತ್ತು ವರ್ಷವಾಯಿತು, ನಿನ್ನೆ ಅಂಚೆ ಇಲಾಖೆ ಅಪ್ಪೆ ಮಾವಿನ ಮಿಡಿಯ ಚಿತ್ರದ ಅಂಚೆ ಲಕೋಟೆ ಬಿಡುಗಡೆ ಮಾಡಿದೆ, ಸ್ವಾದಿಷ್ಟ ವಿಶೇಷ ಪರಿಮಳದ ಮಲೆನಾಡ ಅಪ್ಪೆಮಿಡಿಗಳ ಕಥೆ.
#ಮಲೆನಾಡಿನ_ವಿವಿಧ_ಸ್ವಾದದ_ಅಪ್ಪೆಮಿಡಿ_ಉಪ್ಪಿನಕಾಯಿ_ಸವಿದವರೇ_ಬಲ್ಲರು. #ಹತ್ತು_ವರ್ಷದ_ಹಿಂದೆ_ಜಿಯೋಗ್ರಾಪಿಕಲ್_ಇಂಡಿಕೇಷನ್_ಟ್ಯಾಗ್_ಸಿಕ್ಕಿದೆ. #ನಿನ್ನೆ_ಅಂಚೆ_ಇಲಾಖೆ_ಅಪ್ಪೆಮಿಡಿ_ಅಂಚೆ_ಲಕೋಟೆ_ಬಿಡುಗಡೆ_ಮಾಡಿದೆ. #ಏನಿದು_ಜಿಐ_ಟ್ಯಾಗ್? ಒಂದು ಪ್ರದೇಶದ ಕೃಷಿ ಉತ್ಪನ್ನ, ವಿಶೇಷ ತಿನಿಸು, ವಿಶೇಷ ಕುಸುರಿ ವಸ್ತುಗಳು ಆಯಾ ಬೌಗೋಳಿಕ ಹವಾಮಾನ, ಮಣ್ಣು ಮತ್ತು ಸ್ಥಳಿಯರ ಪಾರಂಪರಿಕ ಕಲೆಗಳಿಂದ ವಿಶೇಷ ಉತ್ಪನ್ನ ಅನ್ನಿಸುತ್ತದೆ. ಇವುಗಳಿಗೆ ಒ0ದು ಸಿಗ್ನೇಚರ್ ಬ್ರಾಂಡ್ ನೀಡಿ ಅದಕ್ಕೆ ಗುಣಮಟ್ಟ ಮತ್ತು ರೆಪ್ಯೂಟೇಷನ್ ಮೂಲಕ ಮಾರಾಟಕ್ಕೆ ಪ್ರೋತ್ಸಾಹ ನೀಡಲು ಜಿಯೋಗ್ರಾಪಿಕಲ್ ಇಂಡಿಕೇಷನ್ ಟ್ಯಾಗ್ ನೀಡುವ ವ್ಯವಸ್ಥೆ ವಿಶ್ವದ ಮುಂದುವರಿದ ದೇಶಗಳಲ್ಲಿದೆ. ಬಾಸುಮತಿ ಅಕ್ಕಿ ಜಿಐ ಟ್ಯಾಗ್ ಪಾಕಿಸ್ತಾನ ಪಡೆದಿದೆ ನಂತರ ಭಾರತ ಈ ಬಗ್ಗೆ ಯುರೋಪಿಯನ್ ಒಕ್ಕೂಟದ ಸಂಬಂದ ಪಟ್ಟ ಸಂಸ್ಥೆಯೊಂದಿಗೆ ನಡೆಸಿದ ಹೋರಾಟದಿಂದ 11 ಸೆಪ್ಟೆಂಬರ್ 2020 ರಲ್ಲಿ ನವೀಕೃತ ಆದೇಶದಲ್ಲಿ ಭಾಸುಮತಿ ಅಕ್ಕಿ ಎರೆಡೂ ದೇಶಕ್ಕೆ GI tag ಸಿಕ್ಕಿದೆ. ಜರ್ಮನಿ ದೇಶ ಇಂತಹ ಅನೇಕ ಉತ್ಪನ್ನಗಳಿಗೆ ವಿಶ್ವದಲ್ಲಿ ಅತಿ ಹೆಚ್ಚು ಜಿಐ ಟ್ಯಾಗ್ (9499) ಪಡೆದಿದೆ, ನಂತರದ ಸ್ಥಾನ ಚೀನಾದ್ದು. ನಮ್ಮ ದೇಶದಲ್ಲಿ ನಮ್ಮ ರಾಜ್ಯ ಅತಿ ಹೆಚ್ಚು ಜಿಐ ಟ್ಯಾಗ್ ಪಡೆದು (42) ಅಗ್ರ ಸ್ಥಾನದಲ್ಲಿದೆ ಇದರಲ್ಲ...