#ಮರೆತೇ ಹೋಗಿದ್ದ ನಮ್ಮ ಅಮ್ಮ ಮಾಡುತ್ತಿದ್ದ ನೀರುಕಡುಬು ಇವತ್ತಿನ ಉಪಹಾರ.# 1965 ರಿಂದ 1974ರ ತನಕ ಈ ನೀರುಕಡಬು ವಾರಕ್ಕೆ ಒಮ್ಮೆಯಾದರೂ ನಮ್ಮ ಅಮ್ಮ ತಯಾರಿಸುತ್ತಿದ್ದಳು, 1975 ರಲ್ಲಿ ಅಮ್ಮನ ಅಕಾಲಿಕ ನಿಗ೯ಮನ ಮನೇಲಿ ಅಡುಗೆ ಇತ್ಯಾದಿ ಗೃಹ ಕೃತ್ಯ ನಮ್ಮದಾಯಿತು ಆದರೆ ಅಮ್ಮನ ಅನೇಕ ರುಚಿಕಟ್ಟಾದ ಅಡುಗೆ ರೆಸಿಪಿ ಮರೆತೇ ಹೋಯಿತು. ಅಕ್ಕಿ ಬೀಸು ಕಲ್ಲಿನಲ್ಲಿ ಬೀಸಿ ರವೆ ಮಾಡಿ ಅದನ್ನ ಬಿಸಿ ನೀರಿನಲ್ಲಿ ರುಚಿಗೆ ಉಪ್ಪು ಸೇರಿಸಿ ಆದ೯ ಬೇಯಿಸಿ ವಡೆ ಆಕಾರ ಮಾಡಿ ಕುದಿಯುವ ನೀರಿನಲ್ಲಿ ಬೇಯಿಸಬೇಕು ತುಂಬಾ ಸರಳ ಆದರೆ ಹದ ತಪ್ಪಿದರೆ ನೀರು ಕಡಬು ಗಂಜಿ ಆಗಿ ಕರಗಿ ಆಡುಗೆ ಹದ ತಪ್ಪಿ ಹಾಳಾಗುತ್ತದೆ. ಅನೇಕರಲ್ಲಿ ನೀರು ಕಡಬು ಮಾಡೋದು ಹೇಗೆ? ಅಂತ ಕೇಳುತ್ತಿದ್ದೆ ಆದರೆ ಅವರಿಗೆ ಮಲೆನಾಡಿನ ಉ೦ಡೆ ಕಡಬು ಗೊತ್ತಿತ್ತೇ ವಿನಃ ನನಗೆ ಮಾತ್ರ ಗೊತ್ತಿದ್ದ ನೀರು ಕಡುಬು ಅವರಿಗೆ ಗೊತ್ತಾಗುತ್ತಿರಲಿಲ್ಲ. ನೀರು ಕಡಬು ಮಲೆನಾಡಿನ ತಿಂಡಿ ಆದರೂ ಜನಮಾನಸದಲ್ಲಿ ಮರೆತೇ ಹೋಗಿತ್ತು, ಮಲೆನಾಡಿನ ವೈವಿಧ್ಯಮಯ ಭತ್ತದ ಅಕ್ಕಿಯಲ್ಲಿ ಒಂದೊಂದು ಸಾರಿ ಒಂದೊಂದು ಗಮ ರುಚಿ, ಗಟ್ಟಿ ಕಾಯಿ ಚಟ್ನಿ ಜೊತೆಗೆ ಬಾಳೆ ಎಲೆಯಲ್ಲಿ ನೀರುಕಡುಬು ಸೇವನೆ ಒಮ್ಮೆ ಸವಿದರೆ ನೀವು ಬಿಡುವುದಿಲ್ಲ. ದೂರದ ಭಟ್ಕಳದ ನವಾಯಿತರ ಹೆಣ್ಣುಮಗಳು ಮಲೆನಾಡಿನ ನೀರುಕಡುಬಿನ ರೀತಿಯ ಕಡಬು ತಯಾರಿಸುವ ಮಾದರಿ ಸೋಷಿಯಲ್ ಮೀಡಿಯಾದಲ್ಲಿ ನೋಡಿ ಮತ್ತು ...