#ಮಂಗ ನಾನು ಒಂದು ಮಂಗ ಸಾಕಿದ್ದೆ ಅದಕ್ಕೆ ಅಂಜಲಿ ಅಂತ ಹೆಸರೂ ಇಟ್ಟಿದ್ದೆ. ಆ ಮಂಗ ಕೊಟ್ಟವರು ನಮ್ಮೂರಿನ ನನ್ನ ಹಳೆಯ ಶಿಷ್ಯ ಅಮೀರ್ ಸಾಹೇಬರು. ಅದು ಅವರ ಮನೆ ಹತ್ತಿರ ಎಲ್ಲಿಂದಲೋ ಬಂದು ಒಡಾಡುತ್ತಿತ್ತು ಅದರ ನಡುವಳಿಕೆ ನೋಡಿದರೆ ಅದು ಜನ ಬಳಕೆಯ ಮಂಗನ ರೀತಿ ಕಂಡಿದೆ,ಅದು ಅವರ ಮಕ್ಕಳು ಹಣ್ಣು- ಕಾಳು ಇತ್ಯಾದಿ ನೀಡಿದರೆ ಬಂದು ಕೈಯಲ್ಲೇ ತೆಗೆದುಕೊಂಡು ಹೋಗುವುದು, ಲಾಗ ಹಾಕುವುದು ಇತ್ಯಾದಿ ಮಾಡುವುದು ನೋಡಿದ ಅವರಿಗೆ ಅದು ಯಾರೋ ಸಾಕಿದ ಮಂಗ ತಪ್ಪಿಸಿಕೊಂಡು ಬಂದಿದೆ ಎಂದು ತಿಳಿದಿದ್ದಾರೆ. ನಂತರ ಆ ಮಂಗ ಅವರ ಮನೆ ಸೇರಿದೆ ಆದರೆ ಅದರ ತುಂಟಾಟ ಸಂಬಾಳಿಸುವುದು ಅವರಿಗೆ ಕಷ್ಟವಾಗಿತ್ತು. ಆದ್ದರಿಂದ ನನಗೆ ಕೇಳಿದರು ಮಂಗ ಸಾಕುತ್ತೀರಾ? ಅಂತ ನನಗೂ ಉಮೇದಿ ಇತ್ತ, ಮಂಗ ಅವರೆಗೂ ಸಾಕಿರಲಿಲ್ಲ ಆದನ್ನು ಒಂದು ಅನುಭವ ಪಡೆಯೋಣ ಎಂದು ಒಪ್ಪಿಕೊಂಡೆ. ಅವರ ಮಗ ತಂದುಕೊಟ್ಟ ಮಂಗದ ಕುತ್ತಿಗೆಗೆ ದೊಡ್ಡ ಚೈನ್ ಹಾಕಿದ್ದರು, ಬಹಳ ಬೇಗ ಅದರ ಜೊತೆ ನನ್ನ ಗೆಳೆತನ ಆಯಿತು. ಅದರ ಮೈ-ತಲೆ- ಕೈ- ಕಾಲು ಎಲ್ಲಾ ಸವರಿ ನಾನು ಸೈ ಎನಿಸಿಕೊಂಡೆ, ಇದು ಹೆಣ್ಣು ಮಂಗ ಆದ್ದರಿಂದ ಇದಕ್ಕೊಂದು ಸೂಕ್ತ ಹೆಸರು ನಾಮಕರಣ ಮಾಡಬೇಕು ಅಂತಾಯ್ತು. ಅಂತಿಮವಾಗಿ ಅಂಜಲಿ ಎಂಬ ಹೆಸರಿನ ನಾಮಕರಣ ಮಾಡಿದೆವು ಅಂಜಲಿ ಎಂದೆ ಕರೆದೆವು. ಇದಕ್ಕೊಂದು ಬೋನು ತಯಾ...