ನನ್ನ ಎರಡನೆ ಪುಸ್ತಕ 29 ಸಣ್ಣ ಕಥಾ ಸಂಕಲನ ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ #ಬಿಲಾಲಿ_ಬಿಲ್ಲಿ_ಅಭ್ಯ೦ಜನ ಇವತ್ತು ಬಿಡುಗಡೆ ಆಯಿತು
#ನನ್ನ_ಎರಡನೆ_ಪುಸ್ತಕ_ಇವತ್ತು_ಬಿಡುಗಡೆ_ಆಯಿತು #ಭಟ್ಟರ_ಬೊಂಡಾದ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಎಂಬ_ಕಥಾ_ಸಂಕಲನ #ನಾಡಿನ_ಪ್ರಸಿದ್ಧ_ಜಲತಜ್ಞ_ಪರಿಸರವಾದಿ_ಶಿವಾನಂದಕಳವೆಯವರಿಂದ_ಬಿಡುಗಡೆ #ಖ್ಯಾತ_ಪತ್ರಕರ್ತ_ಶಂಗೇಶ್_ಪ್ರಜಾವಾಣಿ_ಬ್ಯೂರೋ_ಚೀಫ್_ಆಗಿದ್ದ_ಪ್ರಕಾಶ್_ಕುಗ್ವೆ_ಅತಿಥಿಗಳು ಇವತ್ತು ಸಂಜೆ ನಮ್ಮ ಹೊಂಬುಜ ಲಾಡ್ಜ್ ಹಿಂಬಾಗದ ವಿಕ್ಟೋರಿಯಾ ಕಾಟೇಜ್ ಆವರಣದಲ್ಲಿ ನನ್ನ 29 ಸಣ್ಣ ಕಥೆಗಳ ಕಥಾ ಸಂಕಲನ "ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ" #ಬಿಲಾಲಿ_ಬಿಲ್ಲಿ_ಅಭ್ಯಂಜನ ನಾಡಿನ ಪ್ರಸಿದ್ಧ ಜಲ ತಜ್ಞರು, ಪತ್ರಕರ್ತರು, ಪರಿಸರ ವಿಜ್ಞಾನಿಗಳು, ಬರಹಗಾರರೂ ಆದ ಶಿವಾನಂದ ಕಳವೆ ಬಿಡುಗಡೆ ಮಾಡಿದರು. ಖ್ಯಾತ ಪತ್ರಕರ್ತರೂ ಮತ್ತು ನನ್ನ ಕಳೆದ ವರ್ಷ ಬಿಡುಗಡೆ ಆಗಿ ಅನೇಕ ದಾಖಲೆ ಮಾಡಿರುವ ಕಾದಂಬರಿ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರರಾಣಿ_ಚಂಪಕ ಮತ್ತು ಈ ಕಥಾ ಸಂಕಲನದ ಮುದ್ರಕರೂ ಆಗಿರುವ ಒಂದು ಕಾಲದ ಹಾಯ್ ಬೆಂಗಳೂರು ವಾರಪತ್ರಿಕೆಯ ರೋವಿಂಗ್ ರಿಪೋರ್ಟರ್ ಎಂದು ರವಿ ಬೆಳೆಗೆರೆಯಿಂದ ಬಿರುದು ಪಡೆದಿದ್ದ ಹಾಲಿ ಶಿವಮೊಗ್ಗ ಜಿಲ್ಲಾ ಪತ್ರಿಕೆ ಜನ ಹೋರಾಟದ ಸಂಪಾದಕರಾದ ಶೃಂಗೇಶ್ ಮತ್ತು ಪ್ರಜಾವಾಣಿ ದಿನಪತ್ರಿಕೆಯ ಬ್ಯೂರೋ ಚೀಪ್ ಆಗಿದ್ದ ಖ್ಯಾತ ಪತ್ರಕರ್ತರು ಈಗ ಸಾಗರದಲ್ಲಿ ಸ್ಯಾನಿಟರಿ ವೇರ್ ಉದ್ಯಮದಲ್ಲಿ ತೊಡಗಿರುವ ಸಾಗರದವರೇ ಆದ ಪ್ರಕಾಶ್ ಕುಗ್ವೆ ನನ್ನ ಅತಿಥಿಗಳಾಗಿದ...