#ಇಡ್ಲಿ_ನಿನ್ನ_ಮಹಿಮೆ_ಏನು? #ಇವತ್ತು_ವಿಶ್ವ_ಇಡ್ಲಿ_ದಿನ_ಅಂತೆ. ರೆಸ್ಟೋರೆಂಟ್ ಮಾಲಿಕರ ಮತ್ತು ಇಡ್ಲಿ ಪ್ರಿಯರ ಗಮನಕ್ಕಾಗಿ ಬೆಳಿಗ್ಗೆ ಮನೇನಲ್ಲಿ ಒಂದು ರವೆ ಇಡ್ಲಿ ಮತ್ತು ಸಾದಾ ಇಡ್ಲಿ ಜೊತೆಗೆ ಎಮ್ಮೆ ಹಾಲಿನಿಂದ ಮಾಡಿದ ಬೆಣ್ಣೆ ಮತ್ತು ತೊಗರಿ ಬೇಳೆ ಹುರಿದು ಮಾಡಿದ ಚಟ್ನಿ ತಿಂದು ಚಹಾ ಕುಡಿದು ಪತ್ರಿಕೆ ಓದಲು ಕುಳಿತಾಗ ಗೊತ್ತಾಯಿತು ಇವತ್ತು ವಿಶ್ವ ಇಡ್ಲಿ ದಿನ ಅಂತ. ಆದರೆ ವಿಶ್ವ ಸಂಸ್ಥೆ,WHO ವಿಶ್ವದ ಜನ ಜಾಗೃತೆಗಾಗಿ ಮಾಡುವ ವಿಶ್ವ ದಿನ ಇದಲ್ಲ ಇದು 2015 ರಿಂದ ಚೆನೈನಲ್ಲಿ ಪ್ರಾರಂಭವಾದ ವಿಶ್ವ ಇಡ್ಲಿ ದಿನ ಬಾರತದಾದ್ಯಂತ ಪ್ರಸಿದ್ಧಿ ಪಡೆದಿದೆ. ಚೆನೈನ ಮಲ್ಲಿಪು ಇಡ್ಲಿ ಪ್ರಖ್ಯಾತವಾದ ಅನೇಕ ಕಡೆ ನಡೆಯುವ ರೆಸ್ಟೋರಾಂಟ್ ಇದರ ಮಾಲಿಕ ಅನ್ನಿವನ್ನನ್ 2015ರ ಮಾಚ೯ 30 ರಂದು 1328 ವಿದದ ಇಡ್ಲಿ ಮತ್ತು 44 ಕೆಜಿಯ ಬೃಹತ್ ಇಡ್ಲಿ ತಯಾರಿಸಿ ಪ್ರಸಿದ್ಧ ಜನರಿಂದ ಇಡ್ಲಿ ಕಟ್ ಮಾಡುವ ಮೂಲಕ ಉದ್ಘಾಟಿಸಿದ್ದು ಈಗ ಭಾರತದಲ್ಲಿ ವಿಶ್ವ ಇಡ್ಲಿ ದಿನ ಅಂತ ಆಚರಣೆಗೆ ಕಾರಣ ಆಗಿದೆ. ದಕ್ಷಿಣ ಬಾರತದಲ್ಲಿ ಅದರಲ್ಲೂ ತಮಿಳುನಾಡು ಮತ್ತು ಕನಾ೯ಟಕದಲಿ ಇಡ್ಲಿ ಯಾವತ್ತೂ ಪೇಮಸ್ಸೇ ಅದೇ ಗೋವಾ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಇಡ್ಲಿ ಕ್ರಿಕೆಟ್ ಬಾಲ್ ನಂತೆ ಗಡುಸಾಗಿರುತ್ತದೆ. ಇಡ್ಲಿ ಯಾವ ರಾಜ್ಯದೆಂದರೆ ಕನಾ೯ಟಕ ಮತ್ತು ತಮಿಳುನಾಡು ಪರಸ್ಪರ ತಮ್ಮದೆಂದೇ ವಾದಿಸಬಹು...