Skip to main content

Posts

Showing posts from 2021

ನನ್ನ ಎರಡನೆ ಪುಸ್ತಕ 29 ಸಣ್ಣ ಕಥಾ ಸಂಕಲನ ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ #ಬಿಲಾಲಿ_ಬಿಲ್ಲಿ_ಅಭ್ಯ೦ಜನ ಇವತ್ತು ಬಿಡುಗಡೆ ಆಯಿತು

#ನನ್ನ_ಎರಡನೆ_ಪುಸ್ತಕ_ಇವತ್ತು_ಬಿಡುಗಡೆ_ಆಯಿತು #ಭಟ್ಟರ_ಬೊಂಡಾದ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಎಂಬ_ಕಥಾ_ಸಂಕಲನ #ನಾಡಿನ_ಪ್ರಸಿದ್ಧ_ಜಲತಜ್ಞ_ಪರಿಸರವಾದಿ_ಶಿವಾನಂದಕಳವೆಯವರಿಂದ_ಬಿಡುಗಡೆ #ಖ್ಯಾತ_ಪತ್ರಕರ್ತ_ಶಂಗೇಶ್_ಪ್ರಜಾವಾಣಿ_ಬ್ಯೂರೋ_ಚೀಫ್_ಆಗಿದ್ದ_ಪ್ರಕಾಶ್_ಕುಗ್ವೆ_ಅತಿಥಿಗಳು   ಇವತ್ತು ಸಂಜೆ ನಮ್ಮ ಹೊಂಬುಜ ಲಾಡ್ಜ್ ಹಿಂಬಾಗದ ವಿಕ್ಟೋರಿಯಾ ಕಾಟೇಜ್ ಆವರಣದಲ್ಲಿ ನನ್ನ 29 ಸಣ್ಣ ಕಥೆಗಳ ಕಥಾ ಸಂಕಲನ "ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ" #ಬಿಲಾಲಿ_ಬಿಲ್ಲಿ_ಅಭ್ಯಂಜನ ನಾಡಿನ ಪ್ರಸಿದ್ಧ ಜಲ ತಜ್ಞರು, ಪತ್ರಕರ್ತರು, ಪರಿಸರ ವಿಜ್ಞಾನಿಗಳು, ಬರಹಗಾರರೂ ಆದ ಶಿವಾನಂದ ಕಳವೆ ಬಿಡುಗಡೆ ಮಾಡಿದರು.    ಖ್ಯಾತ ಪತ್ರಕರ್ತರೂ ಮತ್ತು ನನ್ನ ಕಳೆದ ವರ್ಷ ಬಿಡುಗಡೆ ಆಗಿ ಅನೇಕ ದಾಖಲೆ ಮಾಡಿರುವ ಕಾದಂಬರಿ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರರಾಣಿ_ಚಂಪಕ ಮತ್ತು ಈ ಕಥಾ ಸಂಕಲನದ ಮುದ್ರಕರೂ ಆಗಿರುವ ಒಂದು ಕಾಲದ ಹಾಯ್ ಬೆಂಗಳೂರು ವಾರಪತ್ರಿಕೆಯ ರೋವಿಂಗ್ ರಿಪೋರ್ಟರ್ ಎಂದು ರವಿ ಬೆಳೆಗೆರೆಯಿಂದ ಬಿರುದು ಪಡೆದಿದ್ದ ಹಾಲಿ ಶಿವಮೊಗ್ಗ ಜಿಲ್ಲಾ ಪತ್ರಿಕೆ ಜನ ಹೋರಾಟದ ಸಂಪಾದಕರಾದ ಶೃಂಗೇಶ್ ಮತ್ತು ಪ್ರಜಾವಾಣಿ ದಿನಪತ್ರಿಕೆಯ ಬ್ಯೂರೋ ಚೀಪ್ ಆಗಿದ್ದ ಖ್ಯಾತ ಪತ್ರಕರ್ತರು ಈಗ ಸಾಗರದಲ್ಲಿ ಸ್ಯಾನಿಟರಿ ವೇರ್ ಉದ್ಯಮದಲ್ಲಿ ತೊಡಗಿರುವ ಸಾಗರದವರೇ ಆದ ಪ್ರಕಾಶ್ ಕುಗ್ವೆ ನನ್ನ ಅತಿಥಿಗಳಾಗಿದ...

ಆನಂದಪುರಂ ಇತಿಹಾಸ 66, ಆನಂದಪುರಂ ಕೋಟೆ ಒಳಗೆ ಸುಂದರವಾದ ತಾಂಡವೇಶ್ವರ ದೇವಸ್ಥಾನ ಇರುವ ಇತಿಹಾಸ ಇತಿಹಾಸ ಇದೆ ಆದರೆ ಕೋಟೆ ಆಂಜನೇಯ ದೇವಸ್ಥಾನ ಹೊರತು ಪಡಿಸಿ ಬೇರೆ ದೇವಾಲಯದ ಕುರುಹು ಇಲ್ಲ.

#ಆನಂದಪುರಂ_ಇತಿಹಾಸ_66. #ಆನಂದಪುರಂ_ಕೋಟೆಯೊಳಗೆ_ಸುಂದರವಾದ_ತಾಂಡವೇಶ್ವರ_ದೇವಸ್ಥಾನ_ಇದ್ದ_ಉಲ್ಲೇಖವಿದೆ #ಪುರಾತನ_ತಾಂಡವೇಶ್ವರ_ದೇವಸ್ಧಾನ_ಏನಾಯಿತು? #ಈಗಿನ_ಕಾಂತಿಸಿದ್ದೇಶ್ವರ_ದೇವಸ್ಥಾನವೇ_ಆಗಿನ_ತಾಂಡವೇಶ್ವರ_ದೇವಾಲಯ_ಆಗಿತ್ತಾ?       ಕೆಳದಿ ಅರಸರಿಂದ ಅಭಿವೃದ್ದಿ ಹೊಂದಿದ್ದ ಯಡೇಹಳ್ಳಿ ಕೋಟೆ ಕೆಳದಿ ಅರಸರ ಆಳ್ವಿಕೆ ಪೂರ್ವದಲ್ಲಿ ಕಿರಾತಕರ ವಶದಲ್ಲಿತ್ತೆಂಬ ಇತಿಹಾಸ ಉಲ್ಲೇಖಗಳಿದೆ.    ಕೆಳದಿ ಅರಸರ ವಶ ಆದ ನಂತರ ಈ ಕೋಟೆ ಆಧುನಿಕರಣದ ಅಭಿವೃದ್ಧಿ ಆಯಿತು, ಕೆಳದಿ ಅರಸ ವೆಂಕಟಪ್ಪ ನಾಯಕರು ತನ್ನ ಮೂರನೆ ರಾಣಿ ಚಂಪಕಳನ್ನ ಈ ಕೋಟೆಯ ಅರಮನೆಯಲ್ಲಿ ಇರಿಸಿದ್ದರು ನಂತರ ಜಾತಿ ಮತ್ತು ಆಹಾರ ಪದ್ದತಿಯ ಕಾರಣದಿಂದ ಎರಡನೆ ರಾಣಿ ಭದ್ರಮ್ಮಾಜಿಯವರು ಅನ್ನ ಆಹಾರ ತ್ಯಜಿಸಿ ದೇಹ ತ್ಯಾಗ ಮಾಡಿದ ನಂತರ ಪ್ರಜೆಗಳು ರಾಜ ವೆಂಕಟಪ್ಪ ನಾಯಕರ ವಿರುದ್ಧವಾಗಿದ್ದರಿಂದ ನೊಂದ ಚಂಪಕಳ ಆತ್ಮಹತ್ಯೆ ಇವರ ದುರಂತ ಪ್ರೇಮ ಕಥೆಯ ಸ್ಮಾರಕವಾಗಿ ಚಂಪಕ ಸರಸ್ಸು ನಿರ್ಮಿಸಿ ಈ ಪ್ರದೇಶಕ್ಕೆ ಚಂಪಕಳ ಸ್ಮರಣೆಗಾಗಿ ಆನಂದಪುರಂ ಎಂದು ನಾಮಕರಣ ಆಯಿತು.     ಸದರಿ ಕೋಟೆ ಇಬ್ಬಾಗಿಸಿ 1938 ರಲ್ಲಿ ಶಿವಮೊಗ್ಗ ತಾಳಗುಪ್ಪ ರೈಲ್ವೆ ಮೀಟರ್ ಗೇಜ್ ನಿರ್ಮಿಸಲಾಯಿತು ಈಗ ಬ್ರಾಡ್ ಗೇಜ್ ಆಗಿ ಪರಿಪರ್ತಿಸಲಾಗಿದೆ.    ಕೋಟೆ ಒಳಗಿನ ಆಂಜನೇಯ ದೇವಾಲಯ ಇತ್ತೀಚೆಗೆ ಸ್ಥಳಿಯ ಭಕ್ತರಿಂದ ಪುನರ್ ನಿರ್...

ಕ್ರಿಸ್ಮಸ್ ಗೂ ಪ್ಲಮ್ ಕೇಕಿಗೂ ಇರುವ ಸಂಬಂದ. ರೋಮನ್ ಮೂಲದ ಕೇಕ್ ಗೆ 15 ನೇ ಶತಮಾನದ ಕೊನೆಯವರೆಗೆ ಬೆಣ್ಣೆ ಬಳಸಲು ಚರ್ಚ್ ರೆಗ್ಯೂಲೇಷನ್ ಅನುಮತಿ ಇರಲಿಲ್ಲ.

#ಕ್ರಿಸ್ಮಸ್_ಹಬ್ಬಕ್ಕೂ_ಪ್ಲಮ್_ಕೇಕಿಗೂ_ಇರುವ_ಸಂಬಂದ #ಪ್ಲಮ್_ಕೇಕ್_ಮೂಲ_ರೋಮನ್  #ಪ್ಲಮ್_ಕೇಕಿಗೆ_ಬೆಣ್ಣೆ_ಬಳಸಲು_ಲಿಖಿತ_ಅನುಮತಿ_ಪೋಪರಿಂದ_1499ರಲ್ಲಿ #ರೋಮನ್_ಚರ್ಚ್_ರೆಗ್ಯೂಲೇಷನ್_ಕೇಕಿನಲ್ಲಿ_ಬೆಣ್ಣೆ_ಬಳಸಲು_ನಿಷೇದವಿತ್ತು.   ಈ ವಷ೯ದ ಕ್ರಿಸ್ ಮಸ್ ಪ್ಲಮ್ ಕೇಕ್ ಮುಂಬೈನ ಪ್ರಸಿದ್ದ ವಿಯಾನ ಬೇಕರಿಯಿಂದ ನಮ್ಮ ಪ್ರೀತಿಯ ಡುಮಿಂಗ್ ರೆಬೆಲೋ ಪುತ್ರಿ ಕಳಿಸಿದ್ದರು, ಅವರ ಮಗಳು ಶ್ರೀಮತಿ ಸಿಲ್ವಿಯ ಕುಟುಂಬ ಮುಂಬಾಯಿಯಲ್ಲಿ ನೆಲೆಸಿದೆ.   ಕಳೆದ ವರ್ಷ ಹರಿಹರದ ಪ್ರಸಿದ್ದ ಚಚ್೯ ಪಾದರ್ ಆಗಿದ್ದ ಪಾದರ್ ಮಾರ್ಕ್ ಡಿಸಿಲ್ವಾ (ಈಗ ನಿವೃತ್ತರು) ಕಳಿಸಿದ್ದರು.   ವಿಶ್ವದಾದ್ಯಂತ ಕ್ರೈಸ್ತರು ಕ್ರಿಸ್ ಮಸ್ ಗೆ ಪ್ಲಮ್ ಕೇಕ್ ಹೆಚ್ಚು ಬಳಸುತ್ತಾರೆ.   ಪ್ಲಮ್ ಕೇಕ್ ಅಂತ ಹೆಸರೇಕೆ ಅಂತ ಸ್ಪಷ್ಟವಿಲ್ಲ ಆದರೆ ಪುರಾತನ ರೋಮನ್ ರು ಬಾಲಿ೯ ಹಿಟ್ಟು ಬಳಸಿ ಈ ಕೇಕ್ ತಯಾರಿಸುತ್ತಿದ್ದರಂತೆ ನಂತರ ಜೇನು ತುಪ್ಪ, ಸಂಸ್ಕರಿಸಿದ ಹಣ್ಣು ಮತ್ತು ಮಸಾಲೆ ಪದಾರ್ಥ (spice) ಬಳಕೆ ಪ್ರಾರಂಭ ಆಯಿತು.   ನಂತರ ಈ ಕೇಕ್ ಖಾದ್ಯ ಯೋಗ್ಯವಾಗಲು ಸ್ಪಿರಿಟ್ ಬಳಕೆ ಪ್ರಾರಂಭ ಆಯಿತು ಆದರೆ ಈ ಕೇಕ್ ತಯಾರಿಸಲು ಬೆಣ್ಣೆ ಬಳಸಲು ಮಾತ್ರ ಚರ್ಚ್ ರೆಗ್ಯೂಲೇಷನ್ ನಲ್ಲಿ ಅನುಮತಿ ಇರಲಿಲ್ಲ!!.    1490ರಲ್ಲಿ ಪೋಪ್ ಇನ್ನೊಸೆಂಟ್ VIII ಪ್ಲಮ್ ಕೇಕ್ ನಲ್ಲಿ ಬೆಣ್ಣೆ ಬಳಸಲು ವಿಶೇಷ ಅನುಮತಿ ಬಹು ಜ...

1980 ರಲ್ಲಿ ಭಾರತದಲ್ಲಿ ಗೋಚರವಾದ ಪೂರ್ಣ ಸೂರ್ಯ ಗ್ರಹಣ ಮರೆಯಲಾರದ ನೆನಪು

#1980ರ_ಪೆಬ್ರವರಿ_16ರಲ್ಲಿ_ನಡೆದ_ಪೂಣ೯_ಸೂಯ೯_ಗ್ರಹಣ  #ನಾನು_ಜೀವಮಾನ_ಮರೆಯುವುದಿಲ್ಲ #ಕಾರಣ_ಬರಿಗಣ್ಣಲ್ಲಿ_ಸೂಯ೯_ಗ್ರಹಣ_ನೋಡಿ_ನನ್ನ_ಬಲಗಣ್ಣ_ಅಕ್ಷಿಪಟಲ_ಹರಿದು_ಹೋಗಿತ್ತು. #ಎರೆಡು_ವರ್ಷದ_ಹಿಂದೆ_26_ಡಿಸೆಂಬರ್_2019ರ_ಸೂರ್ಯ_ಗ್ರಹಣದಲ್ಲಿ_ನೆನಪಾಯಿತು.   ಮೊದಲ ಚಿತ್ರ ಪತ್ರಕತ೯ ತಲವಾಟದ ರಾಘವೇ೦ದ್ರ ಶಮ೯ರು(26- ಡಿಸೆಂಬರ್‌-2019)ತೆಗೆದ ಆತ್ಯುತ್ತಮ ಚಿತ್ರ, ಇನ್ನೊಂದು ಗ್ರಹಣ ಕಾಲದಲ್ಲಿ ಆನಂದಪುರದ ಬಸ್ ನಿಲ್ದಾಣದ ಎಲ್ಲಾ ಅಂಗಡಿ ಮಳಿಗೆ ಬಂದ್ ಆಗಿರುವುದು    ಸೂಯ೯ ಗ್ರಹಣದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಯ ಹೆಚ್ಚಾಗುತ್ತಿದೆ, ಟಿವಿ, ಮೊಬೈಲ್ಗಳ ಈ ಮುಂದುವರಿದ ಆದುನಿಕ ಭಾರತದಲ್ಲಿ ವಿಜ್ಞಾನದ ಹೆಚ್ಚಿನ ತಿಳುವಳಿಕೆ ಉ೦ಟಾಗುತ್ತದೆ ಮತ್ತು ಮೂಡನಂಬಿಕೆಗಳು ನಶಿಸುತ್ತದೆ ಎಂಬ ಭರವಸೆ ಸುಳ್ಳಾಗಿದೆ.    ಟಿವಿಗಳ ಚಾನಲ್ ಗಳ ಜೋತಿಷಿಗಳು ಹುಟ್ಟು ಹಾಕುವ ವಿವಿದ ಆಚರಣೆಯ ಹೆಸರಲ್ಲಿ ಬೀತಿ ಜನ ಸಾಮಾನ್ಯರ ಜೀವನ ಕ್ರಮದಲ್ಲಿ ಅನೇಕ ಮೌಡ್ಯಕ್ಕೆ ಕಾರಣವಾಗಿದೆ.    1980ರ ಪೆಬ್ರುವರಿ 16ರOದು ನಡೆದ ಖಗ್ರಾಸ ಸೂಯ೯ಗ್ರಹಣದ ದಿನ ನೆನಪಿಗೆ ಬಂತು ಅವತ್ತು ಶನಿವಾರ ಆದರೂ ಶಾಲಾ ಕಾಲೇಜುಗಳಿಗೆ ರಜಾ ನೀಡಿದ್ದರು, ದಕ್ಷಿಣ ಭಾರತದಲ್ಲಿ ಸಂಪೂಣ೯ ಗ್ರಹಣ ಗೋಚರ ಆಗುವುದರಿಂದ ದೇಶ ವಿದೇಶದ ಖಗೋಳ ವಿಜ್ಞಾನಿಗಳು ಬಂದಿದ್ದರು ಅವತ್ತಿನ ನಿತ್ಯ ಪತ್ರಿಕೆ ಮತ್ತ...

ಬಿದನೂರು ನಗರ ಸಮೀಪದ ಕೆಳದಿ ಅರಸರು ನಿರ್ಮಿಸಿರುವ ದೇವಗಂಗೆ ಕೊಳಗಳು ಸಂಶೋದಕರಿಗೆ, ಜಲ ತಜ್ಞರಿಗೆ ಮತ್ತು ಪ್ರವಾಸಿಗಳಿಗೆ ಕೈ ಬೀಸಿ ಕರೆಯುತ್ತಿದೆ.

ಜಲ ವಿಜ್ಞಾನಿಗಳಿಗೆ, ನೈಸಗಿ೯ಕ ಈಜು ಕೊಳದ ಆದುನಿಕ ಪ್ರತಿಪಾದಕರಿಗೆ ಮತ್ತು ಇತಿಹಾಸ ಪ್ರಿಯರಿಗೆ ಕೈ ಬೀಸಿ ಕರೆಯುತ್ತಿರುವ ದೇವಗಂಗೆ.   # ಬಿದನೂರು ನಗರದ ಈ ಸು೦ದರ ಈಜು ಕೊಳಗಳ ಸಂಕೀಣ೯ಕ್ಕೆ ಒಮ್ಮೆಯಾದರೂ  ಬೇಟಿ ನೀಡಿ.#      ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಿದನೂರು ನಗರದ ಕೋಟೆಯಿ೦ದ ಕೊಲ್ಲೂರು ಮಾಗ೯ದಲ್ಲಿ 5-6 ಕಿ.ಮಿ. ಸಾಗಿದರೆ ಅಲ್ಲಿ ಬೈಸೆ ಎಂಬ ಹಳ್ಳಿ ಸಿಗುತ್ತದೆ, ಈ ಹಳ್ಳಿಯ ಬಲ ಬಾಗದಲ್ಲಿ ಕೆಳದಿ ಅರಸರ ಶಿಥಿಲ ಸಮಾದಿಗಳು ಇದೆ.   ಇಲ್ಲೇ ಒಂದು ರಸ್ತೆ ಬಲಕ್ಕೆ ದೇವಗಂಗೆಗೆ ಹೋಗುತ್ತದೆ, ಇಲ್ಲಿಯೇ ಕೆಳದಿ ಅರಸರ ಅದ್ಬುತ ನಿಮಾ೯ಣದ ಈಜು ಕೊಳಗಳ ಸಂಕೀಣ೯ವಿದೆ.   ಈಗೆಲ್ಲ ನೈಸಗಿ೯ಕ ಈಜುಕೊಳಗಳ ಬಗ್ಗೆ ವಿದೇಶಗಳಲ್ಲಿ ವಿಪರೀತ ಕಯಾಲಿಪ್ರಾರಂಭ ಆಗಿದೆ ಆದರೆ 350 - 400 ವಷ೯ದ ಹಿಂದೆ ಕೆಳದಿ ಅರಸರು ನಿಮಿ೯ಸಿದ ಈ ನೈಸಗಿ೯ಕ ಈಜು ಕೊಳಗಳ ಸಂಕೀಣ೯ ಸಂಶೋದನೆಗೆ ಆಹ೯ವಾಗಿದೆ.   ವಷ೯ ಪೂತಿ೯ ಈ ಈಜು ಕೊಳದಲ್ಲಿ ಒಂದೇ ಮಟ್ಟದಲ್ಲಿ ನೀರು ಇರುತ್ತದೆ ಮತ್ತು ನೀರು ಸದಾ ಹರಿಯುತ್ತಿರುತ್ತದೆ.   ದೊಡ್ಡ ಕೊಳ ಸಂಪೂಣ೯ ಶಿಲೆ ಕಲ್ಲಿನಿಂದ ನಿಮಿ೯ಸಿದ್ದಾರೆ, ಇದರ ಮದ್ಯೆ ರಾಣಿ ಪರಿವಾರದವರಿಗಾಗಿ ಕಲ್ಲಿನ ಸುಂದರ ತೊಟ್ಟಿಲು ಅಲ್ಲಿಗೆ ತಲುಪಲು ಕಲ್ಲಿನ ಸಂಕ ಇದೆ.   ಈಜು ಕೊಳದ ಸುತ್ತಲೂ ಸುಂದರವಾದ ಕಟಾಂಜನ, ಕೊಳಕ್ಕೆ ಇಳಿಯಲು ವಿಶಾಲವಾದ ಪಾವಟಿಗೆಗಳಿದೆ. ದೊ...

ಕೆಳದಿ ರಾಜ ವಂಶಸ್ಥರು ಅಂತಃಪುರ ವಾಸಿಗಳಿಗಾಗಿ ನಿರ್ಮಿಸಿದ್ದ ಸುಂದರವಾದ ಈಜು ಕೊಳಗಳ ಸಂಕೀರ್ಣ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಿದನೂರು ನಗರದ ಸಮೀಪದ ದೇವಗಂಗೆಯಲ್ಲಿದೆ.

#ಜಲ_ವಿಜ್ಞಾನಿಗಳಿಗೆ_ನೈಸಗಿ೯ಕ_ಈಜು_ಕೊಳದ_ಆದುನಿಕ_ಪ್ರತಿಪಾದಕರಿಗೆ_ಮತ್ತು_ಇತಿಹಾಸ_ಪ್ರಿಯರಿಗೆ  #ಕೈ_ಬೀಸಿ_ಕರೆಯುತ್ತಿರುವ_ದೇವಗಂಗೆಯ_ರಾಜವಂಶಸ್ಥರ_ಖಾಸಾಗಿ_ಕೊಳಗಳು   #ಬಿದನೂರು_ನಗರದ_ಈ_ಸು೦ದರ_ಈಜು_ಕೊಳಗಳ_ಸಂಕೀಣ೯ಕ್ಕೆ_ಒಮ್ಮೆಯಾದರೂ_ನೀಡಿ.      ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಿದನೂರು ನಗರದ ಕೋಟೆಯಿ೦ದ ಕೊಲ್ಲೂರು ಮಾಗ೯ದಲ್ಲಿ 5-6 ಕಿ.ಮಿ. ಸಾಗಿದರೆ ಅಲ್ಲಿ ಬೈಸೆ ಎಂಬ ಹಳ್ಳಿ ಸಿಗುತ್ತದೆ, ಈ ಹಳ್ಳಿಯ ಬಲ ಬಾಗದಲ್ಲಿ ಕೆಳದಿ ಅರಸರ ಶಿಥಿಲ ಸಮಾದಿಗಳು ಇದೆ.   ಇಲ್ಲೇ ಒಂದು ರಸ್ತೆ ಬಲಕ್ಕೆ ದೇವಗಂಗೆಗೆ ಹೋಗುತ್ತದೆ, ಇಲ್ಲಿಯೇ ಕೆಳದಿ ಅರಸರ ಅದ್ಬುತ ನಿಮಾ೯ಣದ ಈಜು ಕೊಳಗಳ ಸಂಕೀಣ೯ವಿದೆ.   ಈಗೆಲ್ಲ ನೈಸಗಿ೯ಕ ಈಜುಕೊಳಗಳ ಬಗ್ಗೆ ವಿದೇಶಗಳಲ್ಲಿ ವಿಪರೀತ ಕಯಾಲಿ ಈಗ ಪ್ರಾರಂಭ ಆಗಿದೆ ಏಕೆಂದರೆ ಅದುನಿಕ ಈಜು ಕೊಳಗಳು ಕಾರ್ಬನೈಸೇಷನ್ ನಿರಂತರ ಮಾಡುವುದರಿಂದ ಅನೇಕ ಚರ್ಮ ರೋಗಕ್ಕೆ ಕಾರಣ ಆದರೆ 350 - 400 ವಷ೯ದ ಹಿಂದೆ ಕೆಳದಿ ಅರಸರು ನಿಮಿ೯ಸಿದ ಈ ನೈಸಗಿ೯ಕ ಈಜು ಕೊಳಗಳ ಸಂಕೀಣ೯ ನಿತ್ಯ ನೂತನ ಎಂಬಂತೆ ನಿರಂತರವಾಗಿ ಸದಾ ನೀರು ಹರಿದು ಹೋಗುವ ನೈಸರ್ಗಿಕ ಈಜು ಕೊಳಗಳಾದ್ದರಿಂದ ಸಂಶೋದನೆಗೆ ಆಹ೯ವಾಗಿದೆ.   ವಷ೯ ಪೂತಿ೯ ಈ ಈಜು ಕೊಳದಲ್ಲಿ ಒಂದೇ ಮಟ್ಟದಲ್ಲಿ ನೀರು ಇರುತ್ತದೆ ಮತ್ತು ನೀರು ಸದಾ ಹರಿಯುತ್ತಿರುತ್ತದೆ.   ದೊಡ್ಡ ಕೊಳ ಸಂಪೂಣ೯ ಶಿಲೆ ಕಲ್ಲಿನಿಂದ ನಿಮಿ೯ಸಿದ್ದ...

ಆನಂದಪುರಂ ಕನ್ನಡ ಸಂಘದ ಆವರಣದಲ್ಲಿ 2001ರಲ್ಲಿ ನಾ.ಡಿಸೋಜ ಬಯಲು ರಂಗಮಂದಿರ ಕಡಿದಾಳು ಶಾಮಣ್ಣ ಉದ್ಘಾಟಿಸಿದ್ದರು

#ಆನಂದಪುರಂನ_ಕನ್ನಡ_ಸಂಘ #2001ರಲ್ಲಿ_ಆನಂದಪುರಂ_ಕನ್ನಡ_ಸಂಘದ_ಆವರಣದಲ್ಲಿ_ನಾ_ಡಿಸೋಜ_ಬಯಲು_ರಂಗ_ಮಂದಿರ  #ಉದ್ಘಾಟನೆ_ಕಡಿದಾಳು_ಶಾಮಣ್ಣರಿಂದ    1995 ರಿಂದ 2001ರವರೆಗೆ ಆನಂದಪುರಂ ಹೋಬಳಿಯಲ್ಲಿ ರಚನಾತ್ಮಕ ಕಾಯ೯ ನೆರವೇರಿಸುವ ಹುಮ್ಮಸ್ಸು ಮತ್ತು ವಯಸ್ಸು ನನ್ನದಾಗಿತ್ತು ಆಗ ನನ್ನ ವಯಸ್ಸು 30.   ಮುರುಘಾಮಠ ಸ.ಪ್ರಾ.ಶಾಲೆ ಆವರಣದಲ್ಲಿ ಕೆ.ವಿ.ಸುಬ್ಬಣ್ಣ ರಂಗಮಂದಿರ, ಆನಂದಪುರಂ ಕಾಲೇಜ್ ಆವರಣದಲ್ಲಿ ಹಾಸ್ಯ ನಟ ಬಾಲಕೃಷ್ಣ ರಂಗಮಂದಿರ, ಯಡೇಹಳ್ಳಿ ಶಾಲಾ ಆವರಣದಲ್ಲಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ರಂಗ ಮಂದಿರ ಪ್ರಾರಂಬಿಸಿದ ನಂತರ ಸಾಗರದ ನೆಚ್ಚಿನ ಸಾಹಿತಿ ನಾ.ಡಿಸೋಜ ಬಯಲು ರಂಗಮಂದಿರ ಆನಂದಪುರಂ ನ ಕನ್ನಡ ಸಂಘದ ಆವರಣದಲ್ಲಿ ನಿಮಿ೯ಸಿ ಕಡಿದಾಳು ಶಾಮಣ್ಣರಿಂದ ಉದ್ಘಾಟಿಸಿದ್ದು ಈ ಸಮಾರಂಭದಲ್ಲಿ ನಾ.ಡಿಸೋಜರು ಖುದ್ದಾಗಿ ಭಾಗವಹಿಸಿದ್ದರು.  ಆ ದಿನ ಶಿವಮೊಗ್ಗದ ಜಾಷದಿ ಸಸ್ಯಗಳ ತಜ್ಞ ವೆಂಕಟಗಿರಿಯರನ್ನ ಸನ್ಮಾನಿಸಿದ್ದು ಕೂಡ.   ಎಲ್ಲರೂ ನನ್ನ ಮನೆಯಲ್ಲಿ ಚಹಾ ಕುಡಿದು ಕಾಯ೯ಕ್ರಮಕ್ಕೆ ಹೋಗಿದ್ದೆವು.   ಕಡಿದಾಳು ಶಾಮಣ್ಣ ನಾ.ಡಿಸೋಜ ರಂಗಮ೦ದಿರ ಉದ್ಘಾಟಿಸಿ ದೇವಾಲಯಕ್ಕೆ ಮುಂಚೆ ಟಾಯಿಲೆಟ್ ನಿಮಾ೯ಣ ಆಗಬೇಕೆಂದು 2001ರಲ್ಲೇ ಸ್ವಚ್ಚ ಭಾರತ ಪ್ರತಿಪಾದಿಸಿದರೆ ನಾ.ಡಿ.ನನ್ನ ಹೆಸರಲ್ಲಿ ರಂಗ ಮಂದಿರ ನನ್ನ ಜೀವನದ ಅವಿಸ್ಮರಣಿಯ ದಿನ ಎಂದರು, ನಂತರ ಅವರು ಅತ್ಯಂತ ಮೇಲ್ಮಟ್ಟದ ...

ನನ್ನ ಸಣ್ಣ ಕಥಾ ಸಂಕಲನ ಬಿಲಾಲಿ ಬಿಲ್ಲಿ ಅಭ್ಯಂಜನ ಬಿಡುಗಡೆಗೆ, ಇದರಲ್ಲಿನ ಹಾವುಗೊಲ್ಲರ ಕತ್ತೆ ಪುರಾಣದ ಕಥಾನಾಯಕನ ಬಾವ ಕೃಷ್ಣಪ್ಪ ಮತ್ತು ನನ್ನ ಪುನರ್ ಮಿಲನ ವೃತ್ತಾಂತ ಇಲ್ಲದೆ

#ಇದೇ_ತಿಂಗಳ_30ರಂದು_ನನ್ನ_ಸಣ್ಣ_ಕಥಾ_ಸಂಕಲ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಬಿಡುಗಡೆ. #ಇದರಲ್ಲಿ_ಮೊದಲ_ಕಥೆ_ಹಾವುಗೊಲ್ಲರ_ಕತ್ತೆ_ಪುರಾಣ #ಈ_ಕಥೆಯ_ಕಥಾನಾಯಕ_ವೆಂಕಟೇಶಿಯ_ಬಾವ_ಕೃಷ್ಣಪ್ಪ. #ಹಾವುಗೊಲ್ಲ_ಕೃಷ್ಣಪ್ಪ_ಮತ್ತು_ನನ್ನ_ಪುನರ್_ಮಿಲನದ_ವೃತ್ತಾಂತ_ಕಳೆದವರ್ಷದ್ದು     ಸುಮಾರು ವರ್ಷದ ನಂತರ ರಿಪ್ಪನ್ ಪೇಟೆ ಸಮೀಪದ ಹಾಲುಗುಡ್ಡೆ ಹಾವುಗೊಲ್ಲರ ಕ್ಯಾಂಪಿನ ಕೃಷ್ಣಪ್ಪ ಇವತ್ತು ಸಿಕ್ಕಿದ್ದು ಇಬ್ಬರಿಗೂ ಸಂತೋಷ ಆಯಿತು.   1990 ರಲ್ಲಿ ಇವರೆಲ್ಲರದ್ದು ಅಲೆಮಾರಿ ಜೀವನ, ಹೊಟ್ಟೆಪಾಡಿಗೆ ಹಾವು ಹಿಡಿಯುವುದು, ಹಾವು ಆಡಿಸಿ ಬಿಕ್ಷೆ ಬೇಡುವುದು ಇವರ ನಿತ್ಯ ಕಾಯಕ ಆಗಿತ್ತು.   ಒಂದೂರಿಂದ ಇನ್ನೊಂದು ಊರಿಗೆ ಇವರ ಕ್ಯಾಂಪ್ ಹೋಗಲು ಕತ್ತೆಗಳೇ ಇವರಿಗೆ ವಾಹನ (ಹೆಚ್ಚು ಕತ್ತೆ ಹೊಂದಿದವ ಶ್ರೀಮಂತ ಅಂತ ಇತ್ತು) ಇವರನ್ನೆಲ್ಲ ಕಾಗೋಡು ತಿಮ್ಮಪ್ಪ ಹೊಸನಗರ ತಾಲ್ಲೂಕಿನ ಹಾಲುಗುಡ್ಡೆ ಮತ್ತು ಸಾಗರ ತಾಲ್ಲೂಕಿನ ಶಿರವಂತೆಯಲ್ಲಿ ಜಾಗ ಮನೆ ನೀಡಿದ್ದರಿಂದ ಈಗ ಇವರ ಜೀವನ ಶೈಲಿ ಬದಲಾಗುತ್ತಿದೆ.   ಹಾವು ಹಿಡಿಯುವುದು ಇವರೆಲ್ಲ ಬಿಟ್ಟಿದ್ದಾರೆ (ಕೆಲವೇ ಕೆಲವರು ಮಾತ್ರ ಮುಂದುವರಿಸಿದ್ದಾರೆ) ಹಾವು ನೋಡಿದರೆ ಇವರ ಈಗಿನ ಕಾಲದ ಮಕ್ಕಳು ಹೆದರಿ ಓಡುತ್ತಾರೆ ಅಂತ ಕೃಷ್ಣಪ್ಪ ಹೇಳುತ್ತಿದ್ದ ಮತ್ತೆ ಈಗ ಇವರ ಕ್ಯಾಂಪಿನಲ್ಲಿ ನಾಗ ದೇವರ ಪ್ರತಿಷ್ಠಾಪನೆ ಮಾಡಿಸಿದ್ದಾರಂತೆ ತಲೆತಲಾಂತರದಿಂದ ನಾಗ ಶಾಪ ಕಳೆದು ...

ಮೊದಲ ಸಿಂಥೆಟಿಕ್ ಸೋಪು ಮಾರುಕಟ್ಟೆಗೆ ಬಂದು 88 ವರ್ಷ ಆಯಿತು. ಅದಕ್ಕೂ ಮೊದಲು ಸವಳು ಗುಡ್ಡದ ಮಣ್ಣು ಸ್ನಾನಕ್ಕೆ ಬಳಸುತ್ತಿದ್ದರು.

#ಸೋಪಿನ_ಪುರಾಣ #ಶಿವಮೊಗ್ಗ_ಸಮೀಪದ_ನ್ಯಾಮತಿ_ತೀರ್ಥರಾಮೇಶ್ವರ_ಗುಡ್ಡದ_ಸವಳು_ಶತಮಾನಗಳ_ಕಾಲ_ಈ_ಭಾಗದ_ಸೋಪು_ಆಗಿತ್ತು. #ಸಾವಯವ_ಮಣ್ಣಿನ_ಸೋಪು #197Oರ_ನಂತರ_ಹುಟ್ಟಿದವರಿಗೆ_ಗೊತ್ತೇ_ಇಲ್ಲದ_ಸೋಪಿನ_ಪ್ರಪಂಚ #ಮೊದಲ_ಸಿಂಥೆಟಿಕ್_ಸೋಪು_1933ರಲ್ಲಿ_ಪ್ರಾರ೦ಭ. #ಶಿಲಾಯುಗದಲ್ಲೂ_ಜನ_ಸ್ನಾನಕ್ಕೆ_ಬಳಸುತ್ತಿದ್ದ_ಕ್ಷಾರಯುಕ್ತ_ಮಣ್ಣು.     ಈಗೆಲ್ಲ ಅಮೆಜಾನ್ ನಿಂದ ಡೆಡ್ ಸೀ (ಮೃತ ಸಮುದ್ರದ) ಮಣ್ಣಿನ ಸೋಪು ನಮ್ಮ ಹಳ್ಳಿಗಳಲ್ಲೂ ಖರೀದಿಸುತ್ತಿದ್ದಾರೆ ಕಾರಣ ಚಮ೯ ಕಾಂತಿ ಹೆಚ್ಚಿಸುತ್ತದೆ, ಮೃದು ಮಾಡುತ್ತದೆ, ಚರ್ಮದ ಟಾಕ್ಸಿನ್ ಕೊಳೆ ತೆಗೆಯುತ್ತದೆ, ಪೇಶಿಯಲ್ ವಾಷ್ ಮಾಡುವುದರಿಂದ ಮುಖದ ಚರ್ಮ ಹೈಡ್ರೇಟ್ ಮಾಡುತ್ತದೆ ಅಂತ.   ಇದು ಸತ್ಯವೂ ಹೌದು 1933ರಲ್ಲಿ Procto and Gamble ಕಂಪನಿ ಸಿಂಥೆಟಿಕ್ ಸೋಪು ಮಾರುಕಟ್ಟೆಗೆ ತರುವ ಮುನ್ನ ಜನ ಆಯಾ ಪ್ರದೇಶದಲ್ಲಿ ಸಿಗುವ ಕ್ಷಾರದ ಮಣ್ಣು ಸೋಪಿನಂತೆ ಬಳಸುತ್ತಿದ್ದರು.   ಇದರ ಬಳಕೆ ಕ್ರಿಸ್ತ ಪೂರ್ವ 2800 ರಲ್ಲಿ ಇದ್ದಿತ್ತು ಎಂಬ ಸಂಶೋದನೆಯಲ್ಲಿ ಗೊತ್ತಾಗಿದೆ ಅಂತೆ.     ಶೀಗೆ ಪುಡಿ, ಅಂಟುವಾಳಗಳ ಬಳಕೆ ಕೂಡ ಈಗ ಕಡಿಮೆ   ಒಂದು ಕಾಲದಲ್ಲಿ ಅಂದರೆ ಸುಮಾರು 1965ರ ತನಕ ನಮ್ಮ ಭಾಗದಲ್ಲಿ ಹತ್ತಾರು ಕತ್ತೆ ಮೇಲೆ ಎತ್ತಿನ ಗಾಡಿಗಳಲ್ಲಿ ಸವಳು ಮಣ್ಣಿನ ಮೂಟೆಗಳನ್ನ ತುಂಬಿಕೊಂಡು "ಸವಳು ಬೇಕಾ ಸವಳು" ಅಂತ ಸೋಪಿನ ಮಣ್ಣು ಮಾರಾಟಕ್ಕೆ ಬರುತ್ತಿ...

ನಿನ್ನೆ (20- ಡಿಸೆಂಬರ್ -2020) ರಾತ್ರಿ ಆಕಾಶದಲ್ಲಿ ಬೆಳಕಿನ ಸರಮಾಲೆಯ ಮೆರವಣಿಗೆ ಏನದು? 1970 ರ ದಶಕದಲ್ಲಿ ಸಾಮೂಹಿಕ ಸನ್ನಿಯಂತೆ ಜನರ ಭಯಕ್ಕೆ ಕಾರಣ ಆಗಿದ್ದ ಆಕಾಶದಲ್ಲಿ ನಡೆಯುತ್ತಿದ್ದ ಶವ ಸಂಸ್ಕಾರದ ಮೆರವಣಿಗೆಯ ಸುದ್ದಿ.

#ನಿನ್ನೆ_ಆಕಾಶದಲ್ಲಿ_ಕಂಡದ್ದೇನು? #ಕೆಲವೇ_ಕ್ಷಣದಲ್ಲಿ_ಸಾಮಾಜಿಕ_ಜಾಲತಾಣದಿಂದ_ಉತ್ತರ. #ಎಪ್ಪತ್ತರ_ದಶಕದಲ್ಲಿ_ಸಾಮಾಜಿಕ_ಸನ್ನಿಯಂತೆ_ಭಯ_ಹರಡಿದ್ದ_ಆಕಾಶದಲ್ಲಿನ_ಶವಸಂಸ್ಕಾರದ_ಮೆರವಣಿಗೆ.   ನಿನ್ನೆ ಸಂಜೆ ಆಕಾಶದಲ್ಲಿ ಬೆಳಕಿನ ದೀಪ ಮಾಲೆಯೊಂದು ಮೆರವಣಿಗೆಯಂತೆ ಹೋಯಿತು ಎಂಬ ಚಿತ್ರ - ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ಇದು ದಕ್ಷಿಣ ಭಾರತದಲ್ಲೆಲ್ಲ ಜನ ನೋಡಿದರಂತೆ ಈ ಸುದ್ದಿ ಪ್ರಕಟವಾದ ಕ್ಷಣದಲ್ಲೇ ಇದರ ನೈಜ ಕಾರಣವನ್ನು ಬಾಹ್ಯಾಕಾಶ ವೀಕ್ಷಕರು ತಮ್ಮ ಪ್ರತಿಕ್ರಿಯೆ ನೀಡಿದರು ಇದು ಅಮೆರಿಕಾದ ಶ್ರೀಮ೦ತ ಉದ್ಯಮಿ ವಿಶ್ವದಾದ್ಯಂತ ಅಂತರ್ಜಾಲ ಸಂಪರ್ಕ ಸುಲಭ ಮತ್ತು ಕೆಲವು ಪಟ್ಟು ವೇಗವಾಗಿ ನೀಡಲು ಹಾರಿಬಿಟ್ಟ #space_x ಎಂಬ ಸರಣಿ ಉಪಗ್ರಹಗಳ ಪ್ರತಿಪಲನ ಅಂತ.   ಕ್ಷಣ ಮಾತ್ರದಲ್ಲಿ ಜನರ ಕುತೂಹಲ, ಆತಂಕಗಳು ಪರಿಹಾರ ಆಯಿತು ಇದು ವಿಜ್ಞಾನದ ಸಾಮಾಜಿಕ ಜಾಲ ತಾಣದ ತಾಕತ್ತು ಕೂಡ.   1970 ರ ದಶಕದ ಪ್ರಾರಂಭದಲ್ಲಿ ಒಂದು ಆತಂಕಕಾರಿ ಸುದ್ದಿ ಎಲ್ಲಿಂದಲೋ ಹರಡಿತು ಅದೇನೆಂದರೆ ಅಮಾವಾಸ್ಯೆ ಹಿಂದೆ ಮುಂದಿನ ಮದ್ಯರಾತ್ರಿಯಲ್ಲಿ ಆಕಾಶದಲ್ಲಿ ಶವ ಸಂಸ್ಕಾರದ ಮೆರವಣಿಗೆ ಉತ್ತರದಿಂದ ದಕ್ಷಿಣಕ್ಕೆ ಹೋಗಿದ್ದು ಕೆಲವರು ನೋಡಿದ್ದೆವೆಂಬ ಸುದ್ದಿ ಪ್ರತಿ ತಿಂಗಳ ಅಮಾವಾಸ್ಯೆ ಸಂದರ್ಭದಲ್ಲಿ ಆ ಊರಲ್ಲಿ ಕಂಡಿತು ಈ ಊರಲ್ಲಿ ಕಂಡಿತು ಎಂಬ ಸುದ್ದಿ ಜನ ಸೇರುತ್ತಿದ್ದ ಊರ ಚೌಕದಲ್ಲಿ, ಕೃಷಿ ಕೆಲಸದ ನಡುವೆ, ಮಧ್ಯದ ಅಂಗಡಿಯಲ್ಲ...

ಪಶ್ಚಿಮ ಘಟ್ಟದ ಮಲೆನಾಡಿನ ಪ್ರಖ್ಯಾತ ಅಕ್ಕಿ ಉಂಡೆ ಕಡಬು

#ಮಲೆನಾಡಿನ_ಚಿರಪರಿಚಿತ_ಉಂಡೆಕಡುಬು  #ಸಸ್ಯಹಾರ_ಮಾಂಸಹಾರಕ್ಕೂ_ಬಳಕೆ. #ಪಶ್ಚಿಮಘಟ್ಟದ_ಶಿವಮೊಗ್ಗ_ಚಿಕ್ಕಮಗಳೂರು_ಕೊಡುಗಿನಲ್ಲಿ_ಮಾತ್ರ_ಹೆಚ್ಚು.    ಉಂಡೆ ಕಡಬು ಪಶ್ಚಿಮ ಘಟ್ಟದಲ್ಲಿನ ಮಲೆನಾಡಿನ ಕೆಲ ಪ್ರದೇಶದಲ್ಲಿ ಈ ಪರಿ ಖ್ಯಾತಿ (ಕುಖ್ಯಾತಿ) ಪಡೆಯಲು ಕಾರಣ ಏನಿರಬಹುದು?   ತಾವು ಬೆಳೆಯುವ ಅಕ್ಕಿ ಕಾರಣವಾ? ಇಡ್ಲಿ, ದೊಸೆ ಮತ್ತು ರೊಟ್ಟಿಯಷ್ಟು ಶ್ರಮ ಇಲ್ಲವ೦ತನಾ? ಚಟ್ನಿ, ಸಾರು, ಮೀನು ಮತ್ತು ಮಾಂಸದ ಅಡುಗೆಗೆ ಒಳ್ಳೆ ಕಾಂಬಿನೇಷನ್ ಅಂತಾನಾ? ಹೀಗೆ ಹಲವು ಪ್ರಶ್ನೆಗಳಿದೆ.    ಇತ್ತೀಚಿನ #ಮಲ್ನಾಡು_ಕಾರ್ಟೂನ್ ನಲ್ಲಿ "ಅಮ್ಮಾ ... ಇವತ್ತೇನೆ ?" ಅನ್ನೋ ಉಂಡೆ ಕಡಬು ಪ್ರಸಂಗ ಬಾರೀ ವೈರಲ್ಲೂ ಆಗಿತ್ತು.   ಈಶಾನ್ಯ ಭಾರತ, ಗುಜರಾತ್ ಮತ್ತು ಪಂಜಾಬ್ ಅಡುಗೆಯಲ್ಲಿ ಅಕ್ಕಿಯ ಬೇರೆ ರೀತಿ ಕಡಬು ಇದೆ ಆದರೆ ನಮ್ಮ ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನ ಶಿವಮೊಗ್ಗ - ಚಿಕ್ಕ ಮಗಳೂರು - ಕೊಡಗು ಭಾಗದ ಈ ಉಂಡೆ ಕಡಬು ಕಾಣಬರುವುದಿಲ್ಲ ಹಾಗಾಗಿ ಇದು ಈ ಭಾಗದ exclusive ತಿಂಡಿಯೇ ಸರಿ.    ಮಲೆನಾಡಿನ ಕೃಷಿಕರ ಮನೆಯಲ್ಲಿ ನಿತ್ಯ ಉಪಹಾರ ಅಕ್ಕಿ ಉಂಡೆ ಕಡಬು ಇದಕ್ಕೆ ನಂಜಿಕೊಳ್ಳುವ ವ್ಯಂಜನ ಮಾತ್ರ ಬದಲಾಗುತ್ತದಾರಿಂದ ಈ ಭಾಗದ ಮಕ್ಕಳು ಉಂಡೆ ಕಡಬು ಅಂದರೆ ಉರಿದು ಬೀಳುತ್ತಾರೆ, ಅಕ್ಕಿ ತುರಿ ಉಪ್ಪಿನೊಂದಿಗೆ ಬೇಯಿಸಿ ಉಂಡೆ ಕಟ್ಟಿ ಇಡ್ಲಿ ಪಾತ್ರೆಯಲ್ಲಿಟ್ಟರೆ ಆಯಿತು ಅದಾಗೆ ಬೆಂದು ಉಂಡೆ ಕ...

ಆನಂದಪುರಂ ಇತಿಹಾಸ ಭಾಗ-65. ಆನಂದಪುರಂ ಕನಕಮ್ಮಳ್ ಆಸ್ಪತ್ರೆಯಲ್ಲಿ ಸುಮಾರು 1960ರಿಂದ ಆರೋಗ್ಯ ಸೇವೆ ಸಲ್ಲಿಸಿ ಜನಾನುರಾಗಿ ಆಗಿದ್ದ ಲೀಲಾವತಿ ಸಿಸ್ಟರ್ ಈಗ ಪುರಪ್ಪೆ ಮನೆಯಲ್ಲಿ ನಿವೃತ್ತ ಜೀವನ ನಡೆಸಿದ್ದಾರೆ.

#ಲೀಲಾವತಿ_ಸಿಸ್ಟರ್_ಗ್ರಾಮೀಣ_ಭಾಗದ_ಆರೋಗ್ಯ_ಸೇವೆ. #ಆನಂದಪುರಂ_ಪುರಪ್ಪೆಮನೆ_ಭಾಗದಲ್ಲಿ_ಚಿರಪರಿಚಿತರು #ಎಂಬತ್ತೆರೆಡರ_ವೃದ್ದಾಪ್ಯದಲ್ಲಿ_ಪುರಪ್ಪೆಮನೆ_ಎಂಬ_ಹಳ್ಳಿಯಲ್ಲೇ_ನೆಲೆಸಿದ್ದಾರೆ. #ಮಗ_ಏಸುಪ್ರಕಾಶ್_ನೀನಾಸಂ_ನಾಟಕ_ಚಲನಚಿತ್ರ_ಸಾರಾ_ಸಂಸ್ಥೆ_ಮೂಲಕ_ಸಮಾಜ_ಸೇವೆಯಲ್ಲಿದ್ದಾರೆ     1960 ರ ದಶಕದಲ್ಲಿ ಆನಂದಪುರಂನ ಕನಕಮ್ಮಾಳ್ ಆಸ್ಪತ್ರೆಗೆ ಉತ್ತುಂಗದ ಕಾಲ ಆಗ ದೂರದ ಶಿಕಾರಿಪುರ, ಕುಂಸಿ, ರಿಪ್ಪನ್ ಪೇಟೆ, ಕೋಣಂದೂರು, ಹೊಸನಗರ ಭಾಗದಿಂದ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದ ಕಾಲ.   ಜಮೀನ್ದಾರರು, ಕೊಡುಗೈ ದಾನಿಗಳು ಆಗಿದ್ದ ರಾಮಕೃಷ್ಣ ಅಯ್ಯಂಗಾರರು ತಮ್ಮ ದಮ೯ ಪತ್ನಿ ಕನಕಮ್ಮಾಳ್ ಸ್ಮಾರಕವಾಗಿ ನಿರ್ಮಿಸಿ ಸಾರ್ವಜನಿಕರಿಗೆ ಬಿಟ್ಟು ಕೊಟ್ಟ ಈ ಆಸ್ಪತ್ರೆಯಲ್ಲಿ ಆ ಕಾಲದಲ್ಲಿ ಸೇವೆ ಸಲ್ಲಿಸಿದವರೂ ಸೇವಾ ಮನೋಭಾವನೆಯ ವೈದ್ಯಕೀಯ ಸಿಬ್ಬಂದಿಗಳೆ.   ಅವರಲ್ಲಿ ಒಬ್ಬರಾಗಿ ಆನಂದಪುರಂ ಭಾಗದ ಜನರಿಗೆ ಸೇವೆ ಸಲ್ಲಿಸಿ ಜನಾನುರಾಗಿ ಆಗಿದ್ದ ಲೀಲಾವತಿ ಸಿಸ್ಟರ್ ಜನರ ಬಾಯಲ್ಲಿ ಪ್ರೀತಿಯಿಂದ ಸ೦ಕ್ಷಿಪ್ತವಾಗಿ ಕರೆಯುವ ಹೆಸರು ಲೀಲಾ ಸಿಸ್ಟರ್.   ನಂತರ ಪುರಪ್ಪೆ ಮನೆ ಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಈಗ ತಮ್ಮ 82ನೇ ವಯಸ್ಸಲ್ಲಿ ಪುರಪ್ಪೆ ಮನೆಯಲ್ಲೇ ಸ್ವಂತ ಮನೆ ನಿರ್ಮಿಸಿಕೊಂಡು ಮಗನೊಂದಿಗೆ ಆರೋಗ್ಯವಾಗಿ ಜೀವನ ಕಳೆಯುತ್ತಿದ್ದಾರೆ. ...

ಮುರುಗನ್ ಪೋಡಿ ಇಡ್ಲಿ ಘಮ ಘಮ ಬಾಯಿಯಲ್ಲಿ ನೀರು ತರಿಸುವ ರುಚಿ, ಸದ್ಯದಲ್ಲೇ ಆನಂದಪುರಂ ನ ಮಲ್ಲಿಕಾ ವೆಜ್ ನಲ್ಲಿ ಲಭ್ಯ.

#ಇವತ್ತಿನ_ಉಪಹಾರ_ಪೋಡಿ_ಇಡ್ಲಿ #ತಮಿಳುನಾಡಿನ_ಮುರುಘನ್_ಪೋಡಿ_ಇಡ್ಲಿ_ರೆಸ್ಟೋರಾಂಟ್_ಸರಪಳಿ  ಮುಂದಿನ ದಿನದಲ್ಲಿ ನಮ್ಮ #ಮಲ್ಲಿಕಾ_ವೆಜ್ ನಲ್ಲಿ ಗ್ರಾಹಕರಿಗೆ ಪರಿಶುದ್ಧ ತುಪ್ಪದಲ್ಲಿ ತಯಾರಿಸಿದ ಪೋಡಿ ಇಡ್ಲಿ ಸಿಗಲಿದೆ, ಇದಕ್ಕಾಗಿ ಪೋಡಿ ಇಡ್ಲಿ ತಯಾರಿಸುವ, ರುಚಿ ನೋಡುವ ಮತ್ತು ಕೆಲ ಬದಲಾವಣೆ ಅಳವಡಿಸುವ ಟ್ರಯಲ್ ಮನೇನಲ್ಲಿ ನಡೆದಿದೆ.   ಇವತ್ತು ಮನೇನಲ್ಲಿ ತಮಿಳುನಾಡಿನ ಪ್ರಖ್ಯಾತ ಪೋಡಿ ಇಡ್ಲಿ ತಯಾರಿಸಿ ಉಪಹಾರ ಆಯಿತು, ಮುಂದಿನ ದಿನದಲ್ಲಿ ನಮ್ಮ ನೌಕರರು ರುಚಿ ನೋಡಲಿದ್ದಾರೆ ನಂತರ ಆಯ್ದ ಕೆಲ ಗೆಳೆಯರು ನಂತರ ನಿತ್ಯ ಗ್ರಾಹಕರಿಗೆ ಲಭ್ಯ.   1991ರಲ್ಲಿ ತಮಿಳುನಾಡಿನ ಮದುರೈನಲ್ಲಿ ಮುರುಘಾ ಕಾಫಿ ನಿಲಯಮ್ ಎಂಬ ರೆಸ್ಟೋರೆಂಟ್ ಅನೇಕ ಬದಲಾವಣೆ ಆಗಿ ಈಗ ತಮಿಳುನಾಡಿನಾದ್ಯಂತ #ಮುರುಘನ್_ಪೋಡಿ_ಇಡ್ಲಿ ರೆಸ್ಟೋರಾಂಟ್ ಗಳ ಸರಪಳಿ ಮಾಡಿದ್ದಾರೆ ವಿದೇಶದ ಸಿಂಗಾಪುರದಲ್ಲೂ ಪೋಡಿ ಇಡ್ಲಿ ಸಿಗುತ್ತದೆ.   ಬೆಂಗಳೂರು ಸಮೀಪದ ಕೃಷ್ಣಗಿರಿಯಲ್ಲಿ ಇರುವ ಮುರುಘನ್ ಪೋಡಿ ಇಡ್ಲಿ ರೆಸ್ಟೋರಾಂಟ್ ಗೆ ಬೆಂಗಳೂರಿಗರು ಮುಗಿ ಬೀಳುತ್ತಾರೆ.   ಇವರ ರೆಸ್ಟೊರಾ೦ಟ್ ನಲ್ಲಿ ಪೋಡಿ ಇಡ್ಲಿ ತಯಾರಿಸಲು ಬಳಸುವ ಉದ್ದಿನ ಬೇಳೆ, ಮೆಣಸು, ಉಪ್ಪು ಮತ್ತು ಇಂಗು ಪುಡಿಯನ್ನು 200 ಗ್ರಾಂಗಳ ಸುಂದರ ಪ್ಯಾಕಿನಲ್ಲಿ ರೂ 120 ಕ್ಕೆ ಮಾರುತ್ತಾರೆ, ಇದನ್ನು ಮನೆಯಲ್ಲಿ ಶುದ್ಧ ತುಪ್ಪ ಕಾಯಿಸಿ ಅದರಲ್ಲ...