Skip to main content

Posts

Showing posts from October, 2021

ಆನಂದಪುರಂ ಇತಿಹಾಸ, ಭಾಗ - 64. ಐತಿಹಾಸಿಕ ಕರ್ನಾಟಕ ನಾಮಕರಣದಲ್ಲಿ ಅಂದಿನ ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ ಇಲಾಖ ಮಂತ್ರಿ ಆನಂದಪುರಂ ನ ಬದರೀನಾರಾಯಣ ಅಯ್ಯಂಗಾರರು, ಈ ಕಾರ್ಯದಲ್ಲಿ ಅವರ ಜವಾಬ್ದಾರಿ ಮಹತ್ವದ್ದಾಗಿತ್ತು.

#ಆನಂದಪುರಂ_ಇತಿಹಾಸ #ಭಾಗ_64. #ಕರ್ನಾಟಕ_ನಾಮಕರಣಕ್ಕೂ_ಆನಂದಪುರಂಗೂ_ನಂಟಿದೆ. #ಕನ್ನಡ_ರಾಜ್ಯೋತ್ಸವದ_ಶುಭಾಷಯಗಳ_ಜೊತೆ #ದೇವರಾಜಅರಸರು_1973_ನವೆಂಬರ್_1ರಂದು_ಕರ್ನಾಟಕ_ನಾಮಕರಣ_ಮಾಡುವಾಗ_ಜೊತೆಗಿದ್ದವರು_ಬದರಿನಾರಾಯಣಯ್ಯಂಗಾರರು. #ಕರ್ನಾಟಕ_ನಾಮಕರಣಕ್ಕೆ_ಆಗಿನ_ಶಿಕ್ಷಣ_ಮತ್ತು_ಕನ್ನಡಸಂಸ್ಕೃತಿ_ಇಲಾಖೆ_ಮಂತ್ರಿ_ಬದರಿನಾರಾಯಣಯ್ಯಂಗಾರ್_ಪ್ರಮುಖರು. #ಜ್ಞಾನಪೀಠಪ್ರಶಸ್ತಿ_ಪಡೆದ_ಮೊದಲ_ಕನ್ನಡಿಗ_ಕುವೆಂಪು. #ಶಿಮೊಗ್ಗ_ಎಂಬ_ಹೆಸರನ್ನು_ಶಿವಮೊಗ್ಗ_ಎಂದು_ಬದಲಿಸಿದವರು_ಸಿದ್ದರಾಮಯ್ಯ_2014ರಲ್ಲಿ.     ಮೈಸೂರು ರಾಜ್ಯ 1956 ನವೆಂಬರ್ 1 ರಂದು ಉದಯವಾಯಿತು. ಕನ್ನಡ ಮಾತಾಡುವ ಮದ್ರಾಸ್, ಮುಂಬೈ ಮತ್ತು ಹೈದ್ರಾಬಾದ್ ಪ್ರಾಂತ್ಯದ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯ ಮಾಡಲಾಗಿತ್ತು.   1973 ನವೆಂಬರ್ 1 ರಂದು ದೇವರಾಜ ಅರಸರು ಮೈಸೂರು ರಾಜ್ಯಕ್ಕೆ #ಕರ್ನಾಟಕ ಎಂದು ಮರು ನಾಮಕರಣ ಮಾಡುತ್ತಾರೆ ಅವತ್ತು ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ ಇಲಾಖಾ ಮಂತ್ರಿ ಆಗಿದ್ದವರು ಶಿವಮೊಗ್ಗ ಜಿಲ್ಲೆಯ ಎ.ಆರ್. ಬದರಿನಾರಾಯಣಯ್ಯಂಗಾರ್ (ಆನಂದಪುರಂ ರಾಮಕೃಷ್ಣಯ್ಯಂಗಾರ್ ಬದರಿನಾರಾಯಣ್ ಅಯ್ಯಂಗಾರ್ ಎಂಬುದು ಅವರ ಪೂರ್ಣ ಹೆಸರು) ಈ ಐತಿಹಾಸಿಕ ಕರ್ನಾಟಕ ನಾಮಕರಣದಲ್ಲಿ ಬದರಿನಾರಾಯಣರ ಪಾತ್ರ ಕೂಡ ಮುಖ್ಯಮಂತ್ರಿ ದೇವರಾಜ ಅರಸರಷ್ಟೆ ಮಹತ್ವದಾಗಿತ್ತು.   ಈ ಐತಿಹಾಸಿಕ ಕ್ಷಣದ ಪೋಟೋ ಇಲ್ಲಿ ಹಾಕಿದೆ...

ಜಿಲ್ಲಾ ಪಂಚಾಯತ್ ಸದಸ್ಯ ಅವಧಿ ಮುಗಿಯುವಾಗ ಅಕ್ಷರಶಃ ಪಾಪರ್ ಆಗಿದ್ದೆ, ವಿರೋದಿಗಳು ನನ್ನ ಮೇಲೆ ಸೇಡು ತೀರಿಸಿಕೊಂಡ ಪರಿ ಜೀವನದಲ್ಲಿ ಮರೆಯಲಾರದ ಸಂಕಷ್ಟದ ದಿನಗಳು, ಸೈತಾನನು ಸಮಾಜದಲ್ಲಿ ತೊಂದರೆ ಕೊಡುವವರು ಸೃಷ್ಟಿಸಿದಂತೆ ದೇವರು ಸಹಾಯ ಮಾಡುವವರನ್ನೂ ಸೃಷ್ಟಿಸಿದ್ದಾನೆ. ಈ ಸಾಲಿನಲ್ಲಿ ನನಗೆ ಶಿವಮೊಗ್ಗದ ಮದು ಲಾಯರ್ ಸ್ಮರಣೀಯರು.

#ಶಿವಮೊಗ್ಗದ_ಪ್ರಖ್ಯಾತ_ವಕೀಲರಾದ_ಮದುಲಾಯರ್ #ತೊಂದರೆ_ಕೊಡುವವರೂ_ಸಮಾಜದಲ್ಲಿ_ಇರುವಂತೆ_ಸಹಾಯ_ಮಾಡುವವರೂ_ಇರುತ್ತಾರೆ. #ಜಿಲ್ಲಾಪಂಚಾಯತ್_ಸದಸ್ಯ_ಅವಧಿ_ಮುಗಿಯುವಾಗ_ಅಕ್ಷರಶಃ_ಪಾಪರ್_ಆಗಿದ್ದೆ.    ಇವತ್ತು ಅವರು FBಯಲ್ಲಿ ತಮ್ಮ ಮತ್ತು ತಮ್ಮ ಶ್ರೀಮತಿಯೊಂದಿಗಿನ ಬಾವ ಚಿತ್ರ ಹಾಕಿದ್ದು ನೋಡಿ ನನ್ನ ನೆನಪು 25 ವರ್ಷದ ಹಿಂದಕ್ಕೆ ಓಡಿತು.   ನನ್ನ ಅನೇಕ ಸಂಕಷ್ಟಗಳಿಗೆ ಆಗ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ ಕಾರಣ ಆಗಿತ್ತು.   ಬಂಗಾರಪ್ಪನವರು ನನಗೆ ನೀಡಿದ ಪ್ರೋತ್ಸಾಹ ಕಾಗೋಡು ತಿಮ್ಮಪ್ಪರನ್ನ ಕೆರಳಿಸಿತು ಅವರ ಸುತ್ತಲೂ ಇದ್ದವರು ನನ್ನ ಮೇಲೆ ಮುರುಕೊಂಡು ಬಿದ್ದ ಪರಿ ಇತ್ತಲ್ಲ ಅದನ್ನು ಜೀವಮಾನದಲ್ಲಿ ಮರೆಯಲಾರದ ದಿನಗಳು.    ಮಂತ್ರಿಗಳ ಅಧಿಕಾರ ಅವರ ಹಿಂಬಾಲಕರು ಬಳಸಿಕೊಂಡು ದ್ವೇಷ ಸಾಧನೆ ಮಾಡಿದರೆ ಅದಕ್ಕೆ ಅಧಿಕಾರಿಗಳೂ ಒಲೈಸುವ ಲಾಭ ಪಡೆಯಲು ಅವರವರಲ್ಲೇ ಪೈಪೋಟಿ ಉಂಟಾಗಿ ನನ್ನ ಮತ್ತು ನನ್ನ ಸಂಗಡಿಗರ ಮೇಲೆ ವಿವಿದ 22 ಕೇಸ್ ಸಾಗರದಲ್ಲಿ, ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ 4 ಕೇಸ್ ಗಳು,ರೌಡಿ ಶೀಟರ್ ದಾಖಲೆ, ವ್ಯವಹಾರಗಳಲ್ಲಿ ತೊಂದರೆ ಇದರಿಂದ ನನ್ನ ವ್ಯವಹಾರ ನೆಲ ಕಚ್ಚಿತ್ತು.    ರೈಸ್ ಮಿಲ್ ಕೆ.ಎಸ್.ಪ್ ಸಿ ಹರಾಜಿಗೆ ತಂದಿತ್ತು ಅಲ್ಲಿ ವ್ಯವಸ್ಥಾಪಕ ಆದವರು ನನ್ನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಾಮಾನ್ಯ ಕುಟುಂಬದ ಪ್ರತಿಭಾವಂತ ಯುವಕ ಆದರೆ ಆತನನ್ನು ವಿರೋದಿಗಳು ಬ...

ಒಂದು ಕಾಲದ ಸಾಗರದ ಸುಪ್ರಸಿದ್ಧ ನಾಟಿ ಕೋಳಿ, ಅಕ್ಕಿ ರೊಟ್ಟಿಯ ಶೆಟ್ಟರ ಮದ್ಯ ಬಸ್ ಸ್ಟಾಂಡ್ ಸಮೀಪದ ಜೈಹಿಂದ್ ಹೋಟೆಲ್

#ಸಾಗರ_ಪಟ್ಟಣದ_ಕುಂಟು_ಶೆಟ್ಟರೆಂದೇ_ಪ್ರಸಿದ್ದರಾದ_ಶೆಟ್ಟರ_ನಾಟಿ_ಕೋಳಿ_ಜೈಹಿಂದ್‌_ಹೋಟೆಲ್ #ಅಕ್ಕಿರೊಟ್ಟಿ_ನಾಟಿಕೋಳಿ_ಸಾರಿನ_ಆಕಾಲದ_ಸುಪ್ರಸಿದ್ಧ_ಹೋಟೆಲ್  #ನಾಟಿಕೋಳಿ_ತಿರುವಕಲ್ಲಿನಲ್ಲಿ_ಮಸಾಲೆ_ರುಬ್ಬುವುದು_ಕಟ್ಟಿಗೆ_ಒಲೆಬಳಕೆಯ_ದೇಸಿಹೋಟೆಲ್     ಈಗಿನ ಸಾಗರದ ಮಧ್ಯ ಬಸ್ ಸ್ಟ್ಯಾಂಡ್ ನಲ್ಲಿ ಶೆಟ್ಟರ ನಾಟಿ ಕೋಳಿ ಹೋಟೆಲ್ ಕೆಲವು ದಶಕಗಳ ಕಾಲ ಸುಪ್ರಸಿದ್ಧ ಆಗಿತ್ತು.   ಈ ಶೆಟ್ಟರಿಗಾಗಿಯೇ ನಾಟಿ ಕೋಳಿ ಸಾಕುವವರು ಸಾಗರ ತಾಲ್ಲೂಕಿನ ಹೆಗ್ಗೋಡು ಮತ್ತು ಆವಿನಳ್ಳಿ ಭಾಗಗಳಲ್ಲಿ ಇದ್ದರು.   ನಾಟಿ ಕೋಳಿ ಸಾರು, ಅಕ್ಕಿ ರೊಟ್ಟಿ ಮತ್ತು ಅನ್ನದ ಜೊತೆ ಸಾಗರ, ಹೊಸನಗರ ಮತ್ತು ಸೊರಬ ತಾಲ್ಲೂಕಿನ ಜನರಿಗೆ ಆಕಷ೯ಣೀಯ ಹೋಟೆಲ್ ಆಗಿತ್ತು.   12 ಅಡಿ ಅಗಲ 50 ಅಡಿ ಉದ್ದದ ಬಾನ೯ಸ್ ಕುಟುಂಬದ ಮಾಲಿಕತ್ವದ ಸಣ್ಣ ಕಟ್ಟಡದ ಜಾಗದಲ್ಲಿ ಇವರ ಹೋಟೆಲ್ ಸುಮಾರು 3 ದಶಕ ಪ್ರಖ್ಯಾತಿ ಪಡೆದಿತ್ತು.   1996 ರ ನಂತರ ಇವರ ವೃದ್ಧಾಪ್ಯದಿಂದ ಮತ್ತು ಸದರಿ ಜಾಗದಲ್ಲಿ ಹೊಸ ಕಟ್ಟಡ ಕಾಮಗಾರಿಗಾಗಿ ಶೆಟ್ಟರು ಹೋಟೆಲ್ ತ್ಯಜಿಸಿದರಂತೆ, ಅವರ ಮೂಲ ಊರಾದ ಕರಾವಳಿಯ ಹಳ್ಳಿಯಲ್ಲಿ ಸುಸಜ್ಜಿತ ಮನೆ ಆಸ್ತಿ ಮಾಡಿದ್ದಾರೆ ಅಂತ ಜನ ಹೇಳುತ್ತಿದ್ದನ್ನ ಕೇಳಿದ್ದೆ.   ನಂತರ ಈ ರೀತಿಯ ಹೋಟೆಲ್ ಸಾಗರದಲ್ಲಿ ಯಾವುದೂ ಬರಲಿಲ್ಲ ಬೆಂಗಳೂರಿನಲ್ಲಿ ಇಂತಹ ಹೊಸರೀತಿಯ ಹೋಟೆಲ್ ಗಳು ಪ್ರಸಿದ್ಧವಾಗಿದೆ.   ಸ್ಥಳಿಯವಾಗಿ ಬೆಳೆಸುವ ನ...

ಬೊನ್ಸಾಯ್ ಗಿಡಗಳನ್ನು ಕುಬ್ಜಗೊಳಿಸುವ ಜಪಾನ್ ಕಲೆ, 50 ವರ್ಷದ ಅರಳಿ ಮರ ನಿಮ್ಮ ಟೇಬಲ್ ಮೇಲೆ ಒಂದು ಅಡಿ ಮೀರುವುದಿಲ್ಲ, ಕನ್ನಡಿಗ ಬೋನ್ಸಾಯ್ ಶ್ರೀನಿವಾಸರು ಇದರಲ್ಲಿ ಪ್ರಖ್ಯಾತರ ಇವರ ಸಂಗ್ರಹದ ಎಲ್ಲಾ ಬೋನ್ಸಾಯ್ ಗಿಡಗಳು ಕೊಟ್ಯಾಂತರ ರೂಪಾಯಿ ಬೆಲೆ ಬಾಳುವಂತದ್ದು, ಇವರು ತಮ್ಮ ತಂದೆ ತಾಯಿ ಸ್ಮಾರಕವಾಗಿ ಲಾಲ್ ಬಾಗ್ ಗೆ ದಾನ ನೀಡಿದ್ದಾರೆ.

#ಬೊನ್ಸಾಯ್_ಒಂದು_ಅದ್ಬುತ_ಕಲೆ. #ಇದರ_ಮೂಲ_ಜಪಾನ್_ಚೈನಾ  #ನಮ್ಮ_ರಾಜ್ಯದ_ಬೊನ್ಸಾಯ್_ಶ್ರೀನಿವಾಸರು_ಪ್ರಖ್ಯಾತರು.      ಇತ್ತೀಚೆಗೆ ದ.ಕ.ಜಿಲ್ಲೆಯ ಬರಹಗಾರರಾದ #ತೇಜ್_ಕುಮಾರ್ ತಮ್ಮ 20 ವರ್ಷದ ಬೊನ್ಸಾಯ್ ಗಿಡ ಪೇಸ್ ಬುಕ್ ನಲ್ಲಿ ಪ್ರಕಟಿಸಿದಾಗ ನನಗೆ ಬೊನ್ಸಾಯ್ ಶ್ರೀನಿವಾಸರ ನೆನಪಾಯಿತು ಸುಮಾರು 17 ವರ್ಷದ ಹಿಂದಿನ ನನ್ನ ಅವರ ಬೇಟಿ ಲಾಲ್ ಬಾಗ್ ನಲ್ಲಿ ಆಗಿದ್ದು ನೆನಪಾಯಿತು.                  ಬೊನ್ಸಾಯ್ ತಮ್ಮ ಹೆಸರಿನ ಮುಂದಿರುವ ಶ್ರೀನಿವಾಸರು ಕನ್ನಡಿಗರು ಇವರು ಜಪಾನ್ ನ ಕಲೆ ಕುಬ್ಜ ಸಸ್ಯಗಳನ್ನ ಬೆಳೆಸಿ ಸಂಗ್ರಹಿಸುವುದರಲ್ಲಿ ಪರಿಣಿತರು.   .ಸುಮಾರು 50 ವರ್ಷದ ಟೇಬಲ್ ಮೇಲಿಡುವ ಅರಳಿ ಮರ ಒಂದು ಅಡಿಗಿಂತ ಕಡಿಮೆ ಇಂತಹ ನೂರಾರು ಸಂಗ್ರಹ ಅವರಲ್ಲಿದೆ.    ಇವರ ಬಗ್ಗೆ ಸಾಗರದ ಕವಲಗೋಡು ವಿಜ್ಞಾನ ಕೇಂದ್ರ ಪುಸ್ತಕ ಒಂದನ್ನು 2000 - 2003 ರಲ್ಲಿ ಪ್ರಕಟಿಸಿದ್ದರು ಮಿತ್ರ #ಕವಲಗೋಡು_ವೆಂಕಟೇಶ್ ಕಳಿಸಿದ್ದರು.    2004ರಲ್ಲಿ ನಾನು ಬೆಂಗಳೂರು ವಾಸಿ ಪ್ರತಿ ದಿನ ಲಾಲ್ ಬಾಗ್ ನಲ್ಲಿ ವಾಕಿಂಗ್ ಮತ್ತು ಅಲ್ಲಿನ ತೋಟಗಾರಿಕಾ ಇಲಾಖಾ ಕಚೇರಿಯಲ್ಲಿ ಯಾವುದೋ ಕೆಲಸಕ್ಕಾಗಿ ನಿತ್ಯ ಅಲೆದಾಟ ಆ ಸಂದಭ೯ದಲ್ಲಿ ಲಾಲ್ ಬಾಗ್ ನ ದಕ್ಷಿಣ ಭಾಗದ ಪ್ರವೇಶ...

ಪ್ರವಾಸಿ ಎಬಿಡಿಬಿ ಬರೆದ ಬ್ರಾಹ್ಮಣ ಪುರೋಹಿತರ ವ್ಯಾಜ್ಯ

#ಪ್ರವಾಸಿ ಕಂಡ ಇಂಡಿಯಾ ಪುಸ್ತಕದಲ್ಲಿ ಬುದ್ಧಿವಂತ ಬ್ರಾಹ್ಮಣ ಪುರೋಹಿತರ ಒಂದು ವೃತ್ತಾಂತವನ್ನ ಪ್ರವಾಸಿ ಎಬಿ ಡೂಬಾ ಬರೆದಿದ್ದಾರೆ ಓದಿ#      18 ಅಥವಾ 19 ನೇ ಶತಮಾನದಲ್ಲಿ ಒಂದು ಊರಿನಲ್ಲಿ 11 ಜನ ಪುರೋಹಿತರು ಬರಗಾಲದ ಕಾರಣ ಉದ್ಯೋಗ ಅರಸಿಕೊಂಡು ಬೇರೆ ಊರಿಗೆ ಹೋಗುತ್ತಾರೆ, ಮಾಗ೯ದಲ್ಲಿ ಊಟ ಉಪಚಾರಕ್ಕಾಗಿ ಬೇಕಾದ ಆಹಾರ ಧಾನ್ಯಗಳನ್ನ ಕಟ್ಟಿಕೊಂಡು ತೆಗೆದು ಕೊಂಡು ಹೋಗುತ್ತಾರೆ.   ಮುಂದಿನ ಊರು ತಲುಪಿ, ಒಲೆ ಹೂಡಿ, ಅಡುಗೆ ಮಾಡಲು ಹೊಸ ಮಡಿಕೆ ತರಲು ಊರ ಒಳಗೆ ಹೋಗುತ್ತಾರೆ. ಆದರೆ ಅವರ ದುರಾದೃಷ್ಟ ಇಡೀ ಊರೇ ಬರಗಾಲದಿಂದ ಗುಳೆ ಹೋಗಿರುತ್ತೆ, ಹೇಗೋ ಏನೋ ಒಬ್ಬ ಅಗಸ ಉಳಿದಿರುತ್ತಾನೆ ಅವನ ಹತ್ತಿರ ಇವರ ಅಡುಗೆಗೆ ಬೇಕಾದ ಹೊಸ ಮಡಿಕೆ ಕೇಳುತ್ತಾರೆ. ಆದರೆ ಅವನ ಹತ್ತಿರ ಹೊಸ ಮಡಕೆಗಳು ಇರುವುದಿಲ್ಲ. ಆದರೆ ಆತ ಬಳಸಿದ ಮಡಕೆಗಳನ್ನ ಇವರು ಕೇಳಿದರೂ ಆತ ಕೊಡುವುದಿಲ್ಲ ಕಾರಣ ಶೂದ್ರ ಬಳಸಿದ ಮಡಿಕೆ ಬ್ರಾಹ್ಮಣ ಬಳಸುವಂತಿಲ್ಲ ಬಳಸಿದರೆ ಅದು ನೀಡಿದವನಿಗೆ ಪಾಪ ಬರುತ್ತೆ ಅಂತ. ಬರಗಾಲದ ಊರಿನಲ್ಲಿ ಇದೆಲ್ಲ ಪಾಲಿಸಲು ಹೋದರೆ ಉಪವಾಸದಿಂದ ಸಾಯಬೇಕೆಂದು ಬಳಸಿದ ಮಡಕೆಯನ್ನ ಒತ್ತಾಯದಿಂದ ತರುತ್ತಾರೆ. ಇವರಲ್ಲಿನ ಒಬ್ಬ ಪುರೋಹಿತ ಇದು ಧಮ೯ ವಿರೋಧ ಅಂತ ಇವರು ತಯಾರಿಸಿದ ಅಡುಗೆ ನಿರಾಕರಿಸಿ ಉಪವಾಸ ಉಳಿಯುತ್ತಾನೆ.  ಮರು ದಿನ ಮುಂದಿನ ಊರಿಗೆ ತಲುಪಿದಾಗ ಅಲ್ಲಿನ ಸ್ವಜಾತಿ ಬಾಂಧವರ ಎದುರು ಈ ವಿಚಾರ ಪ್ರಸ್ತಾಪ ಆಗಿ ಹಿಂ...

ವೀಳ್ಯದ ಎಲೆ ಕೊಯ್ಲು ಮಾಡುವ ಕೈಯ ಬೆರಳಿಗೆ ಅಳವಡಿಸಿ ಕೊಳ್ಳುವ ಸೂಕ್ಷ್ಮ ಕತ್ತಿ ನೋಡಿ

#ವೀಳೆಯದ ಎಲೆ ಕತ್ತಿ,Betel leaves knife#  ಹಲವಾರು ರೀತಿಯ ಕತ್ತಿ ದೈನಂದಿನ ಜೀವನದಲ್ಲಿ ನೋಡಿದ್ದೇನೆ, ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಆದರೆ ಈ ಕತ್ತಿ ನೋಡಿದ್ದು ಮಾತ್ರ ಇತ್ತೀಚಿಗೆ     ಹೊಸನಗರದ ಬಿಲ್ ಸಾಗರದ ವಿದ್ಯುತ್ ಚಾಲಿತ ಬೋಟು ಚಲಾಯಿಸುವ ಶಂಕರ ಮೊನ್ನೆ ಬಂದಿದ್ದರು ಅವರು ನನಗೆ ಪರಿಚಯ ಆಗಿದ್ದು ಶಿವಮೊಗ್ಗದ ಸಾಹಸಿ ಆ.ನಾ.ವಿಜೇ೦ದ್ರರಿಂದ ನಮ್ಮ ಊರ ಕೆರೆ ಸ್ವಚ್ಚತೆಗೆ ಇವರು ಮತ್ತು ಇವರ ಡಿಸೇಲ್ ಬೋಟ್ ತಂದಿದ್ದ ಪರಿ ಚಯ.     ಮೊನ್ನೆ ನನ್ನ ಆಪೀಸಿಗೆ ಬಂದು ನನ್ನ ಪರಿಚಯ ಇದೆಯಾ ಅಂದರು, ಅರೆ ಬಿಲ್ ಸಾಗರದ ಶಂಕರ್ ರವರೆ ನಿಮ್ಮನ್ನ ಮರೆಯಲು ಹೇಗೆ ಸಾಧ್ಯ ಅಂತ ಒಳ ಕರೆದು ಕೂರಿಸಿ ಚಹಾ ಆತಿಥ್ಯ ನೀಡಿ ದೂರ ಹೋಗಿದ್ದಿರಿ ಅಂದೆ, ಹೌದು ಬೆಳಿಗ್ಗೆನೆ ಹೊನ್ನಾಳಿಗೆ ಹೋಗಿದ್ದೆ ವೀಳೆಯದೆಲೆ ಕತ್ತಿ ತರಲು ಅಂದರು, ಹಾಗೇ ಅದು ಇದು ಬೇರೆ ವಿಚಾರ ಮಾತಾಡಿ ಹೊರಟರು ಅವಾಗ ಕೇಳಿದೆ ನಿಮ್ಮ ಊರಲ್ಲಿ ಕತ್ತಿ ಮಾಡೋರು ಇಲ್ಲವಾ? ಅಷ್ಟು ದೂರ ಹೋಗಿದ್ದಿರಲ್ಲ ಅಂದಾಗ ಈ ಕತ್ತಿ ರಹಸ್ಯ ಹೊರಬಂತು.     ಇದು ಇಲ್ಲೆಲ್ಲೂ ಸಿಗುವುದಿಲ್ಲ, ಇದಿಲ್ಲದಿದ್ದರೆ ಎಲೆ ಕಟಾವು ಸಾಧ್ಯವಿಲ್ಲ ಅಂದರು. ಅದು ಯಾವ ರೀತಿ ಕತ್ತಿರಿ ಅಂದೆ, ತಡೆಯಿರಿ ತಂದು ತೋರಿಸುತ್ತೇನೆ ಅಂತ ಅವರ ಬೈಕಿನ ಹತ್ತಿರ ಹೋಗಿ ತಂದರು, ನಾನು ನಿತ್ಯ ಬಳಕೆಯ ಬೇರೆ ವಿನ್ಯಾಸದ ಕತ್ತಿ ಅಂತ ಮಾಡಿ...

ಈಗಿನ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ನಿರ್ಮಾಣದ ಹಿಂದಿನ ಪ್ರೇರಣೆಗೆ ಅಂತರ್ಜಾತಿ ವಿವಾಹದ ದುರಂತ ಪ್ರೇಮ ಕಥೆ ಇದೆ.

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ#  *ಈ ಬಾರಿ ತುಂಬಿ ತುಳುಕಿದ ಸೂಳೆಕೆರೆ*  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಈ ಬಾರಿ ಅದೂ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಬಂದಿರುವ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ, ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಮೊನ್ನೆ ಶುಕ್ರವಾರ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ ಹೆಸರು ಬದಲಿಸಿ ಶಾಂತವ್ವ...

ಮೂಲ ಮೂಕಾಂಬಿಕ ದೇವಿಯ ಸಾನ್ನಿಧ್ಯ ಕೊಡಚಾದ್ರಿ ತಾಣ, ಅಲ್ಲಿನ ಪುರಾಣ ಕಾಲದ ದೇಶಿ ಕಬ್ಬಿಣದ ಕಂಬ ಮೂಕಾಸುರನ ಹತ್ಯೆ ಮಾಡಿದ ತ್ರಿಶೂಲ ಎ೦ಬ ನಂಬಿಕೆ ಇದೆ, ಇಲ್ಲಿ ನಡೆಯುವ ಶಕ್ತಿ ಪೂಜೆಗೆ ಸಾವಿರಾರು ವರ್ಷದ ನಂಟಿದೆ, ಉತ್ತರ ಪ್ರದೇಶದ ಗೋರಕನಾಥಪುರದ ನಾಥಪಂಥದ ನಿಕಟ ಸಂಬಂದ ಇರುವ ಕೊಡಚಾದ್ರಿ

#ಪುರಾಣ_ಕಾಲದ_ಇತಿಹಾಸ_ಇರುವ_ಮೂಲಮೂಕಾಂಬಿಕ_ಸ್ಥಳ #ಕೊಡಚಾದ್ರಿಯ_ಮೂಲಮೂಕಾಂಬಿಕ_ಸನ್ನಿದಾನದಲ್ಲಿನ_ಶಕ್ತಿಪೂಜೆ. #ಸಾವಿರಾರು_ವರ್ಷದಿಂದ_ಈ_ಪರಂಪರಾ_ಪೂಜಾ_ನಡೆಸಿಕೊಂಡು_ಬಂದಿರುವ_ಬಳೆಗಾರ_ಜೋಗಿ_ವಂಶಸ್ಥರು. #ಮೂಲಮೂಕಾಂಬಿಕ_ದೇವಾಲಯದ_ಎದುರಿನ_ಪ್ರಾಚೀನ_ಕಾಲದ_ದೇಶಿಕಬ್ಬಿಣದ_ಕಂಬ.     ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟದಲ್ಲಿರುವ ಮೂಲ ಮೂಕಾಂಬಿಕ ದೇವರ ಸನ್ನಿದಿಗೆ ಪುರಾಣದ ಇತಿಹಾಸ ಇದೆ ಆದರೆ ಇದು ನಮ್ಮ ರಾಜ್ಯದ ಕನ್ನಡಿಗರಿಗಿಂತ ಕೇರಳ ಮತ್ತು ತಮಿಳುನಾಡಿಗರಿಗೆ ಹೆಚ್ಚು ಗೊತ್ತು.   ಕೊಲ್ಲೂರು ಮೂಕಾಂಬಿಕ ದರ್ಶನಕ್ಕೆ ಬಂದವರು ಕೊಡಚಾದ್ರಿ ಮೂಲ ಮೂಕಾಂಬಿಕ ದೇವಿ ದಶ೯ನ ಮಾಡಿ ಅಲ್ಲಿರುವ ಬಾರಾಪಂಥ ಯೋಗಿಗಳ ಸಿದ್ಧ ಪೀಠ ಮತ್ತು ಅದರ ಎದುರಿನ ಪುರಾತನ ಕಬ್ಬಿಣದ ಸ್ಥಂಭ ಮತ್ತು ಶಿಖರದ ಮೇಲಿನ ಸವ೯ಜ್ಞ ಪೀಠ ನಂತರ ಶಂಕರಾಚಾಯ೯ರು ತಪಸ್ಸುಗೈದ ಚಿತ್ರ ಮೂಲದ ಗುಹೆಯಲ್ಲಿ ಧ್ಯಾನ ಮಾಡಿ ವಾಪಾಸ್ ಬರುತ್ತಾರೆ.    ಈಗ ಇಲ್ಲಿಗೆ ಸವ೯ ಋತು ರಸ್ತೆ ಇಲ್ಲವಾದರೂ ಸಾದಾರಣ ರಸ್ತೆ ಜೀಪುಗಳಲ್ಲಿ ಪ್ರಯಾಣಿಸಲು ಸಾಧ್ಯವಿದೆ ಆದರೆ ಈ ಮೂಲ ಮೂಕಂಬಿಕ ದೇವಸ್ಥಾನದ ಅಚ೯ಕರಾದ ಬಳೆಗಾರ ಜೋಗಿ ಸಮಾಜದ ಕುಟುಂಬಕ್ಕೆ 800 ವರ್ಷದ ಇತಿಹಾಸ ಇದೆ ಆಗೆಲ್ಲ ರಸ್ತೆ ಇಲ್ಲ ವಾಹನ ಇಲ್ಲ ಆದರೂ ಇವರು ನಿರಂತರ ಪೂಜೆ ನಡೆಸಿಕೊಂಡು ಬಂದವರು, ನಾರಾಯಣ ಜೋಗಿ ಮತ್ತು ಕಾವೇರಮ್ಮ ದಂಪತಿ, ಅವರ ಅಳಿಯ ರಾಮ ಜೋಗಿ ಮತ್ತು ಮಗಳು ಸುಶೀಲಮ್...

ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರು ನಾನೂರು ವರ್ಷದ ಹಿಂದೆ ನಿರ್ಮಿಸಿದ ಚಂಪಕ ಸರಸ್ಸು ಕನ್ನಡದ ಸುಪ್ರಸಿದ್ದ ನಟ ಯಶ್ ರಿಂದ ಪುನಶ್ಚೇತನ ಪ್ರಾರಂಭ ಆಗಿದೆ. ಪ್ರಖ್ಯಾತ ಜಲ ತಜ್ಞ ಶಿವಾನಂದ ಕಳವೆ ನೇತೃತ್ವದಲ್ಲಿ

#ಆನಂದಪುರಂ_ಚಂಪಕಸರಸ್ಸು_ಕೆಳದಿ_ಅರಸರು_ನಿರ್ಮಿಸಿದ_ಸ್ಮಾರಕ. #ಕನ್ನಡದ_ಸಹೃದಯಿ_ನಟ_ಯಶ್_ರ_ಯಶೋಮಾರ್ಗದಿಂದ_ಪುನಶ್ಚೇತನ_ಕಾಮಗಾರಿ_ಪ್ರಾರಂಭ ( 17-ಅಕ್ಟೋಬರ್ -2021 ರಿಂದ) #ನಾಡಿನ_ಪ್ರಖ್ಯಾತ_ಜಲತಜ್ಞ_ಶಿವಾನಂದಕಳವೆ_ಮಾರ್ಗದರ್ಶನ. #ಸ್ಥಳಿಯ_ಇತಿಹಾಸ_ಉಳಿಸಿ_ಅಭಿಯಾನ_ಟ್ರಸ್ಟ್_ಸಹಕಾರ   ನಾನೂರು ವರ್ಷದ ಹಿಂದಿನ ಈ ಸ್ಮಾರಕದ ಪುನಶ್ಚೇತನ ಕೆಲಸ ಪ್ರಾರಂಭವಾಗಿ ನಾಲ್ಕು ದಿನವಾಯಿತು, ಇವತ್ತು(21-ಅಕ್ಟೋಬರ್_2021) ನಾಲ್ಕನೇ ದಿನ ಸಂಜೆಯ ಡ್ರೋನ್‌ ಚಿತ್ರದಲ್ಲಿ ಕಾಮಗಾರಿಯ ಪ್ರಗತಿ ನೋಡ ಬಹುದು.  ಕಾಮಗಾರಿ ಪ್ರಾರಂಭದ ಮೊದಲಿನ ಚಿತ್ರ ಮತ್ತು ಇವತ್ತಿನ ಚಿತ್ರ ಇಲ್ಲಿದೆ.

ಶಿವಮೊಗ್ಗ ಜಿಲ್ಲೆಯ ಕೆಳದಿ ರಾಜ ವೆಂಕಟಪ್ಪ ನಾಯಕರು 400 ವರ್ಷದ ಹಿಂದೆ ರಾಣಿ ಚಂಪಕಳ ಸ್ಮರಣಾರ್ಥ ನಿರ್ಮಿಸಿದ ಸ್ಮಾರಕ ಚಂಪಕ ಸರಸ್ಸು ಪುನರುಜ್ಜೀವನಕ್ಕೆ ಮುಂದಾಗಿರುವ ಖ್ಯಾತ ಚಲನಚಿತ್ರ ನಟ ಯಶ್ ಮತ್ತು ಇದರ ನೇತೃತ್ವ ವಹಿಸಿರುವ ಖ್ಯಾತ ಜಲ ತಜ್ಞ ಶಿವಾನಂದ ಕಳವೆ ಅಭಿನಂದನಾರ್ಹರು.

#ಆನಂದಪುರಂ_ಚಂಪಕಸರಸ್ಸು_ನಿರ್ಮಾಣವಾಗಿ_ನಾಲ್ಕು_ಶತಮಾನ. #ಚಂಪಕಸರಸ್ಸು_ಪುನರುಜ್ಜೀವನಕ್ಕೆ_ಮುಂದಾಗಿರುವ_ಖ್ಯಾತ_ಚಲನಚಿತ್ರನಟ_ಯಶ್. #ಪುನರುಜ್ಜೀವನದ_ಕಾರ್ಯದ_ಮುಖ್ಯ_ಪ್ರೇರಕರು_ಜಲತಜ್ಞ_ಶಿವಾನಂದಕಳವೆ . #ಇವತ್ತಿಂದ_ಯಶೋಮಾರ್ಗದಿಂದ_ಪಾರಂಪರಿಕ_ಕಲ್ಯಾಣಿ_ಚಂಪಕಸರಸ್ಸು_ಪುನರುಜ್ಜೀವನ_ಕಾರ್ಯ_ಪ್ರಾರಂಭ.   ಚಂಪಕ ಸರಸ್ಸು ಸುಂದರವಾದ ಕಲ್ಯಾಣಿ ಇದರ ಮಧ್ಯೆ ಶಿವಾಲಯ ಅಲ್ಲಿಗೆ ಹೋಗಲು ನೀರಿನ ಮೇಲೆ ಕಲ್ಲಿನದ್ದೇ ಸಂಕ, ಸುಂದರವಾದ ಶಿಲಾಮಯ ಆನೆಗಳು, ಸುತ್ತಲೂ ಪಗಾರ ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಬಸ್ ಸ್ಟಾಂಡಿನಿಂದ ಶಿಕಾರಿಪುರ ರಸ್ತೆಯಲ್ಲಿ ಸಿಗುವ ಮಲಂದೂರಿನ ಸಂತೋಷ್ ಕೋಲ್ಡ್ ಸ್ಟೋರೇಜ್ ಹಿಂಬಾಗದಲ್ಲಿದೆ.   ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರು ರಾಣಿ ಚಂಪಕಳ ನಿತ್ಯ ಬಿಡುಸುತ್ತಿದ್ದ ರಂಗೋಲಿಯಿಂದ ಪ್ರಾರಂಭವಾಗುವ ಪ್ರೇಮ ಕಥೆ, ವಿವಾಹವಾಗಿ ಆನಂದಪುರಂನ ಕೋಟೆಯ ಅರಮನೆಯಲ್ಲಿ ತನ್ನ ಆಹಾರ ಪದ್ಧತಿಗಾಗಿ ಪಟ್ಟದ ರಾಣಿ ಭದ್ರಮ್ಮಾಜಿಯ ಮತ್ತು ರಾಜ ವೆಂಕಟಪ್ಪ ನಾಯಕರ ಮಧ್ಯ ಉಂಟಾಗುವ ವಿರಹ ಇದಕ್ಕಾಗಿ  ರಾಜ್ಯದ ಪ್ರಜೆಗಳಲ್ಲಿ ರಾಜ ವೆಂಕಟಪ್ಪ ನಾಯಕರ ಮೇಲೆ ಹೆಚ್ಚಾಗುವ ಆಸಹನೆ ತಾಳಿಕೊಳ್ಳದೆ ರಾಣಿ ಚಂಪಕ ವಜ್ರದ ಪುಡಿ ಹಾಲಿನ ಜೊತೆ ಸೇವಿಸಿ ಜೀವ ತ್ಯಾಗ ಮಾಡುತ್ತಾಳೆ, ರಾಣಿ ಚಂಪಕಾಳ ಸ್ಮರಣೆಗಾಗಿ ನಿರ್ಮಿಸಿರುವುದೇ ಈ ಚಂಪಕ ಸರಸ್ಸು (ಸರಸ್ಸು ಎಂದರೆ ಕೊಳ).   ಕೆಳದಿ ಇತಿಹಾಸದಲ್ಲಿ ದೀರ್ಘ ...

ಕರಪತ್ರಗಳಿಂದ ಜಲ ಜಾಗೃತಿ ಅಭಿಯಾನ ಸಂಘ ಸಂಸ್ಥೆಗಳು ನಡೆಸಬಹುದು

#ಕರಪತ್ರ_ಮುದ್ರಿಸಿ_ಹಂಚುತ್ತಿದ್ದ_ಹಳೇ_ಕಾಲದ_ನೆನಪು. #ನೀರು_ಇಂಗಿಸಲು_ಪ್ರೋತ್ಸಾಹಿಸುವ_ಕಾರ್ಯ.    2014ರ ನಂತರ ಇಂತಹ ಸಾಹಸ ಕೈ ಬಿಟ್ಟೆ ಅದಕ್ಕೂ ಮೊದಲು ವರ್ಷಕ್ಕೆ ಒಂದೆರೆಡು ಬಾರಿ ಆದರೂ ಜನಪರವಾದ ಕರಪತ್ರ ಮುದ್ರಿಸಿ ಹಂಚುತ್ತಿದ್ದೆ.   ಬ್ರಾಡ್ ಗೇಜ್ ಗಾಗಿ, ತುಮರಿ ಸೇತುವೆಗಾಗಿ, ಹಂದಿಗೋಡು ಕಾಯಿಲೆ ಬಗ್ಗೆ, ಮಲೆನಾಡು ಗಿಡ್ಡ ತಳಿ ಉಳಿಸಿ ಅಂತ, ಬಗರ್ ಹುಕುಂ ಗಾಗಿ, ಈಸೂರು ಸ್ಮರಣೆಗಾಗಿ... ಹೀಗೆ ಅನೇಕ ಕರಪತ್ರಗಳು.   ಇದರಲ್ಲಿ ಇವತ್ತು ಇಲ್ಲಿ ಹಾಕಿರುವುದು 3 ಅಡಿ ಉದ್ದ X ಒಂದೂವರೆ ಅಡಿ ಅಗಲ X ಒಂದೂವರೆ ಅಡಿ ಎತ್ತರದ ಅತ್ಯಂತ ಚಿಕ್ಕದಾದ ಅತ್ಯಂತ ಕಡಿಮೆ ವೆಚ್ಚದ ಮತ್ತು ಮನೆ ಮನೆಗಳಲ್ಲಿ ನಿರ್ಮಿಸಿಕೊಂಡು ಇಂತಹ ಒಂದು ಇಂಗು ಗುಂಡಿಯಿಂದ ಕನಿಷ್ಟ 25 ಸಾವಿರ ಲೀಟರ್ ನೀರು ಇಂಗಿಸುವ ಬಗ್ಗೆ ಪ್ರಚಾರ ಮಾಡಿದ ಕರಪತ್ರ ಇದು.   ಸ್ವತಃ ನಾನು ಇವುಗಳನ್ನು ನಿರ್ಮಿಸಿಕೊಂಡು ಅದರ ಪರಿಣಾಮದ ಲಾಭ ನೋಡಿ ಈ ಕರಪತ್ರ ಅನೇಕ ಮುದ್ರಣ ಮಾಡಿದ್ದೆ.   ಜನಪರ ಸಂಘಟನೆಗಳು ಸಂಘ ಸಂಸ್ಥೆಗಳು ಈ ಕರಪತ್ರವನ್ನು ಅವರ ಸಂಘಟನೆಯ ಹೆಸರಲ್ಲಿ ಮುದ್ರಿಸಿ ಹಂಚುವ ಕೆಲಸ ಕೂಡ ಮಾಡಬಹುದು.

ಗಾಡ್ ಪಾದರ್ ಇಲ್ಲದೆ ಸಾಗರ ತಾಲ್ಲೂಕಿನ ಹೋಬಳಿ ಕೇಂದ್ರ ತಾಳಗುಪ್ಪದಿಂದ ರಾಜ್ಯ ಕಾಂಗ್ರೇಸ್ ನಲ್ಲಿ ಆಯಕಟ್ಟಿನ ಸ್ಥಾನ ಪಡೆದ ಎಂ.ಎ.ಸಲೀ೦ ಮತ್ತ ಉಗ್ರಪ್ಪರ ಪತ್ರಿಕಾಗೋಷ್ಟಿ ಪೂರ್ವದ ಮಾತು ಕಥೆಯ ಬಿರುಗಾಳಿ.

#ಗೆಳೆಯ_ಸಾಗರದ_ಎಂ_ಎ_ಸಲೀಂ_ರಾಜಕಾರಣದಲ್ಲಿ_ಮುಂದುವರಿಯಲಿ. #ಸಾಗರದಿಂದ_ಕೆಪಿಸಿಸಿ_ಸದಸ್ಯರು. #ಅತ್ಯುತ್ತಮ_ಕ್ರೀಡಾಪಟು_ಮತ್ತು_ಛಾಯಾಚಿತ್ರ_ಗ್ರಾಹಕರು.   ನಾನು ಸಾಗರದಲ್ಲಿ ಡಿಪ್ಲೋಮೋ ಓದುವಾಗ #ಎಂ_ಎ_ಸಲೀ೦ ಸಾಗರದ ಎಲ್.ಬಿ. ಕಾಲೇಜಿನಲ್ಲಿ ಪ್ರಸಿದ್ಧರಾಗಿದ್ದರು ಇವರ ತಮ್ಮ ಸುಲೇಮಾನ್ ನನ್ನ ಸಹಪಾಟಿ.   ಕ್ರೀಡಾಪಟು, ಛಾಯಾಚಿತ್ರ ಗ್ರಾಹಕರೂ ಆಗಿದ್ದ ಸಲೀ೦ಗೆ ಅನೇಕ ಪ್ರಶಸ್ತಿಗಳೂ ಬಂದಿತ್ತು.   ತಾಳಗುಪ್ಪದ ಪೋಲಿಸ್ ಠಾಣೆ ಎದರು ಇವರ ತಂದೆಯ ಕ್ಯಾಂಟೀನ್ ಇತ್ತು, ಕೇರಳ ಮೂಲದ ಕನ್ನಡಿಗರು ಇವರು.    ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಕೃಷಿ ಇಲಾಖೆಯ ಸಾವಿರಾರು ಕೋಟಿ ಬ್ರಷ್ಟಾಚಾರ ಬಯಲಿಗೆಳೆಯಲು ಸಹಕರಿಸಿದ ಮಿತ್ರ ಇವರು.   ಜಾತ್ಯಾತೀತ ಮನೋಭಾವದ, ಕ್ರೀಡಾ ಮನಸ್ಸು ಮತ್ತು ಹುಮ್ಮಸ್ಸಿನ ಸಲೀಂ ಬೆಂಗಳೂರು ಸೇರಿ ಕಾಂಗ್ರೇಸ್ ಪಕ್ಷದ ಗರ್ಭಗುಡಿ ಸೇರಿದ್ದು ಆಶ್ಚರ್ಯವೇ, ನಂತರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಿಂದ ಇವರನ್ನು ಪ್ರದೇಶ ಕಾಂಗ್ರೇಸ್ ಸಮಿತಿ ಸದಸ್ಯರಾದರು ಆಗ ಸ್ಥಳಿಯ ಶಾಸಕರಾಗಿದ್ದ ಕಾಗೋಡು ಪಕ್ಕದ ತಾಲ್ಲುಕ್ ಆಗಿರುವ ಹೊಸನಗರದಿಂದ ಕೆಪಿಸಿಸಿಗೆ ಹೋಗುವಂತ ಪರಿಸ್ಥಿತಿ ಉಂಟಾಯಿತು.     ರಾಜ್ಯದ ಕಾಂಗ್ರೇಸ್ ಪಕ್ಷದ ಘಟಾನುಘಟಿಗಳಿಗೆ ಮತ್ತು ದೆಹಲಿ ಹೈಕಮಾಂಡ್ ನೊಂದಿಗೂ ಸಂಪರ್ಕ ಹೊಂದಿರುವ ಸಲೀ೦ ಡಿ.ಕೆ.ಶಿವಕುಮಾರರಿಗೆ ಅತ್ಯಾಪ್ತರಾಗಿದ್ದರು ಅವ...