ಹೊಸ ಪೀಳಿಗೆಯ ಹೊಸ ಹೊರಾಟದ ಬೇಡಿಕೆ "ಸುಲಭ ನೆಟ್ವರ್ಕ್ - ಕೊಡಿ" ಇಲ್ಲದಿದ್ದರೆ No Network-No Vote ಅಭಿಯಾನ ಎದುರಿಸಿ ಎಂದು ಆಡಳಿತರೂಢರಿಗೆ ಸವಾಲು ಹಾಕಿರುವ ಸಿಗಂದೂರು ದೇವರ ನಾಡು ಮುಳುಗಡೆಯ ತುಮರಿ ಭಾಗದ ಕುಗ್ರಾಮದಿಂದ ಪ್ರಾರಂಭ ಆಗಿದೆ
#ನೆಟ್ವರ್ಕ_ಸಂಪರ್ಕಕ್ಕಾಗಿ_ಹೊಸರೀತಿ_ಅಭಿಯಾನ_ಇದು_ಎಲ್ಲಡೆ_ಪಸರಿಸುವ_ಸಾಧ್ಯತೆ. #ತುಮರಿ_ಭಾಗದ_ಜನರ_ಮೊದಲ_ಹೋರಾಟ_ಸೇತುವೆ_ಸಂಪರ್ಕಕ್ಕಾಗಿ #ತುಮರಿ_ಸೇತುವೆ_ಮತ್ತು_ಸಾಗರ_ತಾಲ್ಲೂಕ್_ಅಭಿವೃದ್ಧಿಗಾಗಿ_ಒತ್ತಾಯಿಸಿ_ಸಾಗರ_ತಾಲ್ಲೂಕಿನಲ್ಲಿ_ಪಾದಯಾತ್ರೆ_ನೆನಪು Pp ನನ್ನ ಒಂದು ಸಣ್ಣ ಪ್ರಯತ್ನ ತಾಲ್ಲೂಕು ಅಭಿವೃದ್ದಿಗೆ ಒತ್ತಾಯಿಸಿ 13 ದಿನದ ಪಾದಯಾತ್ರೆಯಲ್ಲಿ ನಾಲ್ಕು ಹಗಲು ಮತ್ತು ಮೂರು ರಾತ್ರಿ ಈ ಭಾಗದಲ್ಲಿತ್ತು ಮುಖ್ಯ ಬೇಡಿಕೆ ತುಮರಿ ಸೇತುವೆ ಸೇರಿ ಆದರೆ ಆ ದಿನದಲ್ಲಿ ಈ ಭಾಗದ ಜನ ಪಾದಯಾತ್ರಿಗಳಿಗೆ ಭವ್ಯ ಸ್ವಾಗತ, ಅತಿಥ್ಯ ಮತ್ತು ಆಶ್ರಯ ನೀಡುತ್ತಿದ್ದ ಕರುಣಾಮಯಿಗಳು ಆದರೆ ತುಮರಿ ಸೇತುವೆ ಶರಾವತಿ ನದಿಗೆ ಕಟ್ಟುವುದು ಸಾಧ್ಯವೇ ಇಲ್ಲ ಎಂದು ವಾದ ಮಾಡುವ ಕಾಲ ಆಗಿತ್ತು. ನಂತರ ಈ ಭಾಗದ ವಿದ್ಯಾವಂತ ಯುವಕರು ಎಚ್ಚೆತ್ತು ಕೊಳ್ಳಲು ಪ್ರಾರಂಬಿಸಿದರು, ಮತದಾರರು ತಮ್ಮ ಭಾಗದ ಹಕ್ಕಿನ ಪಾಲಿಗಾಗಿ ಹೋರಾಡುವ ಇಂತಹ ಯುವಕರನ್ನು ಹಿಂಬಾಲಿಸಿದ ಫಲವಾಗಿ ತುಮರಿ ಸೇತುವೆ ಹಕ್ಕೊತ್ತಾಯದ ಹೋರಾಟ ಜಿಲ್ಲೆ, ರಾಜ್ಯ ದಾಟಿ ದೆಹಲಿಯಿಂದ ಮಂಜೂರಾಗಿದ್ದು ಇತಿಹಾಸ ಮತ್ತು ಈ ಭಾಗದ ಸ್ವಾತಂತ್ರ ನಂತರದ ದೀರ್ಘ ಕಾಲದ ಬಹು ಬೇಡಿಕೆ ಈಡೇರಿದ ಸಂತಸ ಮತ್ತು ಈ ಹೋರಾಟದ ರೂಪುರೇಷೆ, ಸ್ಥಳಿಯರ ಭಾಗವಹಿಸುವಿಕೆ, ಜನಪ್ರತಿನಿದಿಗಳ ಕಾಳಜಿ ಪಕ್ಷಾತೀತವಾಗಿ ಸಕಾರತ್ಮಕ ಸನ್ನಿವೇಶಕ್ಕೆ ಕೊಂ...