Skip to main content

Posts

Showing posts from December, 2020

"ನಮ್ಮ ಬದುಕಿಗೆ ವಷ೯ಗಳನ್ನು ತುಂಬುವುದು ಮುಖ್ಯವಲ್ಲ - ಬರುವ ಪ್ರತಿ ಹೊಸ ವರ್ಷಗಳಿಗೆ ಜೀವ ತುಂಬುವುದು ಮುಖ್ಯ"

#ನಮ್ಮ_ಬದುಕಿಗೆ_ವಷ೯ಗಳನ್ನು_ತುಂಬುವುದು_ಮುಖ್ಯವಲ್ಲ #ಬರುವ_ಪ್ರತಿ_ಹೊಸ_ವರ್ಷಗಳಿಗೆ_ಜೀವ_ತುಂಬುವುದು_ಮುಖ್ಯ    ಎಂಬ ಅನುಭವಿ ಮಾತಿನಂತೆ 2021 ನನ್ನ ಹೊಸ ಪ್ರಯೋಗ, ಹೊಸ ಜೀವನದ ಅಧ್ಯಾಯ HEALTH TOURISM ಅಂಗವಾಗಿ ವೈದ್ಯೋ ನಾರಾಯಣ ಹರಿ ಆಯುರ್ವೇದ ಕ್ಲೀನಿಕ್ ಇವತ್ತಿಂದ ಪ್ರಾರಂಭ ಆಗಿದೆ.                  #ಮುಂದಿನ_ಗುರಿಗಳು            1. ನಾಟಿ ವೈದ್ಯರ ಸಮಾವೇಶ *ಪಾರಂಪರಿಕಾ/ನಾಟಿ ವೈದ್ಯರಿಗೆ ಜಾಗತಿಕವಾಗಿ ಮಾರುಕಟ್ಟೆ, ಔಷದಗಳ ಸಂಸ್ಕರಣಿ, ಪುಡ್ ಗ್ರೇಡ್ ಪ್ಯಾಕಿಂಗ್ ಗಳ ಬಗ್ಗೆ ಮಾಹಿತಿ ತಜ್ಞರಿಂದ ಕೊಡಿಸುವ ಕಾಯ೯ಕ್ರಮ .             2. ಆನಂದಪುರಂ ಮುಂದಿನ ದಿನದಲ್ಲಿ ಪಶ್ಚಿಮ ಘಟ್ಟದ ಆಯುವೇ೯ದದ ಸಂಕೀಣ೯ (HUB) ಮಾಡುವ ಗುರಿ.  * ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಿಶಿಷ್ಟ ಸಾದನೆಗೈದ ಪಾರಂಪರಿಕಾ / ನಾಟಿ ವೈದ್ಯರುಗಳು ಇಲ್ಲಿ ನಿದಿ೯ಷ್ಟ ದಿನ ಲಭ್ಯವಿದ್ದು ಚಿಕಿತ್ಸೆ ನೀಡುವಂತ ವ್ಯವಸ್ಥೆ.             3. ನ್ಯಾಚುರೋಪತಿ ಚಿಕಿತ್ಸೆ * ಈ ಮೂಲಕ ಸ್ಥೂಲಕಾಯ ನಿವಾರಣೆ.            4. ಸುಗಂದ ಚಿಕಿತ್ಸೆ (Aroma treatment)  * ನವೀನ ಮಾದರಿಯ ಸುಗಂದ ಚಿಕಿತ್ಸೆ ...

ಶಿವಮೊಗ್ಗದ ಹಾಪ್ ಕಾಮ್ಸ್ ವೈನ್ ಶಾಪ್ ನಲ್ಲಿ ಅತ್ಯುತ್ತಮ ವೈನ್ & ಶಾಂಪೇನ್ ಮಾರಾಟಕ್ಕೆ ಇದೆ.

#ಶಾ೦ಪೇನ್‌_ಮತ್ತು_ವೈನ್ #ಕ್ರಿಸ್ಮಸ್_ಮತ್ತು_ನ್ಯೂಇಯರ್   ಕ್ರಿಸ್ಮಸ್ ಮತ್ತು ಹೊಸ ವಷ೯ದ ಶುಭಾಷಯದ ಜೊತೆ ಕೇಕ್ ಜೊತೆ ದ್ರಾಕ್ಷಾರಸ (ವೈನ್), ಕೆಲ ನಮ್ಮ ಆಪ್ತರಾದ  ಊರಿನ ಕ್ರಿಸ್ತ ಬಾಂದವರಿಗೆ ನೀಡಲು ವೈನ್ ಖರೀದಿಸ ಬೇಕಾಗಿತ್ತು.   ಶಿವಮೊಗ್ಗದ ಎಪಿಎಂಸಿ ತರಕಾರಿ ಮಾರುಕಟ್ಟೆ ಸಮೀಪ ( ಶಾಂತವೇರಿ ಗೋಪಾಲ ಗೌಡ ರಸ್ತೆ) ಹಾಪ್ ಕಾಮ್ಸ್ ಪಕ್ಕದಲ್ಲಿ ಸಕಾ೯ರದ ವ್ಯೆನ್ ಶಾಪ್ ನಲ್ಲಿ ಒಳ್ಳೆಯ ವೈನ್ ಮತ್ತು ಶಾಂಪೇನ್ ಗಳು ಮಾರಾಟಕ್ಕೆ ಇದೆ ಅಂತ ಗೊತ್ತಾದ ಮೇಲೆ ಅಲ್ಲಿಂದಲೇ ಖರೀದಿಸಿದೆ.  ದೇಶ ವಿದೇಶದ ಬ್ರಾಂಡ್ ಗಳ ವೈನ್ & ಶಾಂಪೇನ್ ಜೊತೆ ನಮ್ಮ ರಾಜ್ಯದ ದ್ರಾಕ್ಷಿ ಬೆಳೆಗಾರರು ತಯಾರಿಸಿದ ವೈನ್‌ಗಳೂ ಇಲ್ಲಿವೆ. ಕಿಕ್ ಜಾಸ್ತಿ ಇರುವ fortified wine (ಆಲ್ಕೊಹಾಲ್ ಅಂಶ ಹೆಚ್ಚಿರುವ) ಕೂಡ ಇಟ್ಟಿದ್ದಾರೆ.   ವೈನ್ ಮಲೆನಾಡಿನಲ್ಲಿನ ಮದು ಪ್ರಿಯರನ್ನ ಹೇಗೆ ಆಕಷಿ೯ಸಿದೆ ಅಂತ ವಿಚಾರಿಸಿದರೆ ನಿರಾಷೆಯ ಉತ್ತರ ಸಿಕ್ಕಿತು, ಜನ ವಿಸ್ಕಿ ಬ್ರಾಂಡಿ ಕುಡಿಯುವವರು ವೈನ್ ಇಷ್ಟ ಪಡುವುದಿಲ್ಲ.    ದ್ರಾಕ್ಷಿಯನ್ನ ಕೊಳೆ ಹಾಕಿ ಇದಕ್ಕೆ ಸಕ್ಕರೆ ಯಿಸ್ಟ್ ಸೇರಿಸಿ ರಸ ತೆಗೆದು ವೈನ್ ತಯಾರಿಸುತ್ತಾರೆ ಇದರಲ್ಲಿ ನೂರಾರು ಮಾದರಿ ಇದೆ. ಇದೇ ರೀತಿ ಶಾಂಪೇನ್ ಕೂಡ (Sparkling wine) ಆದರೆ ಇದರಲ್ಲೂ ಅನೇಕ ತಕ೯ ಇದೆ "ಶಾಂಪೇನ್ sparkling wine ಒಂದೇ ಆದರೆ ಎಲ್ಲಾ sparkling wine ಶಾಂಪೇ...

ಚೀನಿ ಕಾಯಿ ಎಂಬ ಹೆಸರು ಸಿಹಿ ಕುಂಬಳಕ್ಕೆ ಚೀನಾದಿಂದ ಬಂತಾ? (ಚೀನ ವಿಶ್ವದಲ್ಲೇ ಅತ್ಯದಿಕ ಚೀನಿ ಕಾಯಿ ಬೆಳೆಯುವ ದೇಶ) ಅಥವ ಹಿಂದಿಯ ಸಕ್ಕರೆ (ಚೀನಿ ) ಅಂತಾನೋ ?

#ಚೀನಿಕಾಯಿ_ಹಾಲು_ಬೆಲ್ಲ_ನನ್ನ_ಪೆವರಿಟ್      ಇದು ಅತಿ ಚಿಕ್ಕ ಚೀನಿ ಕಾಯಿ ತಳಿ,ಇದರಲ್ಲಿ ಗರಿಷ್ಟ ಒಂದು ಟನ್ ವರೆಗೆ ಬೆಳೆಯು ತಳಿಯೂ ಇದೆ ಅಂತೆ ಪತ್ರಿಕೆಗಳಲ್ಲಿ ಓದಿದ್ದು.     ಆಪತ್ಪಾಂದವ ಮಿತ್ರ ಗೇರುಬೀಸು ಚೆನ್ನಪ್ಪ ಬೆಳೆದಿದ್ದು ತಂದು ಕೊಟ್ಟಿದ್ದಾನೆ, ಇದು ಬೇಯಿಸಿ ಹಾಲು ಬೆಲ್ಲದೊಂದಿದೆ ತಿನ್ನುವುದು ನನಗೆ ಇಷ್ಟ ಪುನಃ ತಂದು ಕೊಡಲು ಹೇಳಿದ್ದೇನೆ.   ಚೆನ್ನಪ್ಪ ಇದನ್ನು ಖರೀದಿಸುವವರು ಕಡಿಮೆ ಅಂದ, ಯಾಕೆಂದರೆ ಇದು ವಾತಾ ವಾಯು ಇತ್ಯಾದಿ ಕಾರಣದಿಂದ ಬಳಸುವವರು ಇದರಿಂದ ದೂರ.   ಭಾರತೀಯರು ಇದರಿಂದ ಕಡಬು, ಹಲ್ವಾ ಇತ್ಯಾದಿ ಸಿಹಿ ತಿಂಡಿ ಮಾಡುತ್ತಾರೆ ಇದರ ಹೂವು ಮೊಗ್ಗುಗಳಿಂದಲೂ ಇತರೆ ಪದಾಥ೯ ಜ್ಯೂಸ್ ಮಾಡುತ್ತಾರೆ ಆದರೆ ವಿದೇಶದಲ್ಲಿ ಇದು ಹೆಚ್ಚು ಬಳಕೆ ಪೈ ಎಂಬ ಸಿಹಿ ಕಡುಬಿಗೆ.  ಈಗಲೂ ವಿಶ್ವದಲ್ಲಿ ಅತಿ ಹೆಚ್ಚು ಸಿಹಿ ಚೀನಿ ಕಾಯಿ ಬೆಳೆಯುವುದು ಚೀನಾ ದೇಶದಲ್ಲಿ ನಂತರದ ಸ್ಥಾನ ಭಾರತಕ್ಕೆ ಹಾಗಾಗಿ ಇದಕ್ಕೆ "ಚೀನಿ" ಕಾಯಿ ಅಂತ ಹೆಸರಾಗಿರ ಬಹುದಾ?  ಇದರ ಮೂಲ ಉತ್ತರ ಅಮೆರಿಕಾ ಮತ್ತು ಇದರ ಕಾಲಾಮಾ ನ ಕ್ರಿಸ್ತ ಪೂವ೯ 5000 ವರ್ಷ ಅಂದರೆ ಅತ್ಯಂತ ಪುರಾತನ ಸಿಹಿ ಕುಂಬಳ.   ಇದು ವಿಟಮಿನ್ ಮತ್ತು ಮಿನರಲ್ ಗಳನ್ನು ಯಥೇಚ್ಚ ಇರುವ, ಆಂಟಿ ಆಕ್ಸಿಡೆಂಟ್, ಅಸ್ತಮ ಮತ್ತು ಕ್ಯಾನ್ಸರ್ ನಿವಾರಕ, ಬಿಪಿ ಮತ್ತು ಶುಗರ್ ಕಾಯಿಲ...

ಬಿಳಿ ಬಣ್ಣದ ವ್ಯಾಮೋಹ ನಮ್ಮ ಆಹಾರದಲ್ಲಿನ ಪೌಷ್ಠಿಕಾಂಶ ಕೊರತೆಗೆ ಕಾರಣ ಆಗಿದೆ.

#ಕಪ್ಪು_ಉದ್ದಿನಕಾಳು_ಬಳಕೆ_ಕಡಿಮೆ_ಏಕೆ?     ದೋಸೆ,ಇಡ್ಲಿ, ವಡೆ ಮತ್ತು ಹಪ್ಪಳಕ್ಕೆ ಉದ್ದಿನಕಾಳು ಬೇಕೇ ಬೇಕು ಮೊದಲೆಲ್ಲ ಗ್ರಾಮೀಣ ಪ್ರದೇಶದಲ್ಲಿ ರೈತ ಕುಟುಂಬಗಳು ಭೂಮಿ ಫಲವತ್ತೆಗಾಗಿ ಉದ್ದು ಬಿತ್ತುತ್ತಿದ್ದರು ಅದನ್ನೇ ಬಳಸುತ್ತಿದ್ದರು ಆದರೆ ಈಗ ಭೂಮಿ ಫಲವತ್ತತೆಗೆ ಕೆಮಿಕಲ್ ಪಟಿ೯ಲೈಸರ್ ಇರುವುದರಿಂದ ಪುರಾತನವಾದ ಸಾಂಪ್ರದಾಯಿಕ ಸಾವಯವ ಮಾದರಿ ಯಾರಿಗೂ ಬೇಕಾಗಿಲ್ಲ.     ಅದೇ ರೀತಿ ಕಪ್ಪು ಉದ್ದಿನ ಕಾಳು ಬಳಸಿ ಮಾಡಿದ ಇಡ್ಲಿ ದೋಸೆಗಿಂತ ಪಾಲೀಶ್ ಆದ ಉದ್ದಿನಬೇಳೆಯಲ್ಲಿ ಮಾಡಿದ್ದು ಅಚ್ಚ ಬಿಳಿ ಆಗುವುದರಿಂದ ಕ್ರಮೇಣ ಕಪ್ಪು ಉದ್ದಿನಕಾಳು ಬಳಕೆ ಕಡಿಮೆ ಆಗಿದೆ.    ಹೈ ಪ್ರೋಟೀನ್ ವಾಲ್ಯೂ ಇರುವ , ಕೊಲೆಸ್ಟ್ರಾಲ್ ಕಡಿಮೆ ಮಾಡುವ, ಪ್ರೋಟೀನ್ ಯುಕ್ತ, ಕಾಬೊ೯ಹೈಡ್ರೇಡ್ ಹೆಚ್ಚಿರುವ ಏಷ್ಯಾ ಮೂಲದ ಉದ್ದಿನ ಕಾಳು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಳಕೆ ಆಗುತ್ತದೆ.   ತಮಿಳುನಾಡು, ಕೋಸ್ಟಲ್ ಆಂಧ್ರದಲ್ಲಿ ಇದನ್ನು ಮಳೆಗಾಲದ ಮತ್ತು ಬೇಸಿಗೆಯ ಬೆಳೆಯಾಗಿ ಬೆಳೆಯುತ್ತಾರೆ ಈಗಲೂ ದೇಶದಲ್ಲಿ ಅತಿ ಹೆಚ್ಚು ಉದ್ದು ಬೆಳೆಯುವ ಜಿಲ್ಲೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆ (ಗುಂಟೂರು ಮೆಣಸು ಕೂಡ ಪ್ರಸಿದ್ಧಿ).    ಡಯಾಬಿಟೀಸ್ ಇರುವವರು ಉದ್ದು ಹೆಚ್ಚು ಬಳಸಬಹುದೆಂದು ಆಯುವೇ೯ದದಲ್ಲಿ ಹೇಳುತ್ತಾರೆ.   ಕಪ್ಪು ಉದ್ದು ಬೇಳೆ ಮಾಡಿ ಪಾಲೀಶ್ ಮಾಡಿದ ಉದ್...

ಆನಂದಪುರದ ಚಿರಪರಿಚಿತ ಪೇಪರ್ ಕೇಶವ ಭಟ್ಟರ ತಪ್ಪದ ನಿತ್ಯ ಕಾಯಕ

#ಆನಂದಪುರದ_ಪೇಪರ್_ಕೇಶವ_ಭಟ್ಟರು      1981ರಲ್ಲಿ ಆನಂದಪುರದಿಂದ ಸಾಗರಕ್ಕೆ ಸಂಜಯ್ ಮೆಮೋರಿಯಲ್ ಡಿಪ್ಲೋಮ ಕಾಲೇಜಿಗೆ ಪ್ರತಿ ದಿನ ಬೆಳಿಗ್ಗೆ 5.45ಕ್ಕೆ ಶಿವಮೊಗ್ಗದಿಂದ ಬರುತ್ತಿದ್ದ ಕುಮುಟಾಕ್ಕೆ ಹೋಗುವ ಗಜಾನನ ಬಸ್ಸಿನಲ್ಲಿ (ನಾರಾಯಣಪ್ಪ ಎಂಬ ಸೂಪರ್ ಪಾಸ್ಟ್ ಡ್ರೈವರ್ ) ಹೋಗುತ್ತಿದ್ದೆ ಆಗ ಇನ್ನೂ ಶಾಲೆಗೆ ಸೇರದ ಪುಟ್ಟ ಬಾಲಕ ನಿದ್ದೆ ಕಣ್ಣಿನಲ್ಲೇ ಆನಂದಪುರ ಬಸ್ ಸ್ಟಾಂಡ್ ನಲ್ಲಿ ಪೇಪರ್ ಪೇಪರ್ ಅಂತ ಕೂಗುತ್ತಾ ನಿತ್ಯ ಪತ್ರಿಕೆ ಮಾರುವುದು ನೋಡಿ ಕರಳು ಹಿಚುಕಿದಂತೆ ಸಂಕಟ ಆಗುತ್ತಿತ್ತು.        ಆಗಿನಿಂದ ಅಂದರೆ ಸುಮಾರು 40 ವರ್ಷದ ಮೇಲೂ ಕೇಶವ ಭಟ್ಟರು ಇವತ್ತೂ ಆನಂದಪುರರನಲ್ಲಿ ಮನೆ ಮನೆಗೆ ಸೂಯೋ೯ದಯದ ಮುಂಚೆ ತಪ್ಪದೇ ಪತ್ರಿಕೆ ತಲುಪಿಸುವ ಪೇಪರ್ ಏಜೆಂಟ್ ಮತ್ತು #ವಿಜಯವಾಣಿ ಪತ್ರಿಕೆಯ ಆನಂದಪುರದ ಪತ್ರಿಕಾ ವರದಿಗಾರ ಕೂಡ ಹೌದು.      ತಂದೆ ಸಣ್ಣ ವಯಸ್ಸಲ್ಲೇ ತೀರಿ ಹೋಗಿದ್ದು,ತಾಯಿಗೆ ಸಿಗಬೇಕಾದ ಆಸ್ತಿ ಸಿಗದೇ ಹೋದದ್ದು, ಯಾವ ಜಾತಿ ಆದರೇನು ಬಡತನ ಬಂದರೆ ಎಲ್ಲರೂ ದೂರ ಮಾಡುವಂತೆ ಇವರನ್ನೂ ಎಲ್ಲರೂ ದೂರ ಮಾಡಿದರು,ಇವರ ಹವ್ಯಕ ಜಾತಿ ಬಾಂದವರ್ಯಾರು ಈ ಕುಟುಂಬಕ್ಕೆ ಸಹಾಯ ಮಾಡಲಿಲ್ಲ.   ಕೇಶವ ಬೆಳಿಗ್ಗೆ ಪೇಪರ್ ಹಾಕುವುದು, ಬಸ್ಸುಗಳಲ್ಲಿ ಪೇಪರ್, ಸೋಡಾ,ಬಾಳೆಹಣ್ಣು, ಕಡಲೆಕಾಯಿ ಮಾರುತ್ತಾ ಶಾಲೆಗೆ ಹೋಗಿ ವಿದ್ಯಾಬ್ಯಾಸವೂ ...

ಮಹೀ೦ದ್ರಾ & ಮಹೀದ್ರಾ ಸಂಸ್ಥೆಯ ನವಜಾತ ಶಿಶುಗಳಿಗಾಗಿಯೇ ಇರುವ A to Z ಶಾಪ್ ಶಿವಮೊಗ್ಗದ ನೆಹರೂ ರಸ್ತೆಯಲ್ಲಿದೆ

#ಪಸ್ಟ್_ಕ್ರೈ_ಶಿವಮೊಗ್ಗದ_ನೆಹರೂ_ರಸ್ತೆಯ_ನವಜಾತ_ಶಿಶುಗಳಿಗಾಗಿ_ಶಾಪಿ೦ಗ್_ಮಾಲ್.  ನಾನು ನಿನ್ನೆ ಶಿವಮೊಗ್ಗದಲ್ಲಿ ನನ್ನ ಅಣ್ಣನ ಮೊದಲ ಮೊಮ್ಮಗನಿಗಾಗಿ ತೊಟ್ಟಿಲು ಖರೀದಿಸಿದೆ, ನನ್ನ ಜೀವಮಾನದ ಎರಡನೇ ತೊಟ್ಟಿಲು ಇದು ಮೊದಲನೆಯದ್ದು 1985ರಲ್ಲಿ ನನ್ನ ಅಕ್ಕನ ಮಗಳಿಗಾಗಿ ವೆಲ್ಡಿಂಗ್ ಶಾಪ್ ಒ0ದರಲ್ಲಿ ತಯಾರಿಸಿ ತಂದ ಕಬ್ಬಿಣದ ಸ್ಟ್ಯಾಂಡಿಂಗ್ ತೊಟ್ಟಲದು.   ನಿನ್ನೆ ಖರೀದಿ ಮಾಡಿದ್ದು ಮಹಿಂದ್ರಾ ಕಂಪನಿಯ Firstcry  ಎಂಬ ಶಿವಮೊಗ್ಗದ ಮಳಿಗೆಯಲ್ಲಿ, ಕಡಿಮೆ ಬಾರದ ಹಗುರಾದ ಆದರೆ ನವಜಾತ ಶಿಶುವಿನಷ್ಟೇ ಮೃದುವಾದ ಬಟ್ಟೆಗಳನ್ನ ಬಳಸಿರುವ, ಸೊಳ್ಳೆಗಳು ಪ್ರವೇಶ ಮಾಡದಂತ, ಬೇಕಾದರೆ ತೂಗುವ ಬೇಡವಾದರೆ ಸ್ಥಿರವಾಗಿ ನಿಲ್ಲುವಂತ, ರೂಮಿನಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಸುಲಭವಾಗಿ ದೂಡಿಕೊಂಡು ಒಯ್ಯುವಂತ ವೀಲುಗಳು ಇರುವ ತೊಟ್ಟಿಲು ಇದು.    ಶಿವಮೊಗ್ಗದ ಈ ಸಂಸ್ಥೆಯ ಪ್ರಾಂಚೈಸಿದಾರರು #ಶಿವಮೊಗ್ಗದ_ಮಾಜಿ_ಶಾಸಕರಾದ_ಪ್ರಸನ್ನ_ಕುಮಾರ್ ಅವರು ಹೊಂದಿದ್ದಾರೆ, ಜಿಲ್ಲೆಯ ಜನತೆಗೆ ಅವಶ್ಯವಿರುವ ಈ ಉದ್ದಿಮೆ ಪ್ರಾರಂಬಿಸಿರುವ ಹಿರಿಮೆ ಅವರದ್ದು.   ವೈಜ್ಞಾನಿಕವಾಗಿ ನಿರಂತರ ಸಂಶೋದನೆ ಮತ್ತು ಅಭಿವೃದ್ದಿ (R&D) ಮಾಡುತ್ತಾ ದೇಶದಾದ್ಯಂತ ನವಜಾತ ಶಿಶುಗಳಿಗೆ ಬೇಕಾದ ಎಲ್ಲಾ ರೀತಿಯ ಉಡುಪು, ಹಾಸಿಗೆ, ತೊಟ್ಟಲು, ಸೋಪು, ಪೌಡರ್, ಕ್ರೀಂ, ರೈಮ್ ಬು...

ನೇ೦ದ್ರ ಬಾಳೆ ಹಣ್ಣು ಹಬೆಯಲ್ಲಿ ಬೇಯಿಸಿ ಉಪಹಾರದಲ್ಲಿ ಬಳಸುವುದು ಆರೋಗ್ಯಕ್ಕೆ ತುಂಬಾ ಸಹಾಯ ಮಾಡುತ್ತದೆ.

#ಕೇರಳದಲ್ಲಿ_ಉಪಹಾರದಲ್ಲಿ_ಹಬೆಯಲ್ಲಿ_ಬೇಯಿಸಿದ_ನೇಂದ್ರ_ಬಾಳೆಹಣ್ಣು    ಕೇರಳದ ಎಲ್ಲಾ ರೆಸ್ಟೋರಂಟ್ ಗಳಲ್ಲಿ ಬೆಳಗಿನ ಉಪಹಾರಕ್ಕೆ ಹಬೆಯಲ್ಲಿ ಬೇಯಿಸಿದ ನೇಂದ್ರ ಬಾಳೆ ಹಣ್ಣು ದೊರೆಯುತ್ತದೆ.   ಸ್ಥಳಿಯರಿಗೆ  ಕುಚುಲಕ್ಕಿ, ತೆಂಗಿನ ತುರಿ ಸೇರಿಸಿದ ಪುಟ್ಟು ಮತ್ತು ಕಡಲೇ ಕಾಳಿನ ಪಲ್ಯದ ಜೊತೆ ಈ ಬೇಯಿಸಿದ ನೇಂದ್ರ ಬಾಳೆ ಹಣ್ಣು ಬೇಕೇ ಬೇಕು ನಂತರ ಒಂದು ಬ್ಲಾಕ್ ಟೀ ಅವರ ಪೆವರಿಟ್ ಬ್ರೇಕ್ ಪಾಸ್ಟ್.   ಕೇರಳದ ನೇಂದ್ರ ಬಾಳೆ ಹಣ್ಣು ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಬಂಗಾಲಿಕೋಡನ್ ಹಳ್ಳಿಗೆ GEOGRAPHICAL IDENTIFICATION ಸಿಕ್ಕಿದೆ.   ಕೇರಳದ ನೇಂದ್ರ ಬಾಳೆ ಹಣ್ಣಿನಲ್ಲಿ ಕ್ಯಾಲ್ಸಿಯಂ, ಪಾಸ್ಪರಸ್, ಐರನ್ ಮತ್ತು ಪೈಬರ್ ಅಂಶ ಹೆಚ್ಚಿದೆ ಮತ್ತು ಕೊಲೆಸ್ಟ್ರಾಲ್ ಇಲ್ಲ.   ಒಂದು ಸಾದಾರಣ ನೇಂದ್ರ ಬಾಳೆ ಹಣ್ಣಿನಲ್ಲಿ 105 ಕ್ಯಾಲೋರಿ ಇದೆ, ಬೇಯಿಸಿದ ಬಾಳೆ ಹಣ್ಣು ಕಿಡ್ನಿಸ್ಟೋನ್, ಹೈ ಬ್ಲಡ್ ಪ್ರಶರ್ ಮತ್ತು ಪಾಶ್ವ೯ವಾಯು ತಡೆಯುತ್ತದೆ, ಮಲಬದ್ದತೆ ಗುಣಪಡಿಸುತ್ತದೆ ಹಾಗೂ ಜೀಣ೯ ಸಹಾಯಕ ಅಂತ ಆಯುವೇ೯ದ ಉಲ್ಲೇಖವೂ ಇದೆ.   ಚಿಕ್ಕ ಮಕ್ಕಳಿಗೆ ಇದು ಅತ್ಯುತ್ತಮ ಪೋಶಕಾಂಶ ಇದನ್ನು ಸೇವಿಸಿದರೆ ತ೦ಡಿ, ಶೀಥ ಮತ್ತು ಕಫ ಆಗುವುದಿಲ್ಲ ಅನ್ನುತ್ತಾರೆ.   ನೇಂದ್ರ ಬಾಳೆ ತಳಿಯ ಮೂಲ ಹೊನಾಲುಲು ಅಲ್ಲಿ ಹ್ಯಾಂಬಗ೯ ತಯಾರಿಯಲ್ಲಿ ಈ ಬಾಳೆ ಬಳಸುತ್ತಾರೆ ಮತ್ತು ಬ...

ಮುಡೇ೯ಶ್ವರ ವಿಶ್ವ ವಿಖ್ಯಾತಿ ಆಗಲು ಡಾ.ಆರ್. ಎನ್.ಶೆಟ್ಟರ ಶ್ರಮವಿದೆ, ಅವರ ಜೀವನ ಕೂಡ, 92ನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆ ತ್ಯಜಿಸಿದ್ದಾರೆDr

#ಮುಡೇ೯ಶ್ವರ_ವಿಶ್ವವಿಖ್ಯಾತಗೊಳಿಸಿದ_ರಾಮನಾಗಪ್ಪ_ಶೆಟ್ಟರು.    ಆರ್.ಎನ್. ಶೆಟ್ಟರೆಂದರೆ ಅಂದರೆ ಅವರ ನಿಮಾ೯ಣ ಸಂಸ್ಥೆಯಿಂದ ಆಗದ ಕೆಲಸವೇ ಇಲ್ಲ ಎ೦ಬ ಪ್ರತೀತಿ ಇದೆ ಇದಕ್ಕೆ ಕಾರಣ ಇವರ ಸಂಸ್ಥೆ ಸವಾಲಾಗಿ ನಿಮಿ೯ಸಿರುವ ಕೊಂಕಣ ರೈಲ್ವೆಯ 18 ಸುರಂಗ ಮಾಗ೯ಗಳು, ಯುಕೆಪಿಯ ನೂರಾರು ಕಿ.ಮೀ. ಉದ್ದದ ನೀರಾವರಿ ಕಾಲುವೆಗಳು, ಬೆಳಗಾಂ ಜಿಲ್ಲೆಯ ಹಿಡಕಲ್ ಆಣೆಕಟ್ಟುಗಳು ಎದ್ದು ಕಾಣುತ್ತದೆ.  ಇವರ ತಂದೆ ಕೃಷಿಕರು, ಪುರಾಣ ಪ್ರಸಿದ್ದ ಭಟ್ಕಳ ತಾಲ್ಲೂಕಿನ ಮುಡೇ೯ಶ್ವರ ದೇವಾಲಯದ ಮುಕ್ತೇಸರರಾಗಿದ್ದರು, ಗೋಕಣ೯ದಲ್ಲಿ ಆತ್ಮಲಿಂಗ ಐಕ್ಯ ಆದಾಗ ರಾವಣ ಅದನ್ನು ಕೀಳುವ ಪ್ರಯತ್ನದಲ್ಲಿ ಆತ್ಮಲಿಂಗದ ಕೆಲ ತುಣುಕು ಇಲ್ಲಿಗೆ ಬಂದು ಬಿದ್ದಿದೆ ಎಂಬ ಪ್ರತೀತಿ, ಸ್ಥಳ ಪುರಾಣ ಇದೆ.   ಈಗಲೂ ಮುಡೇ೯ಶ್ವರದಲ್ಲಿ ದೇವರ ಎದುರು ಗೋಕಣ೯ದ ಆತ್ಮಲಿಂಗದ ಕಲ್ಲುಗಳ ತುಣುಕ ಅಪೇಕ್ಷೆ ಪಟ್ಟರೆ ಅಚ೯ಕರು ತೋರಿಸುತ್ತಾರೆ.    ಇಲ್ಲಿ ಜನಿಸಿ ಬಾಲ್ಯ ಕಳೆದ ಶೆಟ್ಟರು ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದರೂ ಅವರ ಸಾಧನೆಗಾಗಿ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪಡೆಯುವಂತಾಗಿದ್ದು ಇತಿಹಾಸ.   1961 ರಲ್ಲಿ ಇವರು ಸ್ಥಾಪಿಸಿದ ನಿಮಾ೯ಣ ಸಂಸ್ಥೆ ಇವತ್ತು ಇವರ ಒಟ್ಟು ಆಸ್ತಿ ಮೌಲ್ಯ 18 ಸಾವಿರದ 700 ಕೋಟಿ ಅಂದರೆ ಸಣ್ಣದಲ್ಲ ಇದರ ಜೊತೆ ಶೈಕ್ಷಣಿಕ ಕ್ಷೇತ್ರ, ಹೋಟೆಲ್ ಉದ್ಯಮ, ಮಂಗಳೂರು ಹೆಂಚು, ವೆಟ್...

ಶ್ರೀ ಕೃಷ್ಣ ಕಥಾ ಮಂಜರಿ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ

#ಕುಂಟಿಕಾನ_ಮಠ_ಬಾಲಕೃಷ್ಣ_ಭಟ್ಟರು       ಬರೆದಿರುವ #ಶ್ರೀ_ಕೃಷ್ಣ_ಕಥಾ_ಮಂಜರಿ ಪುಸ್ತಕ ಇವತ್ತು ಮುಖ್ಯಮಂತ್ರಿಗಳಾದ ಯಡೂರಪ್ಪನವರು ಬಿಡುಗಡೆ ಮಾಡಿದರು.        ಕಳೆದ ವರ್ಷ ಇವರು ಬರೆದ #ಶ್ರೀ_ರಾಮಕಥಾ_ಮಂಜರಿ ಕೂಡ ರಾಜ್ಯದಾದ್ಯಂತ ಜನ ಮನ್ನಣೆ ಪಡೆದದ್ದನ್ನು ಇಲ್ಲಿ ಸ್ಮರಿಸಬಹುದು.        ಈ ಎರೆಡೂ ಪುಸ್ತಕ ರಾಮಾಯಣ ಮತ್ತು ಮಹಾಭಾರತ ಪ್ರತಿಯೊಬ್ಬ ಹಿಂದೂ ದಮಿ೯ಯರ ಮನೆಯಲ್ಲಿ ಇರಬೇಕಾದ ಪವಿತ್ರ ಗ್ರ೦ಥವಾಗಿದೆ.        ಪುಸ್ತಕ ಬೇಕಾದವರು ಸಂಪಕಿ೯ಸ ಬಹುದಾದ ಸೆಲ್ ನಂಬರ್ 9895222779 ಗೋವಿಂದ್ ಕುಂಟಿಕಾನ್ ಮಠ

ಆನಂದಪುರದ ಚಿರಪರಿಚಿತ ಹೋಟೆಲ್ ಕೃಷ್ಣಣ್ಣ ಮತ್ತು ನಾಟಕ ನಿರ್ದೇಶಿಸುತ್ತಿದ್ದ ಜೋಗಿ ಹನುಮಂತಣ್ಣ

#ಆನಂದಪುರದ_ಚಿರಪರಿಚಿತರಾದ_ಹೋಟೆಲ್_ಕೃಷ್ಣಣ್ಣ  ಹೋಟೆಲ್ ಕೃಷ್ಣಣ್ಣ, ತಿಂಡಿ ಕೃಷ್ಣಣ್ಣ ಅಂತೆಲ್ಲ ಕರೆಯುವ ಸದಾ ನಗುಮೊಗದ ಕೃಷ್ಣಣ್ಣ ನಿನ್ನೆ ಸಿಕ್ಕಿದ್ದರು ಅವರಿಗೆ ಈಗ 84 ವರ್ಷ ಆದರೆ ಅವರು 35 ವರ್ಷದವರಷ್ಟೆ ಕ್ರಿಯಾಶೀಲರು.   ಪ್ರತಿನಿತ್ಯ ಬೆಳಿಗ್ಗೆ ಸಂಜೆ ಅವರ ಕೃಷಿ ಕೆಲಸದ ಜೊತೆ ಆನಂದಪುರದಲ್ಲಿನ ಅವರ ಹೋಟೆಲ್ ವ್ಯವಹಾರ ನಿರಂತರ ನಡೆಸಿ ಕೊಂಡು ಬರುತ್ತಿದ್ದಾರೆ.   ಇದರ ಮಧ್ಯೆ ಸುತ್ತ ಮುತ್ತಲಿನ ಸಂತೆ ಮತ್ತು ಜಾತ್ರೆಯಲ್ಲಿ ಇವರ ಬೆಂಡು ಬತ್ತಾಸು, ಬೂಂದಿ ಖಾರ ಮತ್ತು ಮಂಡಕ್ಕಿ ಅಂಗಡಿ ಇರದಿದ್ದರೆ ನೆರೆದ ಜನ ಆ ವಷ೯ದ ಜಾತ್ರೆ ಜೋರಾಗಿಲ್ಲ ತಿಂಡಿ ಕೃಷ್ಣಣ್ಣ ಅಂಗಡಿನೇ ಹಾಕಿಲ್ಲ ಅನ್ನುವಷ್ಟರವರೆಗೆ ಇವರ ಪ್ರಸಿದ್ದಿ ಇದೆ.   1960 ರ ದಶಕದಲ್ಲಿ ಇವರೆಲ್ಲ ಆನಂದಪುರದ ಪ್ರಸಿದ್ದ ನಾಟಕ ಕಲಾವಿದರು ನಮ್ಮ ತಂದೆಗೆ ಹೀರೋ ಪಾತ್ರವಂತೆ ಆದರೆ ಜೋಗಿ ಹನುಮಂತಣ್ಣ ನಾಟಕ ನಿದೇ೯ಶನ ಮಾಡುತ್ತಿದ್ದದ್ದು ನನಗೆ ಗೊತ್ತಾಗಿದ್ದೆ ನಿನ್ನೆ ಕೃಷ್ಣಣ್ಣರ ಹತ್ತಿರ ಮಾತಾಡಿದಾಗ.   ಆಗಿನ ಆನಂದಪುರಂನ ಪ್ರಸಿದ್ಧ ಹೋಟೆಲ್ ಕಿಣಿ ರಾಯರ ಕೋಮಲ ವಿಲಾಸ್ ಪಕ್ಕ 10 x 10 ಅಡಿಯ ಅತ್ಯಂತ ಸಣ್ಣದಾದ ಮಳಿಗೆ ಜೋಗಿ ಹನುಮಂತಣ್ಣನದ್ದು ಅದು ಭೂ ಮಾಲಿಕರಾದ ವೆಂಕಟಾಚಲಯ್ಯ0ಗಾರರಿಂದ (ಮಂತ್ರಿಗಳಾಗಿದ್ದ ಬದರಿನಾರಾಯಣ ಅಯ್ಯಂಗಾರರ ಸಹೋದರ) ಬಾಡಿಗೆ ಪಡೆದದ್ದು.  ಅಲ್ಲಿ ಏನುಂಟು ಏನಿಲ್ಲ! ಆಲೆಮನೆ ಬೆಲ...

ಉತ್ತರ ಕನಾ೯ಟಕದ ಸಿಹಿ ತಿಂಡಿ ಮಾದಲಿ ಮುಖ್ಯಮಂತ್ರಿಗಳಿದ್ದ ಜೆ.ಹೆಚ್. ಪಟೇಲರಿಗೆ ನಿತ್ಯ ಬೇಕಿತ್ತಂತೆ, ಮಾದಲಿ ಮಾಡುವ ಎರೆಡು ವಿಧಾನಗಳು ಇಲ್ಲಿವೆ ನೋಡಿ.

#ಉತ್ತರ_ಕನ್ನಡದ_ಸರಳ_ರೆಸಿಪಿಯ_ಉತ್ಕೃಷ್ಟ_ಸಿಹಿ #ಮಾದಲಿ   ಮಲೆನಾಡಿನಲ್ಲಿ ಇದು ಪ್ರಚಲಿತವಲ್ಲದ ಸಿಹಿ ತಿಂಡಿ ಶಿವಮೊಗ್ಗ ಜಿಲ್ಲೆಯ ನ್ಯಾಮತಿ ನಂತರ ಇದು ಹೆಚ್ಚು ಪರಿಚಿತ ಆದರೆ ಇದರ ಹೆಸರು ಕೇಳಿದ್ದು ಬಿಟ್ಟರೆ ನನಗೆ ಇದು ನನಗೆ ಸಿಕ್ಕಿರಲಿಲ್ಲ.  ಇತ್ತೀಚಿಗೆ ಇದರ ವಿಚಾರ ಮಾತಾಡುವಾಗ ಹೊಸನಗರ ತಾಲ್ಲೂಕಿನ ಲಾರಿ ಮಾಲಿಕರ ಸಂಘದ ಉಪಾಧ್ಯಕ್ಷರಾದ ಪಾಪುಗೌಡರು "ಹೌದು ಇದು ಉತ್ತರ ಕನ್ನಡ ಜಿಲ್ಲೆಯ ಸಿಹಿ ಈಗೀಗ ಮಲೆನಾಡಿನಲ್ಲಿ ಕೂಡ ಮಾಡುತ್ತಾರೆ " ಅಂದಿದ್ದವರು ಮೊನ್ನೆ ಒಂದು ಡಬ್ಬ ಮಾದಲಿ ಕಳಿಸಿದ್ದಾರೆ.  ಇದನ್ನು ಕಾಸಿದ ತುಪ್ಪದಲ್ಲಿ ಮಿಶ್ರ ಮಾಡಿ ತಿಂದರೆ ಒ0ದು ರುಚಿ, ಹಾಲಿನ ಜೊತೆ ತಿಂದರೆ ಇನ್ನೊಂದು ರುಚಿ ಹಾಗೆ ಹಾಲು ತುಪ್ಪ ಸೇರಿಸಿದರೆ ವಿಶೇಷ ರುಚಿಯ ಸಿಹಿ ತಿಂಡಿ ಆಗುತ್ತದೆ.   ಇದರ ರೆಸಿಪಿ ಸರಳ 250 ಗ್ರಾಂ ಗೋದಿ ತರಿ ತರಿಯಾಗಿ ಹಿಟ್ಟು ಮಾಡಿಕೊಂಡು ತುಪ್ಪದಲ್ಲಿ ಹುರಿಯುತ್ತಾ ಇದಕ್ಕೆ 1 ಟೇಬಲ್ ಸ್ಪೂನ್ ಕಡಲೆ ಹಿಟ್ಟು, 1 ಟೇಬಲ್ ಸ್ಪೂನ್ ಗಸಗಸೆ, ಅದ೯ ಕಪ್ ಬೆಲ್ಲದ ಪುಡಿ, 2 ಟೇಬಲ್ ಸ್ಪೂನ್ ಕೊಬ್ಬರಿ ಪುಡಿ, 2 ಟೇಬಲ್ ಸ್ಪೂನ್ ಬೆಳಗಡಲೆ, 2 ಏಲಕ್ಕಿ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ ಹುರಿದರೆ ಉತ್ತರ ಕನ್ನಡದ ಸಿಹಿ ತಿಂಡಿ ಮಾದಲಿ ತಯಾರು.   ಇದನ್ನು ಸುರಕ್ಷಿತವಾಗಿ ಡಬ್ಬಿಯಲ್ಲಿಟ್ಟರೆ ಎರೆಡು ತಿಂಗಳಾದರೂ ಹಾಳಾಗುವುದಿ...