#ಹೊಟ್ಟೆಪಾಡಿಗಾಗಿ_ಉದ್ಯೋಗದಲ್ಲಿ_ಅವತಾರಗಳು #ವಿದಿಯಾಟದ_ಜೀವನ_ಪಲ್ಲಟವಲ್ಲವೇ? #ನಲವತ್ತೊಂದು_ವರ್ಷದ_ಹಿಂದಿನ_ನೆನಪಿನ_ಚಿತ್ರ. 1980 ರಲ್ಲಿ ನಾನು ಎಸ್. ಎಸ್.ಎಲ್.ಸಿ ಆದರೆ ಎಂಟನೆ ತರಗತಿಯಿಂದನೇ ಸಾಗರದ ಮುನ್ಸಿಪಲ್ ಹೈಸ್ಕೂಲ್ ಗೆ ಚಕ್ಕರ್ ಪ್ರತಿ ದಿನ ಆನಂದಪುರಂನಿಂದ ಬರುತ್ತಿದ್ದ ಗೆಳೆಯನ ಜೊತೆ ಸಾಗರ ರೈಲು ನಿಲ್ದಾಣದ ಎದುರಿನ ಪುಟ್ಬಾಲ್ ಮೈದಾನದಲ್ಲಿ ಕ್ರಿಕೆಟ್. ಹಾಗಾಗಿ ಆ ವರ್ಷ ಪರೀಕ್ಷೆ ತೆಗೆದುಕೊಳ್ಳದೆ ಒಂದು ವರ್ಷ ಓದಿ ಎಸ್.ಎಸ್.ಎಲ್.ಸಿ ಪರೀಕ್ಷೆ ತೆಗೆದುಕೊಳ್ಳುವುದೆಂದು ತೀರ್ಮಾನಿಸಿ ಬಿಟ್ಟಿದ್ದೆ ಆದರೆ ನನ್ನ ತೀರ್ಮಾನ ಪರೀಕ್ಷೆಗೆ ಒಂದು ವಾರ ಇರುವಾಗ ತಂದೆಯವರಲ್ಲಿ ತಿಳಿಸಿದಾಗ ಅವರು ಒಪ್ಪಲೇ ಇಲ್ಲ ಆದ್ದರಿಂದ ಸಾಗರದ ಶ್ರೀ ಟ್ರೇಡರ್ಸ್ ನಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಸಮಾಜಶಾಸ್ತ್ರದ ಎಸ್ ಎಸ್.ಎಲ್.ಸಿ ಬಂದು ಎಂಬ (ಆ ಕಾಲದ ಪ್ರಸಿದ್ದ ಗೈಡುಗಳು) ಗೈಡ್ ಖರೀದಿಸಿ ಓದಿ ಈ ನಾಲ್ಕು ಸಬ್ಜೆಕ್ಟ್ ಉತ್ತಮ ಅಂಕದಲ್ಲೇ ಪಾಸು ಮಾಡಿದೆ. ಗಣಿತ ಮತ್ತು ವಿಜ್ಞಾನ ಪರೀಕ್ಷೆ ಬರೆಯಲೇ ಇಲ್ಲ, ಅದನ್ನು ಆನಂದಪುರಂ ರತ್ನಾಕರ ಮಾಸ್ಟರ್ ಎಂಬ ಸಹೃದಯಿ ಶಿಕ್ಷಕರಿಂದ ಟ್ಯೂಷನ್ ಪಡೆದು ಸಪ್ಲಿಮೆಂಟರಿ ಪರೀಕ್ಷೆ ಪಾಸು ಮಾಡಿಕೊಂಡೆ. ಈ ಒಂದು ವರ್ಷದ ಗ್ಯಾಪ್ ನ್ನು ಸದುಪಯೋಗ ಮಾಡಿಕೊಳ್ಳಲು ದಿನಸಿ ಅಂಗಡಿ ಕನಸು ಕಂಡಿದ್ದೆ ಆಗಲೇ ನನ್ನ ತಂದೆಯ ಗೆಳೆಯರ...