#ದೇಶದ_ರಕ್ಷಣಾ_ಮಂತ್ರಿ_ಆಗಿದ್ದಾಗಲೂ #ದೆಹಲಿಯ_ಜಾಜ್೯ಪರ್ನಾಂಡೀಸರ_ಮನೆಯ_ಮೈನ್_ಗೇಟ್_ಯಾಕೆ_ಇರಲಿಲ್ಲ. #ಇದಕ್ಕೊಂದು_ಕಾರಣವಿದೆ_ಅಲ್ಲೊಂದು_ಪ್ರತಿಭಟನೆ_ಇದೆ ಕೃಷ್ಣಮೆನನ್ ಮಾರ್ಗ ದೆಹಲಿಯ ಜಾರ್ಜ್ ಪನಾ೯ಂಡೀಸರ ಮನೆ ಈ ಮನೆಯ ಗೇಟು ನಾಪತ್ತೆ ಆಗಿದ್ದ ಪ್ರಕರಣಕ್ಕೆ ಕಾರಣ ಗೊತ್ತಾ? ಅದು ಜಾರ್ಜರು ಆಡಳಿತಶಾಹಿಯ ಅಂದಾನುಕರಣೆಗೆ ನೀಡಿದ ಪ್ರಹಾರ ಮತ್ತು ದಾಖಲಿಸಿದ ಪ್ರತಿಭಟನೆಯ ಹೊಸ ಮಾದರಿ. ಸುಮಾರು ಇಪ್ಪತ್ತೊಂಬತ್ತು ವರ್ಷ ಗೇಟ್ ಇಲ್ಲದ ಮನೆಯಲ್ಲಿ ಜಾರ್ಜ್ ವಾಸವಾಗಿದ್ದರು. #govtofindia #krishnamenanmarg #DehliCapitals #GeorgeFernandis #DefenceMinisterOfIndia #RailwayMinister ರೈಲ್ವೆಮಂತ್ರಿ ರಕ್ಷಣಾಮಂತ್ರಿ ಆದರೂ 1990ರಿಂದ 2019 ಜನವರಿ ಕೊನೆಯವರೆಗೆ ಗೇಟು ಇರಲೇ ಇಲ್ಲ. ಅದು 1990 ಆಗ ಜಾಜ್೯ ಬಿಹಾರದಿಂದ ಲೋಕಸಭೆಗೆ ಆಯ್ಕೆ ಆಗಿದ್ದರು, ತುತು೯ ಪರಿಸ್ಥಿತಿ ನಂತರದ ಸಕಾ೯ರದಲ್ಲಿ ಕೇಂದ್ರ ಮಂತ್ರಿ ಆಗಿದ್ದಾಗಿಂದ ಅವರು ವಾಸಿಸುತ್ತಿದ್ದು ನಂ 3 , ಕೃಷ್ಣ ಮೆನನ್ ಮಾಗ್೯ ನವದೆಹಲಿ. ಒಂದು ದಿನ ಜಾಜ್೯ರು ತಮ್ಮ ನೀಲಿ ಬಣ್ಣದ ಪಿಯಟ್ ಕಾರು ಚಲಾಯಿಸಿಕೊಂಡು ಪಾಲಿ೯ಮೆಂಟ್ ನಿಂದ ಮನೆಗೆ ಬಂದಾಗ ಜಾಜ್೯ರ ಮನೆ ಗೇಟು ಹಾಕಿತ್ತು. ಪ್ರತಿ ದಿನ ಬೆಳಿಗ್ಗೆ 6ಕ್ಕೆ ಗೇಟು ತೆರೆದರೆ ಮಧ್ಯದಲ್ಲಿ ಹಾಕುವುದಿಲ್ಲ ಹೀಗೇಕೆ ಎಂದು ವಿಚಾರಿಸಿದಾಗ ಅವರಿಗೆ ತಿಳಿದು ಬಂದ...