#ಆನಂದಪುರಂನಿಂದ_ಹೊಸನಗರ_ಮಾರ್ಗದಲ್ಲಿರುವ_ವಿಶೇಷ_ದೇವಸ್ಥಾನ #ನೂತನ_ಕೃಷಿ_ವಿಶ್ವವಿದ್ಯಾಲಯ_ಇಲ್ಲಿಂದಲೇ_ಪ್ರಾರಂಭವಾಗುತ್ತದೆ #ಬಂಗಿ_ಭೂತಪ್ಪ_ದೇವಸ್ಥಾನ #ಬಂಗಿ_ಸಿಗರೇಟು_ಬೀಡಿಯೇ_ನೈವೇದ್ಯ. #ಪಕ್ಕದಲ್ಲಿರುವ_ಕಲ್ಯಾಣಿ_ಶಿಥಿಲಾವಸ್ಥೆಯಲ್ಲಿದೆ #ಸ್ಥಳಿಯರು_ಬಸವನಹೊಂಡ_ಎನ್ನುತ್ತಾರೆ. #ನಾಥ_ಸಂಪ್ರದಾಯದ_ಮಹಂತರ_ಸದಾ_ಉರಿಯುತ್ತಿದ್ದ_ಜೂಲ_ಇಲ್ಲಿತ್ತು. #ಹೊಸನಗರಕ್ಕೆ_ಹಿಂದಿನ_ಹೆಸರು_ಕಲ್ಲೂರಶೆಟ್ಟಿಕೊಪ್ಪ 18ನೆ ಶತಮಾನದವರೆಗೆ ಈ ರಸ್ತೆಗೆ ಆನಂದಪುರಂ ಕಲ್ಲೂರ ಶೆಟ್ಟಿ ಕೊಪ್ಪ ರಸ್ತೆ ಎಂಬ ಹೆಸರಿತ್ತು ಕಾರಣ ಹೊಸನಗರದ ಮೂಲ ಹೆಸರು ಕಲ್ಲೂರ ಶೆಟ್ಟಿ ಕೊಪ್ಪ ಅಂತ ಇತ್ತು ನಂತರ ಹೊಸನಗರ ಎಂದು ನಾಮಕರಣವಾಗಿರಬೇಕು, ಇದು ಕೆಳದಿ ಅರಸರ ಕಾಲದಲ್ಲಿ ಆನಂದಪುರಂ ಕೋಟೆಯಿಂದ ಅವರ ರಾಜದಾನಿ ಬಿದನೂರಿಗೆ ಹೋಗುವ ರಾಜ ಮಾರ್ಗವೂ ಆಗಿತ್ತು. ಆನಂದಪುರಂ ನಿಂದ ಈಗಿನ ಹೊಸನಗರ ರಸ್ತೆಯಲ್ಲಿ ಈಗ ನೂತನವಾಗಿ ನಿರ್ಮಿಸಿರುವ ಕೃಷಿ ವಿಶ್ವವಿದ್ಯಾಲಯದ ಪ್ರಾರಂಭದಲ್ಲೇ ರಸ್ತೆಯ ಎಡಬದಿಗೆ ದೊಡ್ಡ ಆಲದ ಮರ ಇತ್ತು ಅದರ ಕೆಳಗೆ ಸಣ್ಣದಾದ 3X3 ಅಡಿಯ ಕಲ್ಲಿನ ಚಪ್ಪಡಿಯ ಗುಡಿ ಇತ್ತು ಇಲ್ಲಿ ಅಸ೦ಖ್ಯ ವಿವಿದ ಗಾತ್ರದ ತ್ರಿಶೂಲಗಳು ಇತ್ತು. ಸದಾ ಅಲ್ಲಿ ಬಂಗಿಯ ದೂಮದ ಘಮ ಇರುತ್ತಿತ್ತು, ನಂತರ ಅದು ಸಿಗರೇಟು ಹಚ್ಚಿ ಸಮರ್ಪಿಸುವಲ್ಲಿಗೆ ಬದಲಾಗಿದೆ. ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಿಂ...