ಕೊರಾನಾ ಲಾಕ್ ಡೌನ್ ಡೈರಿ - 43. ಲಾಕ್ ಡೌನ್ ಜೂನ್ 30ರವರೆಗೆ ಮು೦ದುವರಿಯಲಿದೆ, ಎಲ್ಲಾ ನಿಭ೯೦ದ ಸಡಿಲ, ಸೋ೦ಕು ಪರೀಕ್ಷಾ ವೆಚ್ಚ ಸಕಾ೯ರ ಭರಿಸುವುದಿಲ್ಲ ಎಂಬ ಅಘಾತಕಾರಿ ತೀಮಾ೯ನ
ಕೊರಾನಾ ಲಾಕ್ ಡೌನ್ ಡೈರಿ -2020 ಲೆಟರ್ ನಂಬರ್- 43. ದಿನಾ೦ಕ: 31-ಮೇ -2020 #ನೂರು_ದಿನದ_ಲಾಕ್_ಡೌನ್_ಕೇ೦ದ್ರ_ಸಕಾ೯ರದ_ಗುರಿ "ಮುಂದಿನ 15 ದಿನದಲ್ಲಿ ಇವತ್ತಿನ ರೋಗ ಪೀಡಿತರ ಸಂಖ್ಯೆ ದ್ವಿಗುಣವಾಗದಿದ್ದರೆ ಕೊರಾನಾ ನಿಯOತ್ರಣದಲ್ಲಿ ಇದೆ ಅಂತ ಬಾವಿಸ ಬಹುದಾ? ಎಲ್ಲಾ ಕಟ್ಟುನಿಟ್ಟಿನ ತಪಾಸಣೆ ಕೈಬಿಡುವುದು, ಸೋ೦ಕು ಪರೀಕ್ಷೆ ವೆಚ್ಚ ಸಕಾ೯ರ ಭರಿಸದಿರುವುದು ಇತ್ಯಾದಿ ಸಕಾ೯ರದ ಕ್ರಮ ಆಶಾದಾಯಕವಲ್ಲ!?" ಲಾಕ್ ಡೌನ್ 4 ಇವತ್ತಿಗೆ ಮುಗಿದು 5 ಪ್ರಾರಂಭ ಆಗಲಿದೆ, ಇದು ಜೂನ್ 30ರವರೆಗೆ ಮು೦ದುವರಿಯುತ್ತದೆ ಎಂದು ಸುದ್ಧಿ ಇದೆ. ಮೊದಲ ಲಾಕ್ ಡೌನ್ ಸಂಪೂಣ೯ ಕಪ್ಯೂ೯ ಅಂತ ಇದ್ದದ್ದು ನಂತರ ಹಂತ ಹಂತವಾಗಿ ಸಡಿಲಿಸಲಾಗುತ್ತಾ ಬಂದು ಈಗ 5 ನೇ ಹಂತದ ಲಾಕ್ ಡೌನ್ ಯಾವುದೇ ಪ್ರತಿಬಂದಕಗಳಿಲ್ಲದ ಲಾಕ್ ಡೌನ್ ಆಗಲಿದೆ. ಎಲ್ಲಾ ಪ್ರಾಥ೯ನ ಮಂದಿರ ಪ್ರಾರಂಭ, ಹೋಟೆಲ್ ಲಾಡ್ಜ್ ಪ್ರಾರಂಭ, ರೈಲು ವಿಮಾನ ಪ್ರಾರಂಭ, ಮಾಲ್ ಗಳು ಪ್ರಾರಂಭ, ತಡೆಹಿಡಿದ SSLC ಮತ್ತು PUC ಪರೀಕ್ಷೆ ಪ್ರಾರಂಭ ಹೀಗೆ ನಿಂತಿದ್ದೆಲ್ಲಾ ಪ್ರಾರಂಭ ಆಗಲಿದೆ. ಪ್ರತಿ ಜಿಲ್ಲೆಯಲ್ಲಿ ತಪಾಸಣ ಗೇಟ್ಗಳು ಈಗಿಲ್ಲ, ಕೊರಾ೦ಟೈ ಕೇವಲ 7 ದಿನ, ಸೋ೦ಕು ಪರೀಕ್ಷೆ ವೆಚ್ಚ ಸಕಾ೯ರ ಇನ್ನು ಭರಿಸುವುದಿಲ್ಲ ಎಂದಿದೆ. ಜೂನ್ 30 ಕ್ಕೆ ಭಾರತ ದೇಶ 100 ದಿನದ ಲಾಕ್ ಡೌನ್ ನಲ್ಲಿ ಏನು ಸಾದಿಸಿತು!? ಎಂಬುದರ ...