#ಮಲೆನಾಡಿನ ಉದಯೋನ್ಮುಖ ಉದ್ದಿಮೆದಾರರೇ ಗಮನಿಸಿ# ಇವತ್ತು ಹಿರಿಯ ಮಿತ್ರರಾದ ಶ್ರೀ ಮ್ಯಾಥ್ಯೂ ತಾಮಸ್ (ONGC ಯ ನಿವೃತ್ತಾ ಅಧಿಕಾರಿ) ಚುಕ್ಕು ಕಾಪಿ ತಂದುಕೊಟ್ಟರು. ವಿಶೇಷ ಅಂದರೆ ಇದು ಪಶ್ಚಿಮ ಘಟ್ಟದ ಒಣ ಶುಂಠಿ,ಕರಾವಳಿಯ ವಾಲೆ ಬೆಲ್ಲ, ಕಾಫಿ, ಕಾಳು ಮೆಣಸು, ಕೊತ್ತಂಬರಿ ಮತ್ತು ಜೀರಿಗೆಯ ಸಮ್ಮಿ ಶ್ರಣದ ಸಣ್ಣ ದುಂಡನೆಯ ಕೇಕ್ ನಂತ ದುಂಡನೆಯ ತು೦ಡು. 2 ಕಪ್ ನೀರು ಕುದಿಯಲಿಟ್ಟು ಒಂದು ಕೇಕ್ ಹಾಕಬೇಕು ಅದು ಕರಗಿದ ನಂತರ ಕಪ್ ನಲ್ಲಿ ಹಾಕಿ ಕುಡಿದರೆ ಅದರ ಮಜಾವೇ ಬೇರೆ. ಆರೋಗ್ಯದಾಯಕ ಈ ಪೇಯ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಸೇವನೆಗೆ ಅತ್ಯುತ್ತಮ. ಕೇರಳದ ಪ್ರಖ್ಯಾತ Estern ಮಸಾಲೆ ವಸ್ತು ತಯಾರಿಸುವ ಕಂಪನಿ ತಯಾರಿಸಿ ದೇಶ ವಿದೇಶಗಳಲ್ಲಿ ಮಾಕೆ೯ಟ್ ಮಾಡುತ್ತಿದೆ. ಪಶ್ಚಿಮ ಘಟ್ಟದ ಅನೇಕ ಪೇಯ, ಕಷಾಯ, ಔಷದಿ, ತಿನಿಸು, ಸಂಡಿಗೆಗಳನ್ನ ತಯಾರಿಸಿ ಮಾರುಕಟ್ಟೆಗೆ ತರುವ ಉದೊಯೋನ್ಮುಖ ಸಾಹಸಿ ಉದ್ದಿಮೆದಾರರು ಮಲೆನಾಡಿನಲ್ಲಿ ಇದ್ದಾರೆ ಅವರಿಗಾಗಿ ಈ ಲೇಖನ.