Skip to main content

Posts

Showing posts from September, 2024

Blog number 2301. ಕೊಲ್ಲೂರು ದೇವಾಲಯದ ಪ್ರಧಾನ ಅರ್ಚಕರು ಖ್ಯಾತ ಬೈಕರ್

#ಕನ್ನಡಿಗ_ಬೈಕ್_ರೈಡರ್_ಗಳು_ಚೈನಾ_ತಲುಪಿದ್ದಾರೆ. #ಕೊಲ್ಲೂರು_ಮೂಕಾಂಬಿಕಾ_ದೇವಾಲಯದ_ಪ್ರಧಾನ_ಅರ್ಚಕರು #ಈ_ಸಾಹಸಯಾತ್ರೆಯಲ್ಲಿದ್ದಾರೆ. #ಇವರ_ಜೊತೆ_ಖ್ಯಾತ_ಕನ್ನಡಿಗ_ಬೈಕ್_ರೈಡರ್_ಮುಟೋವ್ಲೊಗಾರ್_ಕಿತ್ತಡಿ_ಕಿರಣ್_ಜೊತೆಯಾಗಿದ್ದಾರೆ. #kittadikiran #bikerider #solorider #motovloger #nityaadigakollur #kollurumukambika #bikeride     ಪ್ರಖ್ಯಾತ ಕೊಲ್ಲೂರಿನ ಮೂಕಾಂಬಿಕಾ ದೇವಾಲಯ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿದೆ.       ಇಲ್ಲಿನ ಪ್ರಧಾನ ಅರ್ಚಕರು ಮತ್ತು ತಂತ್ರಿಗಳಾದ ನಿತ್ಯಾನಂದ ಅಡಿಗರು ಬೆಂಗಳೂರು ಟು ಲಂಡನ್ ಬೈಕ್ ರೈಡಿಂಗ್ನಲ್ಲಿ ಇದ್ದಾರೆ.   ಬಾಲ್ಯದಿಂದಲೂ ಇವರಿಗೆ ಬೈಕ್ ಗಳ ಆಕರ್ಷಣೆ ಜಾಸ್ತಿ. ಈಗಾಗಲೇ ಮೂರು ದೇಶಗಳ ಸೋಲೋ ಬೈಕ್ ರೈಡಿಂಗ್ ಮಾಡಿದ ಅನುಭವ ಹೊಂದಿದ್ದಾರೆ.   ವಿದ್ಯಾವಂತ ಬುದ್ಧಿವಂತ ಈ ಯುವಕ ಅತ್ಯುತ್ತಮ ವಾಗ್ಮಿ ಕೂಡ ಅವರ ಸಾಹಸಮಯ ಪ್ರವೃತ್ತಿ ಅಭಿನಂದನೀಯ.    ಈಗ ಅವರು ಚೈನಾ ದೇಶ ತಲುಪಿದ್ದಾರೆ ಇವರ ಜೊತೆ ಇನ್ನೂ ಮೂರು ಬೈಕುಗಳಿದೆ,ಒಂದರಲ್ಲಿ ಪ್ರಖ್ಯಾತ ಕನ್ನಡಿಗ ಬೈಕ್ ರೈಡರ್ ಮುಟೋ ವ್ಲೋಗರ್ ಕಿತ್ತಡಿ ಕಿರಣ್ ಕೂಡ ಇದ್ದಾರೆ.   ಜೊತೆಗೆ ಆರು ಕಾರುಗಳಿದೆ, ಇವರ ಸಾಹಸಯಾತ್ರೆ ಯಶಸ್ವಿಯಾಗಲು ಹಾರೈಸೋಣ ಅವರ ಯೌಟ್ಯೂಬ್ ಲಿಂಕ್ ಕ್ಲಿಕ್ ಮಾಡಿ ಅವರ ಈ ಸಾಹಸ ಯಾತ್ರೆಯ ಅಪ್ಡೇಟ್ ನೋಡಬಹು...

Blog number 2300. ಎಸ್.ಚಂದ್ರಕಾಂತ್ ಶಿವಮೊಗ್ಗ ಜಿಲ್ಲೆಯ ಹಿರಿಯ ಪತ್ರಕರ್ತರು 74ರ ಹುಟ್ಟು ಹಬ್ಬದ ಶುಭಾಶಯಗಳು

#ಶಿವಮೊಗ್ಗದ_ಹಿರಿಯ_ಪತ್ರಕರ್ತ_ಎಸ್_ಚಂದ್ರಕಾಂತ್ #ಶಿವಮೊಗ್ಗ_ಟೈಮ್ಸ್_ಸಂಪಾದಕರು #ರಾಜ್ಯೋತ್ಸವ_ಪ್ರಶಸ್ತಿ_ವಿಜೇತರು_ಮುಂದಿನ_ತಿಂಗಳು #ಅಕ್ಟೋಬರ್_15_ಇವರ_74ನೇ_ಹುಟ್ಟು_ಹಬ್ಬ  #ಶಿವಮೊಗ್ಗದಲ್ಲಿ_1978ರಲ್ಲಿ_ರಾಜ್ಯಮಟ್ಟದ_ಕಾರ್ಯನಿರತ_ಪತ್ರಕರ್ತರ_ಸಮ್ಮೇಳನ_ನಡೆಸಿದ್ದರು. #ಕೇಂದ್ರ_ವಿದೇಶಾಂಗ_ಸಚಿವರಾಗಿದ್ದ_ವಾಜಪೇಯಿ_ಈ_ಸಮ್ಮೇಳನ_ಉದ್ಘಾಟಿಸಿದ್ದರು #shimogatimes #ShivamoggaNews #PressConference #karnataka #pressclubbangalore #PressClub #stateworkingjournalist   ಶಿವಮೊಗ್ಗದ ಹಿರಿಯ ಪತ್ರಕರ್ತರಾದ ಶಿವಮೊಗ್ಗ ಟೈಮ್ಸ್ ಸಂಪಾದಕರಾದ #ಎಸ್_ಚಂದ್ರಕಾಂತ್ 74ರ ಹುಟ್ಟು ಹಬ್ಬದ ಹೊಸ್ತಿನಲ್ಲಿದ್ದಾರೆ ಇವರ ಜನ್ಮ ದಿನಾಂಕ 15 ಅಕ್ಟೋಬರ್ 1951.    ಎಸ್ ಚಂದ್ರಕಾಂತ್ ರಾಜ್ಯ ಪ್ರಶಸ್ತಿ ಪುರಸ್ಕೃತರು ಕೂಡ ಇವರು 1978ರಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು ಆಗ ಶಿವಮೊಗ್ಗ ಜಿಲ್ಲಾ ಕಾರ್ಯ  ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದವರು #ಶರಾವತಿ_ವಾರಪತ್ರಿಕೆ ಸಂಪಾದಕರಾದ ಮಲ್ಲಾರಾಧ್ಯರು.   ಆಗ ಕರ್ನಾಟಕ ರಾಜ್ಯ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದವರು ವಡ್ದರ್ಸೇ ರಘುರಾಮ್ ಶೆಟ್ಟರು ಇವರೆಲ್ಲರೂ ಸೇರಿ 1978 ರಲ್ಲಿ #ಶಿವಮೊಗ್ಗದಲ್ಲಿ_ರಾಜ್ಯಮಟ್ಟದ_ಕಾರ್ಯನಿರತ_ಪತ್ರಕರ್ತರ_ಸಮ್ಮೇಳನ ನಡೆಸಿದ್ದರು. ...

Blog number 2299.ಹಳ್ಳಿಯಲ್ಲಿ ನಮ್ಮ ಲಾಡ್ಜ್ ಉದ್ಯಮ

#ನಮ್ಮ_ಹೊಂಬುಜ_ರೆಸಿಡೆನ್ಸಿ_ಲಾಡ್ಡ್_ಅತಿಥಿಗಳು. #ಒಂದು_ಸಣ್ಣ_ಹಳ್ಳಿಯಲ್ಲಿ_ಇಂತಹ_ಸೆಲೆಬ್ರಿಟಿಗಳು_ತಂಗುತ್ತಾರೆಂದರೆ  #ಆ_ಗುಣಮಟ್ಟದ_ಸೇವೆ_ಸಲ್ಲಿಸಲು_ನಾವು_ತಯಾರಿದ್ದೇವೆ_ಎಂಬ_ಅರ್ಹತೆ_ನಮ್ಮದು. #https://maps.app.goo.gl/wnBdEk8nxhQPPhd57. #Anandapuram #Hombujaresidency #mallikaveg #champakaparadise #krishnasarasaconventionhall #champakasarassu #Sagar #Jogfalls #sigandurutemple    ಖ್ಯಾತ ನಟ ಶಿವರಾಜ್ ಕುಮಾರ್ ದಂಪತಿಗಳಿಗೆ, ಪದ್ಮಶ್ರೀ ಪ್ರಶಸ್ತಿ ವಿಜೇತ ಮಂಜಮ್ಮ ಜೋಗತಿ, ಪವಾಡ ಬಯಲು ಹುಲಿಕಲ್ ನಟರಾಜ್,ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಕಾಲೇಜಿನ ಚೇರ್ಮನ್ ಡಾಕ್ಟರ್ ಅಂಜನಪ್ಪ, ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ, ಖ್ಯಾತ ಚಲನ ಚಿತ್ರನಟ ದೊಡ್ಡಣ್ಣ, ಹಾಯ್ ಬೆಂಗಳೂರ್ ರವಿ ಬೆಳಗೆರೆ, ಬಾಹುಬಲಿ ಸಿನಿಮಾದ ಜನಪ್ರಿಯ ಹಾಡು ಮನೋಹರಿ ಬರೆದ ಚೈತನ್ಯ ಪ್ರಸಾದ್,  ಖ್ಯಾತ ತಮಿಳು- ಹಿಂದಿ- ಕನ್ನಡ ಸಿನಿಮಾ ನಿರ್ಮಾಪಕ ಪಿರಮಿಡ್ ನಟರಾಜ್, ಖ್ಯಾತ ತಮಿಳು ಸಿನಿಮಾ ವಿಲನ್ ನಟ ಶಾಸಕ ರಾದಾರವಿ ಹೀಗೆ ಸಾಲು ಸಾಲು ಸೆಲೆಬ್ರಿಟಿಗಳಿಗೆ ಆತಿಥ್ಯ ನೀಡಿದ ಹಿರಿಮೆ ನಮ್ಮದು.     ಚಲನ ಚಿತ್ರ ನಟರು ಮಾಜಿ ವಿದಾನ ಪರಿಪತ್ ಸದಸ್ಯರು ಈಗ ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಅಧ್ಯಕ್ಷರು ಆಗಿರುವ ಮುಖ್ಯಮಂತ್ರಿ ಚಂದ್ರು ಅವರು ನಮ್ಮ ಹೊಂಬುಜ ರೆಸಿಡೆನ್...

Blog number 2298. ದೇವರಾಜ್ ಜೋಗಿ ಅಖಿಲ ಕರ್ನಾಟಕ ನಾಥ ಪಂಥ ಜೋಗಿ ಸಮಾಜದ ಅಧ್ಯಕ್ಷರು

#ಶ್ರೀಯುತ_ದೇವರಾಜ್_ಜೋಗಿ_ನಿವೃತ್ತ_ಡಿಎಫ್ಓ #90ರ_ದಶಕದಲ್ಲಿ_ನಮ್ಮ_ಭಾಗದಲ್ಲಿ_ದೊಡ್ಡ_ಹೆಸರು #ಚೋರಡಿ_ರೇಂಜ್_ಫಾರೆಸ್ಟ್_ಆಫೀಸರ್_ಆಗಿ_ಇದ್ದರು #ಆಗ_ಗಂದ_ಕಳ್ಳ_ಸಾಗಣಿಕೆದಾರರಿಗೆ_ಸಿಂಹಸ್ವಪ್ನ_ಆಗಿದ್ದರು. #ದಕ್ಷ_ಅಧಿಕಾರಿ_ಮಾನವೀಯ_ಗುಣಗಳ_ಅಧಿಕಾರಿ_ಎಂಬ_ಹೆಸರಿತ್ತು #ಇವರು_ಉತ್ತರ_ಭಾರತದ_ಗೋರಕಪುರದ_ಸಂತರಾದ #ಮುಖ್ಯಮಂತ್ರಿ_ಆದಿತ್ಯನಾಥರ_ನಾಥಪಂತದ_ನಮ್ಮ_ರಾಜ್ಯದ #ಅಖಿಲ_ಕರ್ನಾಟಕ_ನಾಥ_ಪಂತ_ಜೋಗಿ_ಸಮಾಜದ_ರಾಜ್ಯಾದ್ಯಕ್ಷರು #YogiAdityanathji #devarajjogi #nathapantha #kadrimangalore #jogisamaj    ಶ್ರೀಯುತ ದೇವರಾಜ್ ಜೋಗಿ ನಿವೃತ್ತ ಡಿ ಎಫ್ ಓ ನಿನ್ನೆ ನನ್ನ ಅತಿಥಿಗಳಾಗಿದ್ದರು ಅವರು ಶಿವಮೊಗ್ಗದಿಂದ ಕುಂದಾಪುರದ ಅವರ ಊರಿಗೆ ವಾಪಸ್ ಆಗುವಾಗ ಬಂದಿದ್ದರು.   ದಕ್ಷ ಅಧಿಕಾರಿಗಳಾಗಿದ್ದ ಅವರು ಕಾನೂನು ಪಾಲನೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಸ್ಟ್ರಿಕ್ಟ್ ಆಫೀಸರ್ ಆಗಿದ್ರು ಅವರ ಜೊತೆ ನಮ್ಮ ಭಾಗದ ಫಾರೆಸ್ಟರ್ ಪುರುಷೋತ್ತಮ್ ಇದ್ದರು ಇವರೆಲ್ಲರೂ ಸೇರಿ ಆ ಕಾಲದ ಶ್ರೀಗಂದ ಕಳ್ಳ ಸಾಗಾಣಿಕೆದಾರರಿಗೆ ಸಿಂಹ ಸ್ವಪ್ನವಾಗಿದ್ದರು.    ಅತ್ಯಂತ ಮಾನವೀಯ ಗುಣಗಳುಳ್ಳ ಜನಸಾಮಾನ್ಯರ ಜೊತೆಗೆ ಬೆರೆಯುತ್ತಿದ್ದ ದೇವರಾಜ್ ಒಳ್ಳೆಯ ಅಧಿಕಾರಿಯಂಬ ಹೆಸರು ಪಡೆದಿದ್ದರು.   ನಿವೃತ್ತರಾದ ಮೇಲೂ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ ಇವರ ಸಹೋದರ ಕೂಡ ಡಿಎಫ್ ಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ...

Blog number 2297. ಸಾಗರದಲ್ಲಿನ ಮಲೆನಾಡು ಗಿಡ್ಡ ರೈತ ಉತ್ಪಾದಕರ ಕಂಪನಿ

#ಮಲೆನಾಡು_ಗಿಡ್ಡ_ದನದ_ತುಪ್ಪ_ಸಾಗರದಲ್ಲಿ #ಬ್ರಾಸಂ_ಸಮೀಪದ_ಡಾ_ಮಂಜಪ್ಪ_ಬಿಲ್ಡಿಂಗ್ #ಈಗ_ಮಲೆನಾಡು_ಗಿಡ್ಡ_ರೈತ_ಉತ್ಪಾದಕರ_ಕಂಪನಿ #ನಾಗೇಂದ್ರಸಾಗರ್_ಮತ್ತು_ರಾಧಾಕೃಷ್ಣಬಂದಗದ್ದೆ_ಮುಖ್ಯಪ್ರವರ್ತಕರು #ಪ್ರಾಯೋಜಕರು_ಪಶುಪಾಲನ_ಮತ್ತು_ಪಶುವೈದ್ಯ_ಸೇವಾ_ಇಲಾಖೆ_ಶಿವಮೊಗ್ಗ. #pureghee #malenadugidda #organicfarming #sagara #farmerscompany    ಅವಸಾನದ ಅಂಚು ತಲುಪಿರುವ ಮಲೆನಾಡು ಗಿಡ್ಡ ಗೋವಿನ ತಳಿ ಸಂರಕ್ಷಣೆ ಮಾಡಲು ಮಲೆನಾಡು ಗಿಡ್ಡ ರೈತ ಉತ್ಪಾದಕರ ಕಂಪನಿ ಶಿವಮೊಗ್ಗ ಜಿಲ್ಲೆಯ ಸಾಗರಪೇಟೆಯಲ್ಲಿ ಕಾರ್ಯಾರಂಭ ಮಾಡಿದೆ.   ಇದಕ್ಕಾಗಿ ಪ್ರಗತಿಪರ ಗೆಳೆಯರಾದ ನಾಗೇಂದ್ರ ಸಾಗರ್ ರಾಧಾಕೃಷ್ಣ ಬಂದಗದ್ದೆ ಕಟ್ಟಿಬದ್ಧರಾಗಿದ್ದಾರೆ, ಇವರ ಒಳ್ಳೆಯ ಉದ್ದೇಶಕ್ಕಾಗಿ ಸಾಗರದ ಖ್ಯಾತ ವೈದ್ಯರಾಗಿದ್ದ ಡಾಕ್ಟರ್ ಮಂಜಪ್ಪನವರ ಪುತ್ರ ಸಂಜಯ್ ಪಾಲಿಟೆಕ್ನಿಕ್ ಅಧ್ಯಾಪಕರಾದ ರವಿಪ್ರಕಾಶ್ ಜೋಸೆಫ್ ನಗರದ ಚರ್ಚ ರಸ್ತೆಯ ತಮ್ಮ ಹಳೆ ಮನೆಯನ್ನು ನೀಡಿದ್ದಾರೆ ಇದರ ಲ್ಯಾಂಡ್ ಮಾರ್ಕ್ ಬ್ರಾಸಂ ಹತ್ತಿರ.    ಇಲ್ಲಿ ಶುದ್ಧ ಮಲೆನಾಡು ಗಿಡ್ಡದ ತುಪ್ಪದ ಜೊತೆ ಗಾಣದಿಂದ ತಯಾರಿಸಿದ ಖಾದ್ಯ ತೈಲಗಳು, ಉಪ್ಪಿನಕಾಯಿ, ಹಪ್ಪಳ, ಅರಿಶಿಣ ಪುಡಿ, ಸೀಗೆಪುಡಿ, ಗೋದಿ ಹಿಟ್ಟು,  ಜೋಳದ ಹಿಟ್ಟು, ಅಕ್ಕಿ ಹಿಟ್ಟು, ರಾಗಿ ಹಿಟ್ಟು,ದೇಸಿ ತಳಿಯ ಕೆಂಪಕ್ಕಿ, ಸೆಮಿ ಪಾಲೀಶ್ ಅಕ್ಕಿ ಇತ್ಯಾದಿ ದೊರೆಯುತ್ತದೆ.     ...

Blog number 2296 ಕೊರಗಜ್ಜ ತನಿಯರ ಮೂಲ ದೈವದ 7 ಆದಿ ಸ್ಥಳಗಳ

#ಕೊರಗಜ್ಜರ_ಮಹಿಮೆ #ಕೊರಗ_ತನಿಯ_ದೈವದ_7_ಆದಿ_ಸ್ಥಳಗಳು #ಮಂಗಳೂರಿನ_ಉಳ್ಳಾಲ_ತಾಲ್ಲೂಕಿನ_ತೊಕೊಟ್ಟು_ಸುತ್ತಮುತ್ತ #ಪುರೋಹಿತರು_ಇಲ್ಲ_ಮಧ್ಯವರ್ತಿಗಳು_ಇಲ್ಲ #ಗುಡಿ_ಗೋಪುರ_ದೀಪ_ದೂಪ_ಕಾಣಿಕೆ_ಇಲ್ಲಿಲ್ಲ #ಚಕ್ಕುಲಿ_ಬೀಡಾ_ಸರಾಯಿ_ಸಮರ್ಪಿಸಿ_ಪ್ರಾರ್ಥನೆ #koragajja #koragataniya #mangalore #ULLALA #tokkattu #kuttaru #adisthala      ನಾನು ಕಳೆದ ಶುಕ್ರವಾರ ದಿನಾಂಕ 20 ಸೆಪ್ಟೆಂಬರ್ 2024ರಂದು ಮಂಗಳೂರಿಗೆ ಹೋದಾಗ ಅಲ್ಲಿ ಕೊರಗ ತನಿಯ ದೈವದ ಮೂಲ ಆದಿ ಸ್ಥಳ ದೆಕ್ಕಾಡು ಕುತ್ತಾರು ಆದಿ ಸ್ಥಳಕ್ಕೆ ಹೋಗಿದ್ದೆ.   ಮಂಗಳೂರಿನ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಈ ಪ್ರದೇಶದ ಎರಡುವರೆ ಕಿಲೋಮೀಟರ್ ಸುತ್ತಳತೆಯಲ್ಲಿ ಕೊರಗತನಿಯರ ಏಳು ಆದಿ ಸ್ಥಳಗಳಿವೆ.    ಅಲ್ಲಿ ನಡೆಯುವ ಪೂಜಾ ವಿಧಾನ ವಿಶೇಷ,ಕೊರಗತನಿಯನಿಗೆ ಎರಡೆರಡು ವೀಳ್ಯದೆಲೆ - ಅಡಿಕೆ- ತಂಬಾಕು -ಸುಣ್ಣ- ಚಕ್ಕುಲಿಗಳನ್ನ ಮೂರು ಎಡೆ ಇಟ್ಟು ಪ್ರಾರ್ಥನೆ ಮಾಡಿ ದೈವಸ್ಥಾನಕ್ಕೆ ಮೂರು ಸಾರಿ ಸುತ್ತು ಬಂದು ನಮಸ್ಕರಿಸಿ ಅವರು ನೀಡುವ ಪ್ರಸಾದವಾದ ಎಲೆ ಅಡಿಕೆ ಚಕ್ಕುಲಿ ಸ್ವೀಕರಿಸಿ ಬರುವುದೇ ಅಲ್ಲಿನ ಪೂಜೆ   ಪ್ರತಿನಿತ್ಯ ಸಂಜೆ 6:30 ರಿಂದ ರಾತ್ರಿ ಎಂಟರವರೆಗೆ ಕೋಲ ನಡೆಯುತ್ತದೆ ಇದು ಇಲ್ಲಿ ಪ್ರಾರ್ಥನೆ ಸಲ್ಲಿಸಿದವರು ತಮ್ಮ ಪ್ರಾರ್ಥನೆ ಈಡೇರಿದ ನಂತರ ನೀಡುವ ಹರಕೆಯ ಕೋಲಾ ಸೇವೆ ಇದಕ್ಕೆ ಮೂರು ಸಾವಿರ ರೂಪಾಯಿ ಪಾವತಿಸಬೇಕ...

Blog number 2295. ನಕಲಿ ತುಪ್ಪದ ಹಾವಳಿ ತಿರುಪತಿ ಲಡ್ಡುವನ್ನೂ ಬಿಡಲಿಲ್ಲ

#ಕೇವಲ_ತಿರುಪತಿ_ತಿರುಮಲ_ಟ್ರಸ್ಟಿನ_ಲಡ್ಡು_ಮಾತ್ರ_ಕಳಪೆ_ತುಪ್ಪದಲ್ಲಿ_ತಯಾರಾಗಿದೆ  #ಅಂತ_ಬಾವಿಸಬೇಡಿ_ನಮ್ಮ_ನಿಮ್ಮ_ಪರಿಸರದಲ್ಲಿ_ತಯಾರಾಗುವ_ಸಿಹಿ_ತಿಂಡಿಗಳಲ್ಲಿ  #ಬಳಸುವ_ತುಪ್ಪಗಳು_ಕೂಡ_ಇದೆ_ಕಲಬೆರಕೆ_ತುಪ್ಪದ್ದೇ_ಆಗಿದೆ. #tirupathi #laddu #pureghee #NandiniGhee     ಪ್ರಾಣಿ ಜನ್ಯ ಕೊಬ್ಬು ಎಂದರೆ ದೊಡ್ಡ ದೊಡ್ಡ ಮಾಂಸದ ಕಸಾಯಿಖಾನೆಯಲ್ಲಿ ಹರಿದು ಬರುವ ರಕ್ತದಲ್ಲಿರುವ ಕೊಬ್ಬು... ಇದನ್ನು ತುಪ್ಪದಲ್ಲಿ ಕಲಬೆರಕೆ ಮಾಡುವುದು ಅದನ್ನ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದದ ಲಡ್ಡು ತಯಾರಲ್ಲಿ ಬಳಸುವುದು ಅಕ್ಷಮ್ಯ ಅಪರಾದವೇ ಆಗಿದೆ....  ಪುಸ್ತಕದಲ್ಲಿರುವ ಕಲಬೆರಕೆ ಕಾಯಿದೆ ಮಾತ್ರ ಇನ್ನೂ ಜಾರಿಯಾಗುವುದು ಯಾವಾಗ...    ಆಹಾರ ಕಲಬೆರಕೆ ತಡೆಯಲು ಭಾರತೀಯ ಕಾನೂನು ತೀಕ್ಷ್ಣವಾಗಿ ಇದೆ ಆದರೆ ಕಾನೂನು ಮಾತ್ರ ಎಲ್ಲೂ ಜಾರಿಯಲ್ಲಿ ಇಲ್ಲ.    ಈಗ ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಜನ್ಯ ಕೊಬ್ಬು ಇದೆ ಎಂಬ ಲ್ಯಾಬ್ ರಿಪೋರ್ಟ್ ಹೆಚ್ಚು ಸುದ್ದಿ ಮಾಡುತ್ತಿದೆ.    ಶುದ್ಧ ನಂದಿನಿ ತುಪ್ಪ ಕರ್ನಾಟಕದಿಂದ ತಿರುಪತಿ ತಿರುಮಲ ದೇವಾಲಯಕ್ಕೆ ಸರಬರಾಜು ಆಗುತ್ತಿತ್ತು ಆದರೆ ಅತಿ ಕಡಿಮೆ ಬೆಲೆಯ ತುಪ್ಪದ ಬಿಡ್ ಬೇರೆ ಸಂಸ್ಥೆ ಮಾಡಿದ್ದರಿಂದ ನಂದಿನಿ ತುಪ್ಪ ಸರಭರಾಜು ನಿಂತಿತು.     ಹೊಸ ಟೆಂಡರ್ ಪಡೆದವರ ಬೆಲೆಯಲ್ಲಿ ಅಸಲಿ ತುಪ್ಪ...

Blog number 2294.ಲೋಕೇಶ್ ಈಸೂರು ಕರ್ನಾಟಕದ ಗದ್ದರ್

#ಲೋಕೇಶ್_ಈಸೂರು_ಹೆಸರು_ಕೇಳದವರು_ಇಲ್ಲ  #ಅವರ_ಹೋರಾಟಗಳು_ಜನಮಾನಸದಲ್ಲಿದೆ  #ಅವರು_ಕರ್ನಾಟಕದ_ಗದ್ದರ್. #ದಲಿತ_ಸಂಘರ್ಷ_ಸಮಿತಿ_ಸಂಸ್ಥಾಪಕರಾದ_ಬಿ_ಕೃಷ್ಣಪ್ಪರು_ಪರಿಚಯಿಸಿದ #ಈಸೂರು_ಲೋಕೇಶ್_ನಮ್ಮ_ಇಡೀ_ಪರಿವಾರಕ್ಕೆ_ಆಪ್ತರಾಗಿದ್ದರು #esoorulokesh #dss #bkrishnappa #shivamogga #advocates #gaddar   ಲೋಕೇಶ್ ಈಸೂರು ಹೆಸರು ಕೇಳದವರು ಇಲ್ಲ ಅವರ ಹೋರಾಟಗಳು ಜನಮಾನಸದಲ್ಲಿದೆ ಅವರು ಕರ್ನಾಟಕದ ಗದ್ದರ್.     ಅವರನ್ನ ಪ್ರಥಮ ಬಾರಿಗೆ ನಾನು ನೋಡಿದ್ದು1984 ರಲ್ಲಿ ಶಿವಮೊಗ್ಗದಲ್ಲಿ ಅವತ್ತು ದಲಿತ ಸಂಘರ್ಷ ಸಮಿತಿಯನ್ನು ಸಂಸ್ಥಾಪನೆ ಮಾಡಿದ ಬಿ. ಕೃಷ್ಣಪ್ಪನವರು ಆನಂದಪುರಂದ ರೈತ ಬಂಧು ಗ್ರಾಮೋದ್ಯೋಗದ ಕಾರ್ಮಿಕರ ಬೃಹತ್ ಸೈಕಲ್ ರ್ಯಾಲಿ ಶಿವಮೊಗ್ಗ ಸರ್ಕ್ಯೂಟ್ ಹೌಸ್ ಹತ್ತಿರ ಸ್ವಾಗತಿಸಿ ನಂತರ ಡಿಸಿ ಕಚೇರಿಯಲ್ಲಿ ದರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ನಂತರ ಸೈಕಲ್ ರ್ಯಾಲಿಯ ಎಲ್ಲಾ ಗೆಳೆಯರನ್ನು ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿಲಯಕ್ಕೆ ಕರೆದೊಯ್ದು ಅಲ್ಲಿ ವಿದ್ಯಾರ್ಥಿ ನಾಯಕ ಪೈಲ್ವಾನ್ ಲೋಕೇಶ್ ಈಸೂರಿಗೆ ನಮ್ಮನ್ನೆಲ್ಲ ಪರಿಚಯಿಸಿ ಎಲ್ಲರೂ ಊಟ ಮಾಡಿ ಹೋಗುವಂತೆ ತಿಳಿಸಿದ್ದರು. ವಿದ್ಯಾರ್ಥಿ ನಿಲಯದ ಮುಖಂಡ ಲೋಕೇಶ್ ಈಸೂರು ನಮ್ಮೆಲ್ಲರನ್ನು ಆತ್ಮೀಯವಾಗಿ ಕರೆದು ಹೊಟ್ಟೆ ತುಂಬ ಊಟ ಬಡಿಸಿ ವಿದಾಯ ಹೇಳಿದ್ದರು.    ಈ ರೀತಿ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ...

Blog number 2293. ಅವಸಾನದ ಅಂಚಿನಲ್ಲಿರುವ ಮಲೆನಾಡಿನ ಗೋವಿನ ತಳಿ

#ಮಲೆನಾಡು_ಗಿಡ್ಡ_ತಳಿ_ಉಳಿದೀತೆ? #ಮಲೆನಾಡು_ಗಿಡ್ಡ_ತಳಿ_ಅವಸಾನದ_ಅಂಚಿನಲ್ಲಿದೆ. #ಪಶ್ಚಿಮ_ಘಟ್ಟದ_ಶಿವಮೊಗ್ಗ_ಜಿಲ್ಲೆ_ಉತ್ತರ_ಕನ್ನಡ_ಜಿಲ್ಲೆ_ಚಿಕ್ಕಮಗಳೂರು_ಜಿಲ್ಲೆಯ #ಈ_ವಿಶೇಷ_ತಳಿಯ_ಜಾನುವಾರಿಗೆ_ಅವುಗಳ_ಸಣ್ಣ_ಗಾತ್ರಕ್ಕಾಗಿ_ಸ್ಥಳಿಯರು_ಮಲೆನಾಡು_ಗಿಡ್ಡ    #ಎಂದೇ_ಕರೆಯುತ್ತಿದ್ದರಿಂದ_ಇದೇ_ಹೆಸರು_ಈ_ತಳಿಗೆ_ಉಳಿಯಿತು #ನ್ಯಾಷನಲ್_ಬ್ಯೂರೋ_ಆಫ್_ಎನಿಮಲ್_ಜೆನಿಟಿಕ್_ರಿಸೋರ್ಸ್ಸ್_ಪಟ್ಟಿಯಲ್ಲಿ_ಕೂಡ  #ಮಲೆನಾಡುಗಿಡ್ಡ_ಎಂದೇ_ನಮೂದಾನಿದೆ #malenadugidda #cowbreed #desicow #dairy     ಪಶ್ಚಿಮಘಟ್ಟದ ಶಿವಮೊಗ್ಗ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಯ ಈ ವಿಶೇಷ ತಳಿಯ ಜಾನುವಾರಿಗೆ ಅವುಗಳ ಸಣ್ಣ ಗಾತ್ರಕ್ಕಾಗಿ ಸ್ಥಳಿಯರು #ಮಲೆನಾಡು_ಗಿಡ್ಡ   ಎಂದೇ ಕರೆಯುತ್ತಿದ್ದರಿಂದ ಇದೇ ಹೆಸರು ಈ ತಳಿಗೆ ಉಳಿಯಿತು ಮತ್ತು ನ್ಯಾಷನಲ್ ಬ್ಯೂರೋ ಆಫ್ ಎನಿಮಲ್ ಜೆನಿಟಿಕ್ ರಿಸೋರ್ಸ್ಸ್ ಪಟ್ಟಿಯಲ್ಲಿ ಕೂಡ ಮಲೆನಾಡು ಗಿಡ್ಡ ತಳಿ ಎಂದೇ ನಮೂದಾಗಿದೆ....   ನಮ್ಮ ಬಾಲ್ಯದಲ್ಲಿ ನಮ್ಮ ಕೊಟ್ಟೆಗೆ ತುಂಬಾ ಮಲೆನಾಡು ಗಿಡ್ದ ಜಾನುವಾರುಗಳೇ ತುಂಬಿತ್ತು ಅದರಲ್ಲಿ ಗಿಡ್ಡಿ ಎಂಬ ದನ ತುಂಬಾ ಸಾದು ಅದರ ಎದುರು ಕುಳಿತರೆ ನಮ್ಮ ತಲೆ ನೆಕ್ಕಲು ಪ್ರಾರಂಬಿಸಿ ಕೆಚ್ಚಲಿನಲ್ಲಿ ಹಾಲು ಸುರಿಸುತ್ತಿತ್ತು ಇದರ ಸ್ವಭಾವಕ್ಕೆ ವಿರುದ್ದವಾದ ಬೋಳಿ ಎಂಬ ತುಡುಗಿನ ದನವೂ ಇತ್ತು,...

Blog number 2292. ಶರಾವತಿ ನದಿ ಮುಳುಗಡೆಯಿಂದ ಕಳೆದು ಕೊಂಡ ಮಲೆನಾಡು ಗಿಡ್ಡ ಗೋವುಗಳು

#ಮಲೆನಾಡು_ಗಿಡ್ಡ_ಗೋವಿನ_ತಳಿ #ಈ_ಬಗ್ಗೆ_ನಾನು_ಬರೆದ_ಲೇಖನಕ್ಕೆ #ಪ್ರತಿಕ್ರಿಯೆ_ಬರೆದಿರುವ_ಕಾರ್ಗಲ್ #ನವೀನ್_ಕುಮಾರ್_ಜೈನ್ #kargal #malenadu #malenadugidda    ಪೇಸ್ ಬುಕ್ ಗೆಳೆಯರಾದ ನವೀನ್ ಕುಮಾರ ಜೈನ್ ಶರಾವತಿ ನದಿ ಮುಳುಗಡೆ ಸಂತ್ರಸ್ಥರು ಅವರ ಕುಟುಂಬದಲ್ಲಿನ ಮಲೆನಾಡು ಗಿಡ್ಡ ಗೋವುಗಳ ನಿಜ ಕಥೆ ಓದಿ ನಾನು ಕಣ್ಣೀರಾದೆ ನೀವೂ ಓದಿ ಅವರ ಬರುವಣಿಗೆ ಶೈಲಿ ಕೂಡ ಇಷ್ಟವಾಯಿತು... .... ತಮ್ಮ ಲೇಖನ ಎಷ್ಟು ಕಟುಸತ್ಯ ಎನ್ನುವುದಕ್ಕೆ ನಮ್ಮ ಹಿರಿಯರು ಹೇಳುತಿದ್ದ ಕಥೆಗಳು ಉತ್ತಮ ಉದಾಹರಣೆ  ಮುಳುಗಡೆಯ ಸಂದರ್ಭದಲ್ಲಿ ತಾವು ನೆಲೆಸಿದ ಮನೆ ಮಠ ಜಮೀನು ಜಾನುವಾರು ಬಿಟ್ಟು ಬರುವಾಗ ಆದ ನೋವುಗಳನ್ನು ನಮ್ಮ ಅಜ್ಜ ಅಜ್ಜಿ ಹೇಳುತ್ತ ಕಣ್ಣಿರು ಹಾಕುತ್ತಿದ ಆ ದಿನಗಳು ಮರೆಯಲು ಸಾಧ್ಯವಿಲ್ಲ.     ನಮ್ಮ ಅಜ್ಜಿ ಹೇಳುವ ಹಾಗೆ ಆಣೇಕಟ್ಟು ಕಟ್ಟಲು ಪ್ರಾರಂಭವಾಗಿ ಮುಗಿಯುವವರೆಗೆ ನಮ್ಮ ಮನೆ ಮುಳುಗುವುದಿಲ್ಲ ನಮ್ಮ ಮನೆ ಮುಳುಗುವುದಿಲ್ಲ ಎಂದು ಕಾಲ ಕಳೆಯುತ್ತಿದ್ದ ನಮ್ಮ ಹಿರಿಯರಿಗೆ ನೀರು ಗದ್ದೆ ತೋಟ ನುಂಗಿ ಮನೆ ಬಾಗಿಲಿಗೆ ನೀರು ಬಂದಾಗಲೇ ಅಪಾಯದ ಅರಿವಾಗಿದ್ದು,     ನೀರು ತುಂಬಿದ ಹಾಗೆ ಅಧಿಕಾರಿಗಳಿಗೂ ಎಚ್ಚರವಾಗಿ ಮನೆಗೂಂದರಂತೆ ಲಾರಿಗಳನ್ನು ಕಳುಹಿಸಿ ಇಗಿಂದಿಗಲೇ ಜಾನುವಾರುಗಳ ಸಮೇತ ಜಾಗ ಖಾಲಿ ಮಾಡಲು ತಾಕಿತು ಮಾಡಿದರಂತೆ.    ಹಾಗೆ ತಾಕಿತು ಮಾಡಿದ ...

Blog number 2291. ನಮ್ಮ ಹೊಂಬುಜ ಲಾಡ್ಜ್

https://youtu.be/J2W8qm6RUaA?si=T4uadl-go2P8iEJo #ಹೊಂಬುಜರೆಸಿಡೆನ್ಸಿ_ಲಾಡ್ಜ್_ಆನಂದಪುರಂ #Hombujaresidency_lodge_Anandapuram #NH_69_Yadehalli_Circle_Anandapuram_577412 #Sagar_Taluk_Shivamogga_District_KARNATAKA. #Contact_Manager_8088857771 #Anandapuram #Sagara #Shivamogga #Jogfalls #Sigandurutemple  #TARIFF 1.AC DELUXE DOUBLE BED  ROOM RS 1800. 2.NON AC DELUXE DOUBLE BED ROOM RS 1200. 3. VICTORIA COTTAGE RS 1000. 4. ORDINARY DOUBLE BED ROOM RS 800. #Nearest_to_Jogfalls_Sigandurutemple_Hombujatemple_Narasipuraayurvediccentre

Blog number 2290. ಜೇನಿ ಮಂಜುನಾಥ ಭಟ್

#ನನ್ನ_ಮತ್ತು_ಜೇನಿ_ಮಂಜುನಾಥಭಟ್ಟರ_ಗೆಳೆತನಕ್ಕೆ_ಎರೆಡು_ದಶಕ #ಜಾತಿ_ಬದಿಗಿಟ್ಟು_ಮನುಷ್ಯತ್ವಕ್ಕೆ_ಬೆಲೆ_ಕೊಡುವ_ಭಟ್ಟರು #ಇವರ_ಕೆಲಸದವರಿಗೆ_ಮನೆ_ಕಟ್ಟಿಸಿ_ಕೊಡುತ್ತಾರೆ #westernghats #jenimanjunathbhat #manjushrinarsery #hosanagara #malenadu    ಜೇನಿ ಮಂಜುನಾಥ ಭಟ್ಟರು ನಾನು ಕಂಡ ಕೆಲವೇ ಕೆಲವು ನುಡಿದಂತೆ ನಡೆಯುವ ವ್ಯಕ್ತಿಗಳಲ್ಲಿ ಒಬ್ಬರು.   ಇವರದ್ದು ಜಾತಿಯಿಂದ ಮಂದಿ ನೋಡುವ ಕಣ್ಣುಗಳಲ್ಲ ಮನುಷ್ಯತ್ವಕ್ಕೆ ಮಾತ್ರ ಬೆಲೆ ಕೊಡುವ ದೃಷ್ಟಿ.    ಇವರು ಇವರ ಬಡ ಕೂಲಿ ಕಾರ್ಮಿಕರ ಮಕ್ಕಳನ್ನ ವಿದ್ಯಾವಂತರನ್ನಾಗಿ ಮಾಡಿದ್ದಾರೆ.     ಕೆಲಸಗಾರರಿಗೆ ಮನೆ ಕಟ್ಟಿಸಿ ಕೊಡುವ ಹೃದಯವಂತರು ಇವರು.    ತೋಟಗಾರಿಕೆ ಸಸ್ಯ ಬಿಡಿ ಇಡೀ ಪಶ್ಚಿಮ ಘಟ್ಟದ ಕಾಡಿನ ಸಸ್ಯಗಳ ಪರಿಚಯ ಇವರಿಗಿದೆ ಮತ್ತು ಅವುಗಳ ಬೀಜ ಪ್ರಸಾರದ ಜ್ಞಾನ ಗೊತ್ತಿರುವ ಕೆಲವೇ ಜನರಲ್ಲಿ ಇವರೊಬ್ಬರು.   ಆದ್ದರಿಂದಲೇ ಇವರನ್ನ ಹುಡುಕಿ ಹೋಗಿ ಗೌರವಿಸಿ ಬಂದೆ ಅವರು ನೀಡಿದ 35 ವರ್ಷ ಪ್ರಾಯದ ಬೊನ್ಸಾಯ್ ನನ್ನ ಆಫೀಸಿನ ಟೇಬಲ್ ಅಲಂಕರಿಸಿದೆ ನನ್ನ ಅವರ ಎರಡು ದಶಕದ ಗೆಳೆತನ ನೆನಪಿಸುತ್ತಿದೆ.    ಅವತ್ತು ಇವರ ಜೊತೆ ಇವರ ಪುತ್ರ ಶ್ರೀಧರ ಮತ್ತು ಇವರ ಆಪ್ತ ಸಿಬ್ಬಂದಿ ಲೋಕೇಶ್ ಇದ್ದರು ಈ ಫೋಟೋದಲ್ಲಿ ಅವರಿದ್ದಾರೆ.   ಲೋಕೇಶ್ ಕಾಗೋಡು ಹೋರಾಟದ ನೇತಾರ...

Blog number 2289. ಕಾಗೋಡು ಭೂ ಹೋರಾಟದ ನೇತಾರ ಹೆಚ್.ಗಣಪತಿಯಪ್ಪರ ಪುಣ್ಯ ತಿಥಿ

#ಕಾಗೋಡು_ಹೋರಾಟದ_ರೂವಾರಿ_ಗಣಪತಿಯಪ್ಪರ_ಪುಣ್ಯತಿಥಿ. #ಕಾಗೋಡು_ಹೋರಾಟದ_ರೂವಾರಿ #ಹೆಚ್_ಗಣಪತಿಯಪ್ಪರ_ನೆನಪು #kagodu #hganapathiyappa #kagoduraithahorata #sagara #vadnala  (ಜನನ 3- ಆಗಸ್ಟ್-1924:ಮರಣ 30 - ಸೆಪ್ಟೆಂಬರ್ -2014 )    ಅವರ ಹೋರಾಟವನ್ನೆ ಜನ ಮರೆತು ಬಿಟ್ಟ ಕಾಲದಲ್ಲಿ ಅವರ ಆತ್ಮಚರಿತ್ರೆ ಸಾಹಿತಿ ಕೋಣಂದೂರು ವೆಂಕಟಪ್ಪ ಗೌಡರಿಂದ ಬರಿಸಿದ್ದು.    ಅದಕ್ಕೆ ದಾಖಲೆ ಹುಡುಕಾಟ, ಪುಸ್ತಕ ಮುದ್ರಣಕ್ಕೆ ಹಣಕ್ಕಾಗಿ ಪ್ರಯತ್ನ.    ಪುಸ್ತಕ ಮುದ್ರಿಸದಂತೆ ಬಾಹ್ಯ ಒತ್ತಡ, ಬಿಡುಗಡೆ ಮಾಡದಂತೆ ಕಾಯ೯ಕ್ರಮ ಹಾಳು ಮಾಡುವ ಪ್ರಯತ್ನ.     ಕೆಟ್ಟ ವಿಮಶೆ೯ ಬರೆದ ವಿಮರ್ಶಕರು.    ಕಾಗೋಡಿನಲ್ಲಿ ಲೋಹಿಯಾ ಆ ಕಾಲದಲ್ಲಿ ಕಾಗೋಡಿನ ವೀರ ಹೋರಾಟಗಾರರನ್ನ ಉದ್ದೇಶಿಸಿ ಬಾಷಣ ಮಾಡಿದ ಅರಳಿಕಟ್ಟೆಯಿಂದ  ತೀರ್ಥಹಳ್ಳಿ ತಾಲೂಕಿನ ಕಡಿದಾಳಿನ ಕಡಿದಾಳು ಮಂಜಪ್ಪರ ಸಮಾದಿವರೆಗೆ ಒಯ್ದ #ಕಾಗೋಡು_ಸುವಣ೯_ಜ್ಯೋತಿ.   ಹೀಗೆ ಮರೆತು ಹೋದ ಅನೇಕ ನೆನಪುಗಳು ನೆನಪಾಯಿತು.

Blog number 2288. ನನ್ನ ಅತಿಥಿಗಳು

#ಇವತ್ತಿನ_ನನ್ನ_ಅತಿಥಿಗಳು #ಶಿವಮೊಗ್ಗದ_ಸಹ್ಯಾದ್ರಿ_ಕಲಾ_ಕಾಲೇಜು_ಇಂಗ್ಲಿಷ್_ಪ್ರಾಧ್ಯಾಪಕರಾದ_ಡಾ_ಸಿರಾಜುದ್ದೀನ್_ಅಹಮದ್_ದಂಪತಿಗಳು #ತರೀಕೆರೆ_ಪ್ರಥಮ_ದರ್ಜೆ_ಕಾಲೇಜು_ಪ್ರಾಂಶುಪಾಲರಾದ_ಡಾ_ಸಬೀತಾ_ಬನ್ನಾಡಿ #ಶಿವಮೊಗ್ಗ_ರಂಗಾಯಣದ_ನಿರ್ದೇಶಕರಾದ_ಪ್ರಸನ್ನ_ಸಾಗರ. #shivamogga #rangayana #prasannasagar #sabeethabannadi #sirajahamed #karnatakasahityaacademi #abhivyakthibalagatumari #hamabhatta     ಸಾಗರ ತಾಲೂಕಿನ ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯುತ್ತಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ತುಮರಿ ಅಭಿವ್ಯಕ್ತಿ ಬಳಗದ ಕಾರ್ಯಕ್ರಮವಾದ ಹ ಮ ಭಟ್ಟ  ನೆನಪಿನ ಹಬ್ಬದಲ್ಲಿ ಭಾಗವಹಿಸಿ ಶಿವಮೊಗ್ಗಕ್ಕೆ ವಾಪಾಸಾಗುತ್ತಿದ್ದ ಮಾಗ೯ದಲ್ಲಿ ಇವತ್ತಿನ ನನ್ನ ಅತಿಥಿಗಳಾದ ಡಾ.ಸಿರಾಜ್ ಅಹಮದ್ ದಂಪತಿಗಳು, ಡಾ.ಸಬೀತಾ ಬನ್ನಾಡಿ ಮತ್ತು ಪ್ರಸನ್ನ ಸಾಗರ ನನ್ನ ಆಫೀಸಿಗೆ ಬಂದಿದ್ದರು.    ಡಾಕ್ಟರ್ ಸಿರಾಜ್ ಅಹಮದ್ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದಾರೆ ಇದು ನನ್ನ ಅವರ ಮೂರನೆ ಬೇಟಿ.   ಡಾಕ್ಟರ್ ಸಬೀತಾ ಬನ್ನಾಡಿ ತರೀಕೆರೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾಗಿದ್ದಾರೆ, ಇವರು ಖ್ಯಾತ ಅಂಕಣಕಾರರು -ಕವಿತೆ -ವಿಮರ್ಶೆಯಲ್ಲಿ ದೊಡ್ಡ ಹೆಸರು, ಇವರ ಅನೇಕ ಬರಹಗಳು ಪಠ್ಯವಾಗಿದೆ,ಕನ್ನಡ ಎಂ ಎ ಯಲ್ಲಿ ಮಂಗಳೂರು ವಿಶ್ವವಿದ...

Blog number 2287. ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ

#ಆನಂದಪುರಂ_ಹೋಬಳಿ_ಬ್ರಹ್ಮಶ್ರೀ_ನಾರಾಯಣಗುರು_ಈಡಿಗ_ಸಂಘ #ಪ್ರಜ್ಞಾವಂತ_ಯುವಕರ_ಸಂಘಟನೆ #ಹೊಸ_ಅನುಭವ_ಹೊಸ_ತಲೆಮಾರಿನ_ವಿದ್ಯಾವಂತ_ಯುವಕರಿಂದ... #narayanguru #anandapuram #sagara #idigasanga #janardhanpujari #kagoduthimmappa     ಈ ವಿಚಾರ ಯಾಕೆಂದರೆ ಸಾಮಾನ್ಯವಾಗಿ ನಾನು ನನ್ನ ತಂದೆ ತಾಯಿ ಹೆಸರಲ್ಲಿ ಕಟ್ಟಿಸಿದ ಕಲ್ಯಾಣ ಮಂಟಪ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಅನೇಕ ಜನಪರ ಕಾಳಜಿಯ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುತ್ತೇನೆ   ಇದೇ ರೀತಿ ಸ್ಥಳೀಯರಿಗೆ ಆರ್ಥಿಕ ಸಹಾಯವಾಗಲಿ ಎಂಬ ದೃಷ್ಟಿಯಿಂದ ಅವರ ವಿವಾಹ ಇತ್ಯಾದಿ ಕಾರ್ಯಕ್ರಮಗಳಿಗೆ ಕೂಡ ವಿನಾಯಿತಿ ದರದಲ್ಲಿ ಕೆಲವೊಮ್ಮೆ ಸಂಪೂರ್ಣ ಉಚಿತವಾಗಿ ನೀಡುತ್ತೇನೆ  ಆದರೆ ಕಾರ್ಯಕ್ರಮದ ನಂತರ ಅವರ್ಯಾರು ಕೃತಜ್ಞತೆ ಬಂದು ಹೇಳುವ ವ್ಯವಧಾನದಲ್ಲಿ ಇರುವುದಿಲ್ಲ, ಸ್ವಲ್ಪ ದಿನದಲ್ಲಿ ಮರೆತುಬಿಡುತ್ತಾರೆ ಇನ್ನು ಕೆಲವರು ಉಚಿತ ರಿಯಾಯಿತಿ ಪಡೆದು ಅಲ್ಲಿ ಬಹಳ ದುಡ್ಡು ಕೇಳುತ್ತಾರೆ ಅಂತ  ಅಪವಾದ ಕೂಡ ಮಾಡುತ್ತಾರೆ ಮತ್ತೆ ಕೆಲವರು ಹಣ ಬಾಕಿ ಕೊಡದೆಯೂ ಹೆಚ್ಚು ಹಣ ಪಾವತಿ ಮಾಡಿದ್ದೆವೆಂದು ಅಪಪ್ರಚಾರ ಮಾಡುತ್ತಾರೆ ಇಂತದ್ದೆಲ್ಲ ಬೇಸರ ಮೂಡಿಸದೇ ಇರುವುದಿಲ್ಲ.   ಇಡೀ ಜಿಲ್ಲೆಯಲ್ಲೇ ನನ್ನಷ್ಟು ಕಡಿಮೆ ಹಣ ಪಡೆಯುವ ಕಲ್ಯಾಣ ಮಂಟಪ ಬೇರಾವುದೂ ಇಲ್ಲ ಅನ್ನುವವರೂ ಇದ್ದಾರೆ.   ಕಳೆದ ಬುಧವಾರ ದಿನಾಂಕ 25 ಸೆಪ್ಟೆಂಬರ್ 2024 ನ...

Blog number 2286. ಹಾಯ್ ಬೆಂಗಳೂರ್ ಆಫೀಸ್ ನಲ್ಲಿ ರವಿ ಬೆಳಗೆರೆ ಅವರಿಗೆ ಸನ್ಮಾನಿಸಿದ್ದು

#ಸವಿ_ಸವಿ_ನೆನಪು #ಬೆಂಗಳೂರಿನ_ಹಾಯ್_ಬೆಂಗಳೂರು_ಆಫೀಸಿನಲ್ಲಿ #ರವಿಬೆಳೆಗೆರೆಗೆ_ನಮ್ಮೂರ_ಕನ್ನಡಸಂಘದಿಂದ_ಮತ್ತು #ನನ್ನ_ಸಾಗರ_ತಾಲ್ಲೂಕು_ಅಭಿವೃದ್ದಿ_ಹೋರಾಟ_ಸಮಿತಿಯಿಂದ_ಸನ್ಮಾನಿಸಿದಾಗ #ಹಾಯ್_ಬೆಂಗಳೂರು_ಪತ್ರಿಕೆಯ_ವಾರ್ಷಿಕೋತ್ಸವದ_ಸಂದರ್ಭ #Hibangalore #ravibelegere #Anandapuram #hamobhasha #kannadasanga      ರವಿಬೆಳಗೆರೆ - ಹಾಯ್ ಬೆಂಗಳೂರ್ 90 ರ ದಶಕದಲ್ಲಿ ದೊಡ್ಡ ಹೆಸರು ಕರ್ನಾಟಕದ ಹೀರೋ ಅವರ ಪತ್ರಿಕೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರಿಗೆ ನನ್ನ ಸಾಗರ ತಾಲ್ಲೂಕು ಅಭಿವೃದ್ದಿ ಹೋರಾಟ ಸಮಿತಿ ಮತ್ತು ನಮ್ಮ ಆನಂದಪುರಂ ಕನ್ನಡ ಸಂಘದ ವತಿಯಿಂದ ರವಿ ಬೆಳಗೆರೆ ಅವರನ್ನು ಸನ್ಮಾನಿಸಿ ಸಾಗರದ ಖ್ಯಾತ ಶ್ರೀಗಂದದ ಕೆತ್ತನೆಯ ಶಣ್ಮುಖಪ್ಪರಿಂದ ಶ್ರೀಗಂದದ ಅಕ್ಷರಗಳಿಂದ ತಯಾರಿಸಿದ ಸನ್ಮಾನ ಪತ್ರ ಅರ್ಪಿಸಿದ ಈ ಪೋಟೋ.   ಅವತ್ತು ಹಾ.ಮೋ.ಬಾಷಾ ಕನ್ನಡ ಸಂಘದ ಅಧ್ಯಕ್ಷರು ಆಗಿದ್ದರು ಇವತ್ತು ರವಿಬೆಳೆಗೆರೆ ಮತ್ತು ಹಾ.ಮೋ.ಬಾಷಾ ಇಬ್ಬರೂ ಇಲ್ಲ.