Skip to main content

Posts

Showing posts from February, 2021

ಹೊಸನಗರ ತಾಲ್ಲೂಕಿನ ಬಟ್ಟೇಮಲ್ಲಪ್ಪ ಸಮೀಪದ ಪತ್ರಕತ೯ ರಾಜ್ಯದ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಡ್ವೆಟ್ಟೈಸಿಂಗ್‌ ನಿಗಮ ಮಂಡಳಿ ನಿರ್ಧೇಶಕರಾಗಿ ನೇಮಕ.

#ಹೊಸನಗರದ_ಕುಗ್ರಾಮದ_ಯುವಕ_ತೀಥೆ೯ಶ್_ಈಗ_ರಾಜ್ಯದ_ಪ್ರತಿಷ್ಠಿತ_ನಿಗಮದ_ನಿರ್ಧೇಶಕರು.      ಆರ್.ಎಸ್.ಎಸ್. ಕಾಯ೯ಕರ್ತರಾಗಿ ಕಟ್ಟರ್ ಬಿಜೇಪಿಯ ನಿಷ್ಟಾವಂತರಾಗಿ ಅನೇಕ ವರ್ಷದಿಂದ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದ ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ ಸಮೀಪದ ತೀಥೆ೯ಶ್ ವಾರಪತ್ರಿಕೆಯೊಂದನ್ನು ಕೆಲವು ವರ್ಷ ಹೊರ ತರುತ್ತಿದ್ದರು, ನಂತರ ಬಿಜೆಪಿಯ ಮಾಧ್ಯಮ ಮತ್ತು ಪ್ರಚಾರದಲ್ಲಿ ಐಟಿ ಸೆಲ್ ನಲ್ಲಿ ಪ್ರಮುಖರಾಗಿ ಕಾರ್ಯನಿವ೯ಹಿಸುತ್ತಿದ್ದರು.   ಕಡಿಮೆ ಮಾತು, ಹೆಚ್ಚು ಕೆಲಸ ಮಾಡುತ್ತ ಅದರಲ್ಲೇ ಸಂತೃಪ್ತರಾಗಿದ್ದರು, ಇತ್ತೀಚಿಗೆ ರಾಜ್ಯ ಸಕಾ೯ರ ಇವರನ್ನು ಕನಾ೯ಟಕ ರಾಜ್ಯದ ಪ್ರತಿಷ್ಠಿತ ನಿಗಮ ಮಂಡಳಿ ಆಗಿರುವ ಮಾಕೆ೯ಟಿಂಗ್ ಕಮ್ಯುನಿಕೇಷನ್ & ಅಡ್ವಟೈ೯ಸಿಂಗ್ ಲಿಮಿಟೆಡ್ (ಕನಾ೯ಟಕ ಸಕಾ೯ರದ ಒಂದು ಉದ್ದಿಮೆ ) ನ ನಿಧೇ೯ಶಕರನ್ನಾಗಿ ನೇಮಕ ಮಾಡಿದ್ದು ನನಗೆ ತುಂಬಾ ಸಂತಸ ತಂದಿದೆ.   ಈ ಸಂಸ್ಥೆ ಕನಾಟಕ ಪ್ರವಾಸೋದ್ಯಮ, ಮೈಸೂರು ಸ್ಯಾಂಡಲ್, ಕನಾ೯ಟಕ ರೇಷ್ಮೆ ಕೈಗಾರಿಕೆಗಳ ನಿಗಮ, ಪ್ರಿಯದಶಿ೯ನಿ, ಕಾವೇರಿ ಕರಕುಶಲ ವಸ್ತುಗಳ ಬ್ರಾಂಡ್ ನಿಮಾ೯ಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ "ಮುಖ್ಯಮಂತ್ರಿ ರತ್ನ" ಪ್ರಶಸ್ತಿಗೆ ಬಾಜನ ಆಗಿದೆ.   ಸದಾ ಹಸನ್ಮುಖಿಯಾಗಿ ತನ್ನೆಲ್ಲ ಕೌಟುಂಬಿಕ ನೋವು ನುಂಗಿ ಕಷ್ಟದ ಜೀವನದ ...

ಅಯನೂರು ಶಿವಾನಾಯ್ಕರು ಈಗ ದೇವರಾಜ್ ಅರಸು ಅಂತರಾಷ್ಟ್ರೀಯ ಕುಸ್ತಿ ಅಸೋಸಿಯೇಷನ್ ನ ಅಧ್ಯಕ್ಷರು

#ದೇವರಾಜ್_ಅರಸ್_ಅಂತರಾಷ್ಟ್ರೀಯ_ಕುಸ್ತಿ_ಅಸೋಸಿಯೇಷನ್_ಅಧ್ಯಕ್ಷರಾಗಿ #ಅಯನೂರು_ಶಿವಾನಾಯಕ್    ನಶಿಸುತ್ತಿರುವ ನಮ್ಮ ದೇಶಿ ಕ್ರೀಡೆ ಬಯಲು ಕುಸ್ತಿಗೆ ರಾಜ ಮಹಾರಾಜರ ಕಾಲದಲ್ಲಿ ರಾಜಾಶ್ರಯ ಇತ್ತು ಆದರೆ ಈಗ ಇದು ಜನ ಮನದಿಂದಲೇ ದೂರವಾಗುತ್ತಿದೆ.   ಗರಡಿ ಮನೆ ಎಂಬ ಕುಸ್ತಿ ತರಬೇತಿಯ ಕೇಂದ್ರಗಳು ಹೊಸದಾಗಿ ನಿರ್ಮಾಣ ಆಗುತ್ತಿಲ್ಲ, ಇರುವ ಪುರಾತನ ಗರಡಿ ಮನೆಗಳು ಜನರ ಬೆಂಬಲ ಸಹಾಯ ಸಹಕಾರ ಇಲ್ಲದೆ ಸೊರಗಿದೆ.   ಇವತ್ತಿಗೂ ಜಾತ್ರೆ ಮುಂತಾದ ಸಮಾರಂಭದಲ್ಲಿ ಬಯಲು ಕುಸ್ತಿ ನೋಡಲು ಸೇರುವ ಜನಸಂಖ್ಯೆ ನೋಡಿದರೆ ಅಥ೯ವಾದೀತು ಕುಸ್ತಿ ಪಂದ್ಯಾವಳಿಗೆ ಇರುವ ಆಕಷ೯ಣೆ.   ಈಗ ರಾಜ್ಯದಾದ್ಯಂತ ಇರುವ ಗರಡಿ ಮನೆ ಪುನಶ್ವೇತನಕ್ಕಾಗಿ ಮತ್ತು ಬಯಲು ಕುಸ್ತಿ ಪಂದ್ಯಾವಳಿ ಪುನರ್ ಪ್ರವದ೯ಮಾನಕ್ಕಾಗಿ ಕಾಯ೯ನಿವ೯ಹಿಸುತ್ತಿರುವ  ದೇವರಾಜ್ ಅರಸು ಅಂತರಾಷ್ಟಿಯ ಕುಸ್ತಿ ಸಂಘಟನೆಗೆ ಶಿವಮೊಗ್ಗದ ಯುವ ಮುಂದಾಳು, ಜಾತ್ಯಾತೀತ ಜನತಾದಳದ ಮುಖಂಡರಾದ ಅಯನೂರು ಶಿವನಾಯ್ಕರು ಆಯ್ಕೆ ಆಗಿದ್ದಾರೆ.   ಒಂದು ಕಾಲದಲ್ಲಿ ಜಿಲ್ಲೆಯಲ್ಲಿನ ಬಂಜಾರ ಸಮಾಜದ ಸಂಘಟನೆಯಲ್ಲಿ ಪೂರ್ಯಾನಾಯಕರ ಸಂಗಡಿಗರಾಗಿ ಸಂಘಟನೆ ಮಾಡಿ ತಮ್ಮ ಸಮಾಜದವರನ್ನ ವಿದಾನ ಸಭಾ ಸದಸ್ಯರನ್ನಾಗಿ ಮಾಡುವುದರಲ್ಲಿ ಸಫಲರಾದವರು ಈ ಶಿವಾ ನಾಯಕರು.    ರಾಜಕಾರಣದಲ್ಲಿ ಇವರಿಗೆ ಸಿಗಬೇಕ...

25 ವರ್ಷದಲ್ಲಿ ಏನೆಲ್ಲ ಬದಲಾವಣೆ, ಕಾಲದ ಮಗ್ಗಲು ಬದಲಾಯಿಸಿದಂತೆ, ಒಂದು ತಲೆಮಾರು ಬದಲಾದಂತೆ

# ಕಾಲದ ವೇಗದಲ್ಲಿ ಏನೆಲ್ಲ ಪರಿವತ೯ನೆ#  ಮೊದಲ ಚಿತ್ರ ನಾನು 1993 ಅಥವ 1994ರಲ್ಲಿ ನನ್ನ ಕ್ಯಾಮೆರಾದಲ್ಲಿ ತೆಗೆದದ್ದು ನನ್ನ ಮಗಳು, ನನ್ನ ಅಣ್ಣನ ಇಬ್ಬರು ಮಕ್ಕಳು, ಇಬ್ಬರು ಅಕ್ಕ೦ದಿರ ತಲಾ ಇಬ್ಬರು ಮಕ್ಕಳನ್ನ ಹಿಡಿದು ಒಂದು ಕಡೆ ಕೂರಿಸಿ ಈ ಪೋಟೊ ತೆಗೆಯುವ ಕಷ್ಟದ ಕೆಲಸ ಇದಾಗಿತ್ತು , ಈಗ ಅವತ್ತು ತೆಗೆದ ಪೋಟೊ ಅತ್ಯಂತ ಸಂತೋಷದ ಸವಿ ನೆನಪಿನದ್ದಾಗಿದೆ ಯಾಕೆಂದರೆ ಸುಮಾರು 23 ಅಥವ 24 ವಷ೯ದ ನಂತರ ನನ್ನಣ್ಣನ ಮಗಳಾದ ಅನು ಪ್ರಿಯಳ ಮದುವೆಯಲ್ಲಿ ಅವರವರೆ ಸೇರಿ ತೆಗೆಸಿ ಕೊಂಡ ನಮ್ಮ ಮುಂದಿನ ತಲೆಮಾರಿನ ಪ್ಯಾಮಿಲಿ ಪೋಟೋ ಸೇಷನ್, ಇದರಲ್ಲಿನ ಮೊದಲ ಪೋಟೋ ತೆಗೆಯುವಾಗ (1993 ) ನನ್ನ ಮಗ ಇನ್ನು ಹುಟ್ಟಿರಲಿಲ್ಲ, ಎರಡನೆ ಪೋಟೋ 1996ರದ್ದು ಆಗ ನನ್ನ ಮಗನಿಗೆ  ಒ೦ದು ವರ್ಷ.   ಮದುವೆ ಗ್ರೂಪ್ ಪೋಟೋದಲ್ಲಿ ಅವರೆಲ್ಲ ದೊಡ್ಡವರಾಗಿದ್ದಾರೆ ಅವತ್ತು ನನ್ನ ದೊಡ್ಡಮ್ಮನ ಮಗಳು ದಿವ೦ಗತ ಗುಲಾಬಿ ಮಗ ದಿ. ಅಮಿತ್, ನನ್ನ ಅಣ್ಣನ ನಾದಿನಿ ಮಗ ಕೂಡ ಇದ್ದಾರೆ. # Time changes every thing# 1993 old photo taken by my camera with difficult to make all children in one order another one is latest photo of our next generation marriage ceremony family photo session, after 23 years the old memories snap became valuable for them.

ಕೆಳದಿ ರಾಜ ವೆಂಕಟಪ್ಪ ನಾಯಕ, ಗೇರುಸೊಪ್ಪೆ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ಮತ್ತು ಮಂಗಳೂರಿನ ರಾಣಿ ಅಬ್ಬಕ್ಕಳ ಬಗ್ಗೆ ಇಟಲಿ ಪ್ರವಾಸಿ ಡೊಲ್ಲಾ ವಲ್ಲೆ ತನ್ನ ಕೆಲವೇ ದಿನದ ಪ್ರವಾಸದಲ್ಲಿ ಈ ಮೂವರ ಬಗ್ಗೆ ತೆಜೋವದೆ ಮಾಡುವಂತ ಬರಹ ದಾಖಲಿಸಿದ್ದು ಇದು ಸತ್ಯವಲ್ಲ ಅನ್ನುವ ದಾಖಲೆ ಸಹಿತ ವಾದ ಶ್ರೀ ಗಜಾನನ ಶಮಾ೯ರ ಈ ಲೇಖನ ಸಂಶೋದಕರು ಗಮನಿಸಬೇಕು

ದನ್ಯವಾದಗಳು ಗಜಾನನ ಶಮಾ೯ರಿಗೆ, ನಮ್ಮಲ್ಲಿನ ಬಹುತೇಕರು ಸಂಶೋದಕರಾಗಿ ಸಂಶೋಧನೆ ಮಾಡಿದ್ದೇವೆ ಎನ್ನುವುದು ಈ ರೀತಿ ಲಂಡನ್ ಮ್ಯೂಸಿಯಂನಲ್ಲಿ ಸಂರಕ್ಷಿಸಲ್ಪಟ್ಟ ವಿದೇಶಿ ಪ್ರವಾಸಿಗಳ ಪತ್ರಗಳ ಮತ್ತು ಚಿತ್ರಗಳನ್ನು ಆದಾರವಾಗಿಟ್ಟು ಮಾತಾಡುತ್ತಾರೆ ಬರೆಯುತ್ತಾರೆ ಆದರೆ ಕಣ್ಣೆದುರು ಇರುವ, ಕೈಗೆಟುಕುವ ದೂರದಲ್ಲಿರುವ ಸ್ಮಾರಕ ಮತ್ತು ಜನಪದದಲ್ಲಿರುವ ಕಥೆ ಹಾಡುಗಳನ್ನು ಮಾತ್ರ ಒಪ್ಪುವುದೇ ಇಲ್ಲ.   ಇದು ನಮ್ಮ ಊರಿನ ಜನರ ಮಧ್ಯದಲ್ಲಿ ಇರುವ ಸ್ಮಾರಕ, ಪ್ರಚಲಿತ ಕಥೆ, ಲಾವಣಿ ಮತ್ತು ಚಂಪಕಾಳ ವಂಶಸ್ಥರ ಸತ್ಯ ಕಥೆ ಆದರೂ ನನಗೆ ವಿದೇಶಿ ಪ್ರವಾಸಿಗಳು ಬರೆದ ಪತ್ರಗಳನ್ನು ಆದರಿಸಿ ಕುಟುಕುವ ನಮ್ಮ ಸಂಶೋದಕರಿಗೆ ಹೆದರಿ ನನ್ನ ಕಾದಂಬರಿ ಕಾಲ್ಪನಿಕ ಅಂತ ಬರೆದೆ.  ಈಗಲೂ ಸಂಶೋದನೆ ಮಾಡುವವರಿಗೆ ಕುಂಬಳೆ ಕಾಸರಗೋಡಿನ ಅನೇಕ ಮನೆಯಲ್ಲಿರುವ ತಾಮ್ರಪತ್ರಗಳು ಹೊಸ ಇತಿಹಾಸ ಹೇಳುತ್ತದೆ.   ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾದ ಬಗ್ಗೆ ಉಲ್ಲೇಖಿಸಿ ಗಜಾನನ ಶಮಾ೯ರು ಬರೆದ ಪೇಸ್ ಬುಕ್ ಲೇಖನ   ರಾಣಿ ಚೆನ್ನಭೈರಾದೇವಿ, ಹಿರಿಯ ವೆಂಕಟಪ್ಪ ನಾಯಕ ಮತ್ತು ರಾಣಿ ಅಬ್ಬಕ್ಕಳ ಕುರಿತು ಅಸಂಬದ್ಧಗಳನ್ನು ಬರೆದ ಪೀಟ್ರೋ ಡೆಲ್ಲಾವಲ್ಲೆಯೆಂಬ ವಿಕ್ಷಿಪ್ತ ಮನಸ್ಸಿನ ಪ್ರವಾಸಿ...     ನನ್ನ ಸ್ನೇಹಿತರಾದ ಸಾಗರದ ಸಜ್ಜನ, ಗಂಗಾಧರ ನಾಯಕರು  ಸೃಜನಶೀಲ ಲೇಖಕ ಅರುಣ ಪ್ರಸಾದರ "ಬೆಸ್ತರ ರಾಣಿ ಚೆಂಪಕ"  ಕಾದಂಬರಿಯ ಕುರಿತು ಇ...

ಸಾಗರ ತಾಲ್ಲೂಕ್ ಅಭಿವೃದ್ಧಿಗಾಗಿ 2004 ರಲ್ಲಿ ಜನ ಜಾಗೃತಿಗಾಗಿ ನನ್ನ 360 ಕಿ.ಮಿ. ಪಾದಯಾತ್ರೆ ನೆನಪು

ಶಿವಮೊಗ್ಗ ಜಿಲ್ಲಾ ಅಭಿವೃದ್ಧಿ ರಾಜಕಾರಣದಲ್ಲಿ ಆಸಕ್ತಿ ಇರುವವರು ಈ ಲೇಖನ ಓದಿ ಅಭಿಪ್ರಾಯ ದಾಖಲಿಸಿ. # ತುಮರಿ ಸೇತುವೆ, ಶಿವಮೊಗ ತಾಳಗುಪ್ಪ ರೈಲು ಮಾಗ೯ ಬ್ರಾಡ್ ಗೇಜ್ ಗೆ ಹಣ ಬಿಡುಗಡೆ, ಹಂದಿಗೋಡು ಕಾಯಿಲೆ ಪೀಡಿತರಿಗೆ ಪುನರ್ ವಸತಿ ಮತ್ತು ಜೋಗ ಜಲಪಾತ ಪ್ರವಾಸಿ ತಾಣದ ಅಭಿವೃದ್ದಿಗಾಗಿ 2004ರಲ್ಲಿ ನಾನು ನಡೆಸಿದ ಪಾದಯಾತ್ರೆ.#    21- ಜನವರಿ -2004ರಿಂದ 31- ಜನವರಿ -2004 ರ ವರೆಗೆ 11 ದಿನಗಳ ಕಾಲ ಸಾಗರ ತಾಲ್ಲೂಕಿನಾದ್ಯ೦ತ ಮೇಲಿನ ಬೇಡಿಕೆಗಳ ಇಟ್ಟುಕೊಂಡು ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಿದ್ದು ಇವರೆಗೆ ಯಾರು ಮುರಿಯದ ದಾಖಲೆ ಆಗಿ ಉಳಿದಿದೆ.   ಸುಮಾರು 360 ಕಿ.ಮಿ. ಆನಂದಪುರಂನ ಮೂರುಘ ಮಠದಿOದ (ಆಚಾಪುರ ಗ್ರಾಮ ಪಂಚಾಯತನಿಂದ)ಪ್ರಾರ೦ಬಿಸಿ ಯಡೇಹಳ್ಳಿ, ಆನಂದಪುರಂ, ಹೊಸೂರು ಗ್ರಾಮ ಪಂಚಾಯತ ನಿಂದ ಗೌತಮಪುರ ಗ್ರಾಮ ಪಂಚಾಯತ, ಅಲ್ಲಿ೦ದ ಹಿರೇಬಿಲ ಗುಂಜಿ ತ್ಯಾಗತಿ೯, ಪಡಗೋಡು, ಕೆಳದಿ, ಮಾಸೂರು, ಹಿರೇ ನೆಲ್ಲೂರು, ಕಾಗೋಡು, ಸೈ ದೂರು,ಕಾನ್ಲೆ, ಶಿರವಂತೆ, ಯಡ ಜಿಗಳೆಮನೆ, ಖಂಡಿಕ, ತಾಳಗುಪ, ತಲವಾಟ, ಕಾಗ೯ಲ್, ಜೋಗ, ಅರಲ ಗೋಡು, ಕೋಗಾರ್, ಸಂಕಣ್ಣ ಶಾನು ಬೋಗ, ಹೊಸ ಕೊಪ್ಪ, ತುಮರಿ, ಹುಲಿ ದೇವರ ಬನ, ಬೇಸೂರು, ಆವಿನಳ್ಳಿ, ಹಳೆ ಇಕ್ಕೆ ರಿ, ಬೀಮನ ಕೋಣೆ, ಹೆಗ್ಗೋಡು, ಉಳ್ಳುರು ಮಾಗ೯ವಾಗಿ ಸಾಗರ ತಹಸಿಲ್ದಾರ್ ಕಚೇರಿ ತಲುಪಿ ಮನವಿ ನೀಡಿದ ಕಾಯ೯ಕ್ರಮ ಇದಾಗಿತ್ತು.    ಈ ಪಾದ ಯಾತ್ರೆಗೆ ಪ್ರೇರಣೆ...

ಸ್ವಾತಂತ್ರ ನಂತರದ ನವ ಆನಂದಪುರಂ ನಿಮಾ೯ಣದಲ್ಲಿ ಮಂತ್ರಿ ಬದರಿನಾರಾಯಣರ ಜೊತೆ ಸಹಕರಿಸುತ್ತಿದ್ದ ಸಾತ್ವಿಕ ದೈವಭಕ್ತ ರಂಗನಾಥ ಭಟ್ಟರು ಈಗ ನಿವೃತ್ತ ಜೀವನದಲ್ಲಿ

#ಆನಂದಪುರದ_ಜನತೆ_ಮಾರೆಯಲಾರದ_ರಂಗನಾಥ_ಭಟ್ಟರು #ಸ್ವಾತಂತ್ರ_ನಂತರದ_ಮೊದಲ_ವಿಲೇಜ್_ಅಕೌಂಟೆಂಟ್_ಮತ್ತು_ಆನಂದಪುರದ_ವಿಲೇಜ್_ಪಂಚಾಯತ್_ಕಾಯ೯ನಿವ೯ಹಿಸಿದವರು.          ಆನಂದಪುರದ ಅಧಿಕೃತ ಮಾಹಿತಿ ಹೇಳುವವರು ಈ ರಂಗನಾಥ ಭಟ್ಟರು ಮತ್ತು ಬೋಜ್ ರಾಜ್ ಮಾಸ್ತರ್ (ಬೋಜರಾಜ್ ಅಯ್ಯಂಗಾರರು) ಮಾತ್ರ, ಬೋಜ್ ರಾಜ್ ಆಯಂಗಾರರ ಮತ್ತು ರಂಗನಾಥ ಭಟ್ಟರ ಕುಟುಂಬ ಪ್ರಸಿದ್ಧ ಭೂ ಮಾಲಿಕರಾದ ರಾಮಕೃಷ್ಣ ಅಯ್ಯಂಗಾರ್ (ಮಂತ್ರಿ ಬದರಿನಾರಾಯಣ ಅಯ್ಯಂಗಾರ್ ರ ತಂದೆ) ಆನಂದಪುರಕ್ಕೆ ಬರುವ ಮೊದಲೇ ಇವರ ಅಜ್ಜಂದಿರದ್ದು ಮೂರು ತಲೆಮಾರು ಕಳೆದಿತ್ತಂತೆ.      ನನಗೆ ಬಾರೀ ಕಷ್ಟದಿಂದ ಆನಂದಪುರದ ವಿಲೇಜ್ ಪಂಚಾಯಿತಿ ಕಟ್ಟಡದಲ್ಲೇ ಆನಂದಪುರದ ಶ್ರೀಮತಿ ಕೆರಿಯಮ್ಮ ನಡೆಸುತ್ತಿದ್ದ ನಸ೯ರಿ ಶಾಲೆಗೆ ಸೇರಿಸಿದಾಗ (ಒಂದೆರೆಡು ದಿನದಲ್ಲೇ ಬಿಟ್ಟುಬಿಟ್ಟೆ 1968 ರಲ್ಲಿ) ರಂಗನಾಥ ಭಟ್ಟರು ಬಿಳಿ ಶಟ್೯ ಮತ್ತು ಬಿಳಿ ಪಂಚೆಯಲ್ಲಿ ವಿಲೇಜ್ ಪಂಚಾಯಿತಿ ಅಧಿಕಾರಿ ಮತ್ತು ರೆವಿನ್ಯೂ ಇಲಾಖೆ ವಿಲೇಜ್ ಅಕೌಂಟೆಂಟ್ ಆಗಿದ್ದರು, ಆಗ ವಿಲೇಜ್ ಪಂಚಾಯತ್ ಛೇಮ೯ನ್ ಬದರೀನಾರಾಯಣ್ ಆಯ್ಯಂಗಾರರ ಅಣ್ಣ ವೆಂಕಟಚಲ ಅಯ್ಯಂಗಾರರು. (ಆಗ ರೆವಿನ್ಯೂ ಇಲಾಖೆಯ ಅಡಿಯಲ್ಲಿ ವಿಲೇಜ್ ಪಂಚಾಯಿತಿ ಇತ್ತು ಈಗ ಪ್ರತ್ಯೇಕ ಪಂಚಾಯತ್ ಇಲಾಖೆ ಆಗಿದೆ.)    ಪ್ರತಿ ವರ್ಷದಂತೆ ಆನಂದಪುರದ ಇತಿಹಾಸ ಪ್ರಸಿದ್ದಿ ಪಡೆದ ರಂಗನಾಥ ದೇವಾಲಯದ ಜಾತ್ರಾ ಆಹ್ವಾನ...

ಅಯೋಧ್ಯ ರಾಮ ಮಂದಿರ ನಿಮಾ೯ಣಕ್ಕೆ ಕಿರು ಕಾಣಿಕೆ ಮತ್ತು ಗಾಂಧೀಜೀ ಕನಸಿನ ರಾಮರಾಜ್ಯದ ನನಸಾಗಲಿ ಎಂಬ ಹಾರೈಕೆ

#ಅಯೋಧ್ಯ_ರಾಮಮಂದಿರಕ್ಕೆ_ನನ್ನ_ದೇಣಿಗೆ_ಸಂದಾಯ        ಒಂದು ನೆನಪು ಸಾಗರದಿಂದ ಆಯೋಧ್ಯೆಗೆ ಇಟ್ಟಿಗೆಗಳನ್ನು ಕಳಿಸುವಾಗ ಅದರ ಪೂಜೆ ಸಜ್ಜನ ರಾಜಕಾರಣಿ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ ಪೂಜೆ ಮಾಡಿದ್ದರು ( ಆಗ ಅವರು ಮಾಜಿ ಶಾಸಕರಾಗಿರಬೇಕು) ನಮ್ಮ ತಂದೆ ಅವರ ಅನುಯಾಯಿ ಮತ್ತು ಬೆಂಬಲಿಗರು.         ಇವತ್ತು ರಾಮ ಮಂದಿರ ನಿರ್ಮಾಣಕ್ಕಾಗಿ ಇಡೀ ದೇಶದಲ್ಲಿ ದೇಣಿಗೆ ಸಂಗ್ರಹ ನಡೆಯುತ್ತಿದೆ, ಇವತ್ತಿಗೆ ಒ0ದು ಸಾವಿರ ಕೋಟಿ ದೇಣಿಗೆ ಸಂದಾಯ ಆಗಿದೆ ಅಂತ ಸಂಚಾಲಕರಾದ ಉಡುಪಿ ಪೇಜಾವರ ನೂತನ ಸ್ವಾಮಿ ಪತ್ರಿಕಾ ಹೇಳಿಕೆ ಇದೆ.        ನಾನು ಮತ್ತು ಸಹೋದರ ನಮ್ಮ ಸಂಸ್ಥೆಯಿಂದ ನಮಗೆ ಸದ್ಯ ಸಾಧ್ಯವಾದಷ್ಟು 1000, 100 ಮತ್ತು 10 ರೂಪಾಯಿ ಕೂಪನ್ ಗಳನ್ನು ಹಣ ನೀಡಿ ರಶೀದಿ ಆಗಿ ಪಡೆದವು.      ಇದು ನಮ್ಮ ದಾಖಲೆಯಲ್ಲಿ ಸಂರಕ್ಷಿಸಿಟ್ಟು ರಾಮ ಮಂದಿರ ನಿಮಾ೯ಣದ ನಂತರ ದೇವಾಲಯ ದರ್ಶನ ನನ್ನ ಕನಸು ಕೂಡ.       ನಾನು ಆಸ್ತಿಕ ದೇವರ ಮೇಲೆ ಅಪಾರ ನಂಬಿಕೆ ಇಟ್ಟು ಜೀವನ ಮಾಡುವ ಜೊತೆಗೆ ಪರದಮ೯ ವನ್ನೂ ಗೌರವಿಸುವವನು.        ಹಿರಿಯ ಗೆಳೆಯರಾದ ಗನ್ನಿ ಸಾಹೇಬರಿಗೆ ಮೆಕ್ಕಾ ಯಾತ್ರೆ ಕೂಡ ಮಾಡಿಸಿದ್ದು ಸ್ಮರಿಸುತ್ತಾ ದೇವನೊಬ್ಬ ನಾಮ ಹಲವು ಎಂಬ ಸಿದ್ಧಾಂತ ಒಪ್ಪಿದವನು.     ...

ಶಿವಮೊಗ್ಗ ಗ್ರಾಮಾಂತರ ವಿದಾನ ಸಭಾ ಮಾಜಿ ಶಾಸಕಿ, ಗೆಳೆಯ ಮತ್ತು ಜಿಲ್ಲಾ ಪಂಚಾಯತ್ ನಲ್ಲಿ ಸಹ ಸದಸ್ಯರಾಗಿದ್ದ ದಿವಗಂತ ಪೂರ್ಯಾ ನಾಯಕರ ಪತ್ನಿ, ಸಹೋದರಿ ಶ್ರೀ ಮತಿ ಶಾರದಾ ಪೂಯಾ೯ ನಾಯಕರು ನನ್ನ ಮನೆಗೆ ಬಂದಾಗ.

ಬೆಂಕಿ ಚಂಡಿನಂತ ಗೆಳೆಯ ದಿವ೦ಗತ ಪೂರ್ಯನಾಯಕರ ಪತ್ನಿ ಶಿವಮೊಗ್ಗ ಗ್ರಾಮಾಂತರದ ಮಾಜಿ ಶಾಸಕಿ ಸಹೋದರಿ ಶ್ರೀಮತಿ ಶಾರದಾ ಪೂರ್ಯ ನಾಯಕರು ಮಗನ ವಿವಾಹ ಆಹ್ವಾನ ನೀಡಲು ಬಂದಿದ್ದರು.   1995-2000 ದ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ನಾವೆಲ್ಲ ಜಿಲ್ಲಾ ಪಂಚಾಯತ್ ಸದಸ್ಯರು ಕೆಲವೊಂದು ಆಡಳಿತಾತ್ಮಕ ವಿಚಾರಗಳನ್ನು ಚಚಿ೯ಸಲು ಪೂಯಾ೯ ನಾಯಕರ ಮನೆಗೆ ಹೋಗುತ್ತಿದ್ದೆವು ಅಲ್ಲಿ ಶ್ರೀಮತಿ ಶಾರದಮ್ಮ ನಮಗೆಲ್ಲ ಕಾಫಿ ಟೀ ತಯಾರಿಸಿ ತಂದು ಕೊಡುತ್ತಿದ್ದರು.  ದೆಹಲಿಯಲ್ಲಿ ಕಾಯ೯ ನಿಮಿತ್ತ ಹೋಗಿದ್ದ ನಾಯಕರು ಇಹಲೋಕ ತ್ಯಜಿಸಿದ್ದು ದೊಡ್ಡ ದುರಂತ, ಅವರ ಕಳೇಬರ ರಾಜ್ಯ ಸಕಾ೯ರ ದೆಹಲಿಯಿಂದ ತರಿಸಿ ಕೊಡುವ ದೊಡ್ಡ ತನ ತೋರಿದವರು ಆಗಿನ ಮುಖ್ಯಮಂತ್ರಿ ಜೆ.ಹೆಚ್.ಪಾಟೀಲರು.   ಅವತ್ತು ಅಂಜನಾಪುರದಲ್ಲಿ ಪೂಯ೯ ನಾಯಕರ ಅಂತ್ಯ ಸಂಸ್ಕಾರಕ್ಕೆ ಸೇರಿದ್ದ ಜನ ಸ್ತೋಮ 20 ಸಾವಿರಕ್ಕೂ ಹೆಚ್ಚು.    ಸರಣಿ ಶಾಲೆಗಳು, ಪೆಟ್ರೋಲ್ ಪಂಪ್, ಕ್ರಷರ್ ಮುಂತಾದ ಪತಿಯ ಉದ್ಯಮಗಳನ್ನ ಶಾರದಮ್ಮ ಪತಿಯ ಅನುಪ ಸ್ಥಿತಿಯಲ್ಲಿ ಮುಂದುವರಿಸಿ, ರಾಜಕಾರಣದಲ್ಲಿ ಜಾತ್ಯಾತೀತ ಜನತಾದಳದಲ್ಲಿ ಶಾಸಕಿಯಾಗಿ ಸಾದನೆ ಮಾಡಿದವರು.   ಇಬ್ಬರು ಗಂಡು ಮಕ್ಕಳು ಅದರಲ್ಲಿ ದೊಡ್ಡ ಮಗನ ಮದುವೆ ಇದೇ ಪೆಬ್ರುವರಿ ತಿಂಗಳ 15 ಸೋಮವಾರ ಶಿವಮೊಗ್ಗದ ಲಗಾನ್ ಕಲ್ಯಾಣ ಮಂಟಪದಲ್ಲಿ ನೆರವೇರಿಸಲಿದ್ದಾರೆ.   ಮಗನ ವಿವಾಹ ಆ...

ಹುಟ್ಟಿದ್ದು ಮಂಗಳವಾರ (9-2-1965)ನಾಳೆ 56ನೇ ಹುಟ್ಟು ಹಬ್ಬ ಕೂಡ ಮಂಗಳವಾರ (9-2-2021) ಗಳಿಸಿದ್ದೇನು ಉಳಿಸಿದ್ದೇನು?

#ಮ೦ಗಳವಾರ_9ನೇ_ತಾರೀಖು_ಫೆಬ್ರುವರಿ_1965_ಹುಟ್ಟಿದ್ದು #ನಾಳೆ_ಮಂಗಳವಾರ_9_ಪೆಬ್ರುವರಿ_2021     ಅಂದರೆ ನನಗೆ ನನ್ನ ಜೀವಿತದ 56 ವರ್ಷ ಕಳೆದು 57ನೇ ವರ್ಷದ ಕಡೆ ಸಾಗಲು ಪ್ರಾರಂಭ ಆದಂತೆ.    ನಾನು ಹೋದಲ್ಲಿ ಜೀವನ ಬಂತೋ ಅಥವ ಜೀವನ ಕರೆದುಕೊಂಡು ಹೋದ ಮಾಗ೯ದಲ್ಲಿ ನಾನು ಹೋದೆನಾ? ಅಂತ ನೋಡಿದರೆ ನನ್ನ ಪ್ರಯತ್ನಗಳು ವಿಪಲವಾಗಿ,ಅದು ಹೋದಲ್ಲಿ ತಕರಾರು ಇಲ್ಲದೆ ನಾನು ಹೋದದ್ದರಿಂದ ಸಪಲತೆ ದೊರೆಯಿತೆನ್ನಿಸುತ್ತದೆ.    ಯಾವುದೂ ಅಂತ್ಯವೂ ಅಲ್ಲ ಆರಂಭವೂ ಅಲ್ಲ ರೂಪಾಂತರ ಮಾತ್ರ ಎಂಬಂತೆ ಅನೇಕ ಉದರ ನಿಮಿತ ಉದ್ಯೋಗಗಳನ್ನು ಮಾಡಿ ಅಪಾರ ಅನುಭವದ ಕಣಜಗಳನ್ನು ಕಟ್ಟಿದ್ದಾಯಿತು, ಮಿತ್ರ ದ್ರೋಹದ ಫಲ ಕೂಡ ಸ್ವೀಕರಿಸಾಯಿತು ಇದು ಎಲ್ಲರ ಜೀವನದಲ್ಲೂ ನಡೆಯುವಂತದ್ದೇ.    ನಮ್ಮ ಆತ್ಮೀಯ ಖಾಸಾ ವೈದ್ಯರಾದ ಶಿವಮೊಗ್ಗದ ರಾಜ್ ಕುಮಾರ್ ಡಯಾಗ್ನೋಸಿಸ್ ನ #ಡಾಕ್ಟರ್_ಪ್ರೀತಂ ಕೇಳುತ್ತಿದ್ದರು ನೀವು ಏನೇನೆಲ್ಲ ಉದ್ಯೋಗ ಮಾಡಿದ್ದಿರಿ ಅಂತ ಈಗ 56 ವರ್ಷ ಪೂರೈಸಿದಾಗ ಅದೂ ನೆನಪು ಮಾಡಿಕೊಂಡು ಇಲ್ಲಿ ಬರೆದಿದ್ದೇನೆ.   1. ವಜಿ೯ನಿಯಾ ತಂಬಾಕು ಬೆಳೆಯಲು ನಮ್ಮದೇ ನರ್ಸರಿಯಲ್ಲಿ ತಂಬಾಕು ಸಸಿ ನಾನೇ ನಿತ್ಯ ನೀರು ಹಾಕಿ ಬೆಳೆಸಿದ್ದು ನಂತರ ತಂಬಾಕು ಎಲೆ ಬ್ಯಾರನ್ ನಲ್ಲಿ ಹದ ಮಾಡಿ ಗ್ರೇಡ್ ಮಾಡುವ ಕೆಲಸ. 2. ಸಣ್ಣ ದಿನಸಿ ಅಂಗಡಿ . 3. ಆ ಕಾಲದಲ್ಲಿ ಸಾಗರದಲ್ಲಿ ಮಾಕ್೯-4 ...

ನಾನೂರು ವರ್ಷದ ಹಿಂದೆ ಉತ್ತರ ಭಾರತದ ರಾಜಸ್ಥಾನ, ಗುಜರಾತಿನಿಂದ ವಲಸೆ ಬಂದ ಹಕ್ಕಿಪಿಕ್ಕಿ ಜನಾಂಗದವರು ಈಗ 50 ವರ್ಷದಲ್ಲಿ ಬದಲಾಗಿ ಮುಖ್ಯವಾಹಿನಿಗೆ ಸೇರುತ್ತಿದ್ದಾರೆ.

#ಒಂದುಕಾಲದಲ್ಲಿ_ಹಕ್ಕಿ_ಪಿಕ್ಕಿಜನಾಂಗ_ಅಲೆಮಾರಿ_ಶಿಕಾರಿಗಳು_ಗಿಡಮೂಲಿಕ_ತಜ್ಞರು #ಈಗ_ಬದಲಾದ_ಕಾಲಮಾನದಲ್ಲಿ_ಬದಲಾಗಿದ್ದಾರೆ_ವ್ಯಾಪಾರಿಗಳಾಗಿದ್ದಾರೆ  ಇವತ್ತು ಬೆಳಿಗ್ಗೆ ಪ್ಲಾಸ್ಟಿಕ್ ಹೂವಿನ ಮಾಲೆ ಮಾರಾಟಕ್ಕೆ ಬಂದ ಶಿವಮೊಗ್ಗ ಚಿಕ್ಕಮಟ್ಟಿ ಹಳ್ಳಿಯ ಹಕ್ಕಿಪಿಕ್ಕಿ ಕ್ಯಾಂಪಿನ ಹಾಲಿ ಶಿವಮೊಗ್ಗದ ನಂಜಪ್ಪ ಹೆಲ್ತ್ ಕೇರ್ ಹಿಂಬಾಗದ ಅಂಬೇಡ್ಕರ್ ಕಾಲೋನಿ ವಾಸಿ ಬೋಣಿಗೆ ಮಾಡಲು ವಿನಂತಿಸಿದ, ಪ್ಲಾಸ್ಟಿಕ್ ನಲ್ಲಿ ಹೂವಿನ ಬಣ್ಣದಲ್ಲಿ ಹೂವು ಸುರಿದು ಮಾಡಿದಂತ ಈ ಮಾಲೆ ನಿಜಕ್ಕೂ ಆಕಷ೯ಕವಾಗಿದೆ ಅವನ ಇವತ್ತಿನ ವ್ಯಾಪಾರಕ್ಕೆ 300 ರೂಪಾಯಿ ಬೊಣಿಗೆ ಮಾಡಿದೆ ಅವನ ಜೊತೆಯ ಇವತ್ತಿನ ಚಿತ್ರ ಮತ್ತು ಈ ಜನಾಂಗದ 50 ವರ್ಷ ಹಿಂದಿನ ಇವರ ಜನ ಜೀವನದ ಚಿತ್ರದ ಜೊತೆ ಹಾಕಿದ್ದೇನೆ.    1960 ರ ದಶಕದಲ್ಲಿ ಸೀಮಿತ ಜನ ಸಂಖ್ಯೆಯ ನಮ್ಮ ಹಳ್ಳಿ ಕಾಡಿನ ಅಂಚಿನಲ್ಲಿ ಇದ್ದ ಹಾಗಿತ್ತು ಆಗ ಪ್ರತಿ ವರ್ಷ ಸುಗ್ಗಿ ನ೦ತರ ಹಕ್ಕಿಪಿಕ್ಕಿ ಜನರ ದೊಡ್ಡ ಕ್ಯಾಂಪ್ ನಮ್ಮ ಊರಿನ ಈಗಿನ ಮಸೀದಿ ಜಾಗದಲ್ಲಿ ಇದ್ದ ದೊಡ್ಡ ಅತ್ತಿ ಮರದ ಬುಡದಲ್ಲಿ ಹಾಕುತ್ತಿದ್ದರು ಆಗೆಲ್ಲ ಇವರು ಶಿಕಾರಿ ಮಾಡುತ್ತಿದ್ದದ್ದು ಅವರ ನಿತ್ಯ ಆಹಾರಕ್ಕೆ ಮಾತ್ರ ಯಾಕೆಂದರೆ ಆಗ ಕಾಡು ಕೋಳಿ ಖರೀದಿ ಮಾಡುವವರು ಹಳ್ಳಿಗಳಲ್ಲಿ ಇರಲಿಲ್ಲ.     ಇವರು ತಮ್ಮ ಸಾಕು ದನ (ಶಿಕಾರಿಗೆ ಬಳಸುತ್ತಾರೆ) ಗಳ ಮೇಲೆ ಇಡೀ ಸಂಸಾರ ಸಾಗಿಸುತ್ತಾ ಬರುತ್ತಿದ್ದರು ಅದರಲ್ಲಿ ಟೆಂ...

ಶುದ್ಧ ಸಾವಯವ ತುಪ್ಪ ಮಲೆನಾಡು ಗಿಡ್ದ ಗೋವಿನ ತುಪ್ಪ ಈಗ ಅಪರೂಪ

#ಇದು_ಅಂತಿಂತ_ತುಪ್ಪ_ಅಲ್ಲ_ಮಲೆನಾಡು_ಗಿಡ್ದ_ತಳಿಯ_ದನದ_ಸುವಾಸನೆಯ_ಹರಳು_ಹರಳು_ತುಪ್ಪ     ಮಲೆನಾಡು ಗಿಡ್ದ ತಳಿ ಪಶ್ಚಿಮ ಘಟ್ಟದ ಗೋತಳಿ, ದಿನನಿತ್ಯ ಕಾಡಂಚಿನಲ್ಲಿ ಮೇಯ್ದು ಸಂಜೆ ಕೊಟ್ಟಿಗೆ ಸೇರಿ ಅದರ ಗಾತ್ರಕ್ಕೆ ತಕ್ಕಂತೆ ಕೊಂಚ ಹಾಲು ನೀಡುತ್ತದೆ ಹಾಗಾಗಿ ಇವತ್ತಿನ ಹತ್ತಾರು ಲೀಟರ್ ಹಾಲು ನೀಡುವ ಸುದಾರಿತ ತಳಿಯಿಂದ ಮಲೆನಾಡು ಗಿಡ್ಡ ಮಲೆನಾಡಿನ ಕೊಟ್ಟಿಗೆಗಳಲ್ಲಿಯೇ ಕಾಣುವುದಿಲ್ಲ.   ಇಂತಹ ಅಲ್ಪ ಪ್ರಮಾಣದ ಹಾಲು ಒಂದು ರೀತಿ ಸಾವಯವ ಹಾಲು ಕೂಡ ಯಾಕೆಂದರೆ ಮಲೆನಾಡು ಗಿಡ್ದಕ್ಕೆ ಪಶು ಆಹಾರ, ಹಾರ್ಮೋನ್ ಚುಚ್ಚುಮದ್ದು ಯಾರೂ ಹಾಕುವುದಿಲ್ಲ.    ಈ ದನಗಳ ಹಾಲು ಕರೆಯುವುದು ಕೂಡ ಸ್ವಲ್ಪ ಕಷ್ಟ ಸಾಧ್ಯ ಹಾಗಾಗಿ ಇದರ ಹಾಲು ಹೆಪ್ಪು ಹಾಕಿ ಮೊಸರು ಮಾಡಿ ಕಡೆದು ಬೆಣ್ಣೆ ತೆಗೆದು ತುಪ್ಪ ಮಾಡುವ ಆದುನಿಕ ಗೃಹಣಿಯರ ಸಂಖ್ಯೆ ಕೂಡ ಕಡಿಮೆ ಹಾಗಾಗಿ ಮಾರುಕಟ್ಟೆಯಲ್ಲಿ ಎಮ್ಮೆ, ಸುದಾರಿತ ತಳಿಯ ಬೆಣ್ಣೆ ತುಪ್ಪ ಸುಲಭದಲ್ಲಿ ಸಿಕ್ಕ ಹಾಗೆ ಮಲೆನಾಡು ಗಿಡ್ಡದ ಬೆಣ್ಣೆ ತುಪ್ಪ ಮಾತ್ರ ಸಿಗುವುದಿಲ್ಲ.    ಮಲೆನಾಡು ಗಿಡ್ಡ ದನದ ಗಿಣ್ಣಿನ ಹಾಲಿನ ಗಿಣ್ಣ ತಿನ್ನಿಸಿದ ಗೆಳೆಯರಾದ ಶಿವರಾಂ ಪಾಟೀಲರು ಮಲೆನಾಡು ಗಿಡ್ಡದ ತುಪ್ಪ ತಂದುಕೊಟ್ಟಿದ್ದಾರೆ, ಅದನ್ನು ಬಿಸಿ ಮಾಡಿದಾಗ ಇಡೀ ಮನೆ ತುಂಬ ನಿಜ ತುಪ್ಪದ ಸುವಾಸನೆ, ತಣ್ಣಗಾದಂತೆ ಹರಳು ಹರಳು ಆದ ಪ್ರಪಂಚದಲ್ಲೇ ಅತ್ಯಂ...