ನಿನ್ನೆಯ ಪತ್ರಕತ೯ ತಲವಾಟ ರಾಘವೇಂದ್ರಶಮಾ೯ರ ಪೇಸ್ ಬುಕ್ ಚಚೆ೯ ಹೊಸಬಾಳೆ ಮಂಜುನಾಥಹೆಗಡೆಯವರ ಈ ಪ್ರಾತ್ಯಕ್ಷತೆಗೆ ಕಾರಣ ಆಯಿತು. ಗೋಕಣ೯ದಿಂದ ಓಂಕಾರ ನಿರಂತರವಾಗಿ ಮರದ ದಂಡ ಸುತ್ತುಸುವುದರಿಂದ ಬರುವ ಕಂಚಿನ ಪಾತ್ರೆ ಖರೀದಿಸಿದ ಬಗ್ಗೆ ಪತ್ರಕರ್ತರಾದ ತಲವಾಟ ರಾಘವೇಂದ್ರ ಶಮಾ೯ರು ಬರೆದಿದ್ದರು, ಇದನ್ನು ಓದಿದಾಗ ನನಗೆ,ನನ್ನ ಬಾಲ್ಯದಲ್ಲಿ ನಮ್ಮ ಹಳ್ಳಿಗೆ ಬಿಕ್ಷಾಟನೆಗೆ ಬರುತ್ತಿದ್ದ ಜಂಗಮರು ಇಂತಹದೇ ಓಂಕಾರ ಗಂಟೆ ತರುತ್ತಿದ್ದ ಬಗ್ಗೆ ಅದರಿಂದ ಓಂಕಾರ ಬರುಸುತ್ತಿದ್ದ ಮತ್ತು ಘಂಟೆ ಒಳಗೆ ಮಣಿಗಳು ಕಂಪನದಿಂದ ಕಿಣಿ ಕಿಣಿ ಅಂತ ಕುಣಿಯುವ ವಿಸ್ಮಯ ನೆನಪಾಯಿತು. ಇದನ್ನುನೋಡಲು ಊರಿನ ಒ೦ದು ವಯಸ್ಸಿನ ಬಾಲಕರಾದ ನಾವೆಲ್ಲ ಇವರು ಊರು ದಾಟುವ ತನಕ ಇವರನ್ನ ಹಿಂಬಾಲಿಸುತ್ತಿದ್ದದ್ದು ನೆನಪಾಗಿ ಪ್ರತಿಕ್ರಿಯೆ ಬರೆದಿದ್ದೆ. ಇದಕ್ಕೆ ಹೊಸ ಬಾಳೆ ಮಂಜುನಾಥರೂ ಪ್ರತಿಕ್ರಿಯಿಸಿ ಅವರ ಬಾಲ್ಯದಲ್ಲೂ ಈ ಓಂಕಾರದ ಘ೦ಟೆ ಜಂಗಮರನ್ನ ಹಿಂಬಾಲಿಸುತ್ತಿದ್ದನ್ನ ನೆನಪಿಸಿದರು ಮತ್ತು ನಾನು ಮರೆತಿದ್ದ ಈ ಜಂಗಮರ ಇನ್ನೊಂದು ವಿದ್ಯೆ ನೆನಪಿಸಿದರು,ಅದೇನೆಂದರೆ ಒಬ್ಬ ಗಂಟೆ ಜಂಗಮರು ಗೇಟಲ್ಲಿ ನಿಂತು ಹೀಗೆ ಬಾರಿಸುತ್ತಿದ್ದರೆ, ಇನ್ನೊಬ್ಬರು ಮನೆ ಬಾಗಿಲಿಗೆ ಬಂದು ಮನೆಯವರ ಹೆಸರು ಕೇಳಿ (ತಮ್ಮ ದೈಹಿಕ ಸಂಜ್ಞೆ ಮೂಲಕ ಗಂಟೆ ಜಂಗಮರಿಗೆ ಸಂದೇಶ ಕಳಿಸುತ್ತಿದ್ದರೆ ಅದನ್ನು ಅಥ೯ ಮ...