ನಾವಿಬ್ಬರು ಸಹೋದರರು ನಮ್ಮಿಬ್ಬರ ವಯಸ್ಸು ಅಣ್ಣನದ್ದು 65, ನನ್ನದು 55 ಇಲ್ಲಿಯವರೆಗೆ ನಮ್ಮಿಬ್ಬರ ಜೀವನ ಸಾಮರಸ್ಯದಿಂದ ನಡೆದಿದೆ
#ನಾನು_ನನ್ನ_ಸಹೋದರ ಹೆಚ್ಚಿನ ಕುಟುಂಬದಲ್ಲಿ ಸಹೋದರರು ಮದುವೆ ಆಗುತ್ತಲೇ ಆಸ್ತಿ ಪಾಲು ಮಾಡಿಕೊಂಡು ಅಥವ ಪಿತ್ರಾಜಿ೯ತ ಆಸ್ತಿ ಮಾರಿಕೊಂಡು ಹಣ ಹಂಚಿಕೊಂಡು ಪ್ರತ್ಯೇಕರಾಗಿ ಬಿಡುತ್ತಾರೆ. ಪರಸ್ಪರ ಹೊಡೆದಾಟ ದ್ವೇಷದಲ್ಲಿ ಒಂದೇ ತಾಯಿ ಮಕ್ಕಳಲ್ಲ ಎನ್ನುವಂತೆ ವತಿ೯ಸುತ್ತಾರೆ. ನಾನು ಬಾಲ್ಯದಲ್ಲೇ ಒ0ದು ತೀಮಾ೯ನ ಮಾಡಿದ್ದೆ ನಾನು ನನ್ನ ಅಣ್ಣ ಜೀವನ ಪಯ೯೦ತ ಜೊತೆಯಲ್ಲಿರಬೇಕು ಅಂತ. ನನ್ನೆಲ್ಲ ದಶಾವತಾರಗಳನ್ನ ಹತ್ತು ಹಲವು ವ್ಯವಹಾರಗಳನ್ನ ನನ್ನಣ್ಣ ಪ್ರಶ್ನಿಸದೇ ಸಹಕರಿಸಿದ್ದ, ನಮ್ಮ ತಂದೆ ದೇಹಾಂತ್ಯದ ನಂತರ ಬ್ಯಾಂಕಿನ ಸಾಲ ಸೋಲಗಳಿಗೂ ಕಣ್ಣು ಮುಚ್ಚಿ ಸಹಿ ಹಾಕಿದ್ದ, ನಂತರ ಉದ್ದಿಮೆಯಲ್ಲಿ ನಷ್ಟವಾಗಿ ಸಾಲ ತೀರಿಸಲಾಗದೇ ಆಸ್ತಿ ಹರಾಜಿಗೆ ಬಂದರೂ "ನಿನ್ನಿ೦ದ ನಾನು ಆಸ್ತಿ ಕಳೆದುಕೊಂಡೆ " ಅಂತ ಒಂದು ದಿನವೂ ಅನ್ನಲಿಲ್ಲ. ದೇವರ ದಯೆಯಿಂದ ಎಲ್ಲಾ ಸಾಲಗಳನ್ನು ತೀರಿಸಿ ಆಸ್ತಿ ಉಳಿಸಿಕೊಂಡೆವು 2015 ರ ತನಕ ಒಂದೇ ಮನೆಯಲ್ಲಿ ವಾಸವಾಗಿದ್ದೆವು ನಂತರ ಒಂದೇ ತರದ ಎರೆಡು ಮನೆ ನಿಮಿ೯ಸಿ ಅಕ್ಕ ಪಕ್ಕದಲ್ಲಿ ಇದ್ದೇವೆ. ನಮ್ಮೆಲ್ಲ ವ್ಯವಹಾರ ಈಗಲೂ ಅಧಿಕೃತ ಕಾನೂನು ಬದ್ದ ಪಾಲುದಾರಿಕೆಯಲ್ಲಿ ಲಾಭ ನಷ್ಟದಲ್ಲಿ ಸರಿ ಸಮನಾಗಿ ನಡೆಸುತ್ತಿದ್ದೇವೆ. ಈಗಲೂ ಲೆಖ್ಖ ಪತ್ರ ನಾನೇ ನೋಡುತ್ತೇನೆ ಆದರೆ ಬ್ಯಾಂಕ್ ಅಕೌಂಟ್ ಮತ್ತು ಚೆಕ್ ಗೆ ನನ್ನ...