#ಮಾರೀಕಾ೦ಬಾ ಜಾತ್ರೆಯ ಹರಕೆ ಕೋಳಿ# ಈ ವಷ೯ದ ಮಾರೀಕಾಂಬಾ ಜಾತ್ರೆ ಮುಗಿಯುತ್ತಿದೆ ಪ್ರತಿ ಮಾರೀಕಾ೦ಭಾ ಜಾತ್ರೆ ಪ್ರಾರಂಭದಲ್ಲಿ ತೌರು ಮನೆಯಿಂದ ಗಂಡನ ಮನೆಗೆ ದೇವಿ ಮೆರವಣಿಗೆ ಹೊರಟಾಗ ಸಾಗರ ಹೋಟೆಲ್ ಸಕ೯ಲ್ನಿಂದ ಹರಕೆ ಕೋಳಿಗಳನ್ನ ಹಾರಿ ಬಿಡುವ ಸಂಪ್ರದಾಯವಿದೆ. (ಇದು ಎಲ್ಲಾ ಊರಿನ ಮಾರಿಕಾOಬಾ ಜಾತ್ರೆಯಲ್ಲಿ ಈ ಸಂಪ್ರದಾಯವಿದೆ.) ವಷ೯ಕ್ಕೆ 2 ಸಾರಿ ಹೊಸನಗರ ತಾಲ್ಲೂಕಿನ ಕೆಂಚನಾಲದಲ್ಲಿ ಈ ಹರಕೆ ಕೋಳಿಗಳನ್ನ ದೇವಸ್ಥಾನದ ಸಮಿತಿಯವರೇ ಹರಾಜು ಮಾಡುತ್ತಾರೆ. ಸಾಗರದಲ್ಲಿ ಹಾರಿ ಬಿಡುವ ಕೋಳಿ ಹಿಡಿಯಲೆಂದೇ ನೂರಾರು ಜನರು ಮಾರಿಕಾಂಬಾ ಮೆರವಣಿಗೆಯಲ್ಲಿ ಸೇರಿರುತ್ತಾರೆ, ಹಾರಿಬಿಟ್ಟ ಕೋಳಿಗಳು ಸ್ವಾತಂತ್ರ ಪಡೆದ ಸಂತೋಷದಲ್ಲಿ ಹಾರಿದವು ಮೆರವಣಿಗೆಯ ದೀಪಾಲಂಕಾರ ವಾದ್ಯದ ಶಬ್ದ ಮತ್ತು ನೆರೆದ ಸಾವಿರಾರು ಜನರ ನೋಡಿ ಭಯದಿಂದ ಇದ್ದ ಬದ್ದ ಶಕ್ತಿಯನ್ನೆಲ್ಲ ಬಳಸಿ ಅತಿ ಎತ್ತರಕ್ಕೆ ಹಾರಿದರು ಕೊನೆಗೆ ಎಲ್ಲೋ ಒಂದು ಕಡೆ ಶಕ್ತಿ ಕಳೆದುಕೊಂಡು ಇಳಿದು ಬಿಡುತ್ತದೆ ಆಗ ಇದಕ್ಕಾಗಿಯೇ ಹೊಂಚು ಹಾಕಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವವರ ಕೈ ಸೇರಿ ಆವರೊಡನೆ ಚೀಲ ಹಿಡಿದು ಸಾಗುವ ಬಗಲಿಯ ಕೈಚೀಲ ಸೇರುತ್ತದೆ. ನಾನು 8ನೇ ತರಗತಿಯಲ್ಲಿ ಸಾಗರದ ಹಾಸ್ಟೆಲ್ ನಲ್ಲಿದ್ದಾಗ ಈ ಹರಕೆ ಕೋಳಿ ಹಾರಿಬಿಡುವ ರಾತ್ರಿ ಮೆರವಣಿಗೆ ನೋಡಿದ್ದೆ. ಸಾಗರದಲ್ಲಿ ಬ್ರಾಂಡಿ ಶಾಪ್ ನ...