#ಬಹುಪಯೋಗಿ_ತಾಳೆಮರ
#ಮಂಗಳೂರು_ಮುಲ್ಕಿಯ_ಮೋಣು_ಸಾಹೇಬರು_ತಂದುಕೊಟ್ಟ_ಹನಿಬೊಂಡಾ,
ಮಳೆಗಾಲ ಮುಗಿಯುತ್ತಿದ್ದಂತೆ ಕರಾವಳಿ ಪ್ರದೇಶದಲ್ಲಿ ಈ ತಾಳೆ ಮರದ ಹಣ್ಣು ಪ್ರಾರಂಭ ಆಗುತ್ತದೆ, ರಾಷ್ಟ್ರೀಯ ಹೆದ್ದಾರಿ ಇಕ್ಕೆಲದಲ್ಲಿ ಇದರ ಮಾರಾಟವೂ ಪ್ರಾರಂಭ ಆಗುತ್ತದೆ.
ತಾಳೆ ಹಣ್ಣು, ಹನಿ ಬೊಂಡಾ, ತಾಳೆ ಬೊಂಡಾ ಇತ್ಯಾದಿ ಅನೇಕ ಸ್ಥಳಿಯ ಹೆಸರಿದೆ, ಇದರ ಒಳಭಾಗದಲ್ಲಿ ಮೂರು ಕಣ್ಣಿನಂತ ತಿರುಳುಗಳು ಇರುತ್ತದೆ ಇದು ಆರೋಗ್ಯ ವರ್ಧಕ ಅನೇಕ ಕಾಯಿಲೆಗೆ ಮದ್ದು.
ಒಂದಕ್ಕೆ 20 ರಿಂದ 25 ರೂಪಾಯಿ ಬೆಲೆ ಇದೆ.
ಇವತ್ತು ಮುಲ್ಕಿಯಿಂದ ನಮ್ಮಲ್ಲಿಗೆ ಬಂದ ಮೀನು ಗೊಬ್ಬರದ ಮಾರಾಟಗಾರರಾದ ಮೋಣು ಸಾಹೇಬರು ಎರೆಡು ಗೊನೆ ತಾಜಾ ಹನಿ ಬೊಂಡಾ ತಂದಿದ್ದರು.
ಇದರ ತಿರುಳು ಹಾಗೇ ತಿನ್ನಬಹುದು ಮತ್ತು ಇದರ 3 ರಿಂದ 5 ಕಣ್ಣು (ಹಣ್ಣಿನ ತಿರಳು) ಒ0ದು ಗ್ಲಾಸ್ ತಣ್ಣನೆ ಹಾಲಿನಲ್ಲಿ ಮಿಕ್ಸಿ ಮಾಡಿದರೆ ಇದರ೦ತ ಮಿಲ್ಕ್ ಶೇಕ್ ಬೇರೆ ಇರಲಿಕ್ಕಿಲ್ಲ.
ಯಾವುದೇ ಕಲಬೆರಕೆ ಇಲ್ಲದ,ರಾಸಾಯನಿಕ ಸಿಂಪಡನೆ ಇಲ್ಲದ ನೈಸರ್ಗಿಕವಾದ ಹಣ್ಣು ಇದು.
ತಾಳೆ ಮರ ಬಹುಪಯೋಗಿ ಇದರಿಂದ ಈ ಹಣ್ಣು ಜೊತೆಯಲ್ಲಿ ಅನೇಕ ಉಪಯೋಗವಿದೆ, ನೀರಾ ಇಳಿಸುತ್ತಾರೆ, ನೀರಾದಿಂದ ವಾಲೆ ಬೆಲ್ಲ, ತಾಳೆ ಹಿಟ್ಟು (ಗಂಜಿ - ಗಿಣ್ಣು), ಮನೆಯ ಛಾವಣಿಗೆ, ಹಗ್ಗ, ಬೀಸಣಿಕೆ, ಚತ್ರಿ, ಬುಟ್ಟಿ, ಚಾಪೆ ಮತ್ತು ಹಿಂದಿನ ಕಾಲದಲ್ಲಿ ಈಗಿನ ಪೇಪರಂತೆ ತಾಳೆಗರಿ ಉಪಯೋಗಿಸುತ್ತಿದ್ದರು.
ಗರಿಷ್ಟ 98 ಅಡಿ ಎತ್ತರ ಬೆಳೆಯುವ ಈ ಮರಗಳಲ್ಲಿ 150ಕ್ಕೂ ಹೆಚ್ಚಿನ ಪ್ರಭೇದ ಇದೆಯಂತೆ, ಇದರ ಮೂಲ ಭಾರತವೇ.
ತಾಳೆ ಮರ ಪಕ್ಕದ ಶ್ರೀಲಂಕಾದ ರಾಷ್ಟ್ರೀಯ ವೃಕ್ಷವಾಗಿದೆ.
Comments
Post a Comment