ಇಕ್ಕೇರಿ ನಾರಾಯಣ ಶಮಾ೯ ಸಾಮಾಜಿಕ ವಿಜ್ಞಾನಿ, ಸಂಸ್ಕೃತ ಪಂಡಿತ, ಮಲೆನಾಡಿನ ಜನಾನುರಾಗಿ, ಕಲಾವಿದ, ಸಾಹಸಿ, ಉದ್ಯಮಿ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ನೈಪುಣ್ಯ ಹೊಂದಿದ ಇವರ ಬಗ್ಗೆ ವಿವರಿಸುವುದು ಬಲು ಕಷ್ಟ#
ಸಿಮೆಂಟ್ ಬಾವಿ ರಿಂಗ್, ಚರಂಡಿ ಪೈಪ್ ಗಳು, ನೀರಿನ ಟ್ಯಾಂಕ್ ಮತ್ತು ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ನಿರ್ಮಿಸುವ ಕ್ಕೆಗಾರಿಕೆ 80 ರ ದಶಕದಲ್ಲೇ ಸಾಗರ ಪಟ್ಟಣ ಸಮೀಪದ ಇಕ್ಕೇರಿಯಲ್ಲಿ ಪ್ರಾರಂಬಿಸಿ ಯಶಸ್ವಿ ಆಗಿದ್ದರು 1995ರಲ್ಲಿ ನಾನು ಆನಂದಪುರದ ಜಿಲ್ಲಾ ಪಂಚಾಯತ್ ಸದಸ್ಯ, ಹೊಸ ಹುಮ್ಮಸ್ಸು ಕ್ಷೇತ್ರದಲ್ಲಿ 100 ತೆರೆದ ಭಾವಿ ಮೊದಲ ವಷ೯ ನಿಮಿ೯ಸ ಬೇಕೆಂಬ ಬಯಕೆ ಇದನ್ನ ವ್ಯಕ್ತ ಪಡಿಸಿದಾಗ ಎಲ್ಲಾ ಸಹ ಸದಸ್ಯರು ಗೇಲಿ ಮಾಡಿ ಜೋಕರ್ ತರ ನನ್ನ ನೋಡಿದರು.
ಇದನ್ನ ಪ್ರತಿಷ್ಟೆಯಾಗಿ ಪರಿಗಣಿಸಿ ಜಿಲ್ಲಾ ಪಂಚಾಯತನ ಪ್ಲಾನಿOಗ್ ಆಪಿಸರ್, ಮುಖ್ಯ ಅಕೌ೦ಟ್ ಆದೀಕಾರಿಗಳಲ್ಲಿ ಚಚಿ೯ಸಿದಾಗ ಅವರು ಹೇಳಿದ್ದು, ತೆರದ ಬಾವಿ ಹಣ ಮಾಚ್೯ 31 ರ ಒಳಗೆ ಬಳಕೆ ಆಗದೆ ವಾಪಾಸ್ ಹೋಗುತ್ತೆ ನೀವು ಮಾಚ್೯ ನಲ್ಲಿ 100 ಬಾವಿ ನಿಮಿ೯ಸಿದರೆ ಅದಕ್ಕೆ ಹಣ ಹೊಂದಿಸಬಹುದು ಅಂತ.
ಆಗ ಇಕ್ಕೇರಿ ಶಮ೯ ಇಕ್ಕೇರಿ ಬಂಗಾರದ ಗಣಿ ವಿರೋದಿ ಜನಜಾಗೃತಿಗಾಗಿ ತಮ್ಮ ತನು ಮನ ಧನ ದೊ೦ದಿಗೆ ತಮ್ಮ ಜೀಪಿಗೆ ಮೈಕ್ ಆಳವಡಿಸಿ ಪ್ರತಿದಿನ ಸ೦ಜೆ ಜನಜಾಗೃತಿ ಸಭೆಗೆ ಸಹಕರಿಸುತ್ತಿದ್ದರು. ಆಗ ಜಿ.ಪಂ.ಸದಸ್ಯನಾಗಿದ್ದ ನನಗೂ ಮುಖ್ಯ ಬಾಷಣಕಾರನ ಕೆಲಸ ಈ ವಿಶ್ವಾಸದಿಂದ ಶಮಾ೯, ಗುತ್ತಿಗೆದಾರರಾದ ಬೇಬಿ ಮುಂತಾದವರಿಂದ ಮಂಜೂರಾಗದೇ 100 ಬಾವಿ ನಿಮಿ೯ಸಿದ್ದು ಇತಿಹಾಸ, ಬೇರೆಲ್ಲ ಸದಸ್ಯರು ಭಾವಿ ನಿಮಿ೯ಸದೆ ಉಳಿದ ವಾಪಾಸ್ ಹೋಗುವ ಹಣ ನನ್ನ ಕ್ಷೇತ್ರದ 100 ಬಾವಿಗೆ ವಿನಿಯೋಗವಾಗಿ ಜಿ.ಪಂ.ಸದಸ್ಯನಾಗಿ ಮೊದಲ ವಷ೯ 100ಕ್ಕೂ ಹೆಚ್ಚು ಬಾವಿ ನಿಮಿ೯ಸಿದ ದಾಖಲೆ ನನ್ನದಾಯಿತು ಇದಕ್ಕಾಗಿ ನನಗೆ ಬೆಂಬಲಿಸಿದ ಇಕ್ಕೇರಿ ನಾರಾಯಣ ಶಮ೯ರನ್ನ ಇವತ್ತೂ ನೆನಪಿಸುತ್ತೇನೆ.
ನಾರಾಯಣ ಶಮಾ೯ರ ಒತ್ತಾಯದಿಂದ ಇಕ್ಕೇರಿಯ ಕೋಟೆ ಆoಜನೇಯನ ದೇವಾಲಯದ ಭಾವಿಗೆ ಆನಂದಪುರದ ಜಿಪಂ ಕ್ಷೇತ್ರದಿಂದ ಅನುದಾನ ನೀಡಿ ತೆರೆದ ಬಾವಿ ನಿರ್ಮಿಸಿದ್ದೆವು.
ಶಮಾ೯ರು ನಿಮಿ೯ಸುವ ಸೆಪ್ಟಿಕ್ ಟ್ಯಾoಕ್ ನಂ 1, ನಿನ್ನೆ ಇವರ ಮಗ ನರಸಿಂಹಮೂತಿ೯ ನಮ್ಮ ಸಂಸ್ಥೆಗೆ 5ನೇ ಟ್ಯಾoಕ್ ಸರಬರಾಜು ಮಾಡಿ ಆಳವಡಿಸುವಾಗ ಶಮಾ೯ರ ನೆನಪಾಯಿತು.
ಅವರ ಒಡನಾಟದಲ್ಲಿ ನನ್ನ ಅನುಭವ ಅವರೊಬ್ಬ ಸಾಮಾಜಿಕ ವಿಜ್ಞಾನಿ, ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸಿದ ಮಹಾನುಭವಿ, ಕಲಾವಿದ, ಜಾತ್ಯಾತೀತ ವ್ಯಕ್ತಿ, ಸಂಸ್ಕೃತ ಪಾಂಡಿತ್ಯ ಇದ್ದ ಮೇದಾವಿ.
ಕೆಲ ವರ್ಷದ ಹಿಂದೆ ಇಕ್ಕೇರಿ ಶರ್ಮಾರವರು ಅವರ ಸಂಸ್ಥೆಯ ನೀರಿನ ಟ್ಯಾಂಕ್ ಒಂದನ್ನು ಗ್ರಾಹಕರ ಮನೆಯಲ್ಲಿ ಅವರ ಲಾರಿಯಿಂದ ಇಳಿಸುವಾಗ ಅಚಾತುಯ೯ದಿಂದ ಅಪಘಾತವಾಗಿ ಜೀವ ಕಳೆದು ಕೊಂಡಿದ್ದು ನೋವಿನ ಸಂಗತಿ
ಅವರ ಮಗ ನರಸಿಂಹಮೂತಿ೯ ಕೂಡ ಖ್ಯಾತ ತಬಲವಾದಕ, ತಂದೆ ಪ್ರಾರಂಬಿಸಿದ ಉದ್ಯಮ ಮು೦ದುವರಿಸಿದ್ದಾರೆ.
Comments
Post a Comment