Skip to main content

ಶಾಂತವೇರಿ ಗೋಪಾಲಗೌಡರು ಹೇಳಿದ ಒಂದು ಹೋಳಿಗೆ ಕಥೆಯಲ್ಲಿದೆ ಸಮಾಜ ವಿಜ್ಞಾನದ ತತ್ವ ಸಿದ್ಧಾಂತ, ಇದನ್ನು ನೆನಪಿಸಿದ ಕಾಗೋಡು ತಿಮ್ಮಪ್ಪನವರು ಇದರ ಪ್ರೇರಣೆಯಿಂದ ನನ್ನ ಆಚರಣೆ


#ಸಂಸಾರದಲ್ಲಿ_ಪ್ಲಾನಿಂಗ್_ಇಲ್ಲದಿದ್ದರೆ_ಈಗಲೂ_ಹೋಳಿಗೆ_ಮರಿಚಿಕೆ
#ಉಳ್ಳವರಿಗೆ_ನಿಕೃಷ್ಟವಾಗಿರಬಹುದಾದ_ಹೋಳಿಗೆಕಥೆ

ನನಗೆ ಪ್ರತಿ ವಷ೯ ದೀಪಾವಳಿಯಲ್ಲಿ ನೆನಪಾಗುವ 

#ಕಾಗೋಡು_ತಿಮ್ಮಪ್ಪನವರು_ಪುನರುಚ್ಚರಿಸಿದ_ಶಾಂತವೇರಿ_ಗೋಪಾಲಗೌಡರು_ಹೇಳುತ್ತಿದ್ದ_ಹೋಳಿಗೆ_ಕಥೆ

   ಬಂಗಾರಪ್ಪನವರು ಜಾರಿಗೆ ತಂದ ಬಗರ್ ಹುಕುಂ ಮಂಜೂರು ಪತ್ರ ನನ್ನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನೇಕ ಹಳ್ಳಿಯಲ್ಲಿನ ಬಡ ರೈತರಿಗೆ ಭೂಮಾಲಿಕತ್ವ ತಂದ ಮೊದಲ ದೀಪಾವಳಿ ಆಗಿತ್ತು.
  ಹಕ್ಕು ಪತ್ರ ಸಿಗುವ ಸಂದಭ೯ದಲ್ಲಿ ರಾಜಕೀಯ ಸ್ಥಿತ್ಯಂತರದಲ್ಲಿ ಬಂಗಾರಪ್ಪರ ಪದಚ್ಯುತಿ ಆಗಿ ಮೊಯ್ಲಿ ಮುಖ್ಯಮಂತ್ರಿ ಮತ್ತು ಗೃಹ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕಾಗೋಡು ಮಂತ್ರಿ ಆಗಿದ್ದರು.
 ರಾಜ್ಯದಲ್ಲಿ ಮೊದಲ ಬಗರ್ ಹುಕುಂ ಪತ್ರಗಳು ನಮ್ಮ ಗ್ರಾಮ ಪಂಚಾಯಿತಿಯಲ್ಲಿ ವಿತರಿಸಿದ್ದು ಇದಕ್ಕೆ ನನ್ನ ಶ್ರಮ ಕಾಗೋಡರಿಗೆ ತುಂಬಾ ಸಂತೋಷ ಉಂಟು ಮಾಡಿತ್ತು.
 ಇದೇ ಸಂದರ್ಭದಲ್ಲಿ ಮಂತ್ರಿಗಳ ಜೊತೆ ನಾನು, ಬೀಮನೇರಿ ಶಿವಪ್ಪ ಮತ್ತು ತೀ.ನಾ. ಶ್ರೀನಿವಾಸ್ ಸಾಗರ ತಾಲ್ಲೂಕಿನ ಆವಿನಳ್ಳಿ ಹೋಬಳಿಯ ಪ್ರವಾಸದಲ್ಲಿ ಜೊತೆಗೆ ಇದ್ದೆವು, ದೀಪಾವಳಿಯ ಬೆಳಗಿನ ಉಪಹಾರ ಆವಿನಳ್ಳಿ ರೈಸ್ ಮಿಲ್ ಮಾಲಿಕರಾದ ಹೆಚ್.ಎಂ.ಬಸವರಾಜ್ ಗೌಡರ ಮನೆಯಲ್ಲಿ ಹೋಳಿಗೆ ಜೊತೆಗೆ ಉಪಹಾರ.
  ನಂತರದ ಸಭೆಯೊಂದರಲ್ಲಿ ಕಾಗೋಡು ನನ್ನ ಹೊಗಳಿದ್ದೇ ಹೊಗಳಿದ್ದು ಕಾರಣ ನನ್ನ ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿ ಆಗಿ ಬಗರ್ ಹುಕುಂ ಹಕ್ಕು ಪತ್ರ ವಿತರಿಸಿದ್ದಕ್ಕೆ ಈ ಹೊಗಳಿಕೆ ನನಗೆ ನಾಚಿಕೆ ತರಿಸುತ್ತಿತ್ತು.
  ಆ ಸಂದಭ೯ದಲ್ಲಿ ಕಾಗೋಡು ಶಾಂತವೇರಿ ಗೋಪಾಲಗೌಡರನ್ನ ನೆನಪಿಸಿ ಕೊಂಡರು "ಕೃಷಿ ಕಾಮಿ೯ಕರು, ಗೇಣಿ ರೈತರು ಭೂಮಿ ಹಕ್ಕು ಪಡೆಯೋ ಕಾಲ ಬರಬೇಕು ಹಾಗೆ ದೀಪಾವಳಿ ಹಬ್ಬದಲ್ಲಿ ಹೋಳಿಗೆ ಮಾಡಿ ತುಪ್ಪ ಹಾಕಿ ತಿನ್ನೋ ಕಾಲ ಬರ ಬೇಕು ಅಂತಿದ್ದರು" ಅಂತ.
   ಬೆಳಿಗ್ಗೆ ಬಸವರಾಜಗೌಡರ ಮನೆಯಲ್ಲಿಯ ಹೋಳಿಗೆ ಮತ್ತು ಬಗರ್ ಹುಕುಂ ಹಕ್ಕು ಪತ್ರ ನೀಡುತ್ತಿರುವ ಸಂದಭ೯ ಅವರು ಈ ಲಯಕ್ಕೆ ಬರಲು ಕಾರಣವಾಗಿತ್ತು.
  ನಂತರ ಕಾರಿನಲ್ಲಿ ವಾಪಾಸು ಬರುವಾಗ ವಿನಂತಿಸಿದೆ ಗೋಪಾಲಗೌಡರ ಹೋಳಿಗೆ ಅಥ೯ ಏನು ಅಂತ.
   ಇವತ್ತೂ ನಮ್ಮ ಶೂದ್ರರು ಸಾವಿರಾರು ರೂಪಾಯಿ ಖಚು೯ ಮಾಡಿ ಕುರಿ ಕಡಿದು ಹಬ್ಬ ಮಾಡುತ್ತಾರೆ ಆದರೆ ಸರಳವಾಗಿ ಮಾಡಬಹುದಾದ ಹೋಳಿಗೆ ಮಾಡುವ  ಪ್ಲಾನಿಂಗ್ ಮಾತ್ರ ಇಲ್ಲ, ಬೇಳೆ ತಂದರೆ ಬೆಲ್ಲ ಇಲ್ಲ ಎರಡೂ ಇದ್ದರೆ ತುಪ್ಪ ಇಲ್ಲ ಎಲ್ಲಾ ಇದ್ದರು ತಯಾರಿಸುವ ಗೃಹಿಣಿಗೆ ಆಸಕ್ತಿ ಇಲ್ಲ. ಇದಕ್ಕೆಲ್ಲ ಸಂಸ್ಕಾರ ಬೇಕು, ನಾಜೂಕು ಬೇಕು ಅದನ್ನು ಕಲಿತರೆಂದರೆ ಬುದ್ದಿವಂತರಾಗುತ್ತಾರೆ, ಸುಖ ಜೀವನ ಮಾಡ್ತಾರೆ ಅಂತ ಗೋಪಾಲಗೌಡರು ಇನ್ನೂ ಚೆನ್ನಾಗಿ ವಿವರಿಸುತ್ತಿದ್ದರು ಅಂದರು.
  ನನ್ನ ಮನೆಯ ಹಬ್ಬದಲ್ಲೂ ಹೋಳಿಗೆ ಲಭ್ಯವಾಗುತ್ತಿರಲಿಲ್ಲ ಅದೇ ರೀತಿ ನಮ್ಮ ಸುತ್ತಮುತ್ತ ಶೂದ್ರರ ಮನೆಗಳಲ್ಲೂ ಹೋಳಿಗೆ ತುಪ್ಪ ವಿರಳವಾಗಿತ್ತು.
  ಒಮ್ಮೆ ಸಾಗರದ ಮಾಜಿ ಶಾಸಕರಾದ ಎಲ್.ಟಿ.ತಿಮ್ಮಪ್ಪ ಹೆಗ್ಗೆಡೆಯವರ ಮನೇಲಿ ಹೋಳಿಗೆಯನ್ನ ತುಪ್ಪ,ಬೆಲ್ಲದ ಪಾಕ, ಸಕ್ಕರೆ ಪಾಕ, ಹಣ್ಣಿನ ರಸಾಯನಗಳ ಜೊತೆ ವಿವಿದ ರುಚಿಯಲ್ಲಿ ಹತ್ತಾರು ಹೋಳಿಗೆ ತಿಂದದ್ದು, ಕಾಗ೯ಲ್ ನ ಕಲ್ಯಾಣ ಮಂಟಪದಲ್ಲಿ ಬಿದನೂರು ಶಶಿಕಾಂತ ಜೈನರ ಮದುವೆಯಲ್ಲಿ ಹತ್ತಾರು ಹೋಳಿಗೆ ಮತ್ತು ಮಾವಿನ ಹಣ್ಣಿನ ರಸಾಯನದಲ್ಲಿ ತಿಂದದ್ದು ನೆನಪು ಈಗಲೂ ಮರೆತಿಲ್ಲ.
  ಈಗ ಇದೆಲ್ಲ ನಮ್ಮಮನೇನಲ್ಲೆ ಮಾಡುವ ಕಾಲ,ಸಂಸ್ಕಾರ ಬಂದಿದೆ ಆದರೆ ಡಯಾಬಿಟೀಸ್ ತಿನ್ನದಂತೆ ಬಾಯಿ ಕಟ್ಟಿದೆ.
  ಕಾಗೋಡು ಹೇಳಿದ ಗೋಪಾಲಗೌಡರ ಕಥೆ ನನಗೆ ಪ್ರತಿ ಹಬ್ಬಕ್ಕೆ ನನ್ನ ಸಿಬ್ಬಂದಿಗಳಿಗೆ ಹೋಳಿಗೆ ತುಪ್ಪ ತಪ್ಪದೇ ತಯಾರಿಸಿ ನೀಡುವ ಪದ್ಧತಿಗೆ ಕಾರಣವಾಗಿದೆ, ಹಾಗೆಯ ನಮ್ಮ ಊರಿನ ಶ್ರೀ ವರಸಿದ್ಧಿವಿನಾಯಕ ದೇವರ ಜಾತ್ರೆಯಲ್ಲಿ ರಥೋತ್ಸವದ ದಿನ ನಮ್ಮ ಕುಟುಂಬದಿಂದ ಅನ್ನದಾಸೋಹ ವ್ಯವಸ್ಥೆ ಇರುತ್ತದೆ ಅವತ್ತೂ ಬಂದ ಭಕ್ತಾದಿಗಳಿಗೆ ಹೋಳಿಗೆ ತುಪ್ಪ ಇದ್ದೇ ಇರುತ್ತದೆ ಮೂರರಿಂದ ಮೂರೂವರೆ ಸಾವಿರ ಜನ ಆಹಾರ ಸ್ವೀಕರಿಸುತ್ತಾರೆ.
  ಗೋಪಾಲಗೌಡರು ಹೇಳಿದ ಹೋಳಿಗೆ ಕಥೆ ಬೇರೆಯವರಿಗೆ ಲಘು ಅನ್ನಿಸಬಹುದು ಆದರೆ ಈಗಲೂ ಸಂಸಾರದಲ್ಲಿ ಪ್ಲಾನಿಂಗ್ ಇಲ್ಲದವರಿಗೆ ಹೋಳಿಗೆ ಈಗಲೂ ಮರಿಚಿಕೆಯೇ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...