ಹುಕ್ಕಾ ಕಂಡು ಹಿಡಿದು 450 ವರ್ಷ ಆಯಿತು ಅಕ್ಬರ್ ಸಾಮ್ರಾಟರ ಖಾಸಾಗಿ ಪಿಸಿಷಿಯನ್ ಹಕೀಂ ಅಬುಲ್-ಪಥಾ - ಗಿಲಾನಿ ಪತೇಪುರ್ ಸಿಕ್ರಿಯಲ್ಲಿ ಇದನ್ನು ಮೊದಲು ತಯಾರಿಸಿ ಬಳಕೆ ಮಾಡುತ್ತಾರೆ.
#ಹುಕ್ಕಾ_ಶ್ರೀಮಂತಿಕೆಯ_ಪ್ರದರ್ಶನ_ಆಗಿತ್ತು.
#ಹುಕ್ಕಾ_ಕಂಡುಹಿಡಿದು_450ವಷ೯_ಆಯಿತು.
#ಭಾರತಕ್ಕೆ_ತಂಬಾಕು_ಬಂದಿದ್ದು_ಹದಿನೇಳನೇ_ಶತಮಾನದಲ್ಲಿ.
#ಅದಕ್ಕೂ_ಮೊದಲು_ಬಳಕೆಇದ್ದಿದ್ದು_ಗಾಂಜಾ
ಉತ್ತರ ಭಾರತದ ಹಳ್ಳಿಗಳಿಗೆ ಹೋದಾಗ ಅಲ್ಲಿಯೂ ನಮ್ಮ ಹಳ್ಳಿಗಳಲ್ಲಿ ಇರುವಂತ ಸೋಮಾರಿ ಕಟ್ಟೆಗಳಲ್ಲಿ ಊರ ಪಂಚಾಯ್ತಿ ಗಾಸಿಪ್ ಗಳ ಚರ್ಚೆ ನಡೆಯುತ್ತಿರುತ್ತದೆ ಅವರ ಮಧ್ಯ ಹುಕ್ಕಾ ಒಂದು ಹೊಗೆಯಾಡುತ್ತಿರುತ್ತದೆ.
ಸುಮಾರು 15 ವರ್ಷದ ಹಿಂದೆ ಹತ್ತು ಪೈಸೆಯ ತಂಬಾಕು ಕಡ್ಡಿಪುಡಿ ಹಾಕಿದರೆ 10 ಜನ ತಮ್ಮ ದೂಮಪಾನ ಸಂತೃಪ್ತಿ ಪಡೆಯುತ್ತಿದ್ದರು ಆದ್ದರಿಂದಲೇ ಇದು ಮಿತವ್ಯಯದ ಸಾಮೂಹಿಕ ದೂಮಪಾನದ ಹುಕ್ಕಾ ಆಗಿ ಪ್ರಸಿದ್ದಿ ಆಗಿರಬೇಕೆಂದು ಅನ್ನಿಸಿತ್ತು.
ಬಾಲ್ಯದಲ್ಲಿ ಒಂದು ಬಾರೀ ಆಸೆ ಇತ್ತು, ದೊಡ್ಡವನಾಗಿ ಸ್ವಂತ ದುಡಿಮೆ ಶುರು ಮಾಡಿದಾಗ ಟೆರಿಲಿನ್ ಅಂಗಿ ಧರಿಸಿ ಅದರ ಎದರು ಜೇಬಲ್ಲಿ ದುಬಾರಿ ಸಿಗರೇಟು ಪ್ಯಾಕ್ ಇಟ್ಟು ಕೊಳ್ಳಬೇಕು ಜೊತೆಯಲ್ಲಿ ದುಬಾರಿ ವಿದೇಶಿ ಲೈಟರ್ ನಿಂದ ಕಿಡಿ ತಾಗಿಸಿ ಹೊಗೆ ಬಿಡಬೇಕಂತ ಕನಸು ಆದರೆ ಅದನ್ನು ಜಾರಿಗೊಳಿಸಲು ನನ್ನ ಆರೋಗ್ಯ ಬಿಡಲೇ ಇಲ್ಲ ಸಿಗರೇಟು ಹೊಗೆ ಆಗಿ ಬರಲೇ ಇಲ್ಲ, ಹೊಗೆ ಮತ್ತು ದೂಳಿನ ಅಲರ್ಜಿ ಕೂಡ.
ಆದರೂ ಈಗಲೂ ವಿವಿಧ ದೂಮಪಾನದ ಸಾಮಗ್ರಿಗಳ ನೋಡಲು ಆಸಕ್ತಿ ಹಾಗಾಗಿ ಸುಮಾರು ಹತ್ತು ವರ್ಷದ ಹಿಂದೆ ಮುಂಬಯಿ೦ದ ತಂದ ಗಾಜಿನ ಹುಕ್ಕಾ ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಜೋಪಾನ ವಾಗಿ ಪ್ಯಾಕ್ ಮಾಡಿ ಇಟ್ಟಿದ್ದೆ, ಅಲ್ಲಿ೦ದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸಾಗಾಟದಲ್ಲಿ ಒಡೆದು ಹೋಗಿರಬೇಕೆಂದು ಬಾವಿಸಿದ್ದೆ, ಮೊನ್ನೆ ತೆರೆದರೆ ಹೊಚ್ಚ ಹೊಸದು ಪಳಪಳಾ ಅಂತಾ ಇದೆ.
ಹುಕ್ಕಾ ಎನಿದರ ಚರಿತ್ರೆ ಅಂತ ಗೂಗಲ್ ತಡಕಾಡಿದರೆ ಅನೇಕ ಆಸಕ್ತಿಕರ ವಿಚಾರಗಳೆ ತೆರೆದುಕೊಂಡಿತು.
ಅಕ್ಬರ್ ಸಾಮ್ರಾಟರ ಆಸ್ಥಾನದಲ್ಲಿ ಪರ್ಶಿಯಾದ ಹಕೀಂ ಅಬುಲ್- ಪಥಾ - ಗಿಲಾನಿ ಎಂಬುವವರು ಅಕ್ಬರ್ ರಾಜನ ಖಾಸಾ ಪಿಷಿಸಿಯನ್ ಆಗಿರುತ್ತಾರೆ (1542-1605) ಇವರು ಮೊಗಲ್ ಇಂಡಿಯಾದ ಪತೇಪುರ್ ಸಿಕ್ರಿಯಲ್ಲಿ ಈ ಹುಕ್ಕಾ - ಶೀಷಾ - ನೀರಿನ ಪೈಪ್ ಎಂದು ಕರೆಯುವ ಉಪಕರಣ ಕಂಡು ಹಿಡಿಯುತ್ತಾರೆ ಇದು ಇಲ್ಲಿಂದ ಪರ್ಶಿಯಾಗೆ ಹೋಗಿ ಅಲ್ಲಿ ಅಲ್ಪ ಸ್ವಲ್ಪ ಆದುನಿಕರಣಗೊಂಡು ವಿಶ್ವ ದಾದ್ಯಂತ ಪಸರಿತಂತೆ.
ಆ ಕಾಲದಲ್ಲಿ ರಾಜ ಮಹಾರಾಜರು, ಶ್ರೀಮಂತರು ಹುಕ್ಕಾ ತಮ್ಮ ಶ್ರೀಮಂತಿಕೆಯ ಪ್ರತೀಕವಾಗಿ ಸೇಯುತ್ತಿದ್ದರಂತೆ, ಇದರಲ್ಲಿ ತಂಬಾಕು, ಗಾಂಜಾ ಬಳಸುತ್ತಿದ್ದರಂತೆ ಅಂದರೆ ಹುಕ್ಕಾ ಬಳಕೆಗೆ 450 ವರ್ಷ ಆಗಿರಬಹುದು.
ಇನ್ನೊಂದು ವಿಶೇಷ ಭಾರತಕ್ಕೆ ತಂಬಾಕು ಪರಿಚಯ ಆಗುವುದು 17ನೇ ಶತಮಾನದಲ್ಲಿ ಅದಕ್ಕೂ ಮೊದಲು ಭಾರತೀಯರ ದೂಮಪಾನ ಬಾಂಗ್ ಅಥವ ಗಾಂಜಾ ಆಗಿತ್ತು.
Comments
Post a Comment