#ಅಸುರಕ್ಷಿತ_ವಲಯದ_ಬಾಲಕಾಮಿ೯ಕರ_ಬಳಕೆಯ_ಉದ್ದಿಮೆ.
#ಪರಿಸರ_ಸಂರಕ್ಷಣೆ_ಮರಿಚಿಕೆ
ಪಟಾಕಿ ಶಬ್ದ ಮಕ್ಕಳ ಬಾಲ್ಯದಲ್ಲಿ ಆಕರ್ಷಕ ಅದಕ್ಕೆ ರಂಗು ರಂಗಿನ ಬೆಳಕಿನ ಚಿತ್ತಾರದ ಚಮತ್ಕಾರವೂ ಸೇರಿಸಿ ಎಲ್ಲಾ ವಯೋಮಾನದವರಿಗೂ ಆಕರ್ಷಿಸುವಂತೆ ಮಾಡಿದ್ದಾರೆ.
ವಿವಿದ ವಿನ್ಯಾಸ ಗುಣಮಟ್ಟಗಳಿಂದ ಇದರ ಬೆಲೆ ಕೂಡ ಹೆಚ್ಚು, ಈಗೆಲ್ಲ ಪಟಾಕಿಗೂ ಕರೆನ್ಸಿಗೂ ನೇರ ಸಂಬಂದ ಇದೆ, ಸಭೆ ಸಮಾರಂಭ ಉತ್ಸವಗಳಲ್ಲಿ ಲಕ್ಷಾಂತರ ರೂಪಾಯಿ ಸುಡುತ್ತಾರೆ. ನಿಶ್ವಿತ ವರಮಾನ ಇರುವ ಉದ್ಯೋಗಿಗಳ ಕುಟು೦ಬ, ವಾಣಿಜ್ಯ ಬೆಳೆಯ ರೈತರು, ಲಾಭದಾಯಕ ಉದ್ದಿಮೆ ಇರುವವರೇ ಇದರ ಹೆಚ್ಚಿನ ಗ್ರಾಹಕರು.
ಇಲ್ಲಿ ಸಿಗುವ ಕ್ಷಣಿಕ ಸುಖ ಮತ್ತು ಶಬ್ದ ಹಾಗೂ ಬೆಳಕಲ್ಲಿ ತಮ್ಮ ಅಂತಸ್ತು ಪ್ರದರ್ಶನದ ಸ್ಪರ್ದೆಯಿಂದ ಪರಿಸರ ಸಂರಕ್ಷಣೆ ಗಮನಕ್ಕೆ ಬರುತ್ತಿಲ್ಲ.
ಪಟಾಕಿ ಉದ್ಯಮವೂ ಬಾಲಕಾರ್ಮಿಕರನ್ನೆ ಅವಲಂಬಿಸಿದೆ ಏಕೆಂದರೆ ಪಟಾಕಿ ತಯಾರಕನಿಗೆ ಹತ್ತು ಪೈಸೆ ಸಿಕ್ಕುತದೆ ಅದೇ ಪಟಾಕಿ ಮಾರುವ ಮಧ್ಯವರ್ತಿಗೆ ರೂಪಾಯಿ ಲಾಭ ತರುತ್ತದೆ ಆದ್ದರಿಂದ ಅತ್ಯಂತ ಕಡಿಮೆ ಕೂಲಿಯ ಮತ್ತು ಬಾಲ್ಯವಸ್ಥೆಯ ಮಕ್ಕಳ ಕೈ ಬೆರಳ ಕೌಶಲ್ಯ ಕೂಡ ಬಾಲ ಕಾಮಿ೯ಕ ಬಳಕೆ ಇದಕ್ಕೆ ಕಾರಣವಾಗಿದೆ.
ಪಟಾಕಿಗೆ ಬೇಕಾದ ಕಚ್ಚಾ ವಸ್ತುಗಳನ್ನು ತಯಾರಿಸುವ ಸಂಸ್ಥೆಗಳಿಗೆ ತಮ್ಮ ವಸ್ತು ದೊಡ್ಡ ಮಟ್ಟದ ಖರೀದಿದಾರ ಪಟಾಕಿ ಕಾರ್ಖಾನೆ ನಿರಂತರ ನಡೆಯದಿದ್ದರೆ ನಷ್ಟ ಖಚಿತ.
ಸಿಡಿ ಮದ್ದು ತಯಾರಿಕೆ - ದಾಸ್ತಾನು -ಸಾಗಾಣಿಕೆ ಮತ್ತು ಬಳಕೆಯಲ್ಲಿ ಪ್ರತಿ ವರ್ಷ ಅವಘಡ ಮತ್ತು ಸಾವುಗಳು ಕೂಡ ಗಣನೀಯವಾಗಿ ಏರುತ್ತಿದೆ.
ಚೀನಾ ದೇಶದ ಪಟಾಕಿ ಉದ್ಯಮ ಜಾಗತಿಕವಾಗಿ ದೊಡ್ಡ ಮಟ್ಟದ್ದು ಮತ್ತು ಭಾರತ ಅದರ ಉತ್ಪನ್ನಗಳ ದೊಡ್ಡ ಗ್ರಾಹಕ ಇತ್ತೀಚಿಗೆ ಚೀನಾ ವಸ್ತುಗಳ ಬಹಿಷ್ಕಾರದ ಟ್ರೆಂಡ್ ನಿಂದಾಗಿ ಚೀನಾ ದೇಶದ ಎಲ್ಲಾ ವಸ್ತುಗಳು ಮೇಡ್ ಇನ್ ಚೀನಾ ಅನ್ನುವುದು ಬದಲಿಸಿ ನೇಪಾಳ ಸಿಂಗಪೂರ ಮತ್ತು ಮಲೇಶಿಯಾದ ಬದಲಿ ದಾರಿಯಲ್ಲಿ ಬರುತ್ತದೆ.
Comments
Post a Comment