#ನೆಂಟನೊಬ್ಬ_ಬಿನ್ನಾಭಿಪ್ರಾಯದಿಂದ_ಆದ_ವ್ಯಾಜ್ಯದಿಂದ_ಕೇರಿಯ_ಎಲ್ಲರ_ಬಟ್ಟೆ_ಬಿಚ್ಚಿಸುವ_ಶಪಥ_ಮಾಡಿದ್ದನಂತೆ.
#ಉಮ್ಮತ್ತದ_ಗಿಡದಿಂದ_ಆದ_ಘಟನೆ
#ಸ್ವತಃ_ಅನುಭವ_ಹಂಚಿಕೊಂಡ_ಪತ್ರಕರ್ತರ_ಪೋಸ್ಟ್
ಉಮ್ಮತ್ತದ ಬೀಜ ಪುಡಿ ಮಾಡಿ ಬಂಗಿ ಸೋಪ್ಪಿನಲ್ಲಿ ಮಿಶ್ರ ಮಾಡಿ ಬೆಲ್ಲ ಸೇರಿಸಿ ಪಾನಕ ಮಾಡಿ ಕುಡಿದ ಬುಟ್ಟಿ ಮಾಡುವ ಇಡೀ ಕೇರಿಯ ಜನ ವಿಚಿತ್ರ ವತ೯ನೆ ಮಾಡಲು ಪ್ರಾರಂಬಿಸಿದ್ದರಂತೆ.
1960ರಲ್ಲಿ ಆನoದಪುರಂ ಸಮೀಪದ ಬ್ಯಾಡರ ಕೊಪ್ಪದಲ್ಲಿ ಬಿದಿರ ಬುಟ್ಟಿ,ಬತ್ತದ ಕಣಜ, ಮೀನು ಹಿಡಿಯುವ ಕೂಣಿ ಇತ್ಯಾದಿ ಮಾಡುತ್ತಿದ್ದವರ ಕೇರಿಯಲ್ಲಿ ನಡೆದ ಈ ಘಟನೆ ಮಲೆನಾಡಿನಲ್ಲಿ ದೊಡ್ಡ ಸುದ್ದಿ ಆಗಿತ್ತಂತೆ.
ಅವರನ್ನೆಲ್ಲ ಹಿಡಿದು ಎತ್ತಿನಗಾಡಿಯಲ್ಲಿ ಕಷ್ಟಪಟ್ಟು ಆನOದಪುರಂನ ಆಸ್ಪತ್ರೆಗೆ ಕರೆ ತಂದಿದ್ದರಂತೆ,ಎಲ್ಲರೂ ಸ್ತ್ರಿ ಪುರುಷರು ಮೈಮೇಲೆ ಬಟ್ಟೆ ಮಾತ್ರ ಇಟ್ಟು ಕೊಳ್ಳುತ್ತಿರಲಿಲ್ಲ೦ತೆ, ಹುಚ್ಚು ಹಿಡಿದವರಂತೆ ಅವರೆಲ್ಲರ ವತ೯ನೆ ವೈದ್ಯರಿಗೂ ಸೋಜಿಗವಾಗಿತ್ತು.
ಆಗ ಊರಿನ ಹಿರಿಯರಾದ ವಿಲೇಜ್ ಪಂಚಾಯತ್ ಚೇರ್ ಮನ್ ಶ್ರೀ ವೆಂಕಟಾಚಲಯ್ಯOಗಾರ್ (ಮಂತ್ರಿಗಳಾಗಿದ್ದ ಬದರಿನಾರಾಯಣರ ಸಹೋದರರು) ಈ ಬಗ್ಗೆ ಮುಂದೆ ನಿಂತು ಚಿಕಿತ್ಸೆ ನೀಡಿಸಿದರಂತೆ.
ಇದಕ್ಕೆ ಕಾರಣನಾದನನ್ನ ಹಿಡಿಸಿ ಶಿಕ್ಷಿಸಿದರಂತೆ, ಆತ ಈ ಬಿದಿರು ಬುಟ್ಟಿ ಮಾಡುವವರ ಸಂಬಂದಿಯಂತೆ,ಯಾವುದೊ ಬಿನ್ನಾಭಿಪ್ರಾಯದಿಂದ ಇಡೀ ಕೇರಿಯವರ ಜೊತೆ ಈತನಿಗೆ ವ್ಯಾಜ್ಯವಾಗಿ ಕೇರಿಯವರಿಂದ ಬಡಿಗೆ ತಿಂದು ಅವಮಾನ ಪಟ್ಟಿದ್ದ ಆತ ಇಡೀ ಕೇರಿಯವರ ಬಟ್ಟೆ ಬಿಚ್ಚಿಸುತ್ತೇನೆ ಅಂತ ಶಪತ ಮಾಡಿದ್ದನಂತೆ.
ಪತ್ರಕತ೯ ತಲವಾಟದ ರಾಘವೇ೦ದ್ರ ಶಮಾ೯ರ ಈ ಕೆಳಗಿನ ಪೋಸ್ಟ್ ನ ಅನುಭವ ನೋಡಿದರೆ ಅವರೆಲ್ಲರಿಗೆ ಮೈ ತುಂಬ ಕಂಬಳಿ ಹುಳ ಹತ್ತಿದ ಅನುಭವ ಆಗಿಯೇ ಬಟ್ಟೆ ಕಿತ್ತಿ ಎಸೆಯುತ್ತಿದ್ದರಿರಬೇಕು.
ಈ ವಿಚಾರ ಸುಮಾರು 40 ವಷ೯ ಚಾಲ್ತಿಯಲ್ಲಿತ್ತು, ಮೊಬೈಲ್ ಬಂದ ಮೇಲೆ ಮರೆತೆ ಹೋಗಿತ್ತು ಶಮಾ೯ರ FB ಲೇಖನದಿಂದ ಇದೆಲ್ಲ ನೆನಪಾಯಿತು.
ಇದರ ಬೀಜದ ಎಣ್ಣಿ ತಲೆಗೆ ಹಾಕಿದರೆ ಹುಚ್ಚು ಹಿಡಿಯುತ್ತೆ ಅಂತೆ.
ಶಿಶು ನಾಳ ಷರೀಪರಿಗೆ ಭಂಗಿ ಜೊತೆ ಇದರ ಬೀಜದ ಪುಡಿ ಹೊಟ್ಟೆಕಿಚ್ಚಿನಿಂದ ಒಬ್ಬ ಮಠದ ಸ್ವಾಮಿ ಹಾಕಿ ಕೊಡುತ್ತಾರೆ, ಶಿಶುನಾಳರು ಅದನ್ನ ಸೇವಿಸುತ್ತಾರೆ ಆಗ ಇವರಿಗೆ ಕಣ್ಣು ಕೆಂಪಾಗಿ ಸಂಕಟ ಆಗುತ್ತದೆ, ಅವರ ಯೋಗ ಶಕ್ತಿಯಿ೦ದ ಸರಿ ಆಗುತ್ತೆ,ಇವರ ತಪಃ ಶಕ್ತಿಯಿಂದ ತೊಂದರೆ ಕೊಟ್ಟವನೆ ತೊ೦ದರೆ ಅನುಭವಿಸುತ್ತಾರೆ ಅಂತ ಶಿಶುನಾಳರ ಪುಸ್ತಕದಲ್ಲಿದೆ.
ಉಮ್ಮತ್ತದ ಗಿಡದ ಸ್ವಾರಸ್ಯದ ಘಟನೆ ಈ ಕೆಳಗಿನ ಲೇಖನ.
FB ಲೇಖನ
ಕೃಪೆ: #ಶ್ರೀರಾಘವೇಂದ್ರಶಮಾ೯_ತಲವಾಟ.
#ಅವರ_ಸ್ವ೦ತ_ಅನುಭವ_ಓದಿ.
ನಿನ್ನ ಕಣ್ಣು ಸ್ವಲ್ಪ ಅರಿಶಿನ ಬಣ್ಣಕ್ಕೆ ಕಾಣಿಸ್ತಲಾ..! ಕಾಮಾಲೆಯಾ ಗೀಮಾಲಾಯೆ ಆಯಿಕ್ಕು ಮಾರಾಯಾ, ಔಷಧಿ ತಗ " ಅಂದರು ಮೂವತ್ವರ್ಷದ ಹಿಂದೆ ಒಬ್ಬರು.ಅವರು ಹೇಳಿದಮೇಲೆ ಸುಸ್ತು ಊಟ ಸೇರುವುದಿಲ್ಲ ಮುಂತಾದ ಸಮಸ್ಯೆ ಶುರುವಾಯಿತು. ನಿಜವಾಗಿಯೂ ಕಾಮಾಲೆಯೋ ಅಥವಾ ಅವರು ಹೇಳಿದ್ದಕ್ಕೆ ಹಾಗೆ ಆಯಿತೋ ಗೊತ್ತಿಲ್ಲ. ಯಾವುದಕ್ಕೂ ಇರಲಿ ಅಂತ ನಮ್ಮ ದೊಡ್ಡಪ್ಪ ಕಾಮಾಲೆಗೆ ಔಷಧಿಕೊಡುತ್ತಿದ್ದರು ಅವರ ಬಳಿ ಹೋದೆ. ದೊಡ್ಡಪ್ಪನ ಮಗ ಮೋಹನಣ್ಣ "ಔಷಧಿ ಆನು ಬೇಕಾದ್ರೂ ಕೊಡ್ತಿ, ಆದರೆ ನಿನಗೆ ಕಾಮಾಲೆ ಅಲ್ಲ, ಕಾಮಾಲೆ ಅಲ್ದಿದ್ರೂ ಈ ಔಷಧಿ ತಗಳ್ಳಕ್ಕು, ಆದರೆ ನಾಲ್ಕ್ ತಾಸು ಮಳ್ ಹಿಡಿತು, ಬಟ್ ಲಿವರ್ರಿಗೆ ಒಳ್ಳೆದು" ಅಂದ. "ಮಳ್ ಹಿಡಿತು ಅಂದ್ರೆ ಎಂತಾಕ್ತು?". ಅಂತ ಕೇಳಿದೆ'
" ಔಷಧಿ ತಗಂಡು ಸ್ವಲ್ಪಹೊತ್ತಿನ ನಂತರ ಕಂಬಳಿ ಹುಳ, ಬೆಕ್ಕು ಕಾಣ್ತು, ಗೋಟಾಗಾರಿನ ಮಧುರ ಹೋದ ತಿಂಗಳು ಔಷಧಿ ತಗಂಡವ " ನೋಡು ನೋಡು ಸಾಲು ಸಾಲು ಬೆಕ್ಕು ಅಂತ ಕೂಗ್ತಿದ್ದ" ಆದ್ರೆ ಅಲ್ನೋಡಿರೆ ಎಂತದೂ ಇರ್ಲೆ" ಹಂಗೆ ಭ್ರಮೆ ಹುಟ್ಟಿಸ್ತು, ಆವಾಗ ಪದೇ ಪದೇ ಮಜ್ಜಿಗೆ ಕುಡಿಯಕು, ಮಧ್ಯಾಹ್ನ ಫುಲ್ ಕಡಿಮೆ ಆಕ್ತು" ಎಂದು ಅನುಭವದ ಸುದೀರ್ಘ ಭಾಷಣ ಕೊಟ್ಟ.
"ಅಯ್ಯೋ ಭ್ರಮೆ ಸೈಯಲ, ಮಾನಸಿಕವಾಗಿ ಆನು ಗಟ್ಟಿ, ಇದೆಲ್ಲ ಡೋಂಟ್ ಕೇರ್" ವಯಸ್ಸಿಗನುಗುಣವಾದ ವಾದ ಹರಿಬಿಟ್ಟೆ.
"ಸರಿ ನಿನಗೆ ಧೈರ್ಯ ಇದ್ರೆ ಖುಷಿ, ಲಿವರ್ ಆರೋಗ್ಯ ಜಾಸ್ತಿಯಾಗ್ತು, ತಗ, ವಾರಮಕ ಕೊಡ ಔಷಧಿ ಭಾನುವಾರ ಬೆಳಗ್ಗೆ ಬಾ" ಅಂದ.
ಭಾನುವಾರ ಬೆಳಗ್ಗೆ ಹೋಗಿ ಹಸಿರು ಬಣ್ಣದ ಎರಡು ಚಮಚದಷ್ಟು ಔಷಧಿ ತಂದು ,ಮನೆಯಲ್ಲಿ ಅಮ್ಮನ ಹತ್ತಿರ " ಹಿಂಗೆ ಹಿಂಗೀಂಗೆ ಅಂಥ ಆರಿಶಿನ ಕಾಮಾಲೆಯ ಔಷಧಿ ತೆಗೆದುಕೊಳ್ಳುವ ವಿಷಯ ಹೇಳಿ, ಕುಡಿದು ಅಪ್ಪಯ್ಯನ ಮಂಚ ಹತ್ತಿ ಮಲಗಿದೆ.
ಮಲಗಿ ಅರ್ಧಗಂಟೆಯಾದರೂ ಅರಾಂ.ಓಹ್ ನಾನು ಗಟ್ಟಿ ಅಂತ ಖುಷಿಯಾಯಿತು. ಹಾಗೆ ಸುಮ್ಮನೆ ಮಲಗುವುದು ಯಾಕೆ ಎಂದು ಒಂದು ರೌಂಡ್ ಕೊಟ್ಟಿಗೆವರೆಗೆ ಹೋದೆ.ಮತ್ತೆ ಮಲಗುವ ಮನಸ್ಸಾಯಿತು. ಮಲಗಿದೆ, ಕಣ್ಮುಚ್ಚಿದರೆ ಎತ್ತಿ ಎತ್ತಿ ಒಗೆದಂತಾಯಿತು. ಕಣ್ಬಿಟ್ಟೆ, ಹೊದ್ದ ಕಂಬಳಿಯ ಮೇಲೊಂದು ದಪ್ಪನೆಯ ಕಂಬಳಿಹುಳ ನಿಧಾನ ಹರೆದು ಹೋಗುತ್ತಾ ಇತ್ತು. ಥೋ ದರಿದ್ರಅಂದು ತೋರ್ಬೆರಳು ಮಡಚಿ ಪಟಕ್ಕನೆ ಹೊಡೆದೆ ,ನೊ ಕಂಬಳಿ ಹುಳ ಇಲ್ಲ. ತಕ್ಷಣ ನೆನಪಾಯಿತು ಓಹೋ ಔಷಧಿಯ ಪ್ರಭಾವ ಹೀಗೆಲ್ಲ ಅಂತ. ಮತ್ತೆ ಕಣ್ಮುಚ್ಚಿದೆ, ಊಹ್ಞೂ ನಿದ್ರೆ ಮಾಡಲಾಗದು ಎತ್ತಿಬೀಸಿ ಒಗೆದ ಅನುಭವ. ಕಣ್ಮಿಟ್ಟೆ ಈ ಬಾರಿ ಹತ್ತಾರು ಕಂಬಳಿ ಹುಳ ಹರೆದು ಹೋಗುತ್ತಿತ್ತು.ಭ್ರಮೆ ಖಂಡಿತಾ ಅಲ್ಲ ಅಂತನಿಸಿ ಕೊಡವಿದೆ ಕಂಬಳಿಯ ,ಒಂದೇ ಒಂದು ಹುಳವೂ ಇಲ್ಲ. ಮತ್ತೆ ಕಣ್ಮುಚ್ಚಿದೆ. ಈ ಬಾರಿ ಕ್ಷಣವೂ ಕಣ್ಮುಚ್ಚಲಾಗಲಿಲ್ಲ, ಗುಡ್ಡ ಹತ್ತಿ ಜೋರಾಗಿ ಓಡಿಹೋಗೋಣ ಅನಿಸಲು ಶುರುವಾಯಿತು. ಪಟಕ್ಕನೆ ಎದ್ದೆ ಜಗಲಿಯ ಬಾಗಿಲವರೆಗೆ ಬಂದೆ, ಉಫ್ ಔಷಧಿಯ ಪ್ರಭಾವ ಅಂತ ನೆನಪಾಗಿ ಮತ್ತೆ ಮಂಚ ಹತ್ತಿದೆ. ಮಲಗಿದೆ ಆದರೆ ನಿದ್ರೆಯಿರಲಿ ಮಲಗಲೂ ಆಗದ ಚಡಪಡಿಕೆ, ಈ ಬಾರಿ ಕಂಬಳಿ ಹುಳ ಗೋಡೆಯ ತುಂಬೆಲ್ಲಾ ಕಾಣಿಸತೊಡಗಿತು.ಅಷ್ಟರಲ್ಲಿ ಮಜ್ಹಿಗೆ ಕುಡಿಯಬೇಕೆಂಬುದು ನೆನಪಾಯಿತು, ಅಮ್ಮನ ಹತ್ತಿರ ಮಜ್ಜಿಗೆ ಕೊಡು ಎಂದೆ. ಆವಾಗ ಮೋಹನಣ್ಣ ಅನುಭವ ಇಲ್ಲದೆ ಜಾಸ್ತಿ ಡೋಸ್ ಕೊಟ್ಟುಬಿಟ್ಟನಾ ಎಂಬ ಅನುಮಾನ ಕಾಡಿ ಸಾಯುವ ಭಯ ಕಾಡತೊಡಗಿತು.ಅಮ್ಮನ ಹತ್ತಿರ. ಇದೇಕೋ ಯಡವಟ್ಟಾಯಿತು ಒಂಚೂರು ಮೋಹನಣ್ಣನ ಬರಹೇಳು ಪೋನ್ ಮಾಡಿ ಅಂತ ಹೇಳಿ ಮಜ್ಜಿಗೆ ಕುಡಿದು ಮಲಗಲು ಮಂಚದ ಬಳಿ ಹೋದರೆ ಮಂಚದ ತುಂಬೆಲ್ಲಾ ಕಂಬಳಿ ಹುಳದ ರಾಶಿ. ಅವುಗಳಲ್ಲಿ ಕೆಲವು ನನ್ನತ್ತ ನೋಡಿ ಹಲ್ಕಿಸಿಯುತ್ತಿತ್ತು, ಕೆಲವು ಮುಸಿಡಿ ಉದ್ದ ಮಾಡುತ್ತಿತ್ತು. ಧೈರ್ಯ ಮಾಡಿ ಪಟಾರನೆ ಹೊಡೆದೆ ಎಲ್ಲಾ ಮಾಯವಾಯಿತು. ಏನಾದರಾಗಲಿ ಅಂತ ಮಲಗಿದೆ ಕೊಂಚ ಒರಕು ಬಂದಂತಾಯಿತು. ಸ್ವಲ್ಪ ಸಮಯದ ನಂತರ ಕಣ್ಬಿಟ್ಟರೆ ಮೋಹನಣ್ಣ "ಏನಾ..... :) ? " ಎನ್ನುತ್ತಾ ಎದುರು ನಿಂತಿದ್ದ. ಮಜ್ಜಿಗೆಯ ಪ್ರಭಾವದಿಂದ ಕೊಂಚ ನಿಯಂತ್ರಣಕ್ಕೆ ಬಂದಿತ್ತು ಔಷಧಿಯ ಪ್ರಭಾವ. " ಎಂತ ಡೋಸು ಜಾಸ್ತಿಯಾಗಲ್ಲೆ ಎಂತೂ ಇಲ್ಲೆ ಸುಮ್ನೆ ಮಲಗು ಸರಿಯಾಕ್ತು" ಅಂತ ಹೇಳಿ ಹೋದ ಮೋಹನಣ್ಣ.
ಮತ್ತೆ ಮತ್ತೆ ಮಜ್ಜಿಗೆ ಕುಡಿದು ಮಲಗಿದೆ ನಿಧಾನ ನಿದ್ರೆ ಆವರಿಸಿತು. ಕನಸು ಕನಸು ಒಂದಕ್ಕೊಂದು ಸಂಬಂಧವಿಲ್ಲದ್ದು. ಗಟ್ಟಿ ಎಚ್ಚರವಾಗಿದ್ದು ಮತ್ತೆ ಒಂದು ಗಂಟೆಗೆ. ಆಗ ನಿರಾಳವಾಗಿತ್ತು. ಮಜ್ಜಿಗೆ ಅನ್ನ ಊಟ ಮಾಡಿ ಮಲಗಿದೆ, ಸೊಂಪು ನಿದ್ರೆ ಎಚ್ಚರವಾದಾಗ ಐದು ಗಂಟೆ. ಎಲ್ಲ ಸ್ವಚ್ಛ ನಿರಾಳವಾಗಿತ್ತು. ಸರಿ ಎಂದು ಕಾಫಿಕುಡಿದು ಪೇಪರ್ ಓದೋಣ ಅಂತ ಕುಂತರೆ ಒಂದಕ್ಷರವೂ ಕಾಣದು ಎಲ್ಲಾ ಮಬ್ಬು ಮಬ್ಬು. ಅಯ್ಯ ಒಂದು ಮಾಡಲು ಹೋಗಿ ಮತ್ತೊಂದಾಯಿತಾ ಎಂಬ ಭಯ ಕಾಡತೊಡಗಿತು. ನನ್ನ ಅವತಾರ ಬೆಳಗ್ಗೆಯಿಂದ ನೋಡಿದ್ದ ಅಪ್ಪಯ್ಯ " ಎಂತೂ ಆಗಲ್ಲೆ ಮಾರಾಯ, ಕಣ್ಣು ಸರಿ ಇದ್ದು ಎಲ್ಲಾ ಸರಿ ಇದ್ದು, ಔಷಧಿ ತಗಂಡಿದ್ದಕ್ಕೆ ಕಣ್ ಕಲ್ಡಿರ್ತು ಅದು, ಬೇಕಾರೆ ಎನ್ಮನೆ ಚಾಳಿಸ್ ಕನ್ನಡಕ ಹಾಕ್ಯಂಡು ನೋಡು" ಎಂದು ಅರ್ದ ಗದರಿದ ದನಿಯಲ್ಲಿ ಬಂತು. ಸರಿ ಅಂತ ಅಪ್ಪಯ್ಯನ ಕನ್ನಡಕ ಹಾಕಿಕೊಂಡು ಓದಿದೆ. ಎಲ್ಲವೂ ಸ್ಪಷ್ಟ. ಅಬ್ಬ ಗಿಡದ ಔಷಧಿಯೇ ಅಂದೆನಿಸಿತು. ಮಾರನೇ ದಿವಸ ಲಕಲಕ ವಾವ್.
ಇಷ್ಟೆಲ್ಲಾ ಘಟನೆಗೆ ಕಾರಣವಾದ ಆ ಔಷಧಿಯ ಗಿಡವೇ ಈ ಪಟದಲ್ಲಿದ್ದುದು. ಅದರ ಹೆಸರು ಉಮ್ಮಾತ. ಈಗ ನಿಮಗೆ ಅರ್ಥವಾಗಿರಬಹುದು ಪ್ರಕೃತಿಯಲ್ಲಿ ಏನೇಲ್ಲಾ ಇದೆ ಅಂತ.
#ಕೊನೆಯದಾಗಿ: ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನೋಡಿಕೊಳ್ಳಲು ಮಾತ್ರಾ ಬೇರೆಯವರ ಕಣ್ಣೇ ಬೇಕು.
Comments
Post a Comment