#ಕೊರಾನಾ ಲಾಕ್ ಡೌನ್ ಡೈರಿ- ಲೆಟರ್ ನಂ 4. (ಕೆ.ಅರುಣ್ ಪ್ರಸಾದ್) (25-ಮಾಚ್೯ - 2020 ರಿಂದ 31 - ಮಾಚ್೯ - 2020 #21ದಿನದಲಾಕ್ಡೌನ್ #ಮದ್ಯಪಾನಿಗಳಮೇಲಿನಪರಿಣಾಮದಸಂಶೋದನೆಗೆಕಾರಣವಾಗಿದೆ. ಇವತ್ತಿಗೆ ಅಂದರೆ 31 ಮಾಚ್ 2020 ರ ಮಧ್ಯರಾತ್ರಿ ತನಕ ಇದ್ದ ಮದ್ಯ ಮಾರಾಟ ನಿಷೇದ ನಾಳೆ ಅಂದರೆ ಏಪ್ರಿಲ್ 1 ರಿಂದ ತೆರವು ಆಗಲಿದೆ ಎಲ್ಲಾ ಸಕಾ೯ರಗಳು ನಿಯಮಿತ ಸಮಯದಲ್ಲಿ ಮಧ್ಯಮಾರಾಟ ಮಾಡಲಿದೆ ಎಂಬ ಆಶಾಭಾವನೆ ಮದ್ಯಪಾನಿಗಳಲ್ಲಿ ಇತ್ತು. ಇದಕ್ಕೆ ಪೂರಕವಾಗಿ ಕುಡುಕರು ಕೇರಳದಲ್ಲಿ ಆತ್ಮಹತ್ಯ ಮಾಡಿಕೊಂಡಿದ್ದು, ಖ್ಯಾತ ಚಿತ್ರ ನಟರು ರಾಜಕಾರಣಿಗಳು ಮನೋವೈದ್ಯರು ಮದ್ಯಪಾನ ಸಂಪೂಣ೯ ನಿಲ್ಲಿಸುವುದರಿಂದ ಅನೇಕರ ಆರೋಗ್ಯ ಮಾರಕವಾಗಲಿದೆ ಎಂದು ಎಚ್ಚರಿಸಿದ್ದರು. ಆದರೆ ಏಪ್ರಿಲ್ 14 ರ ವರೆಗೆ ಮದ್ಯ ಮಾರಾಟ ನಿಷೇದ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿದೆ. ಕೇರಳ ಮತ್ತು ಪಂಜಾಬ್ ರಾಜ್ಯದಲ್ಲಿ ಅವಶ್ಯಕ (Essential) ಆಹಾರ ಪಟ್ಟಿಯಲ್ಲಿ ಮಧ್ಯ ಸ್ಥಾನ ಪಡೆದಿದೆ. ಇಡೀ ದೇಶದಲ್ಲಿ 2019 ರಲ್ಲಿ ಅಬಕಾರಿ ಆಧಾಯ 90 ಸಾವಿರ ಕೋಟಿ ಅಂದರೆ ಇದರ ವ್ಯವಹಾರದ ವಿಸ್ತಾರ 100 ಲಕ್ಷ ಕೋಟಿಗೂ ಹೆಚ್ಚು ಇದರಿ೦ದ ಸೃಷ್ಟಿ ಆಗುವ ನೇರ ಮತ್ತು ಪರೋಕ್ಷ ಉದ್ಯೋಗ ಇನ್ನೆಷ್ಟು ಯೋಚಿಸಿ. ಜನತಾ ಕಪ್ಯೂ೯ ಅಂದಾಗಲೆ ಪಂಜಾಬ್ ಮತ್ತು ಉತ್ತರ ಭಾರತೀಯ ರಾಜ್ಯದಲ್ಲಿ ಪ್ರತಿ ಕುಟು೦...