#1960ರ_ಆನಂದಪುರO_ಸಮೀಪದ_ಬ್ಯಾಡರ_ಕೊಪ್ಪದ_ಘಟನೆಗೆ_60ವರ್ಷದ_ನಂತರ_ಉತ್ತರ_ಸಿಕ್ಕಿತು #ನೆಂಟನೊಬ್ಬ_ಬಿನ್ನಾಭಿಪ್ರಾಯದಿಂದ_ಆದ_ವ್ಯಾಜ್ಯದಿಂದ_ಕೇರಿಯ_ಎಲ್ಲರ_ಬಟ್ಟೆ_ಬಿಚ್ಚಿಸುವ_ಶಪಥ_ಮಾಡಿದ್ದನಂತೆ. #ಉಮ್ಮತ್ತದ_ಗಿಡದಿಂದ_ಆದ_ಘಟನೆ #ಸ್ವತಃ_ಅನುಭವ_ಹಂಚಿಕೊಂಡ_ಪತ್ರಕರ್ತರ_ಪೋಸ್ಟ್ ಉಮ್ಮತ್ತದ ಬೀಜ ಪುಡಿ ಮಾಡಿ ಬಂಗಿ ಸೋಪ್ಪಿನಲ್ಲಿ ಮಿಶ್ರ ಮಾಡಿ ಬೆಲ್ಲ ಸೇರಿಸಿ ಪಾನಕ ಮಾಡಿ ಕುಡಿದ ಬುಟ್ಟಿ ಮಾಡುವ ಇಡೀ ಕೇರಿಯ ಜನ ವಿಚಿತ್ರ ವತ೯ನೆ ಮಾಡಲು ಪ್ರಾರಂಬಿಸಿದ್ದರಂತೆ. 1960ರಲ್ಲಿ ಆನoದಪುರಂ ಸಮೀಪದ ಬ್ಯಾಡರ ಕೊಪ್ಪದಲ್ಲಿ ಬಿದಿರ ಬುಟ್ಟಿ,ಬತ್ತದ ಕಣಜ, ಮೀನು ಹಿಡಿಯುವ ಕೂಣಿ ಇತ್ಯಾದಿ ಮಾಡುತ್ತಿದ್ದವರ ಕೇರಿಯಲ್ಲಿ ನಡೆದ ಈ ಘಟನೆ ಮಲೆನಾಡಿನಲ್ಲಿ ದೊಡ್ಡ ಸುದ್ದಿ ಆಗಿತ್ತಂತೆ. ಅವರನ್ನೆಲ್ಲ ಹಿಡಿದು ಎತ್ತಿನಗಾಡಿಯಲ್ಲಿ ಕಷ್ಟಪಟ್ಟು ಆನOದಪುರಂನ ಆಸ್ಪತ್ರೆಗೆ ಕರೆ ತಂದಿದ್ದರಂತೆ,ಎಲ್ಲರೂ ಸ್ತ್ರಿ ಪುರುಷರು ಮೈಮೇಲೆ ಬಟ್ಟೆ ಮಾತ್ರ ಇಟ್ಟು ಕೊಳ್ಳುತ್ತಿರಲಿಲ್ಲ೦ತೆ, ಹುಚ್ಚು ಹಿಡಿದವರಂತೆ ಅವರೆಲ್ಲರ ವತ೯ನೆ ವೈದ್ಯರಿಗೂ ಸೋಜಿಗವಾಗಿತ್ತು. ಆಗ ಊರಿನ ಹಿರಿಯರಾದ ವಿಲೇಜ್ ಪಂಚಾಯತ್ ಚೇರ್ ಮನ್ ಶ್ರೀ ವೆಂಕಟಾಚಲಯ್ಯOಗಾರ್ (ಮಂತ್ರಿಗಳಾಗಿದ್ದ ಬದರಿನಾರಾಯಣರ ಸಹೋದರರು) ಈ ಬಗ್ಗೆ ಮುಂದೆ ನಿಂತು ಚಿಕಿತ್ಸೆ ನೀಡಿಸಿದರಂತೆ. ಇದಕ್...