#ಕೋಳಿ ಅಂಕಕ್ಕೆ ಜೈಲು? ಕುದುರೇ ರೇಸ್, ಕ್ಯಾಸಿನೋಗಳಿಗೆ ಕೆಂಪು ಕಾಪೆ೯ಟ್ ಸ್ವಾಗತ !# ಶಿವಮೊಗ್ಗ ಜಿಲ್ಲೆಯ ಹೊಸನಗರದ ಮಾಜಿ ಶಾಸಕರಾದ ಸ್ವಾಮಿರಾವ್ ವಿಶಿಷ್ಟ ರಾಜಕಾರಣಿ, ಈಗಲೂ ಕೃಷಿಯಿಂದ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ ಇವರ ಬಗ್ಗೆ ಇವರ ಸಮಕಾಲಿನ ಗೆಳೆಯರಾದ ಸಾಹಿತಿ ಕೋಣಂದೂರು ವೆಂಕಪ್ಪ ಗೌಡರು, ಮಾಜಿ ಶಾಸಕರಾದ ಪಟಮಕ್ಕಿ ರತ್ನಾಕರ್ ಒಂದು ಪುಸ್ತಕ ತರುವ ಪ್ರಯತ್ನದಲ್ಲಿದ್ದವರಿಗೆ ನಾನು ಶಿವಮೊಗ್ಗದ ಶೃ೦ಗೇಶರ ಜನ ಹೋರಾಟ ಪತ್ರಿಕೆಯಲ್ಲಿ ಅಂಕಣದಲ್ಲಿ ಬರೆದಿದ್ದ ಸ್ವಾಮಿರಾವ್ ಬಗ್ಗೆಯ ಲೇಖನ ಸದರಿ ಪುಸ್ತಕಕ್ಕೆ ಬೇಕು ಎಂದು ಕೇಳಿದರು. ಕಾರಣವೇನೆಂದರೆ ಆಗ ಶಾಸಕರಾಗಿದ್ದ ಸ್ವಾಮಿ ರಾವ್ರರವರು ಅವರ ವಿಧಾನಸಭಾ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಮೂಲದವರಾದ ಪೂಜಾರರು, ಮೊಗವೀರರು, ಬಂಟರು, ದೇವಾಡಿಗರು ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರೆಲ್ಲರೂ ಕೋಳಿ ಅಂಕದ ಅಭಿಮಾನಿಗಳು, ಸುಗ್ಗಿ ಕಾಲದಲ್ಲಿ, ಹುಣ್ಣಿಮೆಗಳಲ್ಲಿ ಸುತ್ತಮುತ್ತಲಿನವರೆಲ್ಲ ಸೇರಿ ಈ ಕ್ರೀಡೆ ನಡೆಸುತ್ತಾರೆ, ಅಲ್ಲಿ ಮದ್ಯ, ಬೀಡಿ, ಸಿಗರೇಟು, ಚಹಾ, ನೀರು ದೊಸೆ ಕೋಳಿಪಲ್ಲೆ ಮಾರಾಟದ ಅಂಗಡಿ ಹೋಟೆಲ್ಗಳು ತಾತ್ಕಾಲಿಕವಾಗಿ ಬರುತ್ತದೆ. ಅಂಕದ ಕೋಳಿ ಸಾಕಿದ ಸ್ಟಾರ್ ಆಟಗಾರರು ತಮ್ಮ ಕೋಳಿಗಳ ಜೊತೆ ಬಗಲಿಗಳೆoಬ ಸಹಾಯಕರ ಜೊತೆ ಬರುವ ಗತ್ತು ನೋಡಬೇಕು, ಇದನ್ನ ನೋಡಲು ಬರುವ ಅಭಿಮಾನಿಗಳು, ಗೆಲ್ಲುವ ಕೋಳಿಗಳ ಮೇಲೆ ಬೆಟ್ಟಿ...