# ಉಡುಪಿಯ ಮಟ್ಟು ಗುಳ್ಳದ ಮೂಲ ಬಲ್ಲಿರಾ# ಉಡುಪಿ ಗುಳ್ಳ ಎಂದರೆ ದಂಡನೆಯ ಬದನೆಕಾಯಿ ಅಂತ ಎಲ್ಲರಿಗೂ ಗೊತ್ತು ಆದರೆ ಇಲ್ಲಿನ ಮಟ್ಟು ಗುಳ್ಳಕ್ಕೆ ಬೇರೆಯದೇ ಇತಿಹಾಸ, ಆಧ್ಯಾತ್ಮದ ನಂಟು, ರುಚಿ ಇದೆ. ಹಾಗಾಗಿಯೆ ಇದಕ್ಕೆ ಜಿಯೋಗ್ರಾಫಿಕಲ್ ಇಂಡಿ ಕೇಶನ್ ಟ್ಯಾಗ್ ಇದೆ. ಉಡುಪಿಯಲ್ಲಿ ಉಡುಪಿ ಗುಳ್ಳ ಅಂತ ಬಕೂ೯ರ್, ಕುಂದಾಪುರದಲ್ಲಿ ಬೆಳೆದ ಗುಳ್ಳಗಳ ಮಾರಾಟ ಜಾಸ್ತಿ ಆದರೆ ಮಟ್ಟು ಗುಳ್ಳ ಮಾತ್ರ ಎಲ್ಲಾ ಕಡೆ ಸಿಗುವುದಿಲ್ಲ. ಉಡುಪಿಯಿ೦ದ ಮ೦ಗಳೂರು ರಾಷ್ಟ ಹೆದ್ದಾರಿಯಲ್ಲಿ ಕಟಪಾಡಿಯಿ೦ದ ಬಲಕ್ಕೆ ತಿರುಗಿದರೆ ಮಟ್ಟು ಎಂಬ ಹಳ್ಳಿ ಇದೆ ಇಲ್ಲಿ ಉದ್ಯಾವರ ನದಿ ಮತ್ತು ಸ್ವಣ೯ ನದಿ ಹರಿಯುವ ಪ್ರದೇಶದ ಮದ್ಯದ ಸುಮಾರು 500 ಎಕರೆ ಮರಳು ಮಿಶ್ರ ಮಣ್ಣಿನ ಭೂಮಿ ಈ ಗುಳ್ಳ ಬೆಳೆಯುವ ಪ್ರದೇಶ. ಪ್ರತಿ ಹೆಕ್ಟರ್ ಗೆ ಅಂದಾಜು 40 ಟನ್ ಇಳುವರಿ ಬರುವ ಈ ಬೆಳೆ ಸೆಪ್ಟೆಂಬರ್/ಅಕ್ಟೋಬರ್ ನಲ್ಲಿ ಕೊಯ್ಲಗಿ ಬರುತ್ತೆ, ರಾಸಾಯನಿಕ ಬಳಸದೆ ಹೆಚ್ಚು ಮೀನು ಗೊಬ್ಬರದಲ್ಲಿ ಇದನ್ನ ಬೆಳೆಸುತ್ತಾರೆ, ಯಾವುದೇ ವಿಷದ ಕ್ರಿಮಿನಾಶಕ ಬಳಸುವುದಿಲ್ಲ ಹಾಗಾಗಿ ಈ ಮಟ್ಟು ಗುಳ್ಳ ಸಾವಯವ ತರಕಾರಿ ಮತ್ತು ಇದರ ರುಚಿ ಅತ್ಯಂತ ವಿಭಿನ್ನ . ಈಗ ಇದನ್ನ ಬೆಳೆಸುವವರ ಸಂಖ್ಯೆ ಕಡಿಮೆ ಆಗಿದೆ, 2011ರಲ್ಲಿ ಇದರ ಪ್ರಾದೇಶಿಕ ವಿಭಿನ್ನತೆ, ಹಿನ್ನೆಲೆಗೆ ಜಿಯಾಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಹೊಂದಿದ್ದು ಕನಾ೯ಟಕದ ಈ ತರ...