Skip to main content

Posts

Showing posts from October, 2020

ಮದು ಲಾಯರ್ ಶಿವಮೊಗ್ಗದ ಪ್ರಖ್ಯಾತ ವಕೀಲರು ಮತ್ತು ಆಪತ್ಬಾ೦ದವರು

#ಶಿವಮೊಗ್ಗದ_ಪ್ರಖ್ಯಾತ_ವಕೀಲರಾದ_ಮದುಲಾಯರ್.    ಇವತ್ತು ಅವರು FBಯಲ್ಲಿ ತಮ್ಮ ಮತ್ತು ತಮ್ಮ ಶ್ರೀಮತಿಯೊಂದಿಗಿನ ಬಾವ ಚಿತ್ರ ಹಾಕಿದ್ದು ನೋಡಿ ನನ್ನ ನೆನಪು 25 ವರ್ಷದ ಹಿಂದಕ್ಕೆ ಓಡಿತು.   ನನ್ನ ಅನೇಕ ಸಂಕಷ್ಟಗಳಿಗೆ ಆಗ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ ಕಾರಣ ಆಗಿತ್ತು.   ಬಂಗಾರಪ್ಪನವರು ನನಗೆ ನೀಡಿದ ಪ್ರೋತ್ಸಾಹ ಕಾಗೋಡು ತಿಮ್ಮಪ್ಪರನ್ನ ಕೆರಳಿಸಿತು ಅವರ ಸುತ್ತಲೂ ಇದ್ದವರು ನನ್ನ ಮೇಲೆ ಮುರುಕೊಂಡು ಬಿದ್ದ ಪರಿ ಇತ್ತಲ್ಲ ಅದನ್ನು ಜೀವಮಾನದಲ್ಲಿ ಮರೆಯಲಾರದ ದಿನಗಳು.    ಮಂತ್ರಿಗಳ ಅಧಿಕಾರ ಅವರ ಹಿಂಬಾಲಕರು ಬಳಸಿಕೊಂಡು ದ್ವೇಷ ಸಾಧನೆ ಮಾಡಿದರೆ ಅದಕ್ಕೆ ಅಧಿಕಾರಿಗಳೂ ಒಲೈಸುವ ಲಾಭ ಪಡೆಯಲು ಅವರವರಲ್ಲೇ ಪೈಪೋಟಿ ಉಂಟಾಗಿ ನನ್ನ ಮತ್ತು ನನ್ನ ಸಂಗಡಿಗರ ಮೇಲೆ ವಿವಿದ 22 ಕೇಸ್ ಸಾಗರದಲ್ಲಿ, ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ 4 ಕೇಸ್ ಗಳು,ರೌಡಿ ಶೀಟರ್ ದಾಖಲೆ, ವ್ಯವಹಾರಗಳಲ್ಲಿ ತೊಂದರೆ ಇದರಿಂದ ನನ್ನ ವ್ಯವಹಾರ ನೆಲ ಕಚ್ಚಿತ್ತು.    ರೈಸ್ ಮಿಲ್ ಕೆ.ಎಸ್.ಪ್ ಸಿ ಹರಾಜಿಗೆ ತಂದಿತ್ತು ಅಲ್ಲಿ ವ್ಯವಸ್ಥಾಪಕ ಆದವರು ನನ್ನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಾಮಾನ್ಯ ಕುಟುಂಬದ ಪ್ರತಿಭಾವಂತ ಯುವಕ ಆದರೆ ಆತನನ್ನು ವಿರೋದಿಗಳು ಬಳಸಿಕೊಂಡಿದ್ದರಿಂದ ಇಲ್ಲದ ತೊಂದರೆ ಅವಮಾನ ಆತ ಸತತವಾಗಿ ನೀಡಿದ ಇದಕ್ಕಾಗಿ ಸಕಾ೯ರದ ಜೀಪನ್ನು ಬಳಸುತ್ತಿದ್ದರು.   ಮನೆ ಸಾಗರದ SBI ಜಪ್ತಿಗೆ...

ಒಂದು ಕಾಲದ ಸಾಗರ ಪಟ್ಟಣದ ಪ್ರಸಿದ್ದ ನಾಟಿ ಕೋಳಿ ಮತ್ತು ಅಕ್ಕಿ ರೊಟ್ಟಿ ಹೋಟೆಲ್

#ಸಾಗರ_ಪಟ್ಟಣದ_ಕುಂಟು_ಶೆಟ್ಟರೆಂದೇ_ಪ್ರಸಿದ್ದರಾದ_ಶೆಟ್ಟರ_ನಾಟಿ_ಕೋಳಿ ಜೈ ಹಿಂದ್_ಹೋಟೆಲ್     ಈಗಿನ ಸಾಗರದ ಮಧ್ಯ ಬಸ್ ಸ್ಟ್ಯಾಂಡ್ ನಲ್ಲಿ ಶೆಟ್ಟರ ನಾಟಿ ಕೋಳಿ ಹೋಟೆಲ್ ಕೆಲವು ದಶಕಗಳ ಕಾಲ ಸುಪ್ರಸಿದ್ಧ ಆಗಿತ್ತು.   ಈ ಶೆಟ್ಟರಿಗಾಗಿಯೇ ನಾಟಿ ಕೋಳಿ ಸಾಕುವವರು ಸಾಗರ ತಾಲ್ಲೂಕಿನ ಹೆಗ್ಗೋಡು ಆವಿನಳ್ಳಿಗಳಲ್ಲಿ ಇದ್ದರು.   ನಾಟಿ ಕೋಳಿ ಸಾರು, ಅಕ್ಕಿ ರೊಟ್ಟಿ ಮತ್ತು ಅನ್ನದ ಜೊತೆ ಸಾಗರ, ಹೊಸನಗರ ಮತ್ತು ಸೊರಬ ತಾಲ್ಲೂಕಿನ ಜನರಿಗೆ ಆಕಷ೯ಣೀಯ ಹೋಟೆಲ್ ಆಗಿತ್ತು.   12 ಅಡಿ ಅಗಲ 50 ಅಡಿ ಉದ್ದದ ಸಣ್ಣ ಜಾಗದಲ್ಲಿ ಇವರ ಹೋಟೆಲ್ ಸುಮಾರು 3 ದಶಕ ಪ್ರಖ್ಯಾತಿ ಪಡೆದಿತ್ತು.   1996 ರ ನಂತರ ಇವರ ವೃದ್ಧಾಪ್ಯದಿಂದ ಮತ್ತು ಸದರಿ ಜಾಗದಲ್ಲಿ ಹೊಸ ಕಟ್ಟಡ ಕಾಮಗಾರಿಗಾಗಿ ಶೆಟ್ಟರು ಹೋಟೆಲ್ ತ್ಯಜಿಸಿದರಂತೆ, ಅವರ ಮೂಲ ಊರಾದ ಕರಾವಳಿಯ ಹಳ್ಳಿಯಲ್ಲಿ ಸುಸಜ್ಜಿತ ಮನೆ ಆಸ್ತಿ ಮಾಡಿದ್ದಾರೆ ಅಂತ ಜನ ಹೇಳುತ್ತಿದ್ದನ್ನ ಕೇಳಿದ್ದೆ.   ನಂತರ ಈ ರೀತಿಯ ಹೋಟೆಲ್ ಸಾಗರದಲ್ಲಿ ಯಾವುದೂ ಬರಲಿಲ್ಲ ಬೆಂಗಳೂರಿನಲ್ಲಿ ಇಂತಹ ಹೊಸರೀತಿಯ ಹೋಟೆಲ್ ಗಳು ಪ್ರಸಿದ್ಧವಾಗಿದೆ.   ಸ್ಥಳಿಯವಾಗಿ ಬೆಳೆಸುವ ನಾಟಿ ಕೋಳಿ ಮತ್ತು ಸ್ಥಳಿಯವಾಗಿ ಬೆಳೆಯುವ ಅಕ್ಕಿ ಇದನ್ನು ಬಳಸಿ ಸ್ವಯಂ ಉದ್ಯೋಗ ಮಾಡುವ ಸಾಧ್ಯತೆ ಕೆಲವು ದಶಕದ ಹಿಂದೆಯೇ ಶೆಟ್ಟರು ತೋರಿಸಿ ಕೊಟ್ಟಿದ್ದಾರೆ.    ಅವರು ನಡೆಯುವಾಗ ಸಣ್ಣದಾಗಿ ಕು೦ಟುತ್ತ...

ಶಿಲಾಯುಗದ ಕಿರಿಧಾನ್ಯ ಈಗ ಸಿರಿ ಧಾನ್ಯ, ರೋಮನರ ಇಷ್ಟ ಪದಾಥ೯ದ ರೊಟ್ಟಿ ಈಗ ಬೊಜ್ಜು ಮದುಮೇಹಕ್ಕೆ ರಾಮ ಭಾಣ

#ಗ೦ಗೋದಕ_ಕುಡಿಯುವ_ನೀರಿನ_ಉದ್ದಿಮೆದಾರರು_ಶಿವಮೊಗ್ಗದ_ಐಟಿ_ಪಾಕ೯ನ_ಉದ್ದಿಮೆದಾರ_ನವೀನ್.       ನನ್ನ ತೂಕ ಇಳಿಸುವ ಪ್ರಯತ್ನಕ್ಕೆ ಸಹಕರಿಸಲು ಮೊನ್ನೆ ನವಣೆ, ಸಜ್ಜೆ , ಸಾಮೆ, ಬರಗು, ಊದಲ, ಅಕ೯ ಮತ್ತು ಕೊರಲೆ ಎಂಬ ಸಿರಿಧಾನ್ಯ ಎಂಬ ಶಿಲಾಯುಗದ ಕಿರಿದಾನ್ಯ ಉಡುಗೊರೆಯಾಗಿ ನೀಡಿ ಹೋಗಿದ್ದರು.   ನನಗೆ ಇದರ ದೊಸೆಗಿಂತ ರೊಟ್ಟಿ ತುಂಬಾ ಹಿಡಿಸಿದೆ ಇವತ್ತು ಇದರದ್ದೇ ನನ್ನ ಉಪಹಾರ ಆಯಿತು.   ರೋಮನ್ನರು ಈ ಕಿರಿ ಧಾನ್ಯದ ರೊಟ್ಟಿ ತಿನ್ನುತ್ತಿದ್ದರಂತೆ, ಶಿಲಾಯುಗದಲ್ಲಿ ಈ ಕಿರಿದಾನ್ಯದ ಬಳಕೆ ಇತ್ತಂತೆ.   60ಕ್ಕಿಂತ ಹೆಚ್ಚಿನ ಕಿರಿದಾನ್ಯದ ಪ್ರಬೇದದಲ್ಲಿ ಕೆಲವು ಮಾತ್ರ ಈಗ ದೊರೆಯುತ್ತಿದೆ.   ಅತ್ಯುತ್ತಮ ಪ್ರೋಟಿನ್ ಯುಕ್ತ, ಹೃದಯದ ಆರೋಗ್ಯಕ್ಕೆ ಸಹಕಾರಿ ಮತ್ತು ತೂಕ ಇಳಿಸಲು ಸಹಕಾರಿ ಆದ ಕಿರಿಧಾನ್ಯ ಉರುಪ್ ಸಿರಿಧಾನ್ಯ ಬೊಜ್ಜು ನಿವಾರಣೆ ಮತ್ತು ಡಯಾಬಿಟಿಕ್ ನಿಯ೦ತ್ರಣಕ್ಕೂ ಸಹಕಾರಿ ಅಂತ ಹೇಳುತ್ತಾರೆ ಇದನ್ನು ಸ್ಟತಃ ಬಳಸಿ ಸುಮಾರು 40 kg ತೂಕ ಇಳಿಸಿಕೊಂಡಿರುವ ಐಟಿ ಮಿತ್ರ ನವೀನ್ ನಮ್ಮೆದುರು ಇದ್ದಾರೆ.

ಕೊಡಚಾದ್ರಿಯ ಮೂಲ ಮೂಕಾಂಬಿಕ ಸನ್ನಿದಾನದಲ್ಲಿ ನೆರವೇರಿಸುವ ಶಕ್ತಿ ಪೂಜೆಗೆ ಮಹತ್ವ ಇದೆ

#ಕೊಡಚಾದ್ರಿಯ_ಮೂಲಮೂಕಾಂಬಿಕ_ಸನ್ನಿದಾನದಲ್ಲಿನ_ಶಕ್ತಿಪೂಜೆ     ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟದಲ್ಲಿರುವ ಮೂಲ ಮೂಕಾಂಬಿಕ ದೇವರ ಸನ್ನಿದಿಗೆ ಪುರಾಣದ ಇತಿಹಾಸ ಇದೆ ಆದರೆ ಇದು ನಮ್ಮ ರಾಜ್ಯದ ಕನ್ನಡಿಗರಿಗಿಂತ ಕೇರಳ ಮತ್ತು ತಮಿಳುನಾಡಿಗರಿಗೆ ಹೆಚ್ಚು ಗೊತ್ತು.   ಕೊಲ್ಲೂರು ಮೂಕಾಂಬಿಕ ದರ್ಶನಕ್ಕೆ ಬಂದವರು ಕೊಡಚಾದ್ರಿ ಮೂಲ ಮೂಕಾಂಬಿಕ ದೇವಿ ದಶ೯ನ ಮಾಡಿ ಅಲ್ಲಿರುವ ಬಾರಾಪಂಥ ಯೋಗಿಗಳ ಸಿದ್ಧ ಪೀಠ ಮತ್ತು ಅದರ ಎದುರಿನ ಪುರಾತನ ಕಬ್ಬಿಣದ ಸ್ಥಂಭ ಮತ್ತು ಶಿಖರದ ಮೇಲಿನ ಸವ೯ಜ್ಞ ಪೀಠ ನಂತರ ಶಂಕರಾಚಾಯ೯ರು ತಪಸ್ಸುಗೈದ ಚಿತ್ರ ಮೂಲದ ಗುಹೆಯಲ್ಲಿ ಧ್ಯಾನ ಮಾಡಿ ವಾಪಾಸ್ ಬರುತ್ತಾರೆ.    ಈಗ ಇಲ್ಲಿಗೆ ಸವ೯ ಋತು ರಸ್ತೆ ಇಲ್ಲವಾದರೂ ಸಾದಾರಣ ರಸ್ತೆ ಜೀಪುಗಳಲ್ಲಿ ಪ್ರಯಾಣಿಸಲು ಸಾಧ್ಯವಿದೆ ಆದರೆ ಈ ಮೂಲ ಮೂಕಂಬಿಕ ದೇವಸ್ಥಾನದ ಅಚ೯ಕರಾದ ಬಳೆಗಾರ ಜೋಗಿ ಸಮಾಜದ ಕುಟುಂಬಕ್ಕೆ 800 ವರ್ಷದ ಇತಿಹಾಸ ಇದೆ ಆಗೆಲ್ಲ ರಸ್ತೆ ಇಲ್ಲ ವಾಹನ ಇಲ್ಲ ಆದರೂ ಇವರು ನಿರಂತರ ಪೂಜೆ ನಡೆಸಿಕೊಂಡು ಬಂದವರು, ನಾರಾಯಣ ಜೋಗಿ ಮತ್ತು ಕಾವೇರಮ್ಮ ದಂಪತಿ, ಅವರ ಅಳಿಯ ರಾಮ ಜೋಗಿ ಮತ್ತು ಮಗಳು ಸುಶೀಲಮ್ಮ ದಂಪತಿ ಅವರ ಮಗ ನಾಗೇಂದ್ರ ಜೋಗಿ ತನಕ ಜನ ಗುರುತಿಸುತ್ತಾರೆ ಅದಕ್ಕೂ ಹಿಂದಿನ ಅಚ೯ಕ ಕುಟುಂಬ ಸ್ಥಳಿಯರಿಗೆ ನೆನಪಿನಲ್ಲಿ ಉಳಿದಿಲ್ಲ.  ಪ್ರತಿ 12 ವರ್ಷಕ್ಕೊಮ್ಮೆ ಬಾರಾಪಂತ ಯಾತ್ರೆ ನಾಸಿಕ್ ನಿಂದ ಕೊಡಚಾದ್ರಿಗ...

ಕೃಷಿಯಲ್ಲಿ ಸಾದನೆ ಮಾಡಿದ ಅನಾನಸ್ ಕಿಂಗ್ ಬಿರುದಾಂಕಿತ ಡಾ. ರೋಪ್ ಸಾಹೇಬರ ನೆನಪು

#ರೋಪ್_ಸಾಹೇಬರು_ಡಾಕ್ಟರ್_ಆದ_ಕಥೆ .      ಇವರಿಗೆ ಕನಾ೯ಟಕದ ಪೈನಾಪಲ್ ಕಿಂಗ್ ಎಂಬ ಅನ್ವಥ೯ ನಾಮವೂ ಇದೆ, ಇವರ ಸಾದನೆ ಆ ಮಟ್ಟದ್ದು.   ಉ.ಕ.ಜಿಲ್ಲೆಯ ಬನವಾಸಿಯ ಇವರಿಗೆ 2006ರಲ್ಲಿ ದಾರವಾಡದ ಕೃಷಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದ್ದು ದೊಡ್ಡ ಸುದ್ದಿ ಆಗಿತ್ತು.   ಈಗೆಲ್ಲ ಡಾಕ್ಟರೇಟ್ ಅಗ್ಗ ಆದರೆ ಅವಾಗ ಅದಕ್ಕೆ ಘನತೆ ಇತ್ತು.    ರೋಪ್ ಸಾಹೇಬರಿಗೆ ಡಾಕ್ಟರೇಟ್ ಕೊಟ್ಟ ಬಗ್ಗೆ ಅಪಸ್ವರವೂ ಇತ್ತು ಕಾರಣ ಇವರು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆ ವಿಪರೀತ ಅಂತ.   ಇವರನ್ನ ಬೇಟಿ ಮಾಡಲೇ ಬೇಕೆಂದು ಯೋಚಿಸುವಾಗಲೇ ಸೊರಬ ಮೂಲದ ಸಾಗರ ತಾಲ್ಲೂಕಿನ ಭೂ ಅಭಿವೃದ್ದಿ ಬ್ಯಾಂಕಿನ ಉದ್ಯೋಗಿ ಆಗಿದ್ದ ಜಾನಕಪ್ಪನವರು ಡಾಕ್ಟರ್ ರೋಪ್ ಸಾಹೇಬರ ಸಾದನೆ ಬಗ್ಗೆ ಹೇಳಿದಾಗ ನನಗೆ ಅವರ ಹತ್ತಿರ ಕರೆದೊಯ್ದು ಪರಿಚಯಿಸಲು ವಿನಂತಿಸಿದ್ದೆ.   ನಿಗದಿತ ಬೆಳಿಗ್ಗೆ ಸೊರಬ ಮಾಗ೯ವಾಗಿ ಬನವಾಸಿ ತಲುಪಿ ಅವರ ಮನೆಯಲ್ಲಿ ಅವರ ಅಗಮನಕ್ಕೆ ಕಾಯುವಾಗ ಮುಂಬೈನ ನನ್ನ ಗೆಳೆಯ ವಿಜಯ್ ಗಡ್ಕರ್ ಅವರ ಮನೆಯ ಡೈನಿಂಗ್ ಹಾಲ್ ನಿಂದ ಬಂದಾಗ ಇಬ್ಬರಿಗೂ ಆಶ್ಚಯ೯.   ಹಿಂದೆಯೇ ಬಂದ ರೋಪ್ ಸಾಹೇಬರಿಗೂ, ನನ್ನ ಗೆಳೆಯ ಅವರ ಅನಾನಸ್ ಹಣ್ಣಿನ ಸಂಸ್ಕರಣ ಘಟಕದ ಯಂತ್ರೋಪಕರಣ ಸರಬರಾಜು ಮಾಡಿದ್ದ ಕಾರಣ ಅವರ ಅತಿಥಿ ಆಗಿದ್ದರು ಇದರಿಂದ ರೋಪ್ ಸಾಹೇಬರ ನನ್ನ ಪರಿಚಯ, ಚಚೆ೯ ಸರಾಗವಾಯಿತು.   ಎಕರೆ ಒ0ದರಲ್...

ಲಕ್ಷ್ಮೀಶ್ ಪತ್ರಿಕೆ ಸಂಪಾದಕರಾದ ತೀಥ೯ಹಳ್ಳಿ ಲಕ್ಷ್ಮೀ ಶ್ ರಿಂದ ಬೆಸ್ತರ ರಾಣಿ ಚಂಪಕಾ ಮಿಮಷೆ೯-21

#ಲಕ್ಷ್ಮೀಶ್_ಪತ್ರಿಕೆ    ತಮ್ಮದೇ ಹೆಸರಿನಲ್ಲಿ ತೀಥ೯ಹಳ್ಳಿಯಿಂದ ವಾರ ಪತ್ರಿಕೆ ಮೂಲಕ ಪ್ರಖ್ಯಾತಿ ಪಡೆದಿರುವ, ತಮ್ಮದೇ ವಿಶಿಷ್ಟ ಶೈಲಿಯ ಬರವಣಿಗೆಯಿಂದ ಅಪಾರ ಅಭಿಮಾನಿಗಳನ್ನ ಹೊಂದಿರುವ ಲಕ್ಷ್ಮೀಶ್ ರು ನನ್ನ ಕಾದ೦ಬರಿಯನ್ನು ಸಂಪೂಣ೯ವಾಗಿ ಓದಿ ವಸ್ತು ನಿಷ್ಟವಾಗಿ ಬರೆದ ವಿಮಷೆ೯ಗಾಗಿ ಅವರನ್ನು ಅಭಿನಂದಿಸುತ್ತೇನೆ.   ಚಂಪಕಾಳ ಬಗ್ಗೆ ಇನ್ನೂ ಹೆಚ್ಚು ಒತ್ತು ಕೊಡಬೇಕಿತ್ತೆಂಬ ಅವರ ಅಭಿಪ್ರಾಯ ಸರಿ ಇದೆ, ಇಲ್ಲಿ ನಾನು ಎಡವಿರುವುದು ಒಪ್ಪಿದ್ದೇನೆ ಬಹುಶಃ ಇದು ನನ್ನ ಮಿತಿ ಅಥವ ಮೊದಲ ಕಾದಂಬರಿಯ ಕಾರಣವಿರಬಹುದು.   ಲಕ್ಷ್ಮೀಶರ ಬರವಣಿಗೆಯ ಶೈಲಿಗೆ ಮನಸೋತು ಅವರ ಅಭಿಮಾನಿ ಆಗಿರುವ ನನಗೆ, ಅವರ ಈ ವಿಮಶೆ೯ಯ ಜೊತೆಗೆ ಮುಂದಿನ ದಿನದಲ್ಲಿ ನನ್ನಿಂದ ಹೆಚ್ಚಿನ ಬರವಣಿಗೆ ಬರಲಿ ಎಂಬ ಹಾರೈಕೆಯ ಪ್ರೋತ್ಸಾಹ ನನಗೆ ನೀಡಿದ್ದು ಖುಷಿ ತಂದಿದೆ.    #ಚರಿತ್ರೆಯ_ವ್ಯಾಖ್ಯಾನದ_ಮಧ್ಯೆ_ಸೊರಗಿದ_ಚಂಪಕಾ  ಕೃತಿ ವಿಮರ್ಶೆ; ಲಕ್ಷ್ಮೀಶ ಕಾ.ಸು., ಸಂಪಾದಕ, ಲಕ್ಷ್ಮೀಶಪತ್ರಿಕೆ, ತೀರ್ಥಹಳ್ಳಿ.9448218666.      ಪಕ್ಕದ ಸಾಗರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ *ಆನಂದಪುರ* ಒಂದೊಮ್ಮೆ ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ಕೆಳದಿ ಹೊರತು ಪಡಿಸಿದ ಪ್ರಮುಖ ನೆಲೆಯಾಗಿತ್ತು. ಅದೇ ಆನಂದಪುರದಲ್ಲಿ ಈಗಲೂ *ಚಂಪಕ ಸರಸ್ಸು* ಅರ್ಥಾತ್ ಚಂಪಕ ಕೊಳ ಎಂಬ ಮನಮೋಹಕ ಪ್ರವಾಸೀ ತಾಣವಿದೆ. ಆ ...

ಸಾಗರದ ಪ್ರಗತಿಪರ ಮತ್ತು ಜನಾನುರಾಗಿ ಕವಲಗೋಡು ವೆಂಕಟೇಶ್ ರಿಂದ ಬೆಸ್ತರರಾಣಿ ಚಂಪಕಾ ವಿಮಷೆ೯ - 20

ಕವಲಗೋಡು ವೆಂಕಟೇಶ್ ಸದಾ ಕ್ರಿಯಾಶೀಲರು ಇವರದ್ದೆ  ಗೆಳೆಯರ ಬಳಗ  ಹುಟ್ಟು ಹಾಕಿರುವ ವಿಜ್ಞಾನ ಕೇಂದ್ರದ ಮೂಲಕ ಅನೇಕ ಪುಸ್ತಕ ತಂದಿದ್ದಾರೆ, ಶಿಕ್ಷಣ ಕ್ಷೇತ್ರದಲ್ಲಿನ ವಿಶೇಷ ವ್ಯಕ್ತಿಗಳನ್ನು ಸಾಗರಕ್ಕೆ ಕರೆ ತಂದು ಇಲ್ಲಿಯವರೊಂದಿಗೆ ಸಭೆ ಸಂವಹನ ಏಪಾ೯ಡಿಸುತ್ತಾರೆ.   ಇವರು ಸಾಗರದ ಅತ್ಯಂತ ಬುದ್ದಿಶಾಲಿ ಉದ್ದಿಮಿ ಛಾಯಾ ಹೋಟೆಲ್ ಬೀಮಣ್ಣರ ಪುತ್ರ, ಸಾಗರದ ಪ್ರಸಿದ್ಧ ವರದಾಶ್ರೀ ಲಾಡ್ಜ್ ಮಾಲಿಕರು.  ನನ್ನ ಕಾದಂಬರಿ ಬಗ್ಗೆ ಓದಿ ವಿಮಷೆ೯ ಮಾಡಿದ್ದಾರೆ, ಬೆನ್ನುತಟ್ಟಿದ್ದಾರೆ ಮತ್ತು ಸಲಹೆ ಕೂಡ ನೀಡಿದ್ದಾರೆ ಇವರ ಪ್ರೋತ್ಸಾಹ ಸಲಹೆಗೆ ಅಭಾರಿ.   ಚಂಪಕ ಸರಸ್ಸು ಒಂದು ಪ್ರವಾಸಿ ಕೇಂದ್ರ ಆಗಲಿ ಎಂದು ಹಾರೈಸಿದ್ದಾರೆ ಅದರ ಬಗ್ಗೆ ಕವಲಗೋಡು ವೆಂಕಟೇಶರ ಹೆಚ್ಚಿನ ಶ್ರಮ ಅವಶ್ಯವಿದೆ ಎಂದು ಅವರನ್ನ ನೆನಪಿಸುತ್ತೇನೆ.    ಬೆಸ್ತರ ರಾಣಿ ಚಂಪಕಾ ಕೆಳದಿ ರಾಜರ ಇತಹಾಸ ಬೆಳಕು ಚೆಲ್ಲವ ಈ ಕಾದಂಬರಿ ಮಲೆನಾಡನ್ನು ಆಳಿಹೋದ ರಾಜಮನೆತನದ ಒಂದು ಐತಿಹಾಸಿಕ ಘಟನೆಯ ಸುತ್ತ ಗಮನ ಸೆಳೆದಿದೆ. ಈವರೆಗೆ ಇತಿಹಾಸಗಾರರು ಗಮನಿಸದ ವಿಷಯವೊಂದನ್ನು ಕುರಿತು ಮಲೆನಾಡಿನ ಮತ್ತು ಅನಂತಪುರಂ ಸುತ್ತಮುತ್ತ ಇದ್ದ ತಪ್ಪುಗ್ರಹಿಕೆ ಹೋಗಲಾಡಿಸುವ ಪ್ರಯತ್ನ ಇದಾಗಿದೆ. ರಾಜಾ ವೆಂಕಟಪ್ಪ ನಾಯಕ ನಿತ್ಯ ಸೂರ್ಯೋದಯಕ್ಕೂ ಮುಂಚಿತವಾಗಿ ಎದ್ದು ತಮ್ಮ ಪರಿವಾರದ ಮಂತ್ರಿಗಳು, ಸೇನಾಧಿಕಾರಿಗಳೊ...

ಬೆಸ್ತರರಾಣಿ ಚಂಪಕಾ ವಿಮಷೆ೯-15

https://avadhimag.com #ಸಾಹಿತ್ಯಾಸಕ್ತರಾದ_ಪ್ರಸನ್ನ_ಸಂತೆಕಡೂರು    ನನ್ನ ಕಾದಂಬರಿ ಬೆಸ್ತರರಾಣಿ ಚಂಪಕಾ ತುಂಬಾ ಚೆನ್ನಾಗಿ ವಿಮಷೆ೯ ಮಾಡಿದ್ದಾರೆ, ಸ್ಟತಃ ಕೆಳದಿ ಇತಿಹಾಸ ಅರಿತಿರುವ ಇವರು ತಮ್ಮ ಬ್ಲಾಗ್ ನಲ್ಲಿ ವಿಮಶೆ೯ ಬರೆದಿದ್ದಾರೆ.  ಇದರಲ್ಲಿ ದೊಡ್ಡ ಕಾದಂಬರಿ ಆಗುವುದನ್ನ ಕಿರು ಕಾದಂಬರಿ ಆಗಿದ ಬಗ್ಗೆ ನನ್ನ ವಿವರಣೆ ಕೇಳಿದ್ದಾರೆ ಬಹುಶಃ ನಾನು ಆ ಬಗ್ಗೆ ಚಿಂತನೆ ಮಾಡಿರಲಿಲ್ಲ ಮತ್ತು ನನ್ನ ಮಿತಿಯೂ ಕಾರಣ ಇರಬಹುದು.  ಪ್ರಸನ್ನರು ತಮ್ಮ ಬಿಡುವಿಲ್ಲದ ಮ್ಯೆಸೂರಿನ ಜೆ.ಎಸ್.ಎಸ್.ಮೆಡಿಕಲ್ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೋಪೆಸರ್ ಆಗಿಯೂ ನನ್ನ ಕಾದಂಬರಿ ಓದಿ ವಿಮಷಿ೯ಸಿದ್ದು ಅವರ ಸಾಹಿತ್ಯಾಸಕ್ತಿ ತೋರಿಸುತ್ತದೆ ಅವರಿಗೆ ಕೃತಜ್ಞತೆಗಳು.   ಇವರ ಬ್ಲಾಗ್ "ಅವದಿ ಮಾಗ್" ಕೂಡ ವಿಶೇಷವಾಗಿದೆ.

ಬೊನ್ಸಾಯ್ ಶ್ರೀನಿವಾಸರು ತಮ್ಮ ಜೀವಮಾನದ ಬೊನ್ಸಾಯ್ ಸಂಗ್ರಹವನ್ನು ತಮ್ಮ ತಂದೆ ತಾಯಿ ಹೆಸರಲ್ಲಿ ಬೆಂಗಳೂರಿನ ಲಾಲ್ ಬಾಗ್ ಗೆ ಅಪಿ೯ಸಿದ್ದಾರೆ ಅದರ ಮೌಲ್ಯ ಕೊಟ್ಯಾಂತರ ರೂಪಾಯಿ

#ಬೊನ್ಸಾಯ್_ಶ್ರೀನಿವಾಸರ_ದೇಶಪ್ರೇಮ      ಬೊನ್ಸಾಯ್ ತಮ್ಮ ಹೆಸರಿನ ಮುಂದಿರುವ ಶ್ರೀನಿವಾಸರು ಕನ್ನಡಿಗರು ಇವರು ಜಪಾನ್ ನ ಕಲೆ ಕುಬ್ಜ ಸಸ್ಯಗಳನ್ನ ಬೆಳೆಸಿ ಸಂಗ್ರಹಿಸುವುದರಲ್ಲಿ ಪರಿಣಿತರು.   ಸುಮಾರು 50 ವರ್ಷದ ಟೇಬಲ್ ಮೇಲಿಡುವ ಅರಳಿ ಮರ ಒಂದು ಅಡಿಗಿಂತ ಕಡಿಮೆ ಇಂತಹ ನೂರಾರು ಸಂಗ್ರಹ ಅವರಲ್ಲಿದೆ.    ಇವರ ಬಗ್ಗೆ ಸಾಗರದ ಕವಲಗೋಡು ವಿಜ್ಞಾನ ಕೇಂದ್ರ ಪುಸ್ತಕ ಒಂದನ್ನು 2000 - 2003 ರಲ್ಲಿ ಪ್ರಕಟಿಸಿದ್ದರು ಮಿತ್ರ ಕವಲಗೋಡು ವೆಂಕಟೇಶ್ ಕಳಿಸಿದ್ದರು.    2004ರಲ್ಲಿ ನಾನು ಬೆಂಗಳೂರು ವಾಸಿ ಪ್ರತಿ ದಿನ ಲಾಲ್ ಬಾಗ್ ನಲ್ಲಿ ವಾಕಿಂಗ್ ಮತ್ತು ಅಲ್ಲಿನ ತೋಟಗಾರಿಕಾ ಇಲಾಖಾ ಕಚೇರಿಯಲ್ಲಿ ಯಾವುದೋ ಕೆಲಸಕ್ಕಾಗಿ ನಿತ್ಯ ಅಲೆದಾಟ ಆ ಸಂದಭ೯ದಲ್ಲಿ ಲಾಲ್ ಬಾಗ್ ನ ದಕ್ಷಿಣ ಭಾಗದ ಪ್ರವೇಶದ ಹೆಬ್ಬಾಗಿಲ ಬಲ ಭಾಗದಲ್ಲಿ ಬೊನ್ಸಾಯ್ ಪಾಕ್೯ ನಿಮಾ೯ಣ ಆಗುವುದು ನೋಡಿ ಅಲ್ಲಿ ವೀಕ್ಷಿಸುತ್ತಿದ್ದೆ.    ಅಲ್ಲಿ ಕೆಲಸ ನಿವ೯ಹಿಸುವವರಿಗೆ ಇದು ಯಾರು ಮಾಡಿದ್ದು ಅಂತೆಲ್ಲ ಕೇಳಿದರೆ ಅವರಿಗೆ ಗೊತ್ತಿಲ್ಲ, ಬೆಂಗಳೂರಿನ ಬೊನ್ಸಾಯಿ ಶ್ರೀನಿವಾಸ್ ಅಂತ ಒಬ್ಬರಿದ್ದಾರೆ ಅವರು ಇದರಲ್ಲಿ ಪೇಮಸ್ ಅಂತ ಜೊತೆಯಲ್ಲಿದ್ದ ಗೆಳೆಯರಿಗೆ ಹೇಳುತ್ತಿದ್ದಾಗ " ನಾನೇ ಬೊನ್ಸಾಯ್ ಶ್ರೀನಿವಾಸ್" ಅಂತ ಗಿಡದ ಮರೆಯಿಂದ ಎದ್ದು ಬಂದರು.   ಪರಸ್ಪರ ಪರಿಚಯ ಅವರ ಪುಸ್ತಕದ ಬಗ್ಗೆ ಎಲ್ಲಾ ಮಾತಾಡಿದರು, ಅವರ ತಂದ...