ಮಳೆಗಾಲ ಬಂತೆಂದರೆ ಮಲೆನಾಡಿನಲ್ಲಿ ಡೇರೆ ಹೂವಿನದ್ದೇ ಸಂಭ್ರಮ.ಡೇರೆ ಹೂವಿನ ಮೂಲ ಅಮೆರಿಕಾ, ಮೆಕ್ಸಿಕನ್ ದೇಶದ ರಾಷ್ಟ್ರ ಪುಷ್ಪ, ಒಂದು ಅಡಿ ವ್ಯಾಸದದ ಊಟದ ತಟ್ಟೆಗಾತ್ರದ ಹೂವು ಆಗುತ್ತದೆ.
#ಡೇರೆ_ಏನು_ನಿನ್ನ_ಗಾತ್ರ!
ಮಳೆಗಾಲ ಬಂತೆಂದರೆ ಮಲೆನಾಡಿನ ಹಳ್ಳಿಗಳಲ್ಲಿ ಡೇರೆ ಹೂವಿನ ಸಂಭ್ರಮ, ಹೂವು ನೋಡಿದ ಮೇಲೆ ಅದರ ರೆಂಬೆ ಸಂಗ್ರಹಿಸಿ ತಮ್ಮ ಮನೆಯ ಹೂ ತೋಟದಲ್ಲಿ ಅದಕ್ಕೆ ಸ್ಥಳ ಮೀಸಲಿಡುವ ಗಡಿ ಬಿಡಿ ಗೃಹಿಣಿಯರಿಗೆ.
ಮೂಲ ಗೆಡ್ಡೆ ಸಂಗ್ರಹಿಸಿ ಇಟ್ಟುಕೊಂಡರೆ ಉತ್ತಮ ಆದರೆ ಬಹಳ ಜನ ಡೇರೆ ಹೂವು ಬಿಡುವ ಕಾಲದ ನಂತರ ಗಿಡದ ಬುಡದ ಗೆಡ್ಡೆ ಮಣ್ಣಲ್ಲೇ ಬಿಡುತ್ತಾರೆ ಅದು ಮುಂದಿನ ಮಳೆಗಾಲದಲ್ಲಿ ಗಿಡವಾಗಿ ಹೂವಾಗಿ ಬರಲು.
ಆದರೆ ಒರಲೆ ಈ ಗೆಡ್ಡೆ ತಿಂದರೆ ಮುಂದಿನ ವರ್ಷ ಈ ತಳಿ ನಾಪತ್ತೆ!
DALIYA/DAHLIA ಎಂಬ ಮೂಲ ಹೆಸರಿನ ಮೆಕ್ಸಿಕೊ ಮತ್ತು ಸೆಂಟ್ರಲ್ ಅಮೆರಿಕಾ ಈ ಹೂವಿನ ತವರಿನ ಮೂಲ, ಅಲ್ಲಿನ ಮೂಲ ನಿವಾಸಿಗಳಾದ ಅಜೆಟಿಕ್ ಜನಾ೦ಗದವರು ಆಹಾರಕ್ಕಾಗಿ ಇದರ ಗೆಡ್ಡೆ ಬಳಸುತ್ತಿದ್ದರಂತೆ ನಂತರ ಸ್ಪಾನಿಷ್ ರ ಆಗಮನದಿಂದ ಈ ಜನಾಂಗ ನಾಶವಾಯಿತು ಮತ್ತು ಆಹಾರಕ್ಕಾಗಿ ಬಳಸುವುದು ಇಲ್ಲವಾಯಿತು.
ಯುರೋಪಿನಲ್ಲಿ ಇದನ್ನ ಆಹಾರಕ್ಕಾಗಿ ಬಳಸುವ ಪ್ರಯತ್ನವೂ ವಿಫಲವಾಯಿತಂತೆ.
ಈ ಪುಷ್ಪ ಮೆಕ್ಸಿಕನ್ ದೇಶದ ರಾಷ್ಟ್ರೀಯ ಪುಷ್ಪ ಆಗಿದೆ.
2 ಇಂಚು ಕನಿಷ್ಟ ಗಾತ್ರದಿಂದ 1 ಅಡಿ ವ್ಯಾಸದ ಹೂವು 6ರಿಂದ 8 ಅಡಿ ಎತ್ತರದ ಗಿಡದಲ್ಲಿ ದೊರೆಯುತ್ತದೆ.
ಇವತ್ತು ಬೆಳಿಗ್ಗೆ ಪರಿಚಿತರು ತಂದು ಕೊಟ್ಟ ಈ ಡೇರೆ ಹೂವು 8 ಇಂಚಿನಷ್ಟು ದೊಡ್ಡದಾಗಿತ್ತು ನೋಡಿ.
Comments
Post a Comment