ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಏನಿಲ್ಲ? ಏನಿದೆ? ಆದರೆ ಅದನ್ನೆಲ್ಲ ಬಿಟ್ಟು ಪಾಸ್ಟ್ ಪುಡ್ ಕಡೆ ಮುಖ ಮಾಡುವ ನಮ್ಮ ಯುವ ಜನಾ೦ಗ ಬದಲಾಗಬೇಕು, ಮಲೆನಾಡ ಆರೋಗ್ಯಕರ ರುಚಿಕರ ಮತ್ತು ಮಿತವ್ಯಯದ ಮಲೆನಾಡ ಸಾಂಪ್ರದಾಯಿಕ ಆಹಾರ ತಯಾರಿ ಮತ್ತು ಬಳಕೆ ಹೆಚ್ಚು ಮಾಡಬೇಕು.
ಇದು ಯಾವ ಪಿಜ್ಜಾಗೆ ಕಡಿಮೆ? ಮನೇನಲ್ಲೆ ತಯಾರಿಸಿ ತಿನ್ನಬಹುದಾದ ರುಚಿಕರ ಉಟೋಪಚಾರ ನೂರಾರು ಇದೆ ಆದರೆ ತಯಾರಿಸುವ ಮನಸ್ಸು ತಾಳ್ಮೆ ಮನೆಯೊಡತಿಯರಿಗೆ ಇರಬೇಕು ಮತ್ತು ಮಾಡಿದ್ದನ್ನ ಸವಿಯುವ ಮನೆ ಮಂದಿಯ ಪ್ರೋತ್ಸಾಹವೂ ಬೇಕು.
ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಆರೋಗ್ಯಕರವಾದ, ಕಲಬೆರಕೆ ಇಲ್ಲದ ರಾಸಾಯನಿಕ ಬಣ್ಣ ಹಾಕದ ನಮ್ಮ ಪಶ್ಚಿಮ ಘಟ್ಟದ ಮಲೆನಾಡಿನ ಅಕ್ಕಿ ರೊಟ್ಟಿಯಲ್ಲಿ ತರಹೇವಾರಿ ರೀತಿಯಲ್ಲಿ ತಯಾರಿಸಲು ಸಾಧ್ಯವಿದೆ.
ಇವತ್ತಿನ ನನ್ನ ಬೆಳಗಿನ ಉಪಹಾರ ಇದು.
Comments
Post a Comment