ಗಾಂಧಾರಿ / ಜೀರಿಗೆ / ಸೂಜಿ / ಸಣಮೆಣಸು/ಚೂರು ಮೆಣಸು ಎಂದೆಲ್ಲ ಪ್ರಾದೇಶಿಕ ಬಿನ್ನ ಹೆಸರಲ್ಲಿ ಗುರುತಿಸುವ ಪಶ್ಚಿಮ ಘಟ್ಟದ ದೇಶಿ ಮೆಣಸು,
ಹೀಗೆ ತರಹಾವಾರಿ ಪ್ರಾದೇಶಿಕ ಹೆಸರಲ್ಲಿ ಕರೆಯುವ ಅತಿ ಖಾರದ ಆದರೆ ದೇಹಕ್ಕೆ ತ೦ಪು ಆಗುವ ಈ ಮೆಣಸು ಈಗಲೂ ಅವರವರ ಮನೆ ಬಳಕೆಗೆ ಅಷ್ಟೆ ಬೆಳೆಸಿ ಕೊಳ್ಳುವಂತ ಅಭ್ಯಾಸ ಇದೆ.
ಇತ್ತೀಚಿನ ದಿನದಲ್ಲಿ ಇದನ್ನು ವಾಣಿಜ್ಯ ಉದ್ದೇಶಕ್ಕಾಗಿ ಕೆಲವರು ಬೆಳೆಸಿ ಒಣಗಿಸಿ ಮಾರಾಟ ಮಾಡುತ್ತಾರೆ.
ಇದನ್ನು ಕೊಯ್ದು ತರುವುದೇ ಕಷ್ಟದ ಕೆಲಸ, ಅತಿ ಚಿಕ್ಕ ಗಾತ್ರದ ಈ ಮೆಣಸು ಒ೦ದೊ೦ದೆ ಕೊಯ್ಯಲು ತಾಳ್ಮೆ ಬೇಕು ಹಾಗಾಗಿ ಇದನ್ನು ಬೆಳಸಿ ಫಸಲು ಕೊಯ್ದು ಒಣಗಿಸಿ ಸಂಗ್ರಹಿಸಲು ಹೆಚ್ಚು ಮನುಷ್ಯ ಶಕ್ತಿ ಮತ್ತು ಸಮಯ ಬೇಕಾದ್ದರಿಂದ ಇದರ ಬೆಳೆ ಮತ್ತು ಸಂಸ್ಕರಣೆ ಅಷ್ಟಾಗಿ ಇಲ್ಲ.
ಆದರೆ ಇದರ ಬಳಕೆ ರುಚಿ ಗೊತ್ತಿದ್ದವರು ಬೆಲೆ ಎಷ್ಟಾದರೂ ಖರೀದಿಸುತ್ತಾರೆ ಇತ್ತೀಚೆಗೆ ಪೇಸ್ ಬುಕ್ ನಲ್ಲಿ ಬಾನು ಪ್ರಕಾಶ್ ಎಂಬುವವರು ಈ ಮೆಣಸು ಮತ್ತು ಅನೇಕ ಸಾವಯುವ ಬೆಳೆಗಳು ಮಾರಾಟಕ್ಕಿದೆ ಅಂತ ಬರೆದಿದ್ದರು, ಇವರು ನಮ್ಮ ಊರಿಗೆ 25 ಕಿ.ಮಿ.ದೂರದ ಹುಂಚಾದವರು ಇವರ ಬ್ಯಾಂಕ್ ಅಕೌ೦ಟ್ ಗೆ 685 ರೂಪಾಯಿ ಕಳಿಸಿ ಅರ್ಧ ಕೆಜಿ ಈ ಜೀರಿಗೆ ಅಥವ ನನ್ನ ಊರಲ್ಲಿ ಕರೆಯುವ ಚೂರು ಮೆಣಸಿಗೆ ಆಡ೯ರ್ ಮಾಡಿದ್ದೆ.
ಆದರೆ ಇದು ಅಂಚೆ ಇಲಾಖೆ ತಪ್ಪಿನಿಂದ ಆಂಧ್ರ ಪ್ರದೇಶದ ಅನಂತಪುರ ನೋಡಿಕೊಂಡು ನಿನ್ನೆ ಬಂತು, ಕೊರಾನಾ ಮುಂಜಾಗೃತೆ ಎಲ್ಲಾ ಮುಗಿಸಿ ಇವತ್ತು ಪಾಸೆ೯ಲ್ ತೆರೆದಿದ್ದೇನೆ ನಿಜಕ್ಕೂ ನೀಡಿದ ಹಣಕ್ಕೆ ಕಡಿಮೆ ಇಲ್ಲದಂತೆ ಅತ್ಯುತ್ತಮ ಜೀರಿಗೆ ಮೆಣಸು ತಲುಪಿಸಿದ್ದಾರೆ.
ಜೀರಿಗೆ ಮೆಣಸು ಕೆಜಿಗೆ 1300ಕ್ಕೆ ಇವರಲ್ಲಿ ದೊರೆಯುತ್ತದೆ.
ಇವರ ಸೆಲ್ ಫೋನ್ ನಂಬರ್
9663633550.
Comments
Post a Comment