ಶಿವಮೊಗ್ಗ ಜಿಲ್ಲೆಯ ಆನಂದಪುರಂನಲ್ಲಿ ಇವತ್ತಿಗೆ (13 -ಜುಲೈ-2020) ಎರೆಡು ಕೊರಾನಾ + Ve ದಾಖಲಾಗಿದೆ, ಎರೆಡು ಭಾಗದಲ್ಲಿ ಸೀಲ್ಡ್ ಡೌನ್ ಆಗಿದೆ ಈಗ ಜನ ಜಾಗೃತರಾಗುತ್ತಿದ್ದಾರೆ.
ಕೊರಾನಾ ಎಲ್ಲಾ ಸುಳ್ಳು
ಅಂತ ಮಾಸ್ಕ್ ಧರಿಸದ, ಅಂತರ ಕಾಯದೆ ಎಲ್ಲಿ ಬೇಕಲ್ಲಿ ಸುತ್ತುತ್ತಿದ್ದ ಶಿವಮೊಗ್ಗ ಜಿಲ್ಲೆಯ ಆನಂದಪುರಂ ನಮ್ಮ ಊರಿನ ಜನರಿಗೆ ಪರಿಚಯಿಸಿ ಕೊಳ್ಳಲು ಕೊರಾನಾ ಈಗ ನಮ್ಮ ಊರಿಗೆ ಪ್ರವೇಶ ಮಾಡಿದೆ!?
ಕೇರಳ ಮೂಲದ ಗೆಳೆಯ ಬೇಬಿ ಮಾಸ್ಕ್ ಹಾಕಿದ್ದ ನನ್ನ ನೋಡಿ ಗೇಲಿ ಮಾಡಿ ಕೋರಾನ ಗಿರಾನ ಎಲ್ಲಾ ಸುಳ್ಳು ಅಂತ ವಾದ ಮಾಡಿದ್ದ.
ರಿಪ್ಪನ್ ಪೇಟೆಯ ಜನಪರ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ತಾನು ಯಾವ ಕಾರಣದಲ್ಲೂ ಮಾಸ್ಕ್ ದರಿಸುವುದಿಲ್ಲ ಕೊರಾನಾ ಎಲ್ಲಾ ಸುಳ್ಳು ಸೃಷ್ಟಿ ಅಂದಿದ್ದರು.
ನಮ್ಮ ಕೆಲಸದವರು ಮತ್ತು ಪರಿಚಿತರು ನನ್ನ ಎದರು ಬರುವಾಗ ಮಾತ್ರ ಮಾಸ್ಕ್ ದರಿಸುತ್ತಿದ್ದರು (ನಾನು ಬೈಯುತ್ತೇನೆ ಅಂತ ).
ನಮ್ಮ ಊರ ಯಾವ ಅಂಗಡಿಯಲ್ಲೂ ಗಿರಾಕಿಗಳು ಅಂತರ ಕಾಪಾಡಲಿಲ್ಲ ಮಾಲಿಕರೂ ಒತ್ತಾಯಿಸಿಲ್ಲ, ಹಳ್ಳಿಗಳಲ್ಲಿ ಮದುವೆ ಹಬ್ಬ ಭರದಲ್ಲಿ ನಡೆದವು.
ನಮ್ಮ ಊರ ಯುವಕರು ದಾರಿಯಲ್ಲಿ ಸಿಕ್ಕವರಿಗೆ ಬೈಕ್ ಲ್ಲಿ ಡ್ರಾಪ್ ಮಾಡುವುದು, ಪರಸ್ಪರ ಅಪ್ಪಿಕೊಳ್ಳುವುದು ಎಲ್ಲಾ ಮಾಡುತ್ತಿದ್ದರು ಈಗ ನಮ್ಮ ಊರಲ್ಲಿ ಎರೆಡು ಕೊರಾನ + Ve ಬಂದಿದೆ ಆ ಬೀದಿಗಳನ್ನ ಸೀಲ್ಡ್ ಡೌನ್ ಮಾಡಿದ್ದಾರೆ.
ಕೊರಾನ ಬರದಂತೆ ಮುಂಜಾಗೃತೆ ವಹಿಸದೆ ಬಂದ ನಂತರವೇ ಜಾಗೃತರಾಗುವ ಮನುಷ್ಯ ಸಹಜ ದೌಬ೯ಲ್ಯಗಳಿಗೆ ಏನು ಹೇಳುವುದು?
Comments
Post a Comment