#ಕೊರಾನಾ_ಲಾಕ್_ಡೌನ್_ಡೈರಿ_2020
ಲೆಟರ್ ನಂಬರ್- 50.
ದಿನಾ೦ಕ: 04- ಜುಲೈ -2020.
#ಹಳ್ಳಿ_ಹಳ್ಳಿಗಳನ್ನ_ತಲುಪಿದ_ಕೊರಾನಾ_ಸೊಂಕು.
ಯಾರ ಮನೆಗೂ ಹೋಗದ ಯಾರಲ್ಲೂ ಯಾವತ್ತೂ ಬೆರೆಯದ ಆ ಮನೆಯ ಯಜಮಾನರಿಗೆ ಪಾಸಿಟೀವ್ !? ಹೇಗೆ?.
ಕೊರಾನಾಗಾಗಿ ಎಲ್ಲಾ ರೀತಿಯ ಮುಂಜಾಗೃತೆ ತೆಗೆದುಕೊಂಡಿದ್ದ ಆ ಮನೆಯ ಯಜಮಾನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾಗ ಈ ಸೊಂಕು ತಗುಲಿದೆ!
ಎಲ್ಲಿಂದಲೋ ಬಂದ ಗೆಳೆಯ ನಾಲ್ಕು ದಿನ ಮನೇಲಿ ತಂಗಿದ್ದು ಹೋಗಿದ್ದವನಿಗೆ ಪಾಸಿಟೀವ್ ! ಈಗ ಅತಿಥ್ಯ ನೀಡಿದ ಇವರಿಗೂ ಪಾಸಿಟೀವ್ ಮನೆ ಮತ್ತು ಇವರ ಬೀದಿ ಸೀಲ್ ಡೌನ್.
ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್ ಆಗಿದ್ದ ಸಹೋದರ ಊರಿಗೆ ಬಂದಿದ್ದಾನೆ ಅವನಿಗೆ ಪಾಸಿಟೀವ್ ಮತ್ತು ಮನೇಲಿದ್ದ ಅವನ ಸಹೋದರಿಗೆ ಪಾಸಿಟೀವ್ !
ಇಲ್ಲಿ ತನಕ ನಮ್ಮ ಹಳ್ಳಿಗೆ ಮಾತ್ರ ಕೊರಾನಾ ಬರೋಲ್ಲ ಅನ್ನೋ ದೃಡ ನಂಬಿಕೆಯಿಂದ ಸಾಮಾಜಿಕ ಅಂತರ, ಮಾಸ್ಕ್ ಇತ್ಯಾದಿ ಮುಂಜಾಗರುಕತೆ ಪಾಲಿಸದೆ ಗುಂಪಾಗಿ ಕೃಷಿ, ಮದುವೆ ಮತ್ತು ಹಬ್ಬದಲ್ಲಿ ತೊಡಗಿದ್ದ ಹಳ್ಳಿಗಳಲ್ಲಿ ಕ್ರಮೇಣ ಭಯ ಪ್ರಾರ೦ಭ ಆಗಿದೆ.
ಪುಡ್ ಕಿಟ್ ಇತ್ಯಾದಿ ದಾನ ಪಡೆಯದೆ ಕೃಷಿ ಸ್ವಾವಲಂಬನೆಯಿಂದ ನಿರ್ಬೀತಿಯಿ೦ದ ಇದ್ದವರಿಗೆ ಈಗ ಕೊರಾನಾ ಆಲಾರಂ ನೀಡುತ್ತಿದೆ.
Comments
Post a Comment